FUP ಮಿತಿ ಕೈ ಬಿಟ್ಟ ಬಿಎಸ್ಸೆನ್ನೆಲ್, ನಾಳೆಯಿಂದ ಹೊಸ ಪ್ಲಾನ್, ಆಫರ್ ಏನಿದೆ?
ಪ್ರತಿಸ್ಪರ್ಧಿ ಕಂಪನಿಗಳಾದ ರಿಲಯನ್ಸ್ ಜಿಯೋ, ಏರ್‌ಟೆಲ್, ವಿಐಗಳಿಂದ ತೀವ್ರ ಸ್ಪರ್ಧೆ ಎದುರಿಸುತ್ತಿರುವ ಬಿಎಸ್ಸೆನ್ನೆಲ್ ಬಳಕೆದಾರರನ್ನು ಸೆಳೆಯಲು ಹೊಸ ಹೊಸ ಪ್ಲ್ಯಾನ್‌ಗಳನ್ನು ಘೋಷಿಸುತ್ತಿದೆ. ಇದೀಗ ಕಂಪನಿ ಎಫ್‌ಯುಪಿ ಮಿತಿಯನ್ನು ಕೈ ಬಿಡಲು ಮುಂದಾಗಿದ್ದು, 398 ರೂ. ಪ್ರಿಪೇಡ್ ಪ್ಲ್ಯಾನ್ ಜಾರಿಗೆ ತರುತ್ತಿದೆ.
ಟೆಲಿಕಾಂ ವಲಯದಲ್ಲಿ ತೀವ್ರ ಪೈಪೋಟಿ ಒಡ್ಡುತ್ತಿರುವ ರಿಲಯನ್ಸ್‌ನ ಜಿಯೋ ಇತ್ತೀಚೆಗಷ್ಟೇ, ಜಿಯೋದಿಂದ ಯಾವುದೇ ನೆಟ್‌ವರ್ಕ್‌ಗೆ ಮಾಡಲಾಗುವ ಕರೆಗಳನ್ನು ಉಚಿತವಾಗಿಸಿತ್ತು. ಇದೀಗ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿ.(ಬಿಎಸ್ಸೆನ್ನೆಲ್), ನ್ಯಾಯಯುತ ಬಳಕೆಯ ನೀತಿ(ಫೇರ್ ಯೂಸೇಜ್ ಪಾಲಿಸಿ-ಎಫ್‌ಯುಪಿ) ಮಿತಿಯನ್ನು ಕೈಬಿಡಲು ಮುಂದಾಗಿದೆ.
ಇಷ್ಟು ಮಾತ್ರವಲ್ಲದೇ, ಇದೇ ಜನವರಿ 10 ರಿಂದ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯಗಳೊಂದಿಗೆ ಪ್ಲಾನ್ ವೋಚರ್‌ಗಳು, ಎಸ್‌ಟಿವಿಗಳು ಮತ್ತು ಕಾಂಬೊ ವೋಚರ್‌ಗಳಿಗೆ ಅನಿಯಮಿತ ಕರೆಗಳನ್ನು ಲಭ್ಯಗೊಳಿಸುತ್ತಿದೆ ಎಂದು ಬಿಎಸ್ಸೆನ್ನೆಲ್ ಘೋಷಿಸಿದೆ. ಸದ್ಯ, ಎಫ್‌ಯುಪಿ ಮಿತಿಯನ್ನು ಮೀರುವ ಗ್ರಾಹಕರಿಗೆ ಮೂಲ ಟ್ಯಾರಿಫ್ ಪ್ಲ್ಯಾನ್ ಪ್ರಕಾರ ಶುಲ್ಕವಿಧಿಸಲಾಗುತ್ತದೆ.
ಲಾವಾದಿಂದ ಜಗತ್ತಿನ ಮೊದಲ ಕಸ್ಟಮೈಸಡ್ ಸ್ಮಾರ್ಟ್‌ಫೋನ್, ಜ.11ರಿಂದ ಮಾರಾಟಕ್ಕೆ ಲಭ್ಯ
ಇತ್ತೀಚೆಗಷ್ಟೇ ಟೆಲಿಕಾಂ ನಿಯಂತ್ರಣಾ ಪ್ರಾಧಿಕಾರ(ಟ್ರಾಯ್)ವು ಅಂತರ್‌ಸಂಪರ್ಕ ಬಳಕೆಯ ಶುಲ್ಕವನ್ನು ರದ್ದುಗೊಳಿಸಿದ ಬೆನ್ನಲ್ಲೇ, ಜಿಯೋ ದೇಶಿಯ ಕರೆಗಳನ್ನು ಉಚಿತ ಮಾಡಿದ್ದರೆ, ಬಿಎಸ್ಸೆನ್ನೆಲ್ ಎಫ್‌ಯಪಿ ಮಿತಿಯನ್ನುತೆಗೆದು ಹಾಕುತ್ತಿದೆ.
