ನೀವೀಗ ಅಮೆಜಾನ್ ಪ್ರೈಮ್ ವಿಡಿಯೋದಲ್ಲೂ ‘ವಾಚ್ ಪಾರ್ಟಿ’ ಮಾಡಬಹುದು!

ಕಳೆದ ಜುಲೈನಲ್ಲಿ ಅಮೆರಿಕದಲ್ಲಿ ಪರಿಚಯಿಸಿದ್ದ ವಾಚ್ ಪಾರ್ಟಿ ವೈಶಿಷ್ಟ್ಯವನ್ನು ಕಂಪನಿ ಇದೀಗ ಭಾರತದಲ್ಲೂ ಪರಿಚಯಿಸಿದೆ. ಈ ಫೀಚರ್ ಮೂಲಕ ಬಳಕೆದಾರರು ತಮ್ಮದೇ ವಾಚ್ ಪಾರ್ಟಿ ಆರಂಭಿಸಿ, ತಮಗೆ ಬೇಕಾದ ಕುಟುಂಬದ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಸಿನಿಮಾ, ಶೋ ವೀಕ್ಷಣೆ ಮಾಡಬಹುದು.
 

Amazon prime video introduce watch party feature in India

ನೀವು ಫೇಸ್‌ಬುಕ್ ಬಳಕೆದಾರರಾಗಿದ್ದರೆ, ನೆಟ್‌ಫ್ಲಿಕ್ಸ್ ಬಳಕೆದಾರರಾಗಿದ್ದರೆ ವಾಚ್ ಪಾರ್ಟಿ ಎಂಬ ಫೀಚರ್‌ ಬಗ್ಗೆ ಕೇಳಿರುತ್ತೀರಿ. ಇದೀಗ ಅಂಥದ್ದೇ ಫೀಚರ್ ಅನ್ನು ಅಮೆಜಾನ್ ಪ್ರೈಮ್ ವಿಡಿಯೋ ಭಾರತೀಯ ಬಳಕೆದಾರರಿಗೆ ಒದಗಿಸಿ ಕೊಡುತ್ತಿದೆ. 

ಅಂದರೆ, ಅಮೆಜಾನ್ ಪ್ರೈಮ್ ವಿಡಿಯೋ ಒದಗಿಸುವ ಈ ವಾಚ್ ಪಾರ್ಟಿ ಸೌಲಭ್ಯವನ್ನು ಬಳಸಿಕೊಂಡು ಸುಮಾರು 100 ಸ್ನೇಹಿತರು ಹಾಗೂ ಕುಟುಂಬದ ಸದಸ್ಯರೊಂದಿಗೆ ಪ್ರೈಮ್ ವಿಡಿಯೋವನ್ನು ಸ್ಟ್ರೀಮ್ ಮಾಡಬಹುದು. ಆದರೆ, ನೀವು ನಿಮ್ಮ ಸ್ಟ್ರೀಮಿಂಗ್‌ನಲ್ಲಿ ಬರುವ ಸ್ನೇಹಿತರು ಮತ್ತು ಕುಟುಂಬದ ಸದಸ್ಯರೂ ಕೂಡ ಅಮೆಜಾನ್ ಪ್ರೈಮ್ ಮೆಂಬರ್‌ಶಿಪ್ ಪಡೆದುಕೊಂಡಿರಬೇಕಾಗುತ್ತದೆ. 

ಲ್ಯಾಂಡ್‌ಲೈನ್‌ನಿಂದ ಮೊಬೈಲ್‌ಗೆ ಕಾಲ್‌ ಮಾಡೋಕೆ ಈ ರೂಲ್ಸ್ ಫಾಲೋ ಮಾಡ್ಲೇ ಬೇಕು: ಏನದು..?    

ಸ್ಟ್ರೀಮಿಂಗ್ ಮಾತ್ರವಲ್ಲದೇ, ನೀವು ಸೈಡ್‌ಬಾರ್‌ನಲ್ಲಿ ಚಾಟಿಂಗ್ ಕೂಡ ಮಾಡಬಹುದು. ಈ ಸಮೂಹ ವೀಕ್ಷಣೆ(ಗ್ರೂಪ್ ವಾಚ್) ವೈಶಿಷ್ಟ್ಯವನ್ನು ಭಾರತದಲ್ಲಿ ಜಾರಿಗೆ ತಂದ ಮೊದಲ ಪ್ರಮುಖ ಸ್ಟ್ರೀಮಿಂಗ್ ವೇದಿಕೆಯಾಗಿದೆ ಎಂಬುದನ್ನು ನೀವು ಗಮನಿಸಬೇಕು.

