ಅತೀ ಕಡಿಮೆ ಮೊಬೈಲ್ ಡೇಟಾದಲ್ಲಿ ಮಾಡಬಹುದು WhatsApp ಕಾಲ್, ಇಲ್ಲಿದೆ 5 ಟಿಪ್ಸ್!

  • ವಿಡಿಯೋ ಕಾಲ್‌ಗೆ ಬೆಚ್ಚಿನ ಡೇಟಾ ಬೇಕು ಅನ್ನೋ ಆತಂಕ ದೂರ
  • ಅತೀ ಕಡಿಮೆ ಡೇಟಾದಲ್ಲಿ ವ್ಯಾಟ್ಸ್ಆ್ಯಪ್ ಕರೆ ಸಾಧ್ಯ
  • ಆ್ಯಂಡ್ರಾಯ್ಡ್ ಹಾಗೂ ಐಫೋನ್ ಬಳಕೆದಾರರಿಗೆ 5 ಟಿಪ್ಸ್
Five tips to reduce mobile data consumption during WhatsApp calls on Android and iPhones ckm

ನವದೆಹಲಿ(ಮಾ.28): ವ್ಯಾಟ್ಸ್ಆ್ಯಪ್ ಪ್ರತಿ ಬಾರಿ ಹೊಸ ಹೊಸ ಫೀಚರ್ಸ್ ಮೂಲಕ ಗ್ರಾಹಕರಿಗೆ ಸುಲಭ ಹಾಗೂ ತಡೆರಹಿತ ಸೇವೆ ನೀಡುವ ಪ್ರಯತ್ನ ಮಾಡುತ್ತಿದೆ. ಇತ್ತೀಚೆಗೆ ಭಾರತದಲ್ಲಿ ಮೊಬೈಲ್ ಡೇಟಾ ಬೆಲೆ ಹೆಚ್ಚಳವಾಗಿದೆ. ಹೀಗಾಗಿ ಬಳಕೆಯೂ ನಿಯಮಿತವಾಗುತ್ತಿದೆ. ಇದೀಗ ವ್ಯಾಟ್ಸ್ಆ್ಯಪ್‌ನಲ್ಲಿ ಅತೀ ಕಡಿಮೆ ಮೊಬೈಲ್ ಡೇಟಾ ಮೂಲಕ ಕರೆ ಮಾಡಲು ಸಾಧ್ಯವಿದೆ. 

ಸಹಜವಾಗಿ ವ್ಯಾಟ್ಸ್ಆ್ಯಪ್ ವಿಡಿಯೋ ಹಾಗೂ ವಾಯ್ಸ್ ಕಾಲ್‌ಗೆ ಹೆಚ್ಚಿನ ಡೇಟಾ ಅವಶ್ಯಕತೆ ಇದೆ. ಇದರಿಂದ ಗ್ರಾಹಕರು ಚಿಂತೆ ಪಡಬೇಕಿಲ್ಲ. ಸೆಟ್ಟಿಂಗ್ಸ್ ಮೂಲಕ ನಿಮ್ಮ ವ್ಯಾಟ್ಸ್ಆ್ಯಪ್ ಕರೆಗೆ ಅತೀ ಕಡಿಮೆ ಡೇಟಾ ಬಳಕೆಯಾಗುವಂತೆ ಮಾಡಲು ಸಾಧ್ಯವಿದೆ. ಇದರಿಂದ ದಿನ ನಿತ್ಯದ ಡೇಟಾ ಬಳಕೆಯನ್ನು ಉಳಿತಾಯ ಮಾಡಬಹುದು.

WhatsApp Multi Device Support ಬಿಡುಗಡೆ: ಲಿಂಕ್ ಮಾಡುವುದು ಹೇಗೆ?

