ಗೇಮಿಂಗ್, ಆ್ಯನಿಮೇಷನ್‌ ಕ್ಷೇತ್ರದಲ್ಲಿ ಹೂಡಿಕೆಗೆ ಕರ್ನಾಟಕವೇ ಬೆಸ್ಟ್: ಜಗದೀಶ್ ಶೆಟ್ಟರ್

ಕರ್ನಾಟಕವು ಹೈಟೆಕ್ ಉದ್ಯಮ ಕ್ಷೇತ್ರಕ್ಕೆ ಹೆಸರುವಾಸಿಯಾಗಿರುವ ರಾಜ್ಯವಾಗಿದೆ. ಇದು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಬಾಹ್ಯಾಂತರಿಕ್ಷ ಮತ್ತು ಇತರೆ ತಂತ್ರಜ್ಞಾನ ಆಧಾರಿತ ಕ್ಷೇತ್ರಗಳ ಮೂಲಕ ದೇಶದ ಆದಾಯಕ್ಕೆ ಗಣನೀಯ ಪ್ರಮಾಣದ ಕೊಡುಗೆಯನ್ನು ನೀಡುತ್ತಿದೆ ಇದೀಗ ಗೇಮಿಂಗ್ ಹಾಗೂ ಆ್ಯನಿಮೇಷನ್ ಹಬ್ ಆಗಿ ಕರ್ನಾಟಕ ಬೆಳೆಯತ್ತಿದೆ. ಈ ಕುರಿತು ಜಗದೀಶ್ ಶೆಟ್ಟರ್ ಮಹತ್ವದ ಮಾಹಿತಿ ನೀಡಿದ್ದಾರೆ.

 

Exploring Opportunities for gaming and AVGC Sector in Karnataka says Jagadish Shettar

ಸೆಪ್ಟೆಂಬರ್‌ (ಸೆ.04): ಗೇಮಿಂಗ್ ಮತ್ತು ಅನಿಮೇಶನ್ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮತ್ತು ಅಭಿವೃದ್ಧಿಗೆ ಕರ್ನಾಟಕದಲ್ಲಿ ವಿಪುಲ ಅವಕಾಶವಿದೆ. ಇದಕ್ಕೆ ಪೂರಕವಾದ ಅಗತ್ಯ ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಜಗದೀಶ್ ಶೆಟ್ಟರ್ ಭರವಸೆ ನೀಡಿದ್ದಾರೆ. ಸಿಐಐ  ಆಯೋಜಿಸಿದ ಜಾಗತಿಕ ಅನಿಮೇಷನ್, ವಿಎಫ್ಎಕ್ಸ್, ಗೇಮಿಂಗ್ & ಕಾಮಿಕ್ಸ್ ಕುರಿತಾದ ವೆಬಿನಾರ್ ನಲ್ಲಿ ಪಾಲ್ಗೊಂಡು ಅವರು. ಕರ್ನಾಟಕದಲ್ಲಿ ಎವಿಜಿಸಿ ಕ್ಷೇತ್ರದ ಅವಕಾಶಗಳ ಅನ್ವೇಷಣೆ ಕುರಿತು ಬೆಳಕು ಚೆಲ್ಲಿದರು.

ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಅನಿಮೇಷನ್ ಉದ್ಯಮ ಸ್ಥಿರವಾದ ಬೆಳವಣಿಗೆಯನ್ನು ಕಾಣುತ್ತಿದೆ ಮತ್ತು ಅತ್ಯಂತ ಹೆಚ್ಚು ಅವಕಾಶ ಹೊಂದಿರುವ ಕ್ಷೇತ್ರವಾಗಿದೆ. ಇದರ ಪರಿಣಾಮ ಭಾರತಕ್ಕೆ ಅನಿಮೇಷನ್ ತಂತ್ರಜ್ಞಾನದ ಅರಿವು ನಿರಂತರವಾಗಿ ಸಾಗಿದೆ ಎಂದು ಶೆಟ್ಟರ್ ಹೇಳಿದರು.

ಚೌಕಿದಾರನ ಖಾತೆಗೆ ಖದೀಮರಿಂದ ಕನ್ನ; ಪಿಎಂ ಪರಿಹಾರ ನಿಧಿ ಮೇಲೆ ಅವರ ಕಣ್ಣು..!.

