ಭಾರತದ ಪ್ರಮುಖ ಟೆಲಿಕಾಂ ಸೇವಾ ಪೂರೈಕೆದಾರ ಕಂಪನಿಗಳಾದ ಜಿಯೋ, ಏರ್‌ಟೆಲ್, ವಿಐ ಮತ್ತು  ಬಿಎಸ್‌ಎನ್‌ಎಲ್ ಗ್ರಾಹಕರನ್ನು ಸೆಳೆದುಕೊಳ್ಳಲು ಹೊಸ ಹೊಸ ಪ್ಲ್ಯಾನ್‌ಗಳನ್ನು ಪರಿಚಯಿಸುತ್ತಿವೆ. ವಿಐ, ಜಿಯೋ  ಹೊಸ ಹೊಸ ಆಫರ್‌ಗಳನ್ನು ನೀಡಿದ ಬೆನ್ನಲ್ಲೇ ಏರ್‌ಟೆಲ್ ಕೂಡ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ.

ಏರ್‌ಟೆಲ್ 199 ರೂ. ಪ್ರಿಪೇಡ್ ಪ್ಲ್ಯಾನ್‌ ಅನ್ನು ಪರಿಷ್ಕರಿಸಿದ್ದು, ಇದೀಗ ದಿನಕ್ಕೆ 1.5 ಜಿಬಿ ಇಂಟರ್ನೆಟ್‌ ನೀಡಲು ಮುಂದಾಗಿದೆ. ಈ ಪ್ಲ್ಯಾನ್ 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಮೊದಲು 199 ರೂ. ಪ್ಲ್ಯಾನ್‌ನಲ್ಲಿ ಕಂಪನಿ 1 ಜಿಬಿ ಡೇಟಾ ನೀಡುತ್ತಿತ್ತು, ಇದೀಗ ಅದನ್ನು ಪರಿಷ್ಕರಿಸಿ 1.5 ಜಿಬಿಗೆ ಏರಿಕೆ ಮಾಡಿದೆ.

ಗೂಗಲ್, ಮೈಕ್ರೋಸಾಫ್ಟ್‌ ಜತೆ ಸ್ಪರ್ಧೆ, ಝೂಮ್‌ನಿಂದಲೂ ಇ-ಮೇಲ್ ಸೇವೆ?

ಈ ಪರಿಷ್ಕೃತ ಪ್ಲ್ಯಾನ್‌ನಲ್ಲಿ ಅನಿಯಂತ್ರಿತ ಕರೆಗಳು, ದಿನಕ್ಕೆ 100 ಎಸ್‌ಎಂಎಸ್‌ಗಳು, ಉಚಿತ ಹೆಲೋಟೂನ್ಸ್, ವ್ಯಾಂಕ್ ಮ್ಯೂಸಿಕ್, ಏರ್‌ಟೆಲ್ ಎಕ್ಸ್‌ಟ್ರೀಮ್ ಆಪ್ ಸಬ್ಸಕ್ರಿಪ್ಷನ್ ಕೂಡ ದೊರೆಯಲಿದೆ. ಈ ಏರ್‌ಟೆಲ್ ಎಕ್ಸ್‌ಟ್ರೀಮ್‌ನಲ್ಲಿ 350 ಅಧಿಕೂ ಲೈವ್ ಚಾನಲ್‌ಗಳಿವೆ. ಈ ಪ್ಲ್ಯಾನ್ ವ್ಯಾಲಿಡಿಟಿ 24 ದಿನಗಳವರೆಗೆ ಇರುತ್ತದೆ. ಆದರೆ, ಈ ಪ್ಯಾಕ್ ಕೇವಲ ಕೆಲವು ಸಬ್ಸ್‌ಕ್ರೈಬರ್‌ರಿಗೆ ಮಾತ್ರ ಕಾಣುತ್ತಿದೆ ಎಂದು ಟೆಲಿಕಾಮ್‌ಟಾಕ್ ರಿಪೋರ್ಟ್ ಮಾಡಿದೆ ಎಂದು ಹಲವು ವೆಬ್‌ಸೈಟ್‌ಗಳು ವರದಿ ಮಾಡಿವೆ.

