Asianet Suvarna News Asianet Suvarna News

ಕೈಗೆಟುಕುವ ದರದಲ್ಲಿ ಶಾಂಪಿಂಗ್‌ಗಾಗಿ ಹಣಕಾಸು ಸಂಸ್ಥೆಗಳೊಂದಿಗೆ ಫ್ಲಿಪ್‌ಕಾರ್ಟ್ ಒಪ್ಪಂದ!

ಗ್ರಾಹಕರಿಗೆ ಹಿಂದೆಂದಿಗಿಂತಲೂ ಇದೇ ಮೊದಲ ಬಾರಿಗೆ ಕೈಗೆಟುಕುವ ರೀತಿಯಲ್ಲಿ  ಶಾಪಿಂಗ್ ವೇದಿಕೆ ಒದಗಿಸಲು ಫ್ಲಿಪ್‌ಕಾರ್ಟ್ ಮಹತ್ವದ ಹೆಜ್ಜೆ ಇಟ್ಟಿದೆ. ಭಾರತದ ಬ್ಯಾಂಕಿಂಗ್, ಡಿಜಿಟಲ್ ಪೇಮೆಂಟ್ ಸೇರಿದಂತೆ ಹಲವು ಹಣಕಾಸು ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ
 

This Festive Season Flipkart Partnerships to Make Shopping More Affordable for Indian Consumers ckm
Author
Bengaluru, First Published Oct 15, 2020, 7:24 PM IST

ಬೆಂಗಳೂರು(ಅ.14): ಭಾರತದ ದೇಶೀಯ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ತನ್ನ ಬಿಗ್ ಬಿಲಿಯನ್ ಡೇಸ್ ಹಿನ್ನೆಲೆಯಲ್ಲಿ ಹಲವಾರು ಬ್ಯಾಂಕಿಂಗ್, ಇನ್ಶೂರೆನ್ಸ್ ಮತ್ತು ಹಣಕಾಸು ಸೇವಾ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಗ್ರಾಹಕರಿಗೆ ಹಿಂದೆಂದಿಗಿಂತಲೂ ಇದೇ ಮೊದಲ ಬಾರಿಗೆ ಕೈಗೆಟುಕುವ ರೀತಿಯಲ್ಲಿ ಪ್ಲಾಟ್ ಫಾರ್ಮ್ ನಲ್ಲಿ ಶಾಪಿಂಗ್ ಅನ್ನು ಮಾಡುವ ಅವಕಾಶವನ್ನು ಕಲ್ಪಿಸುತ್ತಿದೆ. ಈ ಸಹಭಾಗಿತ್ವದೊಂದಿಗೆ ಫ್ಲಿಪ್ ಕಾರ್ಟ್ ದೇಶಾದ್ಯಂತ ಸುಲಭವಾದ ರೀತಿಯಲ್ಲಿ ಸಾಲ ಮತ್ತು ಕೈಗೆಟುಕುವ ಆಯ್ಕೆಗಳ ಪ್ರಯೋಜನಗಳನ್ನು ಗ್ರಾಹಕರಿಗೆ ನೀಡಲಿದೆ. ಈ ಸಹಭಾಗಿತ್ವಗಳೊಂದಿಗೆ ಫ್ಲಿಪ್ ಕಾರ್ಟ್ ದೇಶದ ವಿವಿಧ ಪ್ರದೇಶಗಳು ಮತ್ತು ಪಿನ್ ಕೋಡ್ ಗಳ ಗ್ರಾಹಕರಿಗೆ ತನ್ನ ಫ್ಲಿಪ್ ಕಾರ್ಟ್ ಮಾರ್ಕೆಟ್ ಪ್ಲೇಸ್ ನಲ್ಲಿ 250 ದಶಲಕ್ಷಕ್ಕೂ ಅಧಿಕ ಉತ್ಪನ್ನಗಳನ್ನು ಪೂರೈಸಲಿದೆ.

ಹಬ್ಬದ ಸೀಸನ್‌ನಲ್ಲಿ ವಿದ್ಯಾರ್ಥಿಗಳಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಇಂಟರ್ನ್ ಶಿಪ್!..