ಆ್ಯಂಡ್ರಾಯ್ಡ್ ಫೋನ್ ಬಳಕೆದಾರರಿಗೆ ವ್ಯಾಟ್ಸ್ಆ್ಯಪ್ ಕರೆಗೆ ಕಡಿಮೆ ಡೇಟಾ ಬಳಕೆ ಮಾಡಲು ಟಿಪ್ಸ್
1 ವ್ಯಾಟ್ಸ್ಆ್ಯಪ್ ಆ್ಯಪ್ಲಿಕೇಶನ್ ಒಪನ್ ಮಾಡಿ
2 ಮೇಲೆ ಬಲಭಾಗದಲ್ಲಿರುವ ಮೂರು ಡಾಟ್ ಐಕಾನ್ ಕ್ಲಿಕ್ ಮಾಡಿ
3 ಮೆನುವಿನಲ್ಲಿ ಸೆಟ್ಟಿಂಗ್ಸ್ ಆಯ್ಕೆ ಮಾಡಿ
4 ಬಳಿಕ ಸ್ಟೋರೇಜ್ ಹಾಗೂ ಡೇಯಾ ಆಯ್ಕೆಯನ್ನು ಕ್ಲಿಕ್ ಮಾಡಿ
5 ಯೂಸ್ ಲೆಸ್ ಡೇಟಾ ಫಾರ್ ಕಾಲ್ಸ್ ಆಯ್ಕೆಯನ್ನು ಕ್ಲಿಕ್ ಮಾಡಿ

ಐಫೋನ್ ಫೋನ್ ಬಳಕೆದಾರರಿಗೆ ವ್ಯಾಟ್ಸ್ಆ್ಯಪ್ ಕರೆಗೆ ಕಡಿಮೆ ಡೇಟಾ ಬಳಕೆ ಮಾಡಲು ಟಿಪ್ಸ್
1 ವ್ಯಾಟ್ಸ್ಆ್ಯಪ್ ಆ್ಯಪ್ಲಿಕೇಶನ್ ಒಪನ್ ಮಾಡಿ
2 ಆ್ಯಪ್ಲಿಕೇಶನ್ ಕೆಳಭಾಗದ ಬಲಬದಿಯಲ್ಲಿರುವ ಸೆಟ್ಟಿಂಗ್ಸ್ ಆಯ್ಕೆ ಮಾಡಿಕೊಳ್ಳಿ
3 ಬಳಿಕ ಸ್ಟೋರೇಜ್ ಹಾಗೂ ಡೇಯಾ ಆಯ್ಕೆಯನ್ನು ಕ್ಲಿಕ್ ಮಾಡಿ
4 ನೆಟ್‌ವರ್ಕ್ ಸೆಲೆಕ್ಷನ್ ಆಯ್ಕೆಯಲ್ಲಿ ಯೂಸ್ ಲೆಸ್ ಡೇಟಾ ಫಾರ್ ಕಾಲ್ಸ್ ಆಯ್ಕೆಯನ್ನು ಕ್ಲಿಕ್ ಮಾಡಿ

WhatsApp Voice Notes Update:‌ ಇನ್ಮುಂದೆ ಚಾಟ್‌ ಮಾಡುತ್ತಲೇ ವಾಟ್ಸಾಪ್ ವಾಯ್ಸ್‌ ಮೇಸೆಜ್ ಕೇಳಬಹುದು!

ಆಯ್ಕೆ ಮಾಡಿದರೆ ಅತೀ ಕಡಿಮೆ ಡೇಟಾದಲ್ಲಿ ವ್ಯಾಟ್ಸ್ಆ್ಯಪ್ ಕರೆ ಮಾಡಲು ಸಾಧ್ಯವಿದೆ. ಸಾಮಾನ್ಯವಾಗಿ ವಾಟ್ಸ್ಆ್ಯಪ್ ಕರೆಗೆ ಕನಿಷ್ಠ 720KB ಡೇಟಾ ಅತೀ ಅವಶ್ಯಕ. ಇದರಿಂದ ದಿನ ಬಳಕೆ ಡೇಟಾ ಕೊರತೆಯಾಗುವ ಸಾಧ್ಯತೆ ಇದೆ. ಹೀಗಾಗಿ ಕಡಿಮೆ ಬಳಕೆ ಆಯ್ಕೆ ಮಾಡಿಕೊಂಡರೆ ಯಾವುದೇ ಚಿಂತೆ ಇಲ್ಲದೆ ವ್ಯಾಟ್ಸಆ್ಯಪ್ ಕರೆ ಮಾಡಬುಹುದು.

