ಏಜೆಂಟಿಕ್ AI ಭಾರತದ ಬೆಳವಣಿಗೆಗೆ ಒಂದು ಪ್ರಮುಖ ಎಂಜಿನ್ ಆಗಿ ಬೆಳೆಯುತ್ತಿದೆ. ನಂಬಿಕೆ, ಗೌಪ್ಯತೆ ಮತ್ತು ಅನುಸರಣೆ AI ಅರ್ಥಪೂರ್ಣ ಪರಿಣಾಮವನ್ನು ಬೀರುವುದನ್ನು ಖಚಿತಪಡಿಸಿಕೊಳ್ಳಲು ಅಡಿಪಾಯವಾಗಿವೆ.
ಲೇಖಕರು: ಸೆಬಾಸ್ಟಿಯನ್ ನೈಲ್ಸ್, ಅಧ್ಯಕ್ಷರು & ಮುಖ್ಯ ಕಾನೂನು ಅಧಿಕಾರಿ, ಸೇಲ್ಸ್‌ಫೋರ್ಸ್
ಕೇವಲ ಪ್ರಶ್ನೆಗಳಿಗೆ ಉತ್ತರಿಸುವುದು, ನಮ್ಮ ಪರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ಸ್ವಾಯತ್ತವಾಗಿ ಕಾರ್ಯನಿರ್ವಹಿಸುವುದು ಸೇರಿದಂತೆ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಶಕ್ತಿಶಾಲಿ ತಂತ್ರಜ್ಞಾನವಾಗಿ ಬೆಳೆದಿದೆ. ಆದರೆ ಅರ್ಟಿಫೀಶಿಯಲ್ ಇಂಟಲಿಜೆನ್ಸಿಯಲ್ಲಿ ಸುಧಾರಿತ ಹಾಗೊ ತಂತ್ರಜ್ಞಾನಿಗಳನ್ನು ಒಳಗೊಂಡ ಏಜೆಂಟಿಕ್ AI ಕಾರ್ಯವ್ಯಾಪ್ತಿಯನ್ನು ವಿಸ್ತಾರಗೊಳಿಸುತ್ತಿದೆ. ಏಜೆಂಟಿಕ್ AIನಲ್ಲಿ , AI ಸ್ವಾಯತ್ತವಾಗಿ ಕಾರ್ಯಗಳನ್ನು ಮಾಡುತ್ತದೆ, ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಮತ್ತು ವಿಶ್ಲೇಷಿಸುತ್ತದೆ . ಭಾರತ ತಂತ್ರಜ್ಞಾನಗಳಲ್ಲಿ ವಿಶಿಷ್ಟವಾದ ತಿರುವು ಪಡೆಯುತ್ತಿದೆ. ಅದರ ವಿಶಾಲವಾದ, ಯುವ ಮತ್ತು ಡಿಜಿಟಲ್ ಬಳಕೆಯಲ್ಲಿರುವ ಜನಸಂಖ್ಯೆ, ರೋಮಾಂಚಕ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆ ಮತ್ತು ಪ್ರವರ್ತಕ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದೊಂದಿಗೆ, ಭಾರತ AI ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಿಂದ ಭವಿಷ್ಯವನ್ನು ರೂಪಿಸುತ್ತದೆ. ಸಾರ್ವಜನಿಕ ಸೇವೆಗಳನ್ನು ಬದಲಾಯಿಸುವುದು, ವ್ಯಾಪಾರ ಆವಿಷ್ಕಾರಗಳನ್ನು ಸಕ್ರಿಯಗೊಳಿಸುವುದು ಅಥವಾ ಡಿಜಿಟಲ್ ವಿಷಯದ ಹೊಸ ಮಾದರಿಗಳನ್ನು ರಚಿಸುವುದು ಏನೇ ಇರಲಿ, AI ಇನ್ನು ಮುಂದೆ ತಂತ್ರಜ್ಞಾನವನ್ನು ಸಕ್ರಿಯಗೊಳಿಸುವುದು ಮಾತ್ರವಲ್ಲ - ಅದು ಭಾರತದ ಅಂತರ್ಗತ ಬೆಳವಣಿಗೆ, ಆರ್ಥಿಕ ಸ್ಥಿತಿಸ್ಥಾಪಕತ್ವ ಮತ್ತು ಜಾಗತಿಕ ಸ್ಪರ್ಧಾತ್ಮಕತೆಗೆ ಒಂದು ಪ್ರಮುಖ ಅಂಶವಾಗಿ ಬೆಳೆಯುತ್ತಿದೆ.