ಪ್ರತಿಯೊಬ್ಬ ಭಾರತೀಯನಿಗೂ ಕೈಗೆಟುಕುವ ದರದಲ್ಲಿ ಶಾಪಿಂಗ್ ಸೇವೆಯನ್ನು ಒದಗಿಸುವ ಆನ್ ಲೈನ್ ತಾಣವನ್ನಾಗಿ ಮುಂದುವರಿಸುವ ಬದ್ಧತೆಯ ಭಾಗವಾಗಿ ಫ್ಲಿಪ್ ಕಾರ್ಟ್, 17 ಕ್ಕೂ ಹೆಚ್ಚು ಬ್ಯಾಂಕುಗಳು, ಎನ್ ಬಿಎಫ್ ಸಿಗಳು ಮತ್ತು ಫಿನ್ ಟೆಕ್ ಸಂಸ್ಥೆಗಳಿಂದ ಕೈಗೆಟುಕುವ ದರದಲ್ಲಿ ಸಾಲದ ಆಯ್ಕೆಗಳನ್ನು ನೀಡುತ್ತಿದೆ.

●      ಫ್ಲಿಪ್ ಕಾರ್ಟ್ ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ದೇಶದ ಅತಿ ದೊಡ್ಡ ಕ್ರೆಡಿಟ್ ಕಾರ್ಸ್ ಪೂರೈಕೆದಾರ ಸಂಸ್ಥೆಯಾಗಿರುವ ಎಸ್ ಬಿಐ ಕಾರ್ಡ್ ನೊಂದಿಗೆ ಸಹಭಾಗಿತ್ವವನ್ನು ಮಾಡಿಕೊಂಡಿದೆ. ಈ ಮೂಲಕ ಈ ಎರಡೂ ಸಂಸ್ಥೆಗಳು ತಮ್ಮ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳಿಂದ ಶಾಪಿಂಗ್ ಮಾಡುವ ಗ್ರಾಹಕರಿಗೆ ಶೇ.10 ರಷ್ಟು ರಿಯಾಯ್ತಿಯನ್ನು ನೀಡಲಿವೆ.

●    ಇನ್ನು ಬಜಾಜ್ ಫಿನ್ ಸರ್ವ್ ಇಎಂಐ ಕಾರ್ಡುದಾರರಿಗೆ ವಿಸ್ತಾರವಾದ ಉತ್ಪನ್ನಗಳನ್ನು ಖರೀದಿ ಮಾಡುವಾಗ ಇಎಂಐ ಮೇಲೆ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ. ಹೊಸದಾಗಿ ಪರಿಚಯಿಸಲಾಗಿರುವ ಒಟಿಪಿ ಆಧಾರಿತ ಅಥಂಟಿಕೇಶನ್ ಪ್ರಕ್ರಿಯೆಯೊಂದಿಗೆ ಗ್ರಾಹಕರು ತಮ್ಮ ಖರೀದಿಗಳಿಗೆ ಯಾವುದೇ ತೊಡಕುಗಳಿಲ್ಲದೇ ಸಾಲ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುತ್ತದೆ.

●      ಕೊಟಕ್ ಮಹೀಂದ್ರ ಬ್ಯಾಂಕ್ ಮತ್ತು ಫೆಡರಲ್ ಬ್ಯಾಂಕ್ ಡೆಬಿಟ್ ಕಾರ್ಡ್ ಇಎಂಐ ಪಾವತಿ ಆಯ್ಕೆಯನ್ನು ಆರಂಭಿಸಿದ್ದು, ಇದರ ಮೂಲಕ ಗ್ರಾಹಕರು 7 ಪ್ರಮುಖ ಬ್ಯಾಂಕುಗಳು ಮತ್ತು ಫಿನ್ ಟೆಕ್ ಸಂಸ್ಥೆಗಳಿಂದ ಪ್ರಿ-ಅಪ್ರೂವ್ಡ್ ಸಾಲ ಸೌಲಭ್ಯವನ್ನು ಪಡೆಯಬಹುದು.

