Asianet Suvarna News Asianet Suvarna News

ಗ್ರಾಹಕರ ಅನುಕೂಲಕ್ಕಾಗಿ ಪೇಟಿಎಂ ಜೊತೆ ಒಪ್ಪಂದ ಮಾಡಿದ ಫ್ಲಿಪ್‌ಕಾರ್ಟ್!

  •     ಫ್ಲಿಪ್ ಕಾರ್ಟ್ ನಲ್ಲಿ ಪೇಟಿಎಂ ವಾಲೆಟ್ ಮತ್ತು ಪೇಟಿಎಂ ಯುಪಿಐ ಮೂಲಕ ವ್ಯವಹಾರಕ್ಕೆ ಅವಕಾಶ
  •   ಶಾಪರ್ ಗಳಿಗೆ ಪೇಟಿಎಂ ವಾಲೆಟ್ ಮತ್ತು ಯುಪಿಐ ವ್ಯವಹಾರಗಳಲ್ಲಿ ಭರವಸೆಯ ಕ್ಯಾಶ್ ಬ್ಯಾಕ್ ಆಫರ್
E commerce Flipkart India partnered with paytm for customer convenience ckm
Author
Bengaluru, First Published Oct 5, 2020, 3:18 PM IST
  • Facebook
  • Twitter
  • Whatsapp

ಬೆಂಗಳೂರು(ಅ.05) :ಭಾರತದ ದೇಶೀಯ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ಭಾರತದಲ್ಲಿ ಮುಂಚೂಣಿಯಲ್ಲಿರುವ ಡಿಜಿಟಲ್ ಹಣಕಾಸು ಸೇವೆಗಳ ಪ್ಲಾಟ್ ಫಾರ್ಮ್ ಪೇಟಿಎಂ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಎರಡೂ ಸಂಸ್ಥೆಗಳು ಫ್ಲಿಪ್ ಕಾರ್ಟ್ ನ ಗ್ರಾಹಕರಿಗೆ ಹಬ್ಬದ ಈ ಸಂದರ್ಭದಲ್ಲಿ ಪೇಟಿಎಂ ಬಳಸಿಕೊಂಡು ಅತ್ಯಾಕರ್ಷಕ ಆಫರ್ ಗಳು ಮತ್ತು ಪ್ರಯೋಜನಗಳನ್ನು ಒದಗಿಸಲಿವೆ. ಲಕ್ಷಾಂತರ ಪೇಟಿಎಂ ಗ್ರಾಹಕರು ಫ್ಲಿಪ್ ಕಾರ್ಟ್ ನ ಬಿಗ್ ಬಿಲಿಯನ್ ಡೇಸ್ ಸಂದರ್ಭದಲ್ಲಿ ಪೇಟಿಎಂ ವಾಲೆಟ್ ಮತ್ತು ಪೇಟಿಎಂ ಯುಪಿಐ ಬಳಸಿಕೊಂಡು ಶಾಪಿಂಗ್ ಮಾಡಬಹುದು.

ಬಿಗ್‌ ಬಿಲಿಯನ್ ಡೇ ಪ್ರಯುಕ್ತ, ಮ್ಯಾಕ್ಸ್ ಫ್ಯಾಷನ್ ಜೊತೆ ಫ್ಲಿಪ್‌ಕಾರ್ಟ್ ಒಪ್ಪಂದ!..

ಅನುಭವದ ವಿಚಾರದಲ್ಲಿ ಪೇಟಿಎಂ ಬಳಕೆದಾರರಿಗೆ ಬಿಗ್ ಬಿಲಿಯನ್ ಡೇನ ಮಾರಾಟದ ಸಂದರ್ಭದಲ್ಲಿ ವಾಲೆಟ್ ಬ್ಯಾಲೆನ್ಸ್ ಮೂಲಕ ಪಾವತಿ ಮಾಡುವುದು ಅತ್ಯಂತ ವೇಗದ ಪ್ರಕ್ರಿಯೆಯಾಗಿರುತ್ತದೆ. ಈ ಮೂಲಕ ಫ್ಲ್ಯಾಶ್ ಸೇಲ್ಸ್ ಮತ್ತು ಸೀಮಿತ ದಾಸ್ತಾನುಗಳನ್ನು ಅತ್ಯಂತ ವೇಗವಾಗಿ ಖರೀದಿ ಮಾಡಲು ಸಾಧ್ಯವಾಗುತ್ತದೆ. ಇದಲ್ಲದೇ, ಫ್ಲಿಪ್ ಕಾರ್ಟ್ ಗ್ರಾಹಕರು ತಮ್ಮ ಪೇಟಿಎಂ ವಾಲೆಟ್ ಗಳಿಗೆ ಇನಸ್ಟಂಟ್ ಆಗಿ ಕ್ಯಾಶ್ ಬ್ಯಾಕ್ ಪಡೆಯಬಹುದು.