ಈಗಾಗಲೇ ಏರ್‌ಟೆಲ್ ತನ್ನ 249 ರೂ. ಪ್ರಿಪೇಡ್ ಪ್ಲ್ಯಾನ್‌ನಲ್ಲಿ ದಿನಕ್ಕೆ 1.5 ಜಿಬಿ ಡೇಟಾ ನೀಡುತ್ತಿದೆ. ಈ ಪ್ಲ್ಯಾನ್ ವ್ಯಾಲಿಡಿಟಿ 28 ದಿನಗಳವರೆಗೆ ಇದೆ. ಏರ್‌ಟೆಲ್‌ನ ಎಲ್ಲ ಟೆಲಿಕಾಂ ಸರ್ಕಲ್‌ಗಳಲ್ಲಿ ಈ ಸೇವೆ ಲಭ್ಯವಿದೆ. ಆದರೆ, ಪರಿಷ್ಕೃತ ಪ್ಲ್ಯಾನ್ ಮಾತ್ರ ಸದ್ಯಕ್ಕೆ ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ಟೆಲಿಕಾಂ ಸರ್ಕಲ್‌ಗಳಲ್ಲಿ ಲಭ್ಯವಿದೆ.

ಈ ವಿಷಯದಲ್ಲಿ ಜಿಯೋ ಕೂಡ ಹಿಂದೆ ಬಿದ್ದಿಲ್ಲ. ಜಿಯೋ ಕೂಡ 199 ರೂ. ಪ್ಲ್ಯಾನ್‌ನಲ್ಲಿ ತನ್ನೆಲ್ಲ ಚಂದಾದಾರರಿಗೆ 1.5 ಬಿಜಿ ಡೇಟಾ ಒದಗಿಸುತ್ತಿದೆ. ಜೊತೆಗೆ, 28 ದಿನಗಳವರೆಗೆ ನಿತ್ಯ 100 ಎಸ್ಎಂಎಸ್ ಕೂಡ ದೊರೆಯಲಿದೆ.

ವಿಐನಿಂದ 399 ರೂ. ಡಿಜಿಟಲ್ ಎಕ್ಸ್‌ಕ್ಲೂಸಿವ್
ಇತ್ತೀಚೆಗಷ್ಟೇ ವೋಡಾಫೋನ್-ಐಡಿಯಾ(ವಿಐ) ಕೂಡ 399 ರೂಪಾಯಿ ಡಿಜಿಟಲ್ ಎಕ್ಸ್‌ಕ್ಲೂಸಿವ್ ಎಂಬ ಹೊಸ ಪ್ಲ್ಯಾನ್ ಜಾರಿಗೆ ತಂದಿದೆ. ಈ ಬಗ್ಗೆ ಅನೇಕ ವೆಬ್‌ಸೈಟ್‌ಗಳ ವರದಿ ಮಾಡಿದ್ದು, ಹೊಸ ಪ್ಲ್ಯಾನ್ ಪ್ರಕಾರ ತನ್ನ ವಿಐ ವೆಬ್‌ಸೈಟ್ ಮೂಲಕ ಯಾರು ಹೊಸ ಸಿಮ್‌ ಖರೀದಿಸುತ್ತಾರೆ ಅವರಿಗೆ ಈ 399 ರೂ. ಅನ್ವಯವಾಗುತ್ತದೆ. ಈ ಪ್ಲ್ಯಾನ್ ಪೋಸ್ಟ್‌ಪೇಡ್ ಮತ್ತು ಪ್ರೀಪೇಡ್ ಎರಡಕ್ಕೂ ಅನ್ವಯವಾಗುತ್ತದೆ.

ಈ ವರ್ಷ 1 ಲಕ್ಷ ಕೋಟಿ ನಿಮಿಷ ವಿಡಿಯೋ ಕಾಲ್‌ಗಳನ್ನು ಕಂಡ ಗೂಗಲ್!

