ಎಣಿಸಿ ರೊಟ್ಟಿ ಮಾಡೋದು,ಲೆಕ್ಕ ಹಾಕಿ ಅಡುಗೆ ಮಾಡೋದು ನಿಮ್ಮ ಬದುಕನ್ನೇ ಹಾಳು ಮಾಡುತ್ತೆ
ರೊಟ್ಟಿ ಮಾಡುವಾಗ ನಾವು ಮಾಡುವ ತಪ್ಪುಗಳು ಮನೆಯಲ್ಲಿ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತವೆಯಂತೆ. ಏನದು ತಪ್ಪು ಅಂತ ತಿಳ್ಕೊಳೋಣ...

ವಾಸ್ತು ನಂಬುವವ್ರು ತುಂಬಾ ಜನ ಇದ್ದಾರೆ. ಮನೆ ಕಟ್ಟುವಾಗ, ವಸ್ತುಗಳನ್ನ ಜೋಡಿಸುವಾಗ ವಾಸ್ತು ನಿಯಮ ಪಾಲಿಸುವವ್ರು ಜಾಸ್ತಿ. ಆದ್ರೆ ಅಡುಗೆ ಮನೇಲಿ ಮಾಡುವ ಕೆಲಸಗಳು ವಾಸ್ತುವಿನ ಮೇಲೆ ಪರಿಣಾಮ ಬೀರುತ್ತೆ ಅಂತ ಗೊತ್ತಾ? ನಂಬೋದಿಕ್ಕೆ ಆಗ್ದಿಲ್ಲ ಅಂದ್ರೂ ಇದು ಸತ್ಯ. ರೊಟ್ಟಿ ಮಾಡುವಾಗ ಮಾಡುವ ತಪ್ಪುಗಳು ಮನೆಯಲ್ಲಿ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತವೆಯಂತೆ. ಏನದು ತಪ್ಪು ಅಂತ ತಿಳ್ಕೊಳೋಣ...
ವಾಸ್ತು ಪ್ರಕಾರ, ನಮ್ಮ ದಿನನಿತ್ಯದ ಚಿಕ್ಕ ಪುಟ್ಟ ಕೆಲಸಗಳು ನಮ್ಮ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ವಾಸ್ತು ಪ್ರಕಾರ, ರೊಟ್ಟಿ ಮಾಡುವಾಗ ಅವುಗಳನ್ನ ಎಣಿಸ್ಬಾರ್ದು. ರೊಟ್ಟಿಗಳನ್ನ ಎಣಿಸುವುದು ಕೊರತೆ ಅಥವಾ ಮಿತಿಯ ಮನಸ್ಥಿತಿಯನ್ನ ಸೂಚಿಸುತ್ತದೆ. ನಮ್ಮಲ್ಲಿರೋ ಕೊರತೆಯನ್ನ ತೋರಿಸುತ್ತದೆ ಅಂತಾರೆ. ಹಾಗಾಗಿ, ರೊಟ್ಟಿ ಮಾಡುವಾಗ ಎಣಿಸ್ಬಾರ್ದು. ಇದ್ರಿಂದ ಮನೇಲಿ ದುಡ್ಡಿನ ಸಮಸ್ಯೆ ಬರಬಹುದು.
ಹೆಚ್ಚು ಯೋಚನೆ ಮಾಡದೆ, ಮಿತಿಗೊಳಿಸದೆ ಅಡುಗೆ ಮಾಡುವುದರಿಂದ ಅದಕ್ಕೆ ಸಕಾರಾತ್ಮಕ ಶಕ್ತಿ ಬರುತ್ತದೆ. ಇದ್ರಿಂದ ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ. ರೊಟ್ಟಿಗಳನ್ನ ಎಣಿಸುವುದರಿಂದ ಈ ಶಕ್ತಿಗೆ ಅಡ್ಡ ಬರುತ್ತದೆ ಅಂತ ವಾಸ್ತು ತಜ್ಞರು ಹೇಳ್ತಾರೆ.
ಭಾರತೀಯ ಸಂಪ್ರದಾಯದಲ್ಲಿ, ಅಡುಗೆಯನ್ನ ಹೆಚ್ಚಾಗಿ ಅತಿಥಿಗಳು ಅಥವಾ ಅವಶ್ಯಕತೆ ಇರುವವರ ಜೊತೆ ಹಂಚಿಕೊಳ್ಳುವ ಉದ್ದೇಶದಿಂದ ಮಾಡ್ತಾರೆ. ರೊಟ್ಟಿಗಳನ್ನ ಎಣಿಸುವುದು ಈ ಉದ್ದೇಶವನ್ನ ಮಿತಿಗೊಳಿಸಬಹುದು, ಇದು 'ಅನ್ನದಾನ' ಸೂತ್ರಕ್ಕೆ ವಿರುದ್ಧವಾಗಿದೆ. ಎಣಿಸುವ ಬದಲು, ಸಮೃದ್ಧಿ ಮನಸ್ಥಿತಿಯಿಂದ ಸಾಕಷ್ಟು ಅಡುಗೆ ಮಾಡುವತ್ತ ಗಮನ ಹರಿಸಬೇಕು.