ಏಜೆಂಟಿಕ್ AI ಭಾರತಕ್ಕೆ ಒಂದು ದೊಡ್ಡ ಅವಕಾಶವನ್ನು ನೀಡುತ್ತದೆ. ಆದರೆ ಗಮನಾರ್ಹ ಜವಾಬ್ದಾರಿಯನ್ನು ನೀಡುತ್ತದೆ. ಭಾರತದಂತಹ ವೈವಿಧ್ಯಮಯ, ಸಂಕೀರ್ಣವಾದ ಒಂದು ದೇಶಕ್ಕೆ, AI ಬಳಕೆಯ ಯಶಸ್ಸನ್ನು ಉತ್ಪಾದಕತೆ ಅಥವಾ ಸ್ವಯಂಚಾಲಿತ ಕಾರ್ಯಾಚರಣೆಗಳಿಂದ ಮಾತ್ರ ಅಳೆಯಲಾಗುವುದಿಲ್ಲ; ಬದಲಾಗಿ, ಈ ವ್ಯವಸ್ಥೆಗಳ ವಿಶ್ವಾಸಾರ್ಹತೆ, ನೈತಿಕತೆ ಮತ್ತು ಒಳಗೊಳ್ಳುವಿಕೆಯ ಮೂಲಕವೂ ಅಳೆಯಲಾಗುತ್ತದೆ. ಪ್ರತಿಯೊಬ್ಬ ನಾಗರಿಕರಿಗೂ, ವ್ಯಾಪಾರಕ್ಕೂ, ಸಂಸ್ಥೆಗೂ AI ಅರ್ಥಪೂರ್ಣ ಪರಿಣಾಮವನ್ನು ಬೀರುವುದನ್ನು ಖಚಿತಪಡಿಸಿಕೊಳ್ಳಲು ಅವು ಅಡಿಪಾಯವಾಗಿವೆ.
AI ಗೆ ನಂಬಿಕೆಯೇ ಮುಖ್ಯ:
AI ಏಜೆಂಟರು ಕಾರ್ಯಗಳನ್ನು ಸ್ವಯಂಚಾಲಿತವಾಗಿ ಪೂರ್ಣಗೊಳಿಸಲು, ಹೊಸ ಮಾಹಿತಿಗೆ ಅನುಗುಣವಾಗಿ ಬದಲಾಯಿಸಲು ಮತ್ತು ಪೂರ್ವನಿರ್ಧರಿತ ಮಿತಿಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮರ್ಥವಾಗಿವೆ. ಈ ವ್ಯವಸ್ಥೆಗಳು ಆಕರ್ಷಣೆಯನ್ನು ಪಡೆಯಲು ನಂಬಿಕೆ ಅತ್ಯಗತ್ಯ. ಈ AI ಏಜೆಂಟರಿಗೆ ಶಕ್ತಿ ನೀಡುವ ಡೇಟಾವನ್ನು ಅರ್ಥಮಾಡಿಕೊಳ್ಳುವುದು, ನಿರ್ಧಾರ ತೆಗೆದುಕೊಳ್ಳುವಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸುವುದು ಮತ್ತು ವ್ಯಾಪಾರ ಗುರಿಗಳೊಂದಿಗೆ ಕಾರ್ಯಗಳು ಹೊಂದಾಣಿಕೆಯಾಗುವುದನ್ನು ಖಚಿತಪಡಿಸಿಕೊಳ್ಳುವುದರ ಆಧಾರದ ಮೇಲೆ ಈ ನಂಬಿಕೆಯನ್ನು ರಚಿಸಲಾಗಿದೆ.