●      ಪೇಟಿಎಂನೊಂದಿಗೆ ಸಹಭಾಗಿತ್ವ ಹೊಂದುವ ಮೂಲಕ ಫ್ಲಿಪ್ ಕಾರ್ಟ್ ತನ್ನ ಗ್ರಾಹಕರಿಗೆ ವಾಲೆಟ್ ಮತ್ತು ಯುಪಿಐ ವ್ಯವಹಾರಗಳ ಮೇಲೆ ಭರವಸೆಯ ಕ್ಯಾಶ್ ಬ್ಯಾಕ್ ಆಫರ್ ಗಳನ್ನು ನೀಡುತ್ತದೆ. ಇದರಿಂದ ವೇಗದಲ್ಲಿ ಚೆಕ್ ಔಟ್ ಗಳು, ವಿಶೇಷವಾಗಿ ಬಹುನಿರೀಕ್ಷಿತ ಫ್ಲ್ಯಾಶ್ ಮಾರಾಟಗಳ ಸಂದರ್ಭದಲ್ಲಿ ನೆರವಾಗುತ್ತವೆ.

●      ವಿಮೆಯ ವಿಚಾರದಲ್ಲಿ ಗ್ರಾಹಕರು ಡಿಜಿಟಲ್ ಸುರಕ್ಷ ಗ್ರೂಪ್ ಇನ್ಶೂರೆನ್ಸ್ ನೊಂದಿಗೆ ಸೈಬರ್ ವಂಚನೆಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದಾಗಿದೆ. ಬಜಾಜ್ ಅಲಾಯನ್ಝ್ ಜನರಲ್ ಇನ್ಶೂರೆನ್ಸ್ ಕಂಪನಿಯೊಂದಿಗಿನ ಸಹಭಾಗಿತ್ವದಲ್ಲಿ ಗ್ರಾಹಕರು ಈ ಸೌಲಭ್ಯ ಪಡೆಯಲಿದ್ದಾರೆ.

●    ಇದಲ್ಲದೇ, ಫ್ಲಿಪ್ ಕಾರ್ಟ್ ಜೋಯ್ ಅಲುಕ್ಕಾಸ್, ಕಲ್ಯಾಣ್ ಜ್ಯುವೆಲ್ಲರ್ಸ್, ಕ್ರೋಮಾ, ಫ್ಯಾಬ್ ಇಂಡಿಯಾ ಮತ್ತು ಕೆಎಫ್ ಸಿ ಸೇರಿದಂತೆ 60 ಕ್ಕೂ ಹೆಚ್ಚು ಬ್ರ್ಯಾಂಡ್ ಗಳ ಮೇಲೆ ಗ್ರಾಹಕರ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಗಿಫ್ಟ್ ಕಾರ್ಡ್ ಸ್ಟೋರ್ ಅನ್ನು ಆರಂಭಿಸಿದೆ.

●    ಹಬ್ಬದ ಸಂದರ್ಭದಲ್ಲಿ ಗಿಫ್ಟ್ ಕಾರ್ಡ್ಸ್ (ಡಿಜಿಟಲ್ & ಫಿಸಿಕಲ್)ಗಳನ್ನು ಖರೀದಿ ಮಾಡುವ ಅವಕಾಶವನ್ನು ಕಲ್ಪಿಸಿದೆ. ಈ ಖರೀದಿ ಮೇಲೆ ಫ್ಲಿಪ್ ಕಾರ್ಟ್ ಶೇ.10 ರಷ್ಟು ರಿಯಾಯ್ತಿಯನ್ನು ನೀಡಲಿದೆ.

