ಹೈಟೆಕ್ ಬೆಂಗಳೂರಿಗೆ ಸರಿಸಾಟಿ ಉಂಟೇ? ಚಪಾತಿ ರೇಟಿಂಗ್‌ಗೆ AI ಟೂಲ್ ಅಭಿವೃದ್ಧಿಪಡಿಸಿದ ಟೆಕ್ಕಿ
ಚಪಾತಿ ಸರಿಯಾಗಿದೆಯಾ? ಎಷ್ಟು ರೇಟಿಂಗ್ ಕೊಡಬಹುದು? ಇದಕ್ಕಾಗಿ ಬೆಂಗಳೂರಿನ ಟೆಕ್ಕಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಟೂಲ್ ಅಭಿವೃದ್ದಿಪಡಿಸಿದ್ದರೆ. ಟೆಕ್ಕಿಯ ಈ ಪೋಸ್ಟ್ ಇದೀಗ ನೆಟ್ಟಿಗರನ್ನು ಚಕಿತಗೊಳಿಸಿದೆ.

ಬೆಂಗಳೂರು(ಫೆ.2) ಸಿಲಿಕಾನ್ ಸಿಟಿ ಬೆಂಗಳೂರು ತಂತ್ರಜ್ಞಾನದಲ್ಲಿ ಯಾವತ್ತೂ ಮುಂದೆ. ಐಟಿ ಕಂಪನಿಯ ಟೆಕ್ಕಿ ಇರಬಹುದು, ಜನ ಸಾಮಾನ್ಯ ಇರಬಹುದು, ಆಟೋ ಚಾಲಕನೇ ಇರಬಹುದು, ಎಲ್ಲರೂ ಅತ್ಯಾಧುನಿಕ ಟೆಕ್ ಬಳಸುತ್ತಾರೆ. ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಹೈಟೆಕ್ ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸುತ್ತಾರೆ. ಐಟಿ ಸಿಟಿ, ಸ್ಟಾರ್ಟ್ ಅಪ್ ಸಿಟಿ ಸೇರಿದಂತೆ ಹಲವು ಹೆಸರುಗಳು ಬೆಂಗಳೂರಿಗಿದೆ. ಇದೀಗ ಯಾರೂ ಊಹೆಗೂ ನಿಲುಕದ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಟೂಲ್ ಅಭಿವೃದ್ಧಿಪಡಿಸಲಾಗಿದೆ. ಬೆಂಗಳೂರಿನ ಟೆಕ್ಕಿ ಇದೀಗ ಚಪಾತಿಗೆ ರೇಟಿಂಗ್ ಕೊಡಲು ಎಐ ಟೂಲ್ ಅಭಿವೃದ್ಧಿಪಡಿಸಿದ್ದಾರೆ. ಈ ಕುರಿತು ಟೆಕ್ಕಿ ಮಾಡಿರುವ ಪೋಸ್ಟ್ ಹಲವು ಪರ ವಿರೋಧ ಹಾಗೂ ಚರ್ಚೆಗೂ ಗ್ರಾಸವಾಗಿದೆ.
ಈ ಚಪಾತಿ ಅಥವಾ ರೋಟಿಗೆ ರೇಟಿಂಗ್ ಮಾಡಲು ಅಭಿವೃದ್ಧಿಪಡಿಸಿದ ಎಐ ಟೂಲ್ ಮುಂದಿನ ದಿನಗಳಲ್ಲಿ ಮದುವೆ ವೇಳೆ ಭಾರಿ ಕೋಲಾಹಲ ಸೃಷ್ಟಿಸಲಿದೆ ಅನ್ನೋ ಅಭಿಪ್ರಾಯಗಳು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿದೆ. ಬೆಂಗಳೂರಿನ ಟೆಕ್ಕಿ ಅನಿಮೇಶ್ ಚೌವ್ಹಾಣ್ ಈ ಹೊಸ ಎಐ ಟೂಲ್ ಅಭಿವೃದ್ಧಿಪಡಿಸಿರುವುದಾಗಿ ಹೇಳಿಕೊಂಡಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಶೀಘ್ರದಲ್ಲೇ ಈ ರೋಟಿ ಚೆಕ್ಕರ್ .ಎಐ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂದಿದ್ದಾರೆ.
ಏನಿದು ಅಮೆರಿಕವನ್ನೇ ನಡುಗಿಸಿದ ಚೀನಾದ ಉಚಿತ AI ಡೀಪ್‌ಸೀಕ್? ಬಳಕೆ, ಡೌನ್ಲೋಡ್ ಹೇಗೆ?