ಪ್ರಮುಖ ಬ್ರ್ಯಾಂಡ್‌ಗಳು ಈಗಾಗಲೇ ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಬಳಸಲು ಪ್ರಾರಂಭಿಸಿವೆ. ಉದಾಹರಣೆಗೆ, Saks , ಗ್ರಾಹಕರ ಆರ್ಡರ್‌ಗಳನ್ನು ನವೀಕರಿಸಲು ಮತ್ತು ಗ್ರಾಹಕ ಪ್ರತಿನಿಧಿಗಳಿಗೆ AI-ಆಧಾರಿತ ಶಿಫಾರಸುಗಳನ್ನು ನೀಡಲು AI ಏಜೆಂಟರನ್ನು ಬಳಸುತ್ತದೆ. ಅದೇ ಸಮಯದಲ್ಲಿ Unity Environmental University ಪ್ರತ್ಯೇಕವಾದ ವಿದ್ಯಾರ್ಥಿ ಸಲಹಾ ಸೇವೆಗಳನ್ನು ಅಳೆಯಲು ಇದನ್ನು ಬಳಸುತ್ತದೆ. ಈ ಉದಾಹರಣೆಗಳು AI ಏಜೆಂಟರ ಮೂಲಕ ಹೇಗೆ ಕಾರ್ಯಕ್ಷಮತೆಯನ್ನು ಸುಧಾರಿಸಬಹುದು, ಹೊಸತನವನ್ನು ಉತ್ತೇಜಿಸಬಹುದು ಎಂಬುದನ್ನು ತೋರಿಸುತ್ತವೆ.
ಆದಾಗ್ಯೂ, ಅವುಗಳ ಯಶಸ್ಸು ಜವಾಬ್ದಾರಿಯುತ ಅನುಷ್ಠಾನವನ್ನು ಅವಲಂಬಿಸಿರುತ್ತದೆ. ಬಲವಾದ ಡೇಟಾ ನಿರ್ವಹಣೆ, ವಿನ್ಯಾಸ ಮತ್ತು ಗೌಪ್ಯತಾ ನೀತಿಗಳಲ್ಲಿ ನಾವು ಗಮನ ಹರಿಸುತ್ತೇವೆ, AI ಏಜೆಂಟರು ಡೇಟಾವನ್ನು ನೈತಿಕವಾಗಿಯೂ ಮತ್ತು ಪಾರದರ್ಶಕವಾಗಿಯೂ ಪ್ರಕ್ರಿಯೆಗೊಳಿಸುವುದನ್ನು ಖಚಿತಪಡಿಸಿಕೊಳ್ಳುತ್ತೇವೆ. AI ಪ್ರಗತಿಗೆ ಅನುಗುಣವಾಗಿ ನಿಯಂತ್ರಕ ಚೌಕಟ್ಟುಗಳು ವಿಕಸನಗೊಳ್ಳುತ್ತಿರುವುದರಿಂದ, ಮಾನವ ಮೇಲ್ವಿಚಾರಣೆ ಬಹಳ ಮುಖ್ಯ.
