ಬೀಜಿಂಗ್‌ನಲ್ಲಿ ನಡೆದ ಹಾಫ್‌ ಮ್ಯಾರಥಾನ್‌ನಲ್ಲಿ ರೋಬೋಟ್‌ಗಳು ಭಾಗವಹಿಸಿದವು. ೨೦ ರೋಬೋಟ್‌ಗಳಲ್ಲಿ ಕೆಲವು ಗುರಿ ತಲುಪಿದರೆ, ಇನ್ನುಳಿದವು ಅರ್ಧದಲ್ಲೇ ನಿಂತವು. ವಿಜೇತ ರೋಬೋಟ್‌ ೨ ಗಂಟೆ ೪೦ ನಿಮಿಷಗಳಲ್ಲಿ ಗುರಿ ತಲುಪಿತು. ಚೀನಾದಲ್ಲಿ ೧೦ಜಿ ಬ್ರಾಡ್‌ಬ್ಯಾಂಡ್‌ ಪ್ರಾರಂಭವಾಗಿದ್ದು, ೨ ಗಂಟೆಗಳ ಸಿನಿಮಾ ಒಂದು ನಿಮಿಷದಲ್ಲಿ ಡೌನ್‌ಲೋಡ್‌ ಆಗಲಿದೆ. ಚೀನಾ ಬಾಲವಿಲ್ಲದ ೩-ಎಂಜಿನ್‌ ವಿಮಾನವನ್ನು ಅಭಿವೃದ್ಧಿಪಡಿಸಿದೆ.

ಬೀಜಿಂಗ್‌: ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ನಡೆದ ಹಾಫ್‌ ಮ್ಯಾರಥಾನ್‌ (21.1 ಕಿ.ಮೀ.) ಓಟದ ಸ್ಪರ್ಧೆಯಲ್ಲಿ ಮನುಷ್ಯರ ಜೊತೆ ರೋಬೋಟ್‌ಗಳು ಕೂಡಾ ಪಾಲ್ಗೊಂಡಿದ್ದವು.. ಈ ಹಿಂದೆ ರೋಬೋಟ್‌ಗಳ ನಡುವೆ ಸ್ಪರ್ಧೆ ನಡೆದಿದ್ದರೂ, ಮಾನವರ ಜೊತೆ ರೋಬೋ ಸ್ಪರ್ಧೆ ಇದೇ ಮೊದಲು. ರೇಸ್‌ನಲ್ಲಿ ವಿವಿಧ ಗಾತ್ರದ 20 ರೋಬೋಟ್‌ಗಳು ಪಾಲ್ಗೊಂಡವು. ಟ್ರೈನರ್‌ಗಳ ಜೊತೆ ಓಡಿ ಕೆಲ ರೋಬೋಟ್‌ಗಳು ಸ್ಪರ್ಧೆ ಪೂರ್ಣಗೊಳಿಸಿದರೆ, ಉಳಿದ ರೋಬೋಟ್‌ಗಳು ಅರ್ಧದಲ್ಲೇ ನಿಯಂತ್ರಣ ತಪ್ಪಿ ಬಿದ್ದವು. ಓಟದಲ್ಲಿ ಅಗ್ರಸ್ಥಾನ ಪಡೆದ ಪುರುಷ ಸ್ಪರ್ಧಿ 1 ಗಂಟೆ 2 ನಿಮಿಷದಲ್ಲಿ ಗುರಿ ತಲುಪಿದರೆ, ರೋಬೋಟ್‌ಗಳ ಪೈಕಿ ಮೊದಲ ಸ್ಥಾನಿಯಾದ ಟಿಯಾಂಗಾಂಗ್‌ ಅಲ್ಟ್ರಾ ಗುರಿ ತಲುಪಲು 2 ಗಂಟೆ 40 ನಿಮಿಷ ತೆಗೆದುಕೊಂಡಿತು.

