ಬೆಂಗಳೂರು(ಮೇ.28):  ಇದು ಡಿಜಿಟಲ್ ಯುಗ. ಇಂಟರ್‌ನೆಟ್ ನಮ್ಮ ಜೀವನದ ಪ್ರಮುಖ ಭಾಗವಾಗಿದೆ.  ಅಂತರ್ಜಾಲದಿಂದ ಬಹುತೇಕರ ಜೀವನ ಮತ್ತಷ್ಟು ಸುಲಭ ಹಾಗೂ ಅನುಕೂಲಕರವಾಗಿದೆ. ಮಾಹಿತಿ, ಮನರಂಜನೆ ಅಥವಾ ಯಾವುದೇ ಕೆಲಸಕ್ಕೆ, ಮಾಹಿತಿಗಾಗಿ ದಿನದ 24 ಗಂಟೆಯೂ ಇಂಟರ್ನೆಟ್ ಅವಲಂಬಿತರಾಗಿದ್ದಾರೆ. ಮೊಬೈಲ್, ಲ್ಯಾಪ್‌‌ಟಾಪ್ ಸೇರಿದಂತೆ ಎಲ್ಲಾ ಸಾಧನಗಳು ವೈ ಫೈ ಮೂಲಕ ಇಂಟರ್ನೆಟ್ ಹಾಗೂ ವೆಬ್ ಸಂಪರ್ಕ ಹೊಂದಿದೆ.   ಈ ರೀತಿಯ ಸಂಪರ್ಕದಲ್ಲಿ ಸುರಕ್ಷತೆಯ ಆತಂಕ ಇದ್ದೇ ಇದೆ. ಸ್ಮಾರ್ಟ್‌ಫೋನ್‌ನಿಂದ ಹಿಡಿದು ಎಲ್ಲಾ ಸ್ಮಾರ್ಟ್ ಸಾಧನಗಳ ಮೇಲೆ ನಾವು ಅವಲಂಬಿತರಾಗಿದ್ದೇವೆ. ಜೊತೆಗೆ ವೆಬ್ ಸಂಪರ್ಕದಿಂದ ಸಾವಿರಾರು ವೈರಸ್, ಮಾಲ್‌ವೇರ್‌ನಿಂದ ಅಪಾಯ ತಪ್ಪಿದ್ದಲ್ಲ. ಅದೆಷ್ಟೆ ಟೆಕ್ ಪರಿಣಿತರಾಗಿದ್ದರೂ ಅಂತರ್ಜಾಲದಲ್ಲಿ ಸುರಕ್ಷಿತವಾಗಿರುವುದು ಕಷ್ಟ. ನಾವು ಎಚ್ಚರದಿಂದ ಇದ್ದರೂ, ಮನೆಯಲ್ಲಿನ ಪೋಷಕರು, ಮಕ್ಕಳು ಈ ಜಾಲದಲ್ಲಿ ಸುಲಭವಾಗಿ ಸಿಲುಕಿಕೊಳ್ಳಬಹುದು. ಹೀಗಾಗಿ ಪೋಷಕರಲ್ಲಿ ಎರಡು ಪ್ರಮುಖ ಪ್ರಶ್ನೆಗಳ ಮೂಡುವುದು ಸಹಜ. 

1. ಇಂಟರ್ನೆಟ್‌ಗೆ ಸಂಪರ್ಕಗೊಂಡಿರುವ ಎಲ್ಲಾ ಸಾಧನಗಳನ್ನು ನಾವು ಹೇಗೆ ಸುರಕ್ಷಿತಗೊಳಿಸುತ್ತೇವೆ?
2. ನಮ್ಮ ಮಕ್ಕಳು ಅಂತರ್ಜಾಲದಲ್ಲಿ ಎದುರಾಗುವ ಅಪಾಯಗಳಿಗೆ ಸಿಲುಕದಂತೆ ನಿಯಂತ್ರಿಸುವುದು ಹೇಗೆ?

