Asianet Suvarna News Asianet Suvarna News

ಅಪಾಯದಲ್ಲಿದೆ 2.5 ಶತಕೋಟಿ ಗೂಗಲ್ ಕ್ರೋಮ್ ಬಳಕೆದಾರರ ಡೇಟಾ, ಸೈಬರ್ ಸೆಕ್ಯೂರಿಟಿ ವಾರ್ನಿಂಗ್!

ಡಿಜಿಟಲ್ ಯುಗದಲ್ಲಿ ಖಾಸಗಿ ಮಾಹಿತಿಗಳು, ದಾಖಲೆಗಳು ಎಲ್ಲಿ ಸೋರಿಕೆಯಾಗುತ್ತೆ ಅನ್ನೋ ಆತಂಕ ಕಾಡುತ್ತಲೇ ಇರುತ್ತದೆ. ಅದೆಷ್ಟೇ ಸುರಕ್ಷತೆಯಲ್ಲಿದ್ದರೂ ಡೇಟಾ ಸೋರಿಕೆ ಆಗುತ್ತಲೇ ಇದೆ. ಇದೀಗ ಗೂಗಲ್ ಕ್ರೂಮ್ ಬಳಕೆದಾರರ ಡೇಟಾ ಅಪಾಯದಲ್ಲಿದೆ ಅನ್ನೋ ಎಚ್ಚಿರಿಕೆಯನ್ನು ಸೈಬರ್ ಸೆಕ್ಯೂರಿಟಿ ಸಂಸ್ಥೆ ನೀಡಿದೆ.

Google chrome users data at risk Imperva Red cyber security warns vulnerability on web browser ckm
Author
First Published Jan 15, 2023, 6:04 PM IST

ನವದೆಹಲಿ(ಜ.15): ಡಿಜಿಟಲ್ ಜಗತ್ತಿನಲ್ಲಿ ಮಾಹಿತಿ ಸೋರಿಕೆ ಅತೀ ದೊಡ್ಡ ಸವಾಲು. ಇದು ದೇಶದ ಭದ್ರತೆಗೆ ಅಪಾಯ ತಂದೊಡ್ಡಬಲ್ಲದು. ಡೇಟಾವನ್ನು ಸುರಕ್ಷಿತವಾಗಿಡುವುದು ಸುಲಭದೆ ಕೆಲಸವಲ್ಲ. ಯಾವುದೇ ಆ್ಯಪ್ಲಿಕೇಶನ್ ಬಳಕೆಗೆ ಕನಿಷ್ಠ ವೈಯುಕ್ತಿಕ ಮಾಹಿತಿಗಳನ್ನು ನೀಡಬೇಕು. ಈ ಮಾಹಿತಿಗಳು ಎಷ್ಟು ಸುರಕ್ಷಿತ ಅನ್ನೋದು ಅತೀ ದೊಡ್ಡ ಪ್ರಶ್ನೆ. ಈಗ ಯಾವುದೇ ಮಾಹಿತಿ, ಬೆಲೆ, ಲಭ್ಯತೆ ಎಲ್ಲವನ್ನೂ ಗೂಗಲ್ ಮಾಡಿ ನೋಡಬಹುದು. ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆಯುವ ಪರಿಪಾಠವಿಲ್ಲ. ಹೀಗಾಗಿ ಜಗತ್ತಿನಲ್ಲಿ ಗೂಗಲ್ ಕ್ರೋಮ್ ಬ್ರೌಸರ್ ಬಳಕೆಯನ್ನು ಬಹುತೇಕರು ಮಾಡುತ್ತಾರೆ. ಕಣ್ಮುಚ್ಚಿ ಯಾವುದೇ ಆತಂಕವಿಲ್ಲದೆ ಗೂಗಲ್ ಕ್ರೋಮ್ ಬಳಕೆ ಮಾಡಲಾಗುತ್ತದೆ. ಆದರೆ ಇದೇ ಕ್ರೋಮ್ ಬಳಕೆದಾರರ ಡೇಟಾ ಅಪಾಯದಲ್ಲಿದೆ ಅನ್ನೋ ಎಚ್ಚರಿಕೆಯನ್ನು ಇಂಪರ್ವ(ಸೈಬರ್ ಸೆಕ್ಯೂರಿಟಿ ಎಜೆನ್ಸಿ) ಸಂಸ್ಥೆ ನೀಡಿದೆ. 

ಬರೋಬ್ಬರಿ 2.5 ಶತಕೋಟಿ ಗೂಗಲ್ ಕ್ರೋಮ್ (Google Chrome) ಬಳಕೆದಾರರ ಡೇಟಾ(Users Data at Risk) ಅಪಾಯದಲ್ಲಿದೆ. ಸೈಬರ್ ಸೆಕ್ಯೂರಿಟಿ (Cyber Security) ನೀಡಿದ ಎಚ್ಚರಿಕೆಯಲ್ಲಿ ಕೆಲ ಮಹತ್ವದ ಅಂಶಗಳ ಕುರಿತು ಬೆಳಕು ಚೆಲ್ಲಲಾಗಿದೆ. CVE-2022-3656 ದುರ್ಬಲತೆ ಗೂಗಲ್ ಕ್ರೋಮ್ ಹಾಗೂ ಕ್ರೋಮ್ ಆಧಾರಿತ ಬ್ರೌಸರ್‌ನಲ್ಲಿದೆ(Web Browser). ಇದರಿಂದ ಗೂಗಲ್ ಕ್ರೋಮ್ ಮೂಲಕ ಬಳಕೆದಾರರು ಕ್ಲೌಡ್ ಪ್ರೊವೈಡರ್‌ಗೆ(Cloud Provider) ನೀಡುವ ಲಾಗಿನ್(Login) ವಿವರ, ಕ್ರಿಪ್ಟೋ ವ್ಯಾಲೆಟ್ ಕುರಿತು ಖಾಸಗಿ ಮಾಹಿತಿಗಳು ಸೋರಿಕೆಗೆ ಅನುಮತಿ ಸಿಗಲಿದೆ. ಇಂಪರ್ವ ಸೆಕ್ಯೂರಿಟಿ ನಡೆಸಿದ ಅಧ್ಯಯನದಲ್ಲಿ ಈ ಮಾಹಿತಿ ಬಹಿರಂಗವಾಗಿದೆ. 

