Screen ಸ್ವಚ್ಛಗೊಳಿಸುವ ದುಬಾರಿ ‌ಬಟ್ಟೆ ಬಿಡುಗಡೆ ಮಾಡಿದ Apple!

-Screen ಸ್ವಚ್ಛಗೊಳಿಸುವ ದುಬಾರಿ ಬೆಲೆಯ ಪಾಲಿಶಿಂಗ್ ಕ್ಲೋತ್‌ ಬಿಡುಗಡೆ!
-ಆ್ಯಪಲ್‌ನ ಎಲ್ಲ ಉತ್ಪನ್ನಗಳ ಸ್ಕ್ರೀನ್ ಒರೆಸಲು ಬಳಸಬಹುದಾದ ಬಟ್ಟೆ 
-ಇದು ಬೇರೆ ಬಟ್ಟೆಗಳಗಿಂತ ಭಿನ್ನ ಎಂದ ಆ್ಯಪಲ್‌

Apple launches polishing cloth worth 1900 for its products

ಜಗತ್ತಿನ ಪ್ರಸಿದ್ಧ ಮೊಬೈಲ್‌ ಬ್ರ್ಯಾಂಡ್‌ಗಳಲ್ಲಿ ಒಂದಾದ ಆ್ಯಪಲ್‌ (Apple) ಈಗ ತನ್ನ ಉತ್ಪನ್ನಗಳನ್ನು ಒರೆಸಲು ಹೊಸ ಬಟ್ಟೆಯೊಂದನ್ನು ಬಿಡುಗಡೆ ಮಾಡಿದೆ. ಈ ಬಟ್ಟೆಯ ಬೆಲೆ ಬರೋಬ್ಬರಿ 1,900 ರೂಪಾಯಿ. ಹೌದು! ಸಹಜವಾಗಿ ಐಪೋನ್‌ (iPhone) ಅಥವಾ ಯಾವುದೇ ಫೋನ್‌ ಖರೀದಿಸುವಾಗ ಗ್ರಾಹಕರು, ಜತೆಗೆ ಸ್ಕ್ರೀನ್‌ ಗಾರ್ಡ್‌, ಫೋನ್‌ ಕವರ್‌ ಅಥವಾ ಇನ್ನಿತರ ವಸ್ತುಗಳನ್ನು ಖರೀದಿಸಬಹುದು. ಆದರೆ ತಮ್ಮ ಫೋನ್‌ ಒರೆಸಲೆಂದೇ ಬಟ್ಟೆಯನ್ನು ಖರೀದಿಸುವವರು ಅತೀ ವಿರಳ. ಆದರೆ ಆ್ಯಪಲ್‌ ಕಂಪನಿ ಇಂತಹುದ್ದೊಂದು ಹೊಸ ಪ್ರಯೋಗಕ್ಕೆ ಕೈ ಹಾಕಿದ್ದು ಆ್ಯಪಲ್‌ ಉತ್ಪನ್ನಗಳನ್ನು ಒರೆಸಲೆಂದೇ ಬಟ್ಟೆಯೊಂದನ್ನು (Cloth) ಬಿಡುಗಡೆ ಮಾಡಿದೆ. ಆ್ಯಪಲ್‌ ಪ್ರೊಡಕ್ಟ್‌ಗಳನ್ನು ಒರೆಸಲು ಈ ಪಾಲಿಶಿಂಗ್‌ ಕ್ಲೋತ್‌ (Polishing Cloth) ಬಿಡುಗಡೆ ಮಾಡಲಾಗಿದ್ದು ಇದರಿಂದ ನಿಮ್ಮ ಮೋಬೈಲ್‌ ಫೋನ್‌ ಅಥವಾ ಮ್ಯಾಕ್‌ಬುಕ್ ಸ್ಕ್ರೀನ್‌ನ್ನು ಯಾವುದೇ ಸ್ಕ್ಯ್ರಾಚಸ್‌ (Sractches) ಅಥವಾ ಕಲೆಗಳು (smudges) ಮೂಡದಂತೆ ಒರೆಸಬಹುದು ಎಂದು ಕಂಪನಿ ತಿಳಿಸಿದೆ.