ಚಿನ್ನ ಕರಗಿಸಿ ಹಣ ನೀಡುವ ಎಟಿಎಂ: ಮಾರುಕಟ್ಟೆಯಲ್ಲಿ ಹೊಸ ಸಂಚಲನ

ಚೀನಾದಲ್ಲೀಗ 10 ಜಿ ನೆಟ್‌, 2 ಗಂಟೆ ಮೂವೀ 1 ನಿಮಿಷದಲ್ಲಿ ಡೌನ್‌ಲೋಡ್‌!
ಭಾರತ ಸೇರಿ ಅನೇಕ ದೇಶಗಳು 5ಜಿ ಜಾರಿಗೇ ಪರದಾಡುತ್ತಿರುವ ಈ ಹೊತ್ತಿನಲ್ಲಿ ಚೀನಾದಲ್ಲಿ 10ಜಿ ಬ್ರಾಡ್‌ಬ್ಯಾಂಡ್‌ ನೆಟ್‌ವರ್ಕ್‌ ಅನ್ನು ಪರಿಚಯಿಸಲಾಗಿದೆ. ಹುವೈ ಮತ್ತು ಚೀನಾ ಯುನಿಕಾರ್ನ್ ಜಂಟಿಯಾಗಿ ಚೀನಾದ ಈ ಮೊದಲ 10ಜಿ ಬ್ರಾಡ್‌ಬ್ಯಾಂಡ್‌ ನೆಟ್‌ವರ್ಕ್‌ ಅನ್ನು ಹೆಬೈಪ್ರಾಂತ್ಯದ ಸುನನ್‌ ಕೌಂಟಿಯಲ್ಲಿ ಅನುಷ್ಠಾನಗೊಳಿಸಿವೆ.

ಭಾರತದಲ್ಲಿ ಸರಾಸರಿ ಬ್ರಾಡ್‌ಬ್ಯಾಂಡ್‌ ಡೌನ್‌ಲೋಡ್‌ ಸ್ಪೀಡ್‌ 100 ಎಂಬಿಪಿಎಸ್‌ ಒಳಗಿದೆ. ಆದರೆ ಚೀನಾವು 1000, ನಎಂಬಿಪಿಎಸ್‌ ವೇಗದ ಬ್ರಾಡ್‌ಬ್ಯಾಂಡ್‌ ಪರಿಚಯಿಸುವ ಮೂಲಕ ಇಂಟರ್ನೆಟ್‌ ಮೂಲಸೌಲಭ್ಯ ಕ್ಷೇತ್ರದಲ್ಲಿ ಆ ದೇಶ ಬಹುದೊಡ್ಡ ಜಿಗಿತ ದಾಖಲಿಸಿದೆ.

ಹೆಬೈ ಪ್ರಾಂತ್ಯವು ಚೀನಾದ ತಂತ್ರಜ್ಞಾನದ ಹಬ್‌ಗಳಲ್ಲೊಂದಾಗಿದೆ. ಇಲ್ಲೀಗ ಪರಿಚಯಿಸಲ್ಟಟ್ಟಿರುವ ವಿಶ್ವದ ಮೊದಲ 50ಜಿ ಪಿಒಎನ್‌( ಪ್ಯಾಸಿವ್‌ ಆಪ್ಟಿಕಲ್‌ ನೆಟ್‌ವರ್ಕ್‌) ಸೊಲ್ಯೂಷನ್ಸ್‌ ಅಡಿ ನಿರ್ಮಿಸಲ್ಪಟ್ಟ ಈ ಬ್ರಾಡ್‌ಬ್ಯಾಂಡ್‌ ಮೂಲಸೌಲಭ್ಯ 9,834 ಎಂಬಿಪಿಎಸ್‌ ಡೌನ್‌ಲೋಡ್‌ ಸ್ಟೀಡ್‌ ಹೊಂದಿದ್ದರೆ, 1,008 ಎಂಬಿಪಿಎಸ್‌ ಸ್ಪೀಡ್‌ನಲ್ಲಿ ಅಪ್‌ಲೋಡ್‌ ಮಾಡುತ್ತದೆ. 900 ಜಿಬಿಯಷ್ಟು ಭಾರಿ ಫೈಲ್‌ಗಳು ಕೆಲವೇ ಸೆಕೆಂಡಲ್ಲಿ ಡೌನ್‌ಲೋಡ್ ಆಗುತ್ತವೆ.

ಫೈಬರ್‌ ಆಪ್ಟಿಕ್‌ ಆರ್ಕಿಟೆಕ್ಚರ್‌ ಅನ್ನು ಅಪ್‌ಗ್ರೇಡ್‌ ಮಾಡಿದಾಗ ಸಿಂಗಲ್‌ ಯೂಸರ್‌ ಬ್ಯಾಂಡ್‌ವಿಡ್ತ್‌ ಅನ್ನು ಸಾಂಪ್ರದಾಯಿಕ ಗಿಗಾಬೈಟ್‌ನಿಂದ 10ಜಿ ಹಂತಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಲಾಗಿದೆ.