ಯಾವುದೇ ಎಫ್‌ಯುಪಿ ಮಿತಿ ಇಲ್ಲದೇ ಅನಿಯಮಿತ ಕರೆಗೆ ಅವಕಾಶ ನೀಡುವ 398 ರೂ. ಸ್ಪೇಷಲ್ ಟಾರಿಫ್ ವೋಚರ್(ಎಸ್‌ಟಿವಿ) ಪ್ಲ್ಯಾನ್ ಅನ್ನು ಬಿಎಸ್ಸೆನ್ನೆಲ್ ಶೀಘ್ರವೇ ಜಾರಿಗೆ ತರಲಿದೆ. ಈ ಪ್ಯಾನ್‌ನಡಿ ಬಳಕೆದಾರರು ಅನಿಯಮಿತ ಡೇಟಾ ಕೂಡ ಬಳಸಬಹುದು ಎಂದು ಹಲವು ಸುದ್ದಿ ಜಾಲತಾಣಗಳು ವರದಿ ಮಾಡಿವೆ. ಪ್ರಿಪೇಡ್ ವೋಚರ್‌ನಲ್ಲಿ ಬಳಕೆದಾರರಿಗೆ 30 ದಿನಗಳ ವ್ಯಾಲಿಡಿಟಿಯಲ್ಲಿ ದಿನಕ್ಕೆ 100 ಎಸ್ಸೆಮ್ಮೆಸ್ ಉಚಿತವಾಗಿ ದೊರೆಯಲಿವೆ.
398 ರೂ. ಆಫರ್‌ನಲ್ಲಿ ಎಸ್ಸೆಮ್ಮೆಸ್ ಅಥವಾ ಧ್ವನಿ ಪ್ರಯೋಜನಗಳನ್ನು ಹೊರಹೋಗುವ ಪ್ರೀಮಿಯಂ ಸಂಖ್ಯೆಗಳು, ಅಂತರರಾಷ್ಟ್ರೀಯ ಸಂಖ್ಯೆಗಳು ಮತ್ತು ಇತರ ಚಾರ್ಜ್ ಮಾಡಬಹುದಾದ ಕಿರುಸಂಕೇತಗಳಿಗೆ ಬಳಸಲಾಗುವುದಿಲ್ಲ ಎಂದು ಬಿಎಸ್ಸೆನ್ನೆಲ್ ಹೇಳಿದೆ. ಈ ಯೋಜನೆಯು ಟ್ರಾಯ್‌ನ ಹೊಸ ತಿದ್ದುಪಡಿ ಆದೇಶದಡಿಯಲ್ಲಿರುತ್ತದೆ ಮತ್ತು ಇದು ಜನವರಿ 10ರಿಂದ ಅನುಷ್ಠಾನವಾಗಲಿದೆ. ಕೇರಳದ ಟೆಲಿಕಾಂ ಈ ಬಗ್ಗೆ ಮೊದಲು ಮಾಹಿತಿಯನ್ನು ನೀಡಿತ್ತು. ಮತ್ತೊಂದೆಡೆ, ಬಿಎಸ್ಸೆನ್ನೆಲ್ ಈ ಮೊದಲು ವಿಶೇಷ ಸಂದರ್ಭಗಳಲ್ಲಿ ಮಾಡಲಾಗುವ ಕರೆ ಮತ್ತು ಎಸ್ಸೆಮ್ಮೆಸ್‌ಗಳ ಮೇಲೆ ಶುಲ್ಕು ವಿಧಿಸುತ್ತಿತ್ತು. ಈಗ ಅದನ್ನು ರದ್ದುಪಡಿಸುತ್ತಿದ್ದು ಬ್ಲ್ಯಾಕ್‌ಔಟ್ ಡೇಸ್ ಪದ್ಧತಿಯನ್ನು ಕೈ ಬಿಡುವುದಾಗಿ ಹೇಳಿಕೊಂಡಿದೆ.