ವ್ಯವಹಾರ ಗ್ರಾಹಕರ ಪ್ರಗತಿಗೆ ಫ್ಲಿಪ್‌‌ಕಾರ್ಟ್ ಹೊಸ ಹೆಜ್ಜೆ!

ಭಾರತದಲ್ಲಿ ಇಂಟರ್ನೆಟ್ ಬಳಕೆದಾರರು ದೈನಂದಿನ ಪಾವತಿಗಳಿಗಾಗಿ ಹೆಚ್ಚು ಹೆಚ್ಚು ಡಿಜಿಟಲ್ ವಿಧಾನಗಳನ್ನು ಬಳಸಿಕೊಳ್ಳುತ್ತಿದ್ದಾರೆ, ಈ ಮೂಲಕ ಪಾವತಿಗಳ ಡಿಜಿಟಲೀಕರಣ ಹೆಚ್ಚಾಗುತ್ತಿದೆ. ವ್ಯವಹಾರಗಳ ಪರಿಸರವ್ಯವಸ್ಥೆಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಡಿಜಿಟಲ್ ಇಂಡಿಯಾ ಮಿಷನ್ ಅನ್ನು ಮತ್ತಷ್ಟು ಶಕ್ತಿಶಾಲಿಯನ್ನಾಗಿ ಮಾಡಲು  ದೇಶೀಯ ಕಂಪನಿಗಳ ಸಾಮೂಹಿಕ ಹೊಣೆಗಾರಿಕೆ ಪ್ರಮುಖವಾಗಿದೆ. ಫ್ಲಿಪ್ ಕಾರ್ಟ್ ಭಾರತೀಯ ಗ್ರಾಹಕರ ಬಲವಾದ ತಿಳುವಳಿಕೆಯನ್ನು ಹೊಂದಿದೆ ಹಾಗೂ ತನ್ನ ಪ್ಲಾಟ್ ಫಾರ್ಮ್ ಸಾಲ ಮತ್ತು ಪಾವತಿ ಆಫರ್ ಗಳನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸದಾ ಸಕ್ರಿಯವಾಗಿದೆ. ಈ ಮೂಲಕ ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಡಿಜಿಟಲ್ ಮಾದರಿಗಳನ್ನು ಬಳಸಿಕೊಳ್ಳಲು ನೆರವಾಗುತ್ತಿದೆ. ಗ್ರಾಹಕರು ಇ-ಕಾಮರ್ಸ್ ನಲ್ಲಿ ವ್ಯವಹಾರ ನಡೆಸುವ ಸಂದರ್ಭದಲ್ಲಿ ಹಲವಾರು ಪಾವತಿ ವಿಧಾನಗಳು ಲಭ್ಯವಾಗುತ್ತವೆ.

2030ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ವಾಹನ ಬಳಕೆಗೆ ಫ್ಲಿಫ್‌ಕಾರ್ಟ್ ಸಂಕಲ್ಪ!.