ಭಾರತದ ಅತೀದೊಡ್ಡ ಇಂಟರ್‌ನೆಟ್ ಪೂರೈಕದಾರರಲ್ಲಿ ಒಬ್ಬರಾದ ಏರ್‌ಟೆಲ್ ಏಕ್ಸ್‌ಸ್ಟ್ರೀಮ್ ಫೈಬರ್(Airtel Xstream Fiber) ಈ ಸಮಸ್ಸೆಯನ್ನು ಪತ್ತೆಹತ್ತಿದೆ. ಜೊತೆಗೆ ಇದಕ್ಕೆ ಏರ್‌ಟೆಲ್ ಸೆಕ್ಯೂರ್ ಇಂಟರ್‌ನೆಟ್ ಎಂಬ ಪರಿಹಾರವನ್ನೂ ಸೂಚಿಸಿದೆ. ಮಕ್ಕಳು ಮತ್ತು ವಯಸ್ಕರಿಗೆ ಸುರಕ್ಷಿತ ಇಂಟರ್ನೆಟ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಏರ್‌ಟೆಲ್ ಇದನ್ನು ತಮ್ಮ ಎಕ್ಸ್‌ಸ್ಟ್ರೀಮ್ ಫೈಬರ್ ಬಳಕೆದಾರರಿಗೆ ಸುರಕ್ಷತೆಯ ಮತ್ತೊಂದು ಪದರವಾಗಿ ಪರಿಚಯಿಸಿದೆ. ಈ ಸೇವೆಯನ್ನು ಸಕ್ರಿಯಗೊಳಿಸುವುದರೊಂದಿಗೆ, ವೈ-ಫೈಗೆ ಸಂಪರ್ಕಗೊಂಡಿರುವ ನಿಮ್ಮ ಎಲ್ಲಾ ಸಾಧನಗಳನ್ನು ಮಾಲ್‌ವೇರ್ ಮತ್ತು ವೈರಸ್‌ಗಳ ಆತಂಕಗಳಿಂದ ಸುರಕ್ಷಿತವಾಗಲಿದೆ. ಜೊತೆಗೆ ಗೇಮ್ಸ್ ಹಾಗೂ ಆನ್‌ಲೈನ್ ವಿಷಯಗಳಿಂದ ಮಕ್ಕಳು ವಿಚಲಿತರಾಗುವುದಿಲ್ಲ  ಎಂಬುದನ್ನು ಖಚಿತಪಡಿಸಿಕೊಳ್ಳಲು ಆಯ್ದೆ ಕೆಲ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ಫಿಲ್ಟರ್ ಮಾಡಲು ಅನುಮತಿಸುತ್ತದೆ. ಕೆಲ ವೆಬ್‌ಸೈಟ್ ಆನ್‌ಲೈನ್ ಮೂಲಕ ಅಹಿತಕರ ವಿಷಯವನ್ನು ನಿರ್ಬಂಧಿಸುವ ಅವಕಾಶವೂ ಇಲ್ಲಿದೆ.  ಏರ್‌ಟೆಲ್ ಸೆಕ್ಯೂರ್ ಇಂಟರ್‌ನೆಟ್‌ನ ಎರಡು ಮುಖ್ಯ ಲಕ್ಷಣಗಳಾದ  ವೈರಸ್, ಮಾಲ್ವೇರ್ ರಕ್ಷಣೆ ಮತ್ತು ಫಿಲ್ಟರಿಂಗ್ ಮಾಡಲು ಅವಕಾಶ ನೀಡಲಿದೆ

ಉದಾಹರಣೆಗೆ  ನಿಮ್ಮ ಮಕ್ಕಳು ಓದು ಅಥವಾ ಅಧ್ಯಯನ ಸಮಯವನ್ನು ಆಟವಾಡಲು ಬಳಕೆ ಮಾಡಿಕೊಳ್ಳುತ್ತಿದ್ದರೆ, ಏರ್‌ಟೆಲ್ ಸೆಕ್ಯೂರ್ ಇಂಟರ್‌ನೆಟ್ ಮೂಲಕ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಗೇಮಿಂಗ್ ಸೇರಿದಂತೆ ಆನ್‌ಲೈನ್ ಆಟಗಳ ವೆಬ್‌ಸೈಟ್ ಆ್ಯಪ್ಲಿಕೇಶನ್ ನಿರ್ಬಂಧಿಸಲು ಸಾಧ್ಯವಿದೆ.  ಏರ್‌ಟೆಲ್ ಥ್ಯಾಂಕ್ಸ್ ಆ್ಯಪ್ ಮೂಲಕ ಯಾವ ಆ್ಯಪ್ಲಿಕೇಶನ್ ನಿರ್ಬಂಧಿಸಬೇಕು ಅನ್ನೋದನ್ನು ಆಯ್ಕೆ ಮಾಡಿಕೊಳ್ಳಬಹುದು. ಜೊತೆಗೆ ಸೋಶಿಯಲ್ ಮಿಡಿಯಾ ಪ್ಲಾಟ್‌ಫಾರ್ಮ್ ನಿರ್ಬಂಧ ಕೂಡ ಮಾಡಬಹುದು. ಮತ್ತೊಂದು ವಿಶೇಷತೆ ಎಂದರೆ ಈ ಸೆಟ್ಟಿಂಗ್ ವೈಫೈಗೆ ಸಂಪರ್ಕಗೊಂಡಿರುವ ಎಲ್ಲಾ ಸಾಧನಗಳಿಗೆ ಅನ್ವಯಿಸಲಿದೆ.

