ಡಿಜಿಟಲ್‌ ಇಂಡಿಯಾ ಮಸೂದೆಯಲ್ಲಿ 11 ಅಂಶಗಳಿಗೆ ನಿಷೇಧ: 85 ಕೋಟಿ ಇಂಟರ್ನೆಟ್‌ ಬಳಕೆದಾರರನ್ನು ರಕ್ಷಿಸಲು ಪ್ಲ್ಯಾನ್‌

ಕಾನೂನು ಮತ್ತು ಸುವ್ಯವಸ್ಥೆ ರಾಜ್ಯಗಳ ವಿಷಯವಾದರೂ, ಅವುಗಳ ಸಹಯೋಗದಲ್ಲಿ ಕೇಂದ್ರ ಸರ್ಕಾರ ಕೈಜೋಡಿಸಿ ನಾಗರಿಕರ ಹಿತರಕ್ಷಣೆಗೆ ಕ್ರಮ ಕೈಗೊಳ್ಳಲಿದೆ’ ಎಂದು ರಾಜೀವ್‌ ಚಂದ್ರಶೇಖರ್‌ ಹೇಳಿದರು.

ban on 11 types of content in digital india bill rajeev chandrasekhar ash

ನವದೆಹಲಿ (ಜೂನ್ 10, 2023): ದೇಶದ 85 ಕೋಟಿ ಇಂಟರ್ನೆಟ್‌ ಬಳಕೆದಾರರನ್ನು ಸೈಬರ್‌ ಅಪರಾಧಗಳಿಂದ ರಕ್ಷಿಸುವ, ಅಂತರ್ಜಾಲವನ್ನು ಮುಕ್ತ ಮತ್ತು ಸುರಕ್ಷಿತಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರ ಡಿಜಿಟಲ್‌ ಇಂಡಿಯಾ ಮಸೂದೆಯನ್ನು ಸಿದ್ಧಪಡಿಸುತ್ತಿದ್ದು, ಅದನ್ನು ಶೀಘ್ರವೇ ಸಂಸತ್ತಿನಲ್ಲಿ ಮಂಡಿಸಲಾಗುವುದು. ಒಟ್ಟು 11 ರೀತಿಯ ಅಂಶಗಳನ್ನು ಈ ಮಸೂದೆ ಮೂಲಕ ನಿಷೇಧಿಸಲಾಗುವುದು ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ 9 ವರ್ಷದಲ್ಲಿ ದೇಶದಲ್ಲಿ ಡಿಜಿಟಲೀಕರಣದ ಪ್ರಗತಿ ಬಗ್ಗೆ ಶುಕ್ರ​ವಾರ ಮಾಹಿತಿ ನೀಡಿರುವ ರಾಜೀವ್‌ ಚಂದ್ರಶೇಖರ್‌, ‘ಉಪದ್ರವಕಾರಿ ಮತ್ತು ಅಪರಾಧೀಕರಣವು, ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್‌ನಲ್ಲಿ ವ್ಯಾಪಕವಾಗಿದೆ. ದೇಶದ ಹಾಲಿ ಇಂಟರ್ನೆಟ್‌ ಬಳಕೆದಾರರ ಸಂಖ್ಯೆ 85 ಕೋಟಿ ತಲುಪಿದೆ. 2025ರ ವೇಳೆಗೆ 120 ಕೋಟಿ ತಲುಪುವ ನಿರೀಕ್ಷೆ ಇದೆ. ಈ ಹೊತ್ತಿನಲ್ಲಿ, ಡಿಜಿಟಲ್‌ ಪೌರರಿಗೆ ಹಾನಿ ಉಂಟು ಮಾಡುವ ಯಾವುದೇ ಬೆಳವಣಿಗೆಯನ್ನು ನಾವು ಸಹಿಸುವುದಿಲ್ಲ. ಇವುಗಳಿಗೆ ಕಡಿವಾಣ ಹಾಕಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಕಾನೂನು ಮತ್ತು ಸುವ್ಯವಸ್ಥೆ ರಾಜ್ಯಗಳ ವಿಷಯವಾದರೂ, ಅವುಗಳ ಸಹಯೋಗದಲ್ಲಿ ಕೇಂದ್ರ ಸರ್ಕಾರ ಕೈಜೋಡಿಸಿ ನಾಗರಿಕರ ಹಿತರಕ್ಷಣೆಗೆ ಕ್ರಮ ಕೈಗೊಳ್ಳಲಿದೆ’ ಎಂದು ಹೇಳಿದರು.