ಭಾರತ: AI ಕ್ಷೇತ್ರದಲ್ಲಿ ಬೆಳೆಯುತ್ತಿರುವ ಶಕ್ತಿ
AI ಆವಿಷ್ಕಾರಗಳ ಮುಂದಿನ ಅಲೆಯನ್ನು ತಂತ್ರಜ್ಞಾನದಿಂದ ಮಾತ್ರ ವ್ಯಾಖ್ಯಾನಿಸಲಾಗುವುದಿಲ್ಲ. ಪ್ರಮಾಣದಲ್ಲಿ, ವೇಗದಲ್ಲಿ, ಜವಾಬ್ದಾರಿಯೊಂದಿಗೆ ಬಳಸಬಹುದಾದ ದೇಶಗಳಿಂದಲೇ AI ಆವಿಷ್ಕಾರಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಭಾರತ ಆ ಜಾಗತಿಕ ಶಕ್ತಿ ಕೇಂದ್ರಗಳಲ್ಲಿ ಒಂದಾಗಿ ವೇಗವಾಗಿ ಬೆಳೆಯುತ್ತಿದೆ. 2027 ರ ವೇಳೆಗೆ ಭಾರತದ AI ಮಾರುಕಟ್ಟೆ 25 –35% CAGR ನಲ್ಲಿ ಬೆಳೆಯುವ ನಿರೀಕ್ಷೆಯಿದೆ. ಪ್ರಗತಿಪರ ಸರ್ಕಾರಿ ನೀತಿಗಳು, ಸಮೃದ್ಧ ಡಿಜಿಟಲ್ ಆರ್ಥಿಕತೆ ಮತ್ತು ಪ್ರಪಂಚದ ಕಿರಿಯ ಮತ್ತು ಅತ್ಯಂತ ರೋಮಾಂಚಕ ಡೆವಲಪರ್‌ಗಳು ಈ ಕ್ಷೇತ್ರದಲ್ಲಿ ಭಾರತದ ಬೆಳವಣಿಗೆಗೆ ಕಾರಣವಾಗುತ್ತವೆ.
IndiaAI ಮತ್ತು ವಿಶೇಷ ಕೇಂದ್ರಗಳನ್ನು ಸ್ಥಾಪಿಸುವುದು ಮುಂತಾದ ಸರ್ಕಾರಿ ಉಪಕ್ರಮಗಳು, ಸಾರ್ವಜನಿಕ ಸೇವೆಗಳು ಮತ್ತು ಆರೋಗ್ಯ ರಕ್ಷಣೆ ಯಿಂದ ಹಣಕಾಸು ಸೇವೆಗಳು ಮತ್ತು ಚಿಲ್ಲರೆ ವ್ಯಾಪಾರದವರೆಗೆ ಎಲ್ಲಾ ಕ್ಷೇತ್ರಗಳಲ್ಲಿ AI ಬಳಕೆಗಾಗಿ ಬಲವಾದ ಅಡಿಪಾಯವನ್ನು ಸೃಷ್ಟಿಸುತ್ತಿವೆ.
ಭಾರತ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಮಾತ್ರವಲ್ಲ, ಅದರ ಭವಿಷ್ಯವನ್ನು ರೂಪಿಸುವಲ್ಲಿಯೂ ಮುಂದಿದೆ. ಪ್ರಪಂಚದ ಅತಿದೊಡ್ಡ ಡೆವಲಪರ್ ಸಮುದಾಯಗಳಲ್ಲಿ ಒಂದಾದ ಭಾರತ, ಈ ಸ್ಫೂರ್ತಿಯನ್ನು ಅನುಭವಿಸಲು ಸಾಧ್ಯವಾಗುತ್ತದೆ. 2005 ರಲ್ಲಿ ಭಾರತದಲ್ಲಿ ಕಾರ್ಯಾಚರಣೆಗಳನ್ನು ಸ್ಥಾಪಿಸಿದಾಗಿನಿಂದ, ಲಕ್ಷಾಂತರ ಭಾರತೀಯ ಡೆವಲಪರ್‌ಗಳು ಉತ್ಪಾದಕತೆಯನ್ನು ಹೆಚ್ಚಿಸುವುದು, ಗ್ರಾಹಕ ಸೇವೆಯನ್ನು ಸುಧಾರಿಸುವುದು ಮತ್ತು ವ್ಯಾಪಾರ ಬೆಳವಣಿಗೆಯನ್ನು ಅಳೆಯುವುದು ಮುಂತಾದ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಒಂದಾಗುವುದನ್ನು ನಾವು ನೋಡಿದ್ದೇವೆ.