 ಕರ್ನಾಟಕವು ಹೈಟೆಕ್ ಉದ್ಯಮ ಕ್ಷೇತ್ರಕ್ಕೆ ಹೆಸರುವಾಸಿಯಾಗಿರುವ ರಾಜ್ಯವಾಗಿದೆ. ಇದು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಬಾಹ್ಯಾಂತರಿಕ್ಷ ಮತ್ತು ಇತರೆ ತಂತ್ರಜ್ಞಾನ ಆಧಾರಿತ ಕ್ಷೇತ್ರಗಳ ಮೂಲಕ ದೇಶದ ಆದಾಯಕ್ಕೆ ಗಣನೀಯ ಪ್ರಮಾಣದ ಕೊಡುಗೆಯನ್ನು ನೀಡುತ್ತಿದೆ ಎಂದು ಮಾಹಿತಿ ನೀಡಿದರು. ಅನಿಮೇಷನ್ ಮತ್ತು ಗೇಮಿಂಗ್ ಬೆಳವಣಿಗೆ ಹೊಂದುತ್ತಿರುವ ಕ್ಷೇತ್ರ ಎಂಬುದನ್ನು ಪರಿಗಣಿಸಿದ ಮೊದಲ ರಾಜ್ಯವೆಂದರೆ ಕರ್ನಾಟಕ. ಅಲ್ಲದೇ, ಈ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ಪ್ರತ್ಯೇಕ ನೀತಿಯನ್ನೂ ಜಾರಿಗೆ ತಂದಿರುವ ಮೊದಲ ರಾಜ್ಯವೂ ಕರ್ನಾಟಕವಾಗಿದೆ ಎಂದರು.

 ಕಳೆದ ಐದು ವರ್ಷಗಳಲ್ಲಿ ಬೆಂಗಳೂರು ಮತ್ತು ಕರ್ನಾಟಕದಲ್ಲಿ ಅನಿಮೇಷನ್ ಸೇವೆಗಳು, ವಿಎಫ್ಎಕ್ಸ್ ಸೇವೆಗಳು ಮತ್ತು ಗೇಮಿಂಗ್ ಡೆವಲಪರ್ ಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿಯೇ ಈ ಸಂಖ್ಯೆ ಅಧಿಕವಾಗಿದೆ. ಇದಕ್ಕೆ ಪ್ರಮುಖ ಕಾರಣ ರಾಜ್ಯ ಸರ್ಕಾರ ಅನಿಮೇಷನ್ ಮತ್ತು ಗೇಮಿಂಗ್ ಕ್ಷೇತ್ರದ ಬೆಳವಣಿಗೆಗೆ ಪೂರಕವಾದ ಯೋಜನೆಗಳನ್ನು ಪ್ರಕಟಿಸಿರುವುದಾಗಿದೆ ಎಂದು ತಿಳಿಸಿದರು.

ರಿಲಯನ್ಸ್ ಡಿಜಿಟಲ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S7 ಲಾಂಚ್

ಪ್ರಸ್ತುತ ಅನಿಮೇಷನ್, ವಿಶ್ಯುವಲ್ ಎಫೆಕ್ಟ್ಸ್ ಮತ್ತು ಗೇಮಿಂಗ್ ಕ್ಷೇತ್ರದ ಟಾಪ್ ತಾಣಗಳಲ್ಲಿ ಕರ್ನಾಟಕ ಒಂದಾಗಿದೆ. ಟೆಕ್ನಿಕಲರ್ ಇಂಡಿಯಾ, ಝಿಂಗಾ ಇಂಡಿಯಾ, ಡ್ರೀಂ ವರ್ಕ್ಸ್ ಸ್ಟುಡಿಯೋಸ್, ಪ್ರೈಂ ಫೋಕಸ್, ಇಎ ಮತ್ತು ಟಾಟಾ ಎಲೆಕ್ಸಿಯಂತಹ ಜಾಗತಿಕ ಸ್ಟುಡಿಯೋಗಳ ಕಾರ್ಯಾಚರಣೆಯ ನೆಚ್ಚಿನ ತಾಣವಾಗಿದೆ ಎಂದು ಅವರು ತಿಳಿಸಿದರು.

ದೇಶದಲ್ಲಿರುವ 425 ಸ್ಟುಡಿಯೋಗಳ (300 ಅನಿಮೇಷನ್, 40 ವಿಎಫ್ಎಕ್ಸ್ ಮತ್ತು 85 ಗೇಮ್ ಡೆವಲಪ್ ಮೆಂಟ್) ಪೈಕಿ ಬೆಂಗಳೂರಿನಲ್ಲಿ ಶೇ.11 ರಷ್ಟಿವೆ. ಉದ್ಯಮದ ಅಂದಾಜಿನ ಪ್ರಕಾರ, ಎವಿಜಿಸಿ ಸಂಬಂಧಿತ ತರಬೇತಿಗಳನ್ನು ಕರ್ನಾಟಕದ 80 ಕ್ಕೂ ಹೆಚ್ಚು ಸಂಸ್ಥೆಗಳಲ್ಲಿ ನೀಡಲಾಗುತ್ತಿದೆ. ಇಲ್ಲಿ ಪ್ರತಿವರ್ಷ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಅಲ್ಲದೇ, 5 ಸಾವಿರಕ್ಕೂ ಅಧಿಕ ವೃತ್ತಿಪರರು ಶಿಕ್ಷಣ ಮತ್ತು ಅನಿಮೇಷನ್ ನಿರ್ಮಾಣ ಘಟಕಗಳಲ್ಲಿ ಉದ್ಯೋಗ ಪಡೆಯುತ್ತಿದ್ದಾರೆ ಎಂದು ಸಚಿವರು ವಿವರ ನೀಡಿದರು.

Latest Videos
Follow Us:
Download App:
  • android
  • ios