ಬೆಂಗಳೂರು(ಜ.03): ಜನಪ್ರಿಯ ಗೇಮಿಂಗ್ ಆ್ಯಪ್ ಪಬ್‌ಜಿಗೆ ಪ್ರತಿಸ್ಪರ್ಧಿಯಾಗಿ ಭಾರತ ಅಭಿವೃದ್ಧಿ ಪಡಿಸಿದ ಫೌಜಿ ಗೇಮಿಂಗ್ ಆ್ಯಪ್ ಬಿಡುಗಡೆ ಸಜ್ಜಾಗಿದೆ. ಲಡಾಖ್ ಗಡಿಯಲ್ಲಿ ಚೀನಾ ಅತಿಕ್ರಮಣದ ಬಳಿಕ ಭಾರತ ಚೀನಾ ಸೇರಿದಂತೆ ಹಲವು ಆ್ಯಪ್ ಬ್ಯಾನ್ ಮಾಡಿದೆ. ಹೀಗಾಗಿ ಭಾರತ ಸ್ವದೇಶಿ ಆ್ಯಪ್ ಬಳಕೆಗೆ ಮುಂದಾಗಿದೆ. ಹೀಗಾಗಿ ಪಬ್‌ಜಿ ಆ್ಯಪ್ ಪ್ರತಿಸ್ಪರ್ಧಿಯಾಗಿರುವ ಫೌಜಿ ಆ್ಯಪ್ ಜನವರಿ 26ರ ಗಣರಾಜೋತ್ಸವ ದಿನ ಬಿಡುಗಡೆಯಾಗಲಿದೆ.

ಗಲ್ವಾನ್ ಹೋರಾಟದ ಎಪಿಸೋಡ್ ಒಳಗೊಂಡ FAU-G ಗೇಮ್ ಟೀಸರ್ ಬಿಡುಗಡೆ!

ಬೆಂಗಳೂರು ಮೂಲದ ಎನ್‌ಕೋರ್ ಗೇಮಿಂಗ್ ಕಂಪನಿ ನೂತನ ಆ್ಯಪ್ ಅಭಿವೃದ್ಧಿ ಪಡಿಸಿದೆ. ಇದರಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಬಂಡವಾಳ ಹೂಡಿಕೆ ಮಾಡಿದ್ದಾರೆ. ಅಕ್ಷಯ್ ಬ್ರಾಂಡ್ ಅಂಬಾಸಿಡರ್ ಆಗಿರುವ ಫೌಜಿ ಆ್ಯಪ್ ಈಗಾಗಲೇ ಟೀಸರ್ ಬಿಡುಗಡೆ ಮಾಡಿ ಸದ್ದು ಮಾಡಿತ್ತು. ಲಡಾಖ್‌ನ ಗಲ್ವಾಣ್ ಕಣಿವೆಯಲ್ಲಿನ ಘರ್ಷಣೆ ಎಪಿಸೋಡ್ ಈ ಆ್ಯಪ್‌ನಲ್ಲಿದೆ.

ಗೇಮ್ ರಿಜಿಸ್ಟ್ರೇಶನ್ ಈಗಾಗಲೇ ಆರಂಭಗೊಂಡಿದೆ. 24 ಗಂಟೆಯಲ್ಲಿ 10 ಲಕ್ಷಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಜನವರಿ 26ರಿಂದ ಗೂಗಲ್ ಪ್ಲೇ ಸ್ಟೋರ್, ಆ್ಯಪಲ್ ಸ್ಟೋರ್‌ನಲ್ಲಿ ಲಭ್ಯವಾಗಲಿದೆ.