ಆಂಡ್ರಾಯ್ಡ್‌ಗಿಂತ ಆಪಲ್ ಫೋನುಗಳು ಯಾಕೆ ಬೆಸ್ಟು?

Apple ಬಟ್ಟೆಯ ಬೆಲೆ ಬರೋಬ್ಬರಿ ರೂ. 1,900!

ಮಾರುಕಟ್ಟೆಯಲ್ಲಿ ಲಭ್ಯವಿರುವ ಸಾಮಾನ್ಯ ಮೈಕ್ರೋಫೈಬರ್‌ ಬಟ್ಟೆಗಳು ಅತಿ ಕಡಿಮೆ ಬೆಲೆ ಹೊಂದಿರುತ್ತವೆ. ಒಳ್ಳೆಯ ಕ್ವಾಲಿಟಿ ಬಟ್ಟೆಗಳು ಬೇಕೆಂದರೆ ರೂ.200 ರಿಂದ ರೂ.300 ಖರ್ಚಾಗಬಹುದು, ಅಷ್ಟೇ! ಆದರೆ ಆ್ಯಪಲ್‌ ಕಂಪನಿಯ ಧೂಳು ಒರೆಸುವ ಬಟ್ಟೆಯ ಬೆಲೆ ಮಾತ್ರ 1,900 ರೂಪಾಯಿ. ಇದು ಹೀಗೇಕೆ ಎಂದರೆ ನಮ್ಮ ಬಟ್ಟೆಯೂ ಬೇರೆ ಉತ್ಪನ್ನಗಳಿಗಿಂತ ಭಿನ್ನ ಎನ್ನತ್ತೆ ಆ್ಯಪಲ್‌. ಆ್ಯಪಲ್‌ ಸ್ಟೋರ್‌ ನಲ್ಲಿ ಈ ಬಟ್ಟೆ ಲಭ್ಯವಿದ್ದು ʼಈ ಬಟ್ಟೆ ಬಹಳ ಮೃದುವಾಗಿದ್ದು ಒರಟು ಇಲ್ಲದ ವಸ್ತುಗಳಿಂದ ತಯಾರಿಸಲಾಗಿದೆ ಎಂದುʼ ಕಂಪನಿ ತಿಳಿಸಿದೆ. ಜತೆಗೆ ಇದು ನ್ಯಾನೊ ಟೆಕ್ಶರ್‌ ಗ್ಲಾಸ್‌ (Nano Texture Glass) ಸೇರಿದಂತೆ  ಆ್ಯಪಲ್‌ನ ಯಾವುದೇ ಡಿಸ್‌ಪ್ಲೆ (Display) ಯನ್ನು ಒರೆಸಲು ಬಳಸಬಹುದು. 

ಐಫೋನ್ 13 ಸೀರೀಸ್, ಐಪ್ಯಾಡ್ ಮಿನಿ, ಆಪಲ್ ವಾಚ್ ಲಾಂಚ್!