ಇದನ್ನು ಓದಿ: Union Budget 2023: ಟೆಕ್ ಉದ್ಯಮಕ್ಕೆ ಈ ಬಾರಿಯ ಮೋದಿ ಲೆಕ್ಕಾಚಾರದಲ್ಲಿ ಏನೆಲ್ಲ ಇದೆ ನೋಡಿ..?

ಯಾವುದಕ್ಕೆ ನಿಷೇಧ?:
ಮಕ್ಕಳನ್ನು ಒಳಗೊಂಡ ಲೈಂಗಿಕ ಚಟುವಟಿಕೆ, ಧಾರ್ಮಿಕವಾಗಿ ಪ್ರಚೋದಿಸುವ ಅಂಶಗಳು, ಹಕ್ಕುಸ್ವಾಮ್ಯ ಉಲ್ಲಂಘಿಸುವ ಅಂಶ, ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ನೀಡುವುದು, ನಕಲು, ದೇಶದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಅಂಶ, ಕಂಪ್ಯೂಟರ್‌ ಮಾಲ್ವೇರ್‌, ನಿಷೇಧಿತ ಆನ್‌ಲೈನ್‌ ಗೇಮ್‌ ಮತ್ತು ಇದೇ ರೀತಿಯ ಇತರೆ ಯಾವುದೇ ನಿಷೇಧಿತ ಅಂಶಗಳನ್ನು ಹೊಸ ಡಿಜಿಟಲ್‌ ಇಂಡಿಯಾ ಮಸೂದೆಯಡಿ ನಿಷೇಧಿಸಲಾಗುವುದು. ಹಾಲಿ ಇವುಗಳ ಮೇಲೆ ನಿಷೇಧ ಇದೆಯಾದರೂ, ಹೊಸ ಕಾಯ್ದೆ ಜಾರಿಯಾದ ಬಳಿಕ ಇಂಥ ಅಂಶಗಳನ್ನು ಪ್ರಸಾರ ಮಾಡುವ ವೇದಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಸಿಗಲಿದೆ ಎಂದು ಸಚಿವ ರಾಜೀವ್‌ ಚಂದ್ರಶೇಖರ್‌ ತಿಳಿಸಿದ್ದಾರೆ.

ಯುಪಿಎ ವೈಫಲ್ಯ:
2008ರಲ್ಲಿ ಅಂದಿನ ಯುಪಿಎ ಸರ್ಕಾರ ಐಟಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಇಂಥ ಅಪರಾಧ ಕೃತ್ಯಗಳಿಗೆ ದೊಡ್ಡ ದೊಡ್ಡ ಟೆಕ್‌ ಕಂಪನಿಗಳು ಮತ್ತು ಸಾಮಾಜಿಕ ಜಾಲತಾಣ ವೇದಿಕೆಗಳಿಗೆ ವಿನಾಯಿತಿ ನೀಡಲಾಯಿತು ಎಂದು ಸಚಿವ ರಾಜೀವ್‌ ಆರೋಪಿಸಿದರು.

ಇದನ್ನೂ ಓದಿ: ಪ್ರಧಾನಿ ಮೋದಿಯ ಡಿಜಿಟಲ್‌ ಇಂಡಿಯಾ ದೃಷ್ಟಿಕೋನವನ್ನು ಕೊಂಡಾಡಿದ ಗೂಗಲ್‌ ಸಿಇಒ ಸುಂದರ್ ಪಿಚೈ

Latest Videos
Follow Us:
Download App:
  • android
  • ios