ಪೇಟಿಎಂ ಭಾರತದಲ್ಲಿ ತಂತ್ರಜ್ಞಾನ ಉದ್ಯಮಗಳ ಚಾಂಪಿಯನ್ ಸ್ಥಾನದಲ್ಲಿದ್ದು, ಜನಸಾಮಾನ್ಯರಿಗೆ ನವೀನವಾದ ಪರಿಹಾರಗಳನ್ನು ಒದಗಿಸಲು ಬದ್ಧವಾಗಿದೆ. ಇದರ ಜತೆಗೆ ಪೇಟಿಎಂನ ವಾಲೆಟ್ ಮತ್ತು ಪೇಟಿಎಂ ಯುಪಿಐ ಫ್ಲಿಪ್ ಕಾರ್ಟ್ ಶಾಪರ್ ಗಳು ಇ-ಕಾಮರ್ಸ್ ಆ್ಯಪ್ ಖರೀದಿ ವೇಳೆ ಒಂದು ಕ್ಲಿಕ್ ನಲ್ಲಿ ಚೆಕೌಟ್ ಅನುಭವವನ್ನು ನೀಡುತ್ತದೆ.  ಮುಂಬರುವ ಹಬ್ಬದ ಉತ್ಸವಕ್ಕೆ ಮುನ್ನವೇ ಈ ಪಾಲುದಾರಿಕೆಯು ಫ್ಲಿಪ್ ಕಾರ್ಟ್ ನ ಸಿದ್ಧತೆಯೊಂದಿಗೆ ಸನ್ನದ್ಧವಾಗಿರುತ್ತದೆ. ಈ ಮೂಲಕ ದೇಶಾದ್ಯಂತ ಆರ್ಡರ್ ಗಳ ಪ್ರಮಾಣದಲ್ಲಿ ಭಾರೀ ಏರಿಕೆಯನ್ನು ಕಾಣಬಹುದಾಗಿದೆ.

ಗ್ರಾಹಕ ಕೇಂದ್ರಿತ, ಸೇರ್ಪಡೆ, ಸರ್ವರಿಗೂ ಡಿಜಿಟಲ್ ಪಾವತಿಗಳ ವ್ಯವಸ್ಥೆಗಳ ಮೂಲಕ ಗ್ರಾಹಕರಿಗೆ ಡಿಜಿಟಲ್ ಪಾವತಿ ಪರಿಹಾರಗಳನ್ನು ಒದಗಿಸುವ ನಮ್ಮ ಬದ್ಧತೆಯನ್ನು ಪೇಟಿಎಂನೊಂದಿಗೆ ನಮ್ಮ ಪಾಲುದಾರಿಗೆ ಪ್ರದರ್ಶಿಸುತ್ತದೆ. ಈ ಹಬ್ಬದ ಸಂದರ್ಭದಲ್ಲಿ ದೇಶಾದ್ಯಂತ ಪೇಟಿಎಂನ ಲಕ್ಷಾಂತರ ಬಳಕೆದಾರರು ತನ್ನ ವಾಲೆಟ್ ಗಳು ಮತ್ತು ಯುಪಿಐಗಳನ್ನು ಫ್ಲಿಪ್ ಕಾರ್ಟ್ ನಲ್ಲಿ ಬಳಸಲಿದ್ದಾರೆ. ಮನೆಯಲ್ಲೇ ಸುರಕ್ಷಿತವಾಗಿದ್ದುಕೊಂಡು ಕೇವಲ ಒಂದು ಕ್ಲಿಕ್ ನೊಂದಿಗೆ ಗ್ರಾಹಕರು ಈ ಬಾರಿಯ ಬಿಗ್ ಬಿಲಿಯನ್ ಡೇಸ್ ನಲ್ಲಿ ಫ್ಲ್ಯಾಶ್ ಸೇಲ್ಸ್ ನಲ್ಲಿ ತಮಗಿಷ್ಟವಾದ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ. ಯುಪಿಐ ಸೇರಿದಂತೆ ಡಿಜಿಟಲ್ ಪೇಮೆಂಟ್ ಗಳು ಭಾರತದಲ್ಲಿ ಮತ್ತು ಫ್ಲಿಪ್ ಕಾರ್ಟ್ ನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿವೆ. ಭಾರತದ ಆರ್ಥಿಕತೆಯನ್ನು ಮತ್ತಷ್ಟು ಶಕ್ತಿಶಾಲಿಯನ್ನಾಗಿ ಮಾಡಲು ಡಿಜಿಟಲ್ ಸೇರ್ಪಡೆ ನೆರವಾಗುತ್ತದೆ ಎಂಬುದನ್ನು ನಾವು ನಂಬಿದ್ದೇವೆ ಎಂದು  ಫ್ಲಿಪ್ ಕಾರ್ಟ್ ನ ಫಿನ್ ಟೆಕ್ ಅಂಡ್ ಪೇಮೆಂಟ್ಸ್ ಗ್ರೂಪ್  ಮುಖ್ಯಸ್ಥ ರಂಜಿತ್ ಬೋಯನಪಲ್ಲಿ ಹೇಳಿದರು.