ಭಾರತಕ್ಕಾಗಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ : 2047 ನೇ ವರ್ಷದ ಭಾರತದ ದೂರದೃಷ್ಟಿಯಲ್ಲಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಪಾತ್ರ
ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, 2047 ರ ವೇಳೆಗೆ ಭಾರತದ “ವಿಕಸಿತ್ ಭಾರತ್” (ಅಭಿವೃದ್ಧಿ ಹೊಂದಿದ ಭಾರತ) ಎಂಬ ದೂರದೃಷ್ಟಿಯಲ್ಲಿ AI ಒಂದು ಪ್ರಮುಖ ಪಾತ್ರವನ್ನು ವಹಿಸಲು ಸಿದ್ಧವಾಗಿದೆ. ವ್ಯವಹಾರಗಳಿಗೆ ಒಂದು ಸಾಧನವಾಗಿರುವುದಕ್ಕಿಂತ, ದೇಶದ ಜನರನ್ನು ಸುಧಾರಿಸಲು, ಉತ್ತಮ ಉದ್ಯೋಗಾವಕಾಶ, ವ್ಯಾಪಕ ಗ್ರಾಹಕ ಸಂಪರ್ಕ ಮತ್ತು ತ್ವರಿತ, ವಿವರವಾದ ನಿರ್ಧಾರಗಳನ್ನು ಕಾರ್ಯಗತಗೊಳಿಸಲು AI ಸಹಾಯ ಮಾಡುತ್ತದೆ. AI ಪರಿಹಾರಗಳಲ್ಲಿ ನಂಬಿಕೆ, ಗೌಪ್ಯತೆ ಮತ್ತು ಮಾನವ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ, ಈ ತಂತ್ರಜ್ಞಾನವು ವ್ಯವಹಾರಗಳಿಗೆ ಮಾತ್ರವಲ್ಲ, ಒಟ್ಟಾರೆ ಸಮಾಜಕ್ಕೂ ಪ್ರಯೋಜನವನ್ನು ನೀಡುತ್ತದೆ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ.
ಜನರಿಗೆ ಅಧಿಕಾರ ನೀಡುವಲ್ಲಿ ಮತ್ತು ಅರ್ಥಪೂರ್ಣ ಬದಲಾವಣೆಯನ್ನು ಉಂಟುಮಾಡುವ ಸಾಮರ್ಥ್ಯ AI ನಲ್ಲಿದೆ. ನಂಬಿಕೆ, ಗೌಪ್ಯತೆ ಮತ್ತು ಅನುಸರಣೆಗೆ ಆದ್ಯತೆ ನೀಡುತ್ತದೆ. AI ಪರಿಹಾರಗಳು ಶಕ್ತಿಶಾಲಿಯಾಗಿರುವುದು ಮಾತ್ರವಲ್ಲ, ಜವಾಬ್ದಾರಿಯುತವಾಗಿವೆ. ಅವು ಗ್ರಾಹಕರು, ಉದ್ಯೋಗಿಗಳು ಮತ್ತು ದೇಶದ ಆರ್ಥಿಕತೆಗೆ ದೀರ್ಘಕಾಲೀನ ಕೊಡುಗೆ ನೀಡುತ್ತವೆ.
***
ಇದು "ಸಂಭವನ" - ತಂತ್ರಜ್ಞಾನದಲ್ಲಿ ಅವಕಾಶಗಳು - ಎಂಬ ಸರಣಿಯ ಒಂದು ಭಾಗವಾಗಿದೆ . ಏಪ್ರಿಲ್ 11-12 ರಂದು ಸಾರ್ವಜನಿಕ ಅಧಿವೇಶನಗಳೊಂದಿಗೆ ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯದೊಂದಿಗೆ ಜಂಟಿಯಾಗಿ ನಡೆಸಲಾಗುವ ಶೃಂಗಸಭೆಯ ಹೆಚ್ಚಿನ ಮಾಹಿತಿಗಾಗಿ, https://bit.ly/JoinGTS2025AN ಗೆ ಭೇಟಿ ನೀಡಿ .