2ಜಿಬಿ ಫೈಲ್ ಶೇರ್ ಮಾಡಲು ಅವಕಾಶ:
ವ್ಯಾಟ್ಸ್ಆ್ಯಪ್ ಮತ್ತಷ್ಟು ಫೀಚರ್ಸ್ ನೀಡಲು ನಿರಂತರವಾಗಿ ಕೆಲಸ ಮಾಡುತ್ತಿದೆ. ಸದ್ಯ ಬಳಕೆದಾರರು ಹೆಚ್ಚಿನ ಗಾತ್ರದ ಫೈಲ್ ಕಳುಹಿಸಲು ಸಾಧ್ಯವಿಲ್ಲ. ಆದರೆ ಶೀಘ್ರದಲ್ಲೇ ಬಳಕೆದಾರರು 2ಜಿಬಿ ಫೈಲ್ಸ್ ಸೆಂಡ್ ಮಾಡಲು ಸಾಧ್ಯವಾಗಲಿದೆ. 

ಸದ್ಯ 100ಎಂಬಿ ಫೈಲ್ಸ್ ಸೆಂಡ್ ಮಾಡಲು ವ್ಯಾಟ್ಸ್ಆ್ಯಪ್ ಅವಕಾಶ ನೀಡಿದೆ. ಆದರೆ ಇದೀಗ ಗರಿಷ್ಠ 2ಜಿಬಿ ವರೆಗಿನ ಫೈಲ್ಸ್ ಸೆಂಡ್ ಮಾಡಲು ಅವಕಾಶ ನೀಡುತ್ತಿದೆ. ಅರ್ಜಂಟೈನಾದಲ್ಲಿ ಪ್ರಾಯೋಗಿಕ ಹಂತವಾಗಿ ಈ ಫೀಚರ್ಸ್ ಪರಿಚಯಿಸಿದೆ. ಇದರಿಂದ ಒಂದೇ ಸಮಯದಲ್ಲಿ 2 ಜಿಪಿ ಫೈಲ್ಸ್ ಕಳುಹಿಸಲು ಸಾಧ್ಯವಾಗಲಿದೆ.

ಪ್ರಾಯೋಗಿಕ ಹಂತದಲ್ಲಿರುವ ಈ ಫೀಚರ್ಸ್ ಭಾರತ ಸೇರಿದಂತೆ  ಇತರ ದೇಶಗಳ ಬಳಕೆದಾರರಿಗೆ ಯಾವಾಗ ಲಭ್ಯವಾಗಲಿದೆ ಅನ್ನೋ ಕುರಿತು ಶೀಘ್ರದಲ್ಲೇ ಬಹಿರಂಗವಾಗಲಿದೆ. ಟೆಲಿಗ್ರಾಂ ಸೇರಿದಂತೆ ಹಲವು ಚಾಟಿಂಗ್ ಆ್ಯಪ್‌ಗಳು ಲಭ್ಯವಿದೆ. ಹೀಗಾಗಿ ತನ್ನ ಗ್ರಾಹಕರನ್ನು ಉಳಿಸಿಕೊಳ್ಳಲು ಹಾಗೂ ಹೊಸ ಗ್ರಾಹಕರನ್ನು ಸೆಳೆಯಲು ವ್ಯಾಟ್ಸ್‌ಆ್ಯಪ್ ಹೊಸ ಹೊಸ ಫೀಚರ್ಸ್ ನೀಡುತ್ತಿದೆ.
 

Latest Videos
Follow Us:
Download App:
  • android
  • ios