ಸೋಶಿಯಲ್ ಮೀಡಿಯಾದಲ್ಲಿ ರೋಟಿ ಕುರಿತು ಒಂದು ಚಿತ್ರ ಪೋಸ್ಟ್ ಮಾಡಲಾಗಿತ್ತು. ರೋಟಿ ಮಾಡುವುದು ಒಂದು ಕಲೆ ಎಂದು ಬರೆಯಲಾಗಿತ್ತು. ವಿಶೇಷವಾಗಿ ವೃತ್ತಕಾರದ ರೋಟಿ ಅಥವಾ ಚಪಾತಿ ಮಾಡುವುದು ಒಂದು ಕಲೆ ಅನ್ನೋ ಅರ್ಥದಲ್ಲಿ ಈ ಪೋಸ್ಟ್ ಹಾಕಲಾಗಿತ್ತು. ಈ ವೇಳೆ ಟೆಕ್ಕಿ ಅನಿಮೇಶ್ ಚೌವ್ಹಾಣ್ ಈ ರೋಟಿಯನ್ನು ತಮ್ಮ ರೋಟಿಚೆಕರ್.ಎಐ ಮೂಲಕ ರೇಟಿಂಗ್ ಮಾಡಿದ್ದಾರೆ. ಈ ವೇಳೆ 100 ಅಂಕದಲ್ಲಿ ಈ ರೋಟಿ 91 ಅಂಕ ಪಡೆದಿದೆ.
ಈ ರೋಟಿ ಚಿತ್ರವನ್ನು ರೋಟಿಚೆಕರ್ ಎಐ ಟೂಲ್ ಮೂಲಕ ರೇಟಿಂಗ್ ಮಾಡಲಾಗಿದೆ. ಪ್ರಮುಖವಾಗಿ ಈ ರೋಟಿ ಚೆಕರ್ ಎಐ ಮೂಲಕ ರೋಟಿ ಅಥವಾ ಚಪಾಟಿ ಫೋಟೋವನ್ನು ಪರಿಶೀಲನೆ ಮಾಡಬಹುದು. ರೋಟಿಯ ಆಕಾರ ಅಂದರೆ ವೃತ್ತಕಾರ ಹಾಗೂ ಉತ್ತಮವಾಗಿದ್ದರೆ ಹೆಚ್ಚಿನ ರೇಟಿಂಗ್ ಸಿಗಲಿದೆ. ಆಕಾರ ವಿಕಾರವಾಗಿದ್ದರೆ ಕಡಿಮೆ ರೇಟಿಂಗ್ ಸಿಗಲಿದೆ. ಟೆಕ್ಕಿಯ ಪೋಸ್ಟ್ ಭಾರಿ ಸಂಚಲನ ಸೃಷ್ಟಿಸಿದೆ.
ಮುಂದಿನ ದಿನಗಳಲ್ಲಿ ಮದುವೆ ವೇಳೆ ಭಾವಿ ಸೊಸೆಗೆ ರೋಟಿ ಚೆಕರ್‌ನಲ್ಲಿ ಎಷ್ಟು ರೇಟಿಂಗ್ ಇದೆ ಅನ್ನೋದರ ಮೇಲೆ ಮದುವೆ ನಡೆಯಲಿದೆ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ. ಇನ್ನು ರೋಟಿ ಅಥವಾ ಚಪಾತಿಗೆ ರೇಟಿಂಗ್ ಕೊಡುವುದು ಅದರ ವೃತ್ತ ನೋಡಿ ಅಲ್ಲ, ರುಚಿ ನೋಡಿ. ತಿಂದರೆ ಸಾಕು. ಇದಕ್ಕೆ ಎಐ ಟೂಲ್ ಅಗತ್ಯವಿಲ್ಲ. ಇನ್ನು ಆಕಾರ ನೋಡಲು ಎಐ ಟೂಲ್ ಯಾಕೆ ಬೇಕು, ಕನಿಷ್ಠ ಒಂದು ಕಣ್ಣಿದ್ದರೆ ಸಾಕು ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಸಮಾಜವನ್ನು, ಹೊರಗಿನ ಜಗತ್ತನ್ನು ಸರಿಯಾಗಿ ನೋಡದವರಿಗೆ ಮಾತ್ರ ಈ ರೀತಿಯ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಟೂಲ್ ಅಗತ್ಯವಿದೆ. ತಾಯಿ ಮಾಡುವ ರೋಟಿ, ಚಪಾತಿಗೆ ಎಲ್ಲರೂ 100 ರೇಟಿಂಗ್ ಕೊಡುತ್ತಾರೆ. ಇದಕ್ಕೆ ಎಐ ಅಗತ್ಯವಿಲ್ಲ ಎಂದು ಮತ್ತೆ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸದ್ಯ ರೋಟಿ ಚೆಕರ್ ಭಾರಿ ಚರ್ಚೆಗೆ ಗ್ರಾಸವಾಗಿದೆ. ಯಾವುದೇ ಕೆಲಸವಿಲ್ಲದಿದ್ದರೆ, ರೋಟಿ, ಚಪಾತಿ ಫೋಟೋ ತೆಗೆದು ರೇಟಿಂಗ್ ನೋಡುವ ಪ್ರಯತ್ನ ಮಾಡಬಹುದು. ಆದರೆ ಈ ರೋಟಿ ಚೆಕೆರ್ ಉದ್ದೇಶವೇ ಅರ್ಥವಾಗುತ್ತಿಲ್ಲ ಎಂದು ಒಂದಷ್ಟು ಮಂದಿ ಕಮೆಂಟ್ ಮಾಡಿದ್ದಾರೆ.
ಎಣಿಸಿ ರೊಟ್ಟಿ ಮಾಡೋದು,ಲೆಕ್ಕ ಹಾಕಿ ಅಡುಗೆ ಮಾಡೋದು ನಿಮ್ಮ ಬದುಕನ್ನೇ ಹಾಳು ಮಾಡುತ್ತೆ