ನೋಕಿಯಾ 7.3 ಸ್ಮಾರ್ಟ್‌ಫೋನ್‌ನಲ್ಲಿ ಪವರ್‌ಫುಲ್ ಬ್ಯಾಟರಿ
ಬಿಸ್ಸೆನ್ನೆಲ್ ಇತ್ತೀಚೆಗಷ್ಟೇ 199 ರೂಪಾಯಿ ಪ್ರೀಪೇಡ್ ಪ್ಲ್ಯಾನ್ ಜಾರಿಗೆ ತಂದಿದೆ. ಈ ಪ್ಲ್ಯಾನ್ ನಿಮಗೆ ನಿತ್ಯ 2 ಜಿಬಿ ಡೇಟಾ ಮತ್ತು ಕರೆ ಸೌಲಭ್ಯದೊಂದಿಗೆ ಬರುತ್ತದೆ. ವ್ಯಾಲಿಡಿಟಿ 30 ದಿನಗಳವರೆಗೆ ಇದೆ. ಜೊತೆಗೆ ಎಫ್‌ಯುಪಿ ಲಿಮಿಟ್ ಕೂಡ ಅನ್ವಯವಾಗುತ್ತದೆ. 250 ನಿಮಿಷಗಳ ಅವಧಿ ಮೀರಿದರೆ ಹೆಚ್ಚಿನ ಶುಲ್ಕವನ್ನು ತೆರಬೇಕಾಗುತ್ತದೆ. ಈ ಬಗ್ಗೆ ಬಿಎಸ್ಸೆನ್ನೆಲ್ ಕರ್ನಾಟಕ ಕೂಡ ಜನವರಿ 7ರಂದು ತನ್ನ ಟ್ವೀಟರ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ.
ಬಿಎಸ್‌ಎನ್‌ಎಲ್ ಮತ್ತೊಂದು ಪ್ಲ್ಯಾನ್ ಆಗಿರುವ 500 ಜಿಬಿ ಸಿಯುಎಲ್ ಬ್ರಾಡ್‌ಬ್ಯಾಂಡ್ ಪ್ಲ್ಯಾನ್ ನಿಮಗೆ ಒಳ್ಳೆಯ ಇಂಟರ್ನೆಟ್ ಸೇವೆಯನ್ನು ಒದಗಿಸುತ್ತಿದೆ. ಈ ಪ್ಲ್ಯಾನ್‌ನಲ್ಲಿ ಗ್ರಾಹಕರು 300 ಜಿಬಿ ತಲುಪವರೆಗೂ 100 ಎಂಬಿಪಿಎಸ್ ವೇಗದಲ್ಲಿ ಇಂಟರ್ನೆಟ್ ಸೇವೆಯನ್ನು ಪಡೆದುಕೊಳ್ಳಬಹುದು. ತಿಂಗಳಿಗೆ 777 ರೂಪಾಯಿ ಈ ಪ್ಲ್ಯಾನ್‌ನಲ್ಲಿ ಗ್ರಾಹಕರು ಈ ಹಿಂದೆ 500 ಜಿಬಿಗೆ ತಲುಪುತ್ತಿದ್ದಂತೆ ಸ್ಪೀಡ್ 2ಎಂಬಿಪಿಎಸ್‌ಗೆ ಕುಸಿಯುತ್ತಿತ್ತು. ಇದೀಗ ಹೊಸ ಆಫರ್ ಅನ್ವಯ ಈ ಸ್ಪೀಡ್ 5 ಎಂಬಿಪಿಎಸ್‌ವರೆಗೂ ಇರಲಿದೆ.
ಭಾರತ್ ಸಂಚಾರ್ ನಿಗಮ ಲಿ.(ಬಿಎಸ್‌ಎನ್‌ಎಲ್) ಕಂಪನಿ ಸರ್ಕಾರಿ ಸ್ವಾಮ್ಯ ಪ್ರಮುಖ ಟೆಲಿಕಾಂ ಸೇವಾ ಪೂರೈಕದಾರ ಕಂಪನಿಯಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದೆ. ಬಿಎಸ್‌ಎನ್‌ಎಲ್‌ಗೆ ದೇಶದ ಹಲವು ಸರ್ಕರಲ್‌ಗಳಿಗೆ 4ಜಿ ಸೇವೆಯನ್ನು ಒದಗಿಸಲು ಪ್ರಯಾಸ ಪಡುತ್ತಿದೆ. ಆದರೆ, ದೇಶಾದ್ಯಂತ ಈ ಕಂಪನಿಯ ನೆಟ್‌ವರ್ಕ್ ಸಖತ್ತಾಗಿದ್ದು, ಗ್ರಾಹಕರು ಈಗಲೂ ಬಿಎಸ್‌ಎನ್‌ಎಲ್ ಸೇವೆಯನ್ನು ಇಷ್ಟಪಡುತ್ತಾರೆ.
ಏರ್‌ಟೆಲ್‌ನ 199 ರೂ. ಪ್ಲ್ಯಾನ್ ಪರಿಷ್ಕರಣೆ, ನಿತ್ಯ 1.5 ಜಿಬಿ ಡೇಟಾ!