ಹಾಗಾದರೆ, ಈ ವಾಚ್ ಪಾರ್ಟಿ ಫೀಚರ್ ಅನ್ನು ಹೇಗೆ ಸಕ್ರಿಯಗೊಳಿಸುವುದು ಎಂಬ ಪ್ರಶ್ನೆ ಮೂಡುವುದು ಸಹಜ. ಇದಕ್ಕಾಗಿ ನೀವು ವೆಬ್‌ ಬ್ರೌಸರ್‌ನಲ್ಲಿ primevideo.com ತೆರೆಯಿರಿ. ಗಮನಿಸಬೇಕಿರುವ ಸಂಗತಿ ಎಂದರೆ, ಈ ವಾಚ್ ಪಾರ್ಟಿ ಫೀಚರ್ ಸದ್ಯಕ್ಕೆ ಕ್ರೋಮ್ ಮತ್ತು ಫೈರ್‌ಫಾಕ್ಸ್‌ನಂಥ ಸೀಮಿತ ಕಂಪ್ಯೂಟರ್ ಬ್ರೌಸರ್‌ಗಳಲ್ಲಿ ಮಾತ್ರ ಲಭ್ಯವಿದೆ. ನೀವು ಇತರರೊಂದಿಗೆ ನೋಡಬೇಕಾದ ಸಿನಿಮಾ, ಶೋ ಯಾವುದಾದರನ್ನು ಆಯ್ಕೆ ಮಾಡಿಕೊಳ್ಳಿ. ಸಿನಿಮಾವನ್ನು ಆಯ್ಕೆ ಮಾಡಿಕೊಂಡಿದ್ದಾದರೆ ನಿಮಗೆ ಅದರ ಕೆಳಗೆ ವಾಚ್ ಪಾರ್ಟಿ ಎಂಬ ಬಟನ್ ಕಾಣಿಸುತ್ತದೆ. ಹಾಗೆಯೇ ನೀವೇನಾದರೂ ಟಿವಿ ಶೋಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪ್ರತಿ ಎಪಿಸೋಡ್‌ ಬಟನ್ ಮುಂದೆಯೇ ವಾಚ್ ಪಾರ್ಟಿ ಬಟನ್ ಇರುವುದನ್ನು ಕಾಣಬಹುದು. ಈ ವಾಚ್ ಪಾರ್ಟಿ ಬಟನ್ ಅನ್ನು ಒಮ್ಮೆ ಕ್ಲಿಕ್ ಮಾಡಿದರೆ, ಆಗ ನಿಮಗೆ ಬೇಕಿರುವ ಚಾಟ್ ಹೆಸರಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸಿತ್ತದೆ. ಇದಾದ ಬಳಿಕ ದೊರೆಯುವ ಲಿಂಕ್ ಅನ್ನು ಇತರರೊಂದಿಗೆ ಷೇರ್ ಮಾಡಿಕೊಳ್ಳಬಹುದು. 

ವಾಟ್ಸಾಪಿನಲ್ಲಿ Disappearing Messages ಸಕ್ರಿಯಗೊಳಿಸುವುದು ಹೇಗೆ?

ಇನ್ನೂ ಒಂದು ನೆನಪಿಡಬೇಕಾದ ಸಂಗತಿ ಏನೆಂದರೆ, ಕಂಪ್ಯೂಟರ್ ಬ್ರೌಸರ್ ಬಳಸುವ ನಿಮ್ಮ ಸ್ನೇಹಿತರು ಮತ್ತು ಕುಟುಂಬದ ಸದಸ್ಯರು ಕೂಡ ಅಮೆಜಾನ್ ಪ್ರೈಮ್ ವಿಡಿಯೋ ವಾಚ್ ಪಾರ್ಟಿಗೆ ಸೇರ್ಪಡೆಯಾಗಬಹುದು. ಯಾರೂ ಈ ವಾಚ್ ಪಾರ್ಟಿಯನ್ನು ಆರಂಭಿಸಿರುತ್ತಾರೋ ಅವರು ಸಂಪೂರ್ಣ ನಿಯಂತ್ರಣವನ್ನು ಹೊಂದಿರುತ್ತಾರೆ. ಅಂದರೆ, ವಿಡಿಯೋ ಪಾಜ್, ಪ್ಲೇ, ರಿವೈಂಡ್ ಮತ್ತು ಫಾಸ್ಟ್ ಫಾರ್ವರ್ಡ್ ಮಾಡಬಹುದು. ಆದರೆ, ವಾಚ್ ಪಾರ್ಟಿಯಲ್ಲಿ ಭಾಗಿಯಾಗಿರುವ ಇತರರು ಸದಸ್ಯರು ಕೇವಲ ಆಡಿಯೋ ಮತ್ತು ಉಪಶೀರ್ಷಿಕೆಗಳನ್ನು ಬದಲಿಸುವಷ್ಟು ಮಾತ್ರ ನಿಯಂತ್ರಣ ಪಡೆದುಕೊಂಡಿರುತ್ತಾರೆ. ಆದರೆ, ಈ ಸೌಲಭ್ಯವನ್ನು ನೀವು ನೆಟ್‌ಫ್ಲಿಕ್ಸ್ ಪಾರ್ಟಿಯಲ್ಲಿ ಕಾಣಲಾರರಿ.

Amazon prime video introduce watch party feature in India

ಅಂದ ಹಾಗೆ, ಈ ವಾಚ್ ಪಾರ್ಟಿ ವೈಶಿಷ್ಟ್ಯವನ್ನು ಅಮೆಜಾನ್ ಕಳೆದ ಜುಲೈನಲ್ಲೇ ಅಮೆರಿಕದಲ್ಲಿ ಫೀಚರ್ ಅನ್ನು ಬಳಕೆದಾರರಿಗೆ ನೀಡಿತ್ತು. ಇದೀಗ ಭಾರತದ  ಬಳಕೆದಾರರಿಗೂ ಈ ಫೀಚರ್ ಬಳಕೆ ದೊರೆಯುತ್ತಿದೆ. 

ವಿಂಡೋಸ್ ಡೆಸ್ಕ್‌ಟಾಪ್‌ನಲ್ಲಿ ಆಂಡ್ರಾಯ್ಡ್ ಆ್ಯಪ್‌ಗಳು ಸೇರ್ಪಡೆ?

Latest Videos
Follow Us:
Download App:
  • android
  • ios