ಸುರಕ್ಷಿತ ಇಂಟರ್‌ನೆಟ್ ಸೇವೆಗೆ ಚಂದಾರರಾಗಲು ಸರಳ ವಿಧಾನ ಅನುರಿಸಿದರೆ ಸಾಕು. ಏರ್‌ಟೆಲ್ ಥ್ಯಾಂಕ್ಸ್ ಆ್ಯಪ್ಲಿಕೇಶನ್‌ಗೆ ಲಾಗಿನ್ ಆಗಬೇಕು, ಇಲ್ಲಿ ಸೆಕ್ಯೂರ್ ಇಂಟರ್‌ನೆಟ್ ಕಾರ್ಡ್ ಆಯ್ಕೆ ಮಾಡಿ ಆ್ಯಕ್ಟೀವೇಟ್ ಮಾಡಬೇಕು. ಮೊದಲ ತಿಂಗಳು ಉಚಿತವಾಗಿದ್ದರೆ, ನಂತರ ಪ್ರತಿ ತಿಂಗಳು 99 ರೂಪಾಯಿಗಳಲ್ಲಿ ಲಭ್ಯವಿದೆ.

ಈ ಸೇವೆ ನಾಲ್ಕು ಪ್ರಿ ಬಿಲ್ಡ್ ಪ್ರೋಫೈಲ್‌ಗಳಲ್ಲಿ ಲಭ್ಯವಿದೆ. ವೈರಸ್ ರಕ್ಷಣೆ, ಮಕ್ಕಳ ಸುರಕ್ಷಿತ, ಅಧ್ಯಯನ ಮೋಡ್ ಹಾಗೂ ಕೆಲಸದ ಮೋಡ್. ಈ ಪ್ರೋಫೈಲ್‌ನಿಂದ ವಿಭಿನ್ನ ವಿಷಗಳನ್ನು, ಆ್ಯಪ್ಲಿಕೇಶನ್ ಸುಲಭವಾಗಿ ನಿರ್ಬಂಧಿಸಲು ಸಹಾಯ ಮಾಡಲಿದೆ. ನಿಮ್ಮ ಕೆಲಕ್ಕೆ ಅನುಗುಣವಾಗಿ ಮೋಡ್‌ ಪ್ರೊಫೈಲ್ ಆಯ್ಕೆ ಮಾಡಿಕೊಂಡರೆ ಸಾಕು, ಪ್ರತಿ ಬಾರಿ ಸೆಟ್ಟಿಂಗ್ ತೆರಳಿ ಆ್ಯಪ್ಲಿಕೇಶನ್ ನಿರ್ಬಂಧಿಸುವ ತಾಪತ್ರಯವಿಲ್ಲ. ಕೆಲಸದ ಮೋಡ್‌ನಲ್ಲಿರುವಾಗ  Wi-Fi ಗೆ ಸಂಪರ್ಕ ಹೊಂದಿದ ಜನರು ಸ್ಟ್ರೀಮಿಂಗ್ ಸೇವೆಗಳನ್ನು ಬಳಸಲು ಸಾಧ್ಯವಾಗುವುದಿಲ್ಲ.  ಹಾಗೆ ಒಬ್ಬರು ಸ್ಟಡಿ ಮೋಡ್ ಅನ್ನು ಆರಿಸಿದ್ದರೆ ಗೇಮಿಂಗ್ ವರ್ಗಕ್ಕೆ ಬರುವ ಎಲ್ಲಾ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಲಾಗುತ್ತದೆ. ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್‌ನಿಂದ ಯಾವುದೇ ಸಮಯದಲ್ಲಿ ಈ ಪ್ರೊಫೈಲ್‌ಗಳನ್ನು ಸಕ್ರಿಯಗೊಳಿಸಬಹುದು ಮತ್ತು ನಿಷ್ಕ್ರಿಯಗೊಳಿಸಬಹುದು.

ನಾವು ಎಲ್ಲಾ ಕೆಲಗಳನ್ನು ಆನ್‌ಲೈನ್ ಮೂಲಕವೇ ಮಾಡುತ್ತೇವೆ. ಹೀಗಾಗಿ ಇಂಟರ್‌ನೆಟ್‌ನಲ್ಲಿ ನಮ್ಮ ಕುಟುಂಬದ ಸುರಕ್ಷತೆ ಯೋಚಿಸುವುದು ಕಡ್ಡಾಯವಾಗಿದೆ.  ಹೀಗಾಗಿ ಏರ್‌ಟೆಲ್ ಸುರಕ್ಷಿತ ಇಂಟರ್‌ನೆಟ್ ಸೇವೆಗೆ ಚಂದಾದಾರರಾಗುವ ಮೂಲಕ ಸುರಕ್ಷೆಯೆಡೆಗೆ ಹೆಜ್ಜೆ ಇಡಿ.