ಬಿಗ್ ಬಿಲಿಯನ್ ಡೇಸ್ ಆಫರ್: ಕೇವಲ 1 ರೂಪಾಯಿಯಲ್ಲಿ ಪ್ರೀ- ಬುಕಿಂಗ್

ಫ್ಲಿಪ್ ಕಾರ್ಟ್ ನಲ್ಲಿ ಗ್ರಾಹಕ ಕೇಂದ್ರಿತ ವ್ಯವಸ್ಥೆಯು ನಮ್ಮ ಹೃದಯಭಾಗದಲ್ಲಿದೆ. ಏಕೆಂದರೆ, ನಾವು ನಮ್ಮ ಎಲ್ಲಾ ಪಾಲುದಾರರಿಗೆ ಪರಿಸರವ್ಯವಸ್ಥೆಯಲ್ಲಿ ಹೆಚ್ಚಿನ ಮೌಲ್ಯವನ್ನು ನೀಡುತ್ತೇವೆ. ಸಾಲ ಮತ್ತು ಇನ್ಶೂರೆನ್ಸ್ ಸೌಲಭ್ಯಗಳನ್ನು ನೀಡುವ ಮೂಲಕ ದೇಶಾದ್ಯಂತ ಇರುವ 250 ದಶಲಕ್ಷಕ್ಕೂ ಅಧಿಕ ಗ್ರಾಹಕರಿಗೆ ಪಾವತಿ ವ್ಯವಸ್ಥೆಯನ್ನು ಸರಳಗೊಳಿಸಿದ್ದೇವೆ. ಈ ಮೂಲಕ ನಾವು ನಮ್ಮ ಗ್ರಾಹಕರಿಗೆ ಹೆಚ್ಚಿನ ಆರ್ಥಿಕ ಹೊರೆಯಾಗದ ರೀತಿಯಲ್ಲಿ ಅವರ ನಿರೀಕ್ಷೆಗಳನ್ನು ಪೂರೈಸುವ ನಿಟ್ಟಿನಲ್ಲಿ ಬದ್ಧತೆಯನ್ನು ಪ್ರದರ್ಶಿಸುತ್ತಿದ್ದೇವೆ. ಈ ಪಾಲುದಾರಿಕೆಗಳು ಮತ್ತು ನಮ್ಮ ವಿಸ್ತರಣೆ ಮೂಲಕ ದಿ ಬಿಗ್ ಬಿಲಿಯನ್ ಡೇಸ್ ಅನ್ನು ಹೆಚ್ಚು ಗ್ರಾಹಕರಿಗೆ ಅರ್ಥಪೂರ್ಣವಾದ ಪ್ರಗತಿ ಸಾಧಿಸಲು ನೆರವಾಗಲಿದ್ದೇವೆ ಎಂದು ಫ್ಲಿಪ್ ಕಾರ್ಟ್ ನ ಫಿನ್ ಟೆಕ್ ಮತ್ತು ಪೇಮೆಂಟ್ಸ್ ಗ್ರೂಪ್ ನ ಮುಖ್ಯಸ್ಥ ರಂಜಿತ್ ಬೋಯನಪಲ್ಲಿ ಹೇಳಿದರು.
 
ಹಬ್ಬದ ಸಂದರ್ಭದಲ್ಲಿ ಗ್ರಾಹಕರು ಶಾಪ್ ಮಾಡಲು ಆನ್ ಲೈನ್ ಚಾನೆಲ್ ಗಳನ್ನು ಹೆಚ್ಚು ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಫ್ಲಿಪ್ ಕಾರ್ಟ್ ಕೈಗೆಟುಕುವ ಮತ್ತು ತೊಡಕುರಹಿತವಾದ ಅನುಭವವನ್ನು ನೀಡುತ್ತಿದೆ. ಸರಳೀಕೃತ ವಿಧಾನಗಳು, ತೊಡಕುರಹಿತ ಸಪ್ಲೈ ಚೇನ್ ಗಳು ಮತ್ತು ವಿಸ್ತಾರವಾದ ಉತ್ಪನ್ನಗಳನ್ನು ಅವರಿಗೆ ನೀಡುತ್ತಿದೆ. ಈ ವಿಸ್ತಾರವಾದ ಜಾಲದಿಂದಾಗಿ ಫ್ಲಿಪ್ ಕಾರ್ಟ್ ಯಾವುದೇ ಪ್ರದೇಶವನ್ನೂ ಬಿಡದೆ ಇಡೀ ದೇಶದ ಶಾಪಿಂಗ್ ಮತ್ತು ಖರೀದಿ ಅಗತ್ಯತೆಗಳನ್ನು ಪೂರೈಸಲಿದೆ.