ತಡೆರಹಿತವಾದ ಶಾಪಿಂಗ್ ಮತ್ತು ಪಾವತಿ ಅನುಭವವನ್ನು ನೀಡಲು ಎರಡು ಪ್ರಮುಖ ತಂತ್ರಜ್ಞಾನ ಕಂಪನಿಗಳು ಸಹಭಾಗಿತ್ವವನ್ನು ಹೊಂದುತ್ತಿರುವುದು ಸಂತಸ ತಂದಿದೆ. ಭಾರತದಲ್ಲಿ ಇ-ಕಾಮರ್ಸ್ ನಲ್ಲಿ ಫ್ಲಿಪ್ ಕಾರ್ಟ್ ಚಾಂಪಿಯನ್ ಆಗಿದೆ. ನಮ್ಮ ಈ ಎರಡೂ ಸಂಸ್ಥೆಗಳು ಪೇಟಿಎಂ ವಾಲೆಟ್ ಮತ್ತು ಪೇಟಿಎಂ ಬ್ಯಾಂಕ್ ಅಕೌಂಟ್ ನೊಂದಿಗೆ ಕ್ಯಾಶ್ ಆನ್ ಡೆಲಿವರಿಗೆ ಬದಲಾಗಿ ಡಿಜಿಟಲ್ ಪಾವತಿಗಳ ವ್ಯವಸ್ಥೆಯನ್ನು ಕಲ್ಪಿಸುತ್ತಿದ್ದೇವೆ. ಆತ್ಮ ನಿರ್ಭರ್ ಭಾರತ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ ನಾವೀನ್ಯತೆಯ ಪರಿಹಾರಗಳ ಮೂಲಕ ಲಕ್ಷಾಂತರ ಭಾರತೀಯರನ್ನು ಸಬಲೀಕರಣ ಮಾಡುವತ್ತ ಪ್ರಮುಖ ಪಾತ್ರ ವಹಿಸುವುದು ನಮ್ಮ ಉದ್ದೇಶವಾಗಿದೆ. ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯಲ್ಲಿ ಪೇಟಿಎಂ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿದೆ ಮತ್ತು ಸಣ್ಣ ಪುಟ್ಟ ನಗರಗಳು ಮತ್ತು ಪಟ್ಟಣಗಳ ನಡುವೆ ಬಲವಾದ ಅಳವಡಿಕೆಯನ್ನು ಪ್ರತಿಬಿಂಬಿಸಲು ನಮ್ಮ ಪ್ರಯತ್ನಗಳು ಆರಂಭವಾಗಿವೆ ಎಂದು ಪೇಟಿಎಂ ಅಧ್ಯಕ್ಷ ಮಧುರ ದಿಯೋರಾ ಹೇಳಿದರು.

ಆರ್ ಬಿಐನ ಇತ್ತೀಚಿನ ಹೊಸ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಮುಂದಿನ 5 ವರ್ಷಗಳಲ್ಲಿ ಪ್ರತಿದಿನ ಸರಾಸರಿ 1.5 ಬಿಲಿಯನ್ ನಷ್ಟು ವ್ಯವಹಾರಗಳು ಯುಪಿಐ, ಐಎಂಪಿಎಸ್, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳ ಮೂಲಕ ನಡೆಯುವ ನಿರೀಕ್ಷೆ ಇದೆ. ಇದೇ ವೇಳೆ, ಪ್ರಸ್ತುತ ಇರುವ 5 ಟ್ರಿಲಿಯನ್ ರೂಪಾಯಿ ಮೊತ್ತ 2025 ರ ವೇಳೆಗೆ 15 ಟ್ರಿಲಿಯನ್ ರೂಪಾಯಿ ತಲುಪುವ ನಿರೀಕ್ಷೆ ಇದೆ. ಗ್ರಾಹಕರು ಮನೆಯಲ್ಲೇ ಇದ್ದುಕೊಂಡು ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು ಡಿಜಿಟಲ್ ವ್ಯವಹಾರಗಳನ್ನು ನಡೆಸುವ ಮೂಲಕ ಡಿಜಿಟಲ್ ವ್ಯವಹಾರವನ್ನು ಮೇಲ್ಮಟ್ಟಕ್ಕೆ ಏರಿಸಲಿದೆ.

Follow Us:
Download App:
  • android
  • ios