ಅಶ್ಲೀಲ ಚಿತ್ರ ವೀಕ್ಷಿಸುವ ಮೊಬೈಲ್ ಬಳಕೆದಾರರೇ ಎಚ್ಚರ, ಮೈಮೆರೆತರೆ ಅಪಾಯ ಕಟ್ಟಿಟ್ಟ ಬುತ್ತಿ!

ಗೂಗಲ್ ಕ್ರೋಮ್ ಬ್ರೌಸರ್ ಸಿಸ್ಟಮ್ ಲಿಂಕ್ ಕುರಿತು ಮೌಲ್ಯಮಾಪನದ ವೇಳೆ ಈ ಲೋಪ ಕಂಡು ಬಂದಿದೆ. ಇದರಿಂದ ಬಳಕೆದಾರರು(Digital Users) ಇದರ ಅರಿವಿಲ್ಲದೆ ಕ್ರೋಮ್ ಬಳಕೆ ಮಾಡುತ್ತಾರೆ. ಆದರೆ ಸೈಬರ್ ವಂಚರು ಈ ಮಾಹಿತಿಯನ್ನು ಕದಿಯುವ ಅಪಾಯವಿದೆ. ಇದಕ್ಕೆ ಗೂಗಲ್ ಕ್ರೋಮ್‌ನಲ್ಲಿರುವ ಲೋಪಗಳು ಅವಕಾಶ ನೀಡುತ್ತಿದೆ. ಈ ಕುರಿತು ಇಂಪರ್ವ ಸೈಬರ್ ಸೆಕ್ಯೂರಿಟಿ ಎಚ್ಚರಿಕೆ ನೀಡಿದೆ. 

ಈ ಲೋಪಗಳನ್ನು ಕ್ರೋಮ್ ತಕ್ಷಣವೇ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಬಳಕೆದಾರರ ಸುರಕ್ಷತೆಗೆ ಬೇಕಾದ ಎಲ್ಲಾ ಮಾರ್ಪಾಡುಗಳನ್ನು ಮಾಡಬೇಕು. ಇಲ್ಲದಿದ್ದರೆ, ಅತೀ ದೊಡ್ಡ ಮಾಹಿತಿ ಸೋರಿಕೆಗೆ ಗೂಗಲ್ ಕ್ರೋಮ್ ಗುರಿಯಾಗಬೇಕಾಗುತ್ತದೆ. ಇಷ್ಟೇ ಅಲ್ಲ ಇದರಿಂದ ವೈಯುಕ್ತಿಕ ಮಾಹಿತಿ ಸೋರಿಕೆ, ಕ್ರಿಪ್ಟೋ ಸೇರಿದಂತೆ ಇತರ ಆರ್ಥಿಕ ನಷ್ಟಗಳು ಮಾತ್ರವಲ್ಲ, ದೇಶದ ಭದ್ರತೆಗೆ ಅಪಾಯ ಹೆಚ್ಚಿದೆ ಎಂದು ಇಂಪರ್ವಾ ಎಚ್ಚರಿಕೆ ನೀಡಿದೆ. 

BRATA Malware: ನಿಮ್ಮ ಬ್ಯಾಂಕಿಂಗ್ ಮಾಹಿತಿ ಕದಿಯುತ್ತೇ ಈ ಮಾಲ್ವೇರ್, ಹುಷಾರ್!

ಈ ಲೋಪಗಳಿಂದ ಹ್ಯಾಕರ್ಸ್, ಫೇಕ್ ಕ್ರಿಪ್ಟೋ ಲಾಕರ್, ಫೇಕ್ ಕ್ರಿಪ್ಟೋ ವೆಬ್‌ಸೈಟ್ ಮಾಡುವ ಸಾಧ್ಯತೆ ಇದೆ. ಬಳಕೆದಾರರು ಇಲ್ಲಿ ಮಾಹಿತಿಗಳನ್ನು ಅಥವೂ ಹೂಡಿಕೆ ಮಾಡಿದಲ್ಲಿ ಎಲ್ಲವನ್ನೂ ಕಳೆದುಕೊಳ್ಳಲಿದ್ದಾರೆ. ಅಪಾಯ ಸಾಧ್ಯತೆಗಳು ಹೆಚ್ಚಿರುವ ಕಾರಣ ತ್ವರಿತಗತಿಯಲ್ಲಿ ಕ್ರಮಕ್ಕೆ ಸೈಬರ್ ಸೆಕ್ಯೂರಿಟಿ ವಾರ್ನಿಂಗ್ ನೀಡಿದೆ. ಈ ಎಚ್ಚರಿಕೆ ಬೆನ್ನಲ್ಲೇ ಇದೀಗ ಬಳಕೆದಾರರ ಆತಂಕ ಹೆಚ್ಚಾಗಿದೆ.

Follow Us:
Download App:
  • android
  • ios