ಆ್ಯಪಲ್‌ ತನ್ನ ಈ ಉತ್ಪನ್ನವನ್ನು ಬಿಡುಗಡೆ ಮಾಡುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದೆ. 1,900 ರೂಪಾಯಿ ಆ್ಯಪಲ್‌ ಬಟ್ಟೆಯ ಬಗ್ಗೆ ನೆಟ್ಟಿಗರು ಪರ-ವಿರೋಧದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.  ಪ್ರತಿಷ್ಟಿತ ಆ್ಯಪಲ್‌ ಕಂಪನಿಯ ಉತ್ಪನ್ನ ಇದಾಗಿದ್ದರೂ ಕೂಡ  1,900  ರೂಪಾಯಿಯ ಪಾಲಿಶಿಂಗ್‌ ಬಟ್ಟೆ ಖರೀದಿಸುವುದು ಸಾಮಾನ್ಯವಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಆ್ಯಪಲ್‌ನ ದುಬಾರಿ ಉತ್ಪನ್ನಗಳ ಜತೆಗೆ ಬಟ್ಟೆಯನ್ನು ಉಚಿತವಾಗಿ ನೀಡಬೇಕೆಂದು ಕೆಲವರು ಹೇಳಿದ್ದಾರೆ. ಆ್ಯಪಲ್‌ ಇಂಥಹದೊಂದು ಪ್ರಯೋಗಕ್ಕೆ ಕೈ ಹಾಕಿದ್ದು ಮೊದಲ ಬಾರಿ ಏನಲ್ಲ. ಈ ಹಿಂದೆಯೂ ತನ್ನ ದುಬಾರಿ ಉತ್ಪನ್ನಗಳ ಮೂಲಕ ಗ್ರಾಹಕರಿಗೆ ಹಲವು ಬಾರಿ ಶಾಕ್‌ ನೀಡಿದೆ. ಆ್ಯಪಲ್‌ ಈ ಹಿಂದೆ  ತನ್ನ  Pro Display XDR ಜತೆಗೆ ಒರೆಸಲು ಬಟ್ಟೆಯೊಂದನ್ನು ಉಚಿತವಾಗಿ ನೀಡಿತ್ತು . ಆದರೆ ಈ ಬಾರಿ ಆ್ಯಪಲ್‌ ಬಿಡುಗಡೆ ಮಾಡಿರುವ ಪಾಲಿಶಿಂಗ್ ಕ್ಲೋತ್‌ ಮಾತ್ರ ದುಬಾರಿ ಬೆಲೆಯದ್ದಾಗಿದೆ.

2021 ಮ್ಯಾಕ್‌ಬುಕ್ ಪ್ರೋ ಲಾಂಚ್! 

ಬಹಳ ನಿರೀಕ್ಷೆ ಮೂಡಿಸಿದ್ದ ಮ್ಯಾಕ್‌ಬುಕ್ ಪ್ರೋ (Mackbook Pro) ಸೀರೀಸ್ ಲ್ಯಾಪ್‌ಟ್ಯಾಪ್ ಮಾರುಕಟ್ಟೆಗೆ ಸೋಮವಾರ ಲಗ್ಗೆ ಇಟ್ಟಿದೆ. ಈ ಲ್ಯಾಪ್‌ಟ್ಯಾಪ್ ಗ್ರಾಹಕರಿಗೆ 14 ಇಂಚ್ ಹಾಗೂ 16 ಇಂಚ್ ಡಿಸ್‌ಪ್ಲೇ ವೆರಿಯೆಂಟ್‌ಗಳಲ್ಲಿ ಸಿಗಲಿದೆ. ಮತ್ತೊಂದು ವಿಶೇಷ ಏನೆಂದರೆ, 2016ರಲ್ಲಿ ಪರಿಚಿಯಿಸಿದ ಬಳಿಕ 5 ವರ್ಷದಲ್ಲಿ ಇದೇ ಮೊದಲ ಬಾರಿಗೆ ಭಾರಿ ಅಪ್‌ಡೇಟ್‌ಗಳೊಂದಿಗೆ ಈ ಮ್ಯಾಕ್ ಬುಕ್ ಪ್ರೋ ಬಿಡುಗಡೆಯಾಗುತ್ತಿದೆ. ಈ ಮ್ಯಾಕ್‌ಬುಕ್ ವಿಶೇಷ ಏನೆಂದರೆ, ಕಂಪನಿಯೇ ಅಭಿವೃದ್ಧಿಪಡಿಸಿರುವ ಹೊಸ ಎಂ1 ಪ್ರೋ (M1 Pro) ಹಾಗೂ ಎಂ1 ಮ್ಯಾಕ್ಸ್ (M1  Max) ಹೊಸ ಪ್ರೊಸೆಸರ್ ಆಧಾರಿತವಾಗಿದೆ!

2021 ಮ್ಯಾಕ್‌ಬುಕ್ ಪ್ರೋ ಲಾಂಚ್, ಏನೆಲ್ಲ ವಿಶೇಷತೆಗಳಿವೆ?

Latest Videos
Follow Us:
Download App:
  • android
  • ios