ದಿ ಬಿಗ್ ಬಿಲಿಯನ್ ಡೇಸ್ ಶಾಪಿಂಗ್ ಉತ್ಸವಕ್ಕಾಗಿಯೇ ಫ್ಲಿಪ್ ಕಾರ್ಟ್ ನೊಂದಿಗೆ ಎಕ್ಸ್ ಕ್ಲೂಸಿವ್ ಕ್ರೆಡಿಟ್ ಕಾರ್ಡ್ ಸಹಭಾಗಿತ್ವ ಹೊಂದುತ್ತಿರುವುದಕ್ಕೆ ನಮಗೆ ಅತ್ಯಂತ ಸಂತಸವೆನಿಸುತ್ತಿದೆ. ನಾವು ಸುದೀರ್ಘವಾಗಿ ಫ್ಲಿಪ್ ಕಾರ್ಟ್ ನೊಂದಿಗೆ ಸಹಭಾಗಿತ್ವವನ್ನು ಹೊಂದಿದ್ದೇವೆ ಮತ್ತು ಇದೀಗ ನಮ್ಮ ಗ್ರಾಹಕರಿಗೆ ಉಭಯ ಸಂಸ್ಥೆಗಳು ಮತ್ತೊಂದು ಸಹಭಾಗಿತ್ವವನ್ನು ಮಾಡಿಕೊಂಡಿವೆ. ಹಬ್ಬದ ಈ ಸಂದರ್ಭದಲ್ಲಿ ಫ್ಲಿಪ್ ಕಾರ್ಟ್ ನೀಡುತ್ತಿರುವ ಹಲವಾರು ಆಫರ್ ಗಳ ಜತೆಯಲ್ಲಿ ಉತ್ಪನ್ನಗಳ ಖರೀದಿ ಮೇಲೆ ಎಸ್ ಬಿಐ ಕಾರ್ಡ್ ಗ್ರಾಹಕರು ಶೇ.10 ರಷ್ಟು ರಿಯಾಯ್ತಿಯನ್ನು ಪಡೆಯಲಿದ್ದಾರೆ. ಅತ್ಯಂತ ಜಾಗರೂಕತೆಯಿಂದ ಮಾಡಲಾಗಿರುವ ಪಾಲುದಾರಿಕೆಗಳ ಮೂಲಕ ನಮ್ಮ ಗ್ರಾಹಕರಿಗೆ ಉತ್ತಮವಾದ ಅನುಭವ ಮತ್ತು ಗರಿಷ್ಠ ಉಳಿತಾಯವನ್ನು ತಂದುಕೊಡುವುದು ನಮ್ಮ ನಿರಂತರ ಪ್ರಯತ್ನವಾಗಿದೆ. ಈ ಸಹಭಾಗಿತ್ವದ ಮೂಲಕ ನಾವು ನಮ್ಮ ಗ್ರಾಹಕರಿಗೆ ಈ ಹಬ್ಬದ ಸಂದರ್ಭದಲ್ಲಿ ಸುರಕ್ಷಿತವಾದ ಶಾಪಿಂಗ್ ಅನುಭವವನ್ನು ನೀಡಲಿದ್ದೇವೆ ಎಂದು ಎಸ್ ಬಿಐ ಕಾರ್ಡ್ ನ ವ್ಯವಸ್ಥಾಪಕ ನಿರ್ದೇಶಕ & ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶ್ವಿನಿ ಕುಮಾರ್ ತಿವಾರಿ ಹೇಳಿದರು.