ಬ್ರಾಡ್‌ಬ್ಯಾಂಡ್‌ ವೇಗವರ್ಧನೆಯು ಭವಿಷ್ಯದಲ್ಲಿ 8ಕೆ ವಿಡಿಯೋ ಸ್ಟ್ರೀಮಿಂಗ್‌ ಆ್ಯಪ್‌ಗಳು ಹಾಗೂ ಅಡ್ವಾನ್ಸ್ಡ್‌ ಕ್ಲೌಡ್‌ ಕಂಪ್ಯೂಟಿಂಗ್‌ ಹಾಗೂ ಅತ್ಯುನ್ನತ ವರ್ಚುವಲ್‌ ರಿಯಾಲಿಟಿ(ಎಆರ್‌/ವಿಆರ್‌ ಗೇಮಿಂಗ್‌)ಅನುಭವಕ್ಕೆ ಹೊಸ ಬಾಗಿಲುಗಳನ್ನು ತೆರೆಯಲಿದೆ ಎನ್ನಲಾಗಿದೆ.

ವಿಶ್ವದ ಮೊದಲ 10G ಬ್ರಾಡ್‌ಬ್ಯಾಂಡ್ ಆರಂಭಿಸಿದ ಚೀನಾ!

ಚೀನಾದಿಂದ ಬಾಲವಿಲ್ಲದ ಜೆಟ್‌ ಅಭಿವೃದ್ಧಿ!
ಅಮೆರಿಕದ ವಿರುದ್ಧ ತೊಡೆ ತಟ್ಟಿ ವಾಯು ಪ್ರಾಬಲ್ಯಕ್ಕಾಗಿ ಪ್ರಯತ್ನ ಮುಂದುವರಿಸಿರುವ ಚೀನಾ ರಹಸ್ಯವಾಗಿ ಬಾಲ ಇಲ್ಲದ ಹಾಗೂ 3-ಎಂಜಿನ್‌ ಸುಧಾರಿತ ವಿಮಾನಗಳನ್ನು ಅಭಿವೃದ್ಧಿಪಡಿಸಿದೆ. ವಿಮಾನ ಹಾರಾಟದ 2 ವಿಡಿಯೋಗಳು ಈಗ ವೈರಲ್‌ ಆಗಿವೆ.

ಈ ಪೈಕಿ ಡಿ.26ರಂದು ಚೆಂಗ್ಡು ಮೇಲೆ ಜೆಟ್ ಜೆ-36 ಎಂಬ ಬಾಲವಿಲ್ಲದ ವಿಮಾನ ಹಾರಾಟ ನಡೆಸಿದೆ. ಇದನ್ನು ಚೆಂಗ್ಡು ಏರ್‌ಕ್ರಾಫ್ಟ್ ಕಾರ್ಪೊರೇಷನ್ ಅಭಿವೃದ್ಧಿಪಡಿಸಿದೆ. ಇದು ಬಾಲವಿಲ್ಲದ ವಿನ್ಯಾಸ ಮತ್ತು ಅಪರೂಪದ ಮೂರು-ಎಂಜಿನ್ ಸೆಟಪ್ ಒಳಗೊಂಡಿದೆ.

ಇನ್ನೊಂದು ವಿಮಾನದ ಮೂಲಮಾದರಿಯು ಅದೇ ದಿನ ಉತ್ತರ ಚೀನಾದಲ್ಲಿ ಪತ್ತೆಯಾಗಿದೆ. ಈ ಜೆಟ್ ವಿ-ಆಕಾರದ ರೆಕ್ಕೆಗಳು ಮತ್ತು ಅವಳಿ ಎಂಜಿನ್‌ಗಳನ್ನು ತೋರಿಸಿದೆ. ಶೆನ್ಯಾಂಗ್ ಏರ್‌ಕ್ರಾಫ್ಟ್ ಕಾರ್ಪೊರೇಷನ್ ಜೆ -50 ಎಂದು ಕರೆಯಲ್ಪಡುವ ಈ ವಿಮಾನ ನಿರ್ಮಿಸಿದೆ.

ಲಾಭ ಏನು?:
3-ಎಂಜಿನ್ ಸೆಟಪ್‌ನಿಂದ ವಿಮಾನದ ಶಕ್ತಿ ವರ್ಧಿಸಲಿದೆ ಮತ್ತು ಪೇಲೋಡ್ ಸಾಮರ್ಥ್ಯ ಹೆಚ್ಚಲಿದೆ. ಇನ್ನು ಬಾಲವಿಲ್ಲದ ದೇಹವು ರಾಡಾರ್ ಕ್ರಾಸ್ ಸೆಕ್ಷನ್‌ ಕಡಿಮೆ ಮಾಡುತ್ತದೆ.