ಪ್ರೀಪೇಡ್ ಪ್ಲ್ಯಾನ್‌ನಲ್ಲಿ ನಿಮಗೆ ಡೇಟಾ ಜೊತೆಗೆ ಎಸ್ಎಂಎಸ್ ‌ಸೇವೆಯೂ ದೊರೆಯಲಿದ್ದು, 297 ರೂ. ಪ್ಲ್ಯಾನ್‌ನಲ್ಲಿ ಇದೆಲ್ಲ ದೊರೆಯುತ್ತದೆ ಮತ್ತು ಹೆಚ್ಚುವರಿಯಾಗಿ ವಿಐ ಮೂವೀಸ್ ಮತ್ತು ಟಿವಿ ಅಕ್ಸೆಸ್ ಬೆನೆಫಿಟ್ ಕೂಡ ಇದೆ. ಪೋಸ್ಟ್‌ಪೇಡ್ 399 ರೂ. ಡಿಜಿಟಲ್ ಎಕ್ಸ್‌ಕ್ಲೂಸಿವ್ ಪ್ಲ್ಯಾನ್‌ನಲ್ಲಿ ಗ್ರಾಹಕರಿಗೆ ಎಕ್ಸಟ್ರಾ 150 ಜಿಬಿ ಡೇಟಾ ಜೊತೆಗೆ ಎಸ್‌ಎಂಎಸ್ ಬೆನೆಫಿಟ್ಸ್ ಸಿಗುತ್ತದೆ.

ವೆಬ್‌ಸೈಟ್ ಮೂಲಕ ಗ್ರಾಹಕರು ಸಿಮ್ ಖರೀದಿಸುವಾಗ 399 ರೂ. ಪ್ಲ್ಯಾನ್ ಆಯ್ಕೆ ಮಾಡಿಕೊಳ್ಳಬಹುದು. ಪ್ರೀಪೇಡ್ 399 ರೂ. ಪ್ಲ್ಯಾನ್‌ ಆಯ್ಕೆ ಮಾಡಿಕೊಂಡರೆ ಗ್ರಾಹಕರಿಗೆ ನಿತ್ಯ 1.5ಜಿಬಿ ಡೇಟಾ ಮತ್ತು ದಿನಕ್ಕೆ 100 ಎಸ್ಎಂಎಸ್ ಉಚಿತವಾಗಿ ಸಿಗಲಿವೆ. ಇದು 56 ದಿನಗಳವರೆಗೂ ವ್ಯಾಲಿಡಿಟಿ ಹೊಂದಿದ್ದು ವಿಐ ಮೂವೀಸ್ ಮತ್ತು ಟಿವಿ ಅಕ್ಸೆಸ್ ಕೂಡ ಪಡೆದುಕೊಳ್ಳಬಹುದು.

ಪೋಸ್ಟ್‌ಪೇಡ್ 399 ರೂ. ಡಿಜಿಟಲ್ ಎಕ್ಸ್‌ಕ್ಲೂಸಿವ್ ಪ್ಲ್ಯಾನ್‌ನಲ್ಲಿ ಗ್ರಾಹಕರು ತಿಂಗಳಿಗೆ 40 ಜಿಬಿ ಡೇಟಾ ಮತ್ತು 100 ಎಸ್ಎಂಎಸ್ ಉಚಿತವಾಗಿ ಪಡೆದುಕೊಳ್ಳಬಹುದು. ಇದಕ್ಕೆ ಹೆಚ್ಚುವರಿಯಾಗಿ 6 ತಿಂಗಳಿಗೆ 150 ಜಿಬಿ ಡೇಟಾ ಕೂಡ ಲಭ್ಯವಿದೆ. ಇಷ್ಟು ಮಾತ್ರವಲ್ಲದೇ ವಿಐ ಮೂವೀಸ್ ಮತ್ತು ಟಿವಿ ಸಬ್ಸಕ್ರಿಪ್ಷನ್ ಪಡೆದುಕೊಳ್ಳಬಹುದು.

WhatsApp Stickers: ಹೊಸ ವರ್ಷಕ್ಕೆ ವಾಟ್ಸಾಪ್ ಸ್ಟಿಕರ್ಸ್ ಕಳುಹಿಸುವುದು ಹೇಗೆ?