ಬಿಗ್ ಬಿಲಿಯನ್ ಡೇಸ್ ಅಭಿಯಾನಕ್ಕಾಗಿ ನಾವು ಫ್ಲಿಪ್ ಕಾರ್ಟ್ ನೊಂದಿಗೆ ಪಾಲುದಾರಿಕೆಯನ್ನು ಹೊಂದುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಈ ಶಾಪಿಂಗ್ ಉತ್ಸವ ನಮ್ಮ ಎಸ್ ಬಿಐ ಡೆಬಿಟ್ ಕಾರ್ಡುದಾರರಿಗೆ ಆಕರ್ಷಕ ಲಾಭಗಳು ಮತ್ತು ರಿಯಾಯ್ತಿಗಳೊಂದಿಗೆ ಸಂತೋಷ ಮತ್ತು ಸುಲಭವಾಗಿ ವಾಲೆಟ್ ಶಾಪಿಂಗ್ ಅನುಭವವನ್ನು ನೀಡುತ್ತದೆ ಎಂದು ನಾವು ನಂಬಿದ್ದೇವೆ. ಎಸ್ ಬಿಐ ನಲ್ಲಿ ನಾವು ನಿರಂತರವಾಗಿ ಗ್ರಾಹಕಕೇಂದ್ರಿತ ಹಣಕಾಸು ಸೌಲಭ್ಯಗಳನ್ನು ನಮ್ಮ ಗ್ರಾಹಕರಿಗೆ ನೀಡುತ್ತಾ ಬಂದಿದ್ದೇವೆ. ಗ್ರಾಹಕರ ಅಗತ್ಯತೆಗಳಿಗೆ ತಕ್ಕ ರೀತಿಯಲ್ಲಿ ಸುರಕ್ಷಿತ, ಭದ್ರತೆ ಮತ್ತು ಅವಿಸ್ಮರಣೀಯ ವ್ಯವಹಾರಗಳನ್ನು ನಡೆಸುವ ರೀತಿಯಲ್ಲಿ ಸೇವೆಗಳನ್ನು ನೀಡುತ್ತಿದ್ದೇವೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.

ತಡೆರಹಿತವಾದ ಶಾಪಿಂಗ್ ಮತ್ತು ಪಾವತಿ ಅನುಭವವನ್ನು ನೀಡಲು ಎರಡು ತಂತ್ರಜ್ಞಾನ ಕಂಪನಿಗಳು ಸಹಕರಿಸುತ್ತಿರುವುದು ಅದ್ಭುತವಾಗಿದೆ. ಫ್ಲಿಪ್ ಕಾರ್ಟ್ ಭಾರತದಲ್ಲಿ ಇ-ಕಾಮರ್ಸ್ ಅನ್ನು ಚಾಂಪಿಯನ್ ಮಾಡಿದೆ ಮತ್ತು ಒಟ್ಟಿಗೆ ನಾವು ಪೇಟಿಎಂ ವಾಲೆಟ್ ಮತ್ತು ಪೇಟಿಎಂ ಬ್ಯಾಂಕ್ ಖಾತೆಯ ಮೂಲಕ ಡಿಜಿಟಲ್ ಪಾವತಿಗಳೊಂದಿಗೆ ಕ್ಯಾಶ್ ಆನ್ ವಿತರಣೆಯನ್ನು ಬದಲಿಸುವ ಗುರಿಯನ್ನು ಹೊಂದಿದ್ದೇವೆ. ಆತ್ಮನಿರ್ಭರ್ ಭಾರತ್ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಆವಿಷ್ಕಾರಕ ಪರಿಹಾರಗಳ ಜತೆಯಲ್ಲಿ ಲಕ್ಷಾಂತರ ಭಾರತೀಯರನ್ನು ಸಬಲರನ್ನಾಗಿ ಮಾಡುವ ಗುರಿ ನಮ್ಮದಾಗಿದೆ. ಈ ನಿಟ್ಟಿನಲ್ಲಿ ಪೇಟಿಎಂ ಡಿಜಿಟಲ್ ಪೇಮೆಂಟ್ ಪರಿಸರ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿದೆ ಮತ್ತು ಸಣ್ಣ ನಗರಗಳು ಮತ್ತು ಪಟ್ಟಣಗಳಲ್ಲಿಯೂ ನಮ್ಮ ಶಕ್ತಿಶಾಲಿಯಾದ ಉಪಸ್ಥಿತಿಯು ನಮ್ಮ ಪ್ರಯತ್ನಗಳಿಗೆ ಹಿಡಿದ ಕನ್ನಡಿಯಾಗಿದೆ ಎಂದು ಪೇಟಿಎಂ ಅಧ್ಯಕ್ಷ ಮಧುರ್ ದಿಯೋರಾ ಹೇಳಿದ್ದಾರೆ.

Follow Us:
Download App:
  • android
  • ios