ಲಾಕ್ಡೌನ್ನಲ್ಲೂ ಪಡೆಯಬಹುದಾದ 5 Airtel Thanks App ಸೇವೆ...
ಮಾಲ್ಸ್, ಚಿತ್ರಮಂದಿರಗಳು ಹಾಗೂ ಸಾರ್ವಜನಿಕ ಸ್ಥಳಗಳು ಕ್ಲೋಸ್ ಆಗಿರುವುದರಿಂದ ಜನರು ಸಿಕ್ಕಿರುವ ಸಮಯವನ್ನು ರಚನಾತ್ಮಕವಾಗಿ ಕಳೆಯಲು ಹೆಣಗುತ್ತಿದ್ದಾರೆ. ಈಗಾಗಲೇ ವಿಚಲಿತಗೊಂಡ ಮನಸ್ಸಿಗೆ ಮುದ ನೀಡಲು ನಿಮ್ಮ ಕುಟುಂಬಕ್ಕೆ ನಾವು ಐದು ಅಗತ್ಯ ಸೇವೆಗಳನ್ನು ನೀಡಲು Airtel Thanks App ಮುಂದಾಗಿದೆ.
ದೈನಂದಿನ ಅಗತ್ಯವಾದ ದಿನಸಿ
ಲಾಕ್‌ಡೌನ್ ಎಂದಾಗ ಜನರಿಗೆ ಮೊದಲು ಚಿಂತೆಯಾಗಿದ್ದು ಅಗತ್ಯವಿರೋ ಆಹಾರ ಪದಾರ್ಥಗಳ ಬಗ್ಗೆ. ಇದಕ್ಕೆ ಅಗತ್ಯವಾದ ಆನ್‌ಲೈನ್ ಸೇವೆಗಳು ಲಭ್ಯವಿದ್ದು, ಜನರಿಗೆ ಅಗತ್ಯವಿರುವ ವಸ್ತುಗಳನ್ನು ತಲುಪಿಸುವಲ್ಲಿ ಶ್ರಮಿಸುತ್ತಿವೆ. ಸೂಪರ್‌ಡೈಲಿ, ಬಿಗ್ ಬ್ಯಾಸ್ಕೆಟ್ ಮತ್ತು ಅಮೇಜಾನ್ ಫ್ರೆಶ್ ಹಾಗೂ ಡಂಜೋನಂಥ ಆನ್‌ಲೈನ್ ಸಂಸ್ಥೆಗಳು ಅಗತ್ಯ ವಸ್ತುಗಳನ್ನು ಜನರಿಗೆ ತಲುಪಿಸುವಂಥ ಸೇವೆಯಲ್ಲಿ ನಿರತವಾಗಿವೆ. ಅಗತ್ಯವಿರುವಷ್ಟು ಹಾಲು, ಬ್ರೆಡ್, ಮೊಟ್ಟೆ, ಹಣ್ಣು ಹಾಗೂ ತರಕಾರಿಗಳನ್ನು ಪಡೆಯಲು ಇವುಗಳಿಂದ ಸಾಧ್ಯ. ಗೋಧಿ ಹಿಟ್ಟು, ಅಕ್ಕಿ ಹಾಗೂ ಅಗತ್ಯ ಬೇಳೆ ಕಾಳುಗಳನ್ನೂ ಸಂಗ್ರಹಿಸಿ ಇಡುವ ಬಗ್ಗೆಯೂ ಜನರು ಯೋಚಿಸುತ್ತಿದ್ದಾರೆ. ಮ್ಯಾಗಿ, ಪಾಸ್ತಾ, ರಾಮನ್ ಅಂಥ ಆಹಾರ ಪದಾರ್ಥಗಳೂ ನಿಮಗೆ ಅಗತ್ಯವಾಗಿರಬಹುದು.
ಮುಂಬೈ, ಬೆಂಗಳೂರು, ರಾಷ್ಟ್ರ ರಾಜಧಾನಿಗಳಲ್ಲಿ ಇಂಥ ಸೇವೆಗಳು ಲಭ್ಯ. ಆಯಾ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿದರೆ ಈ ಕಂಪನಿಗಳು ನೀಡುವ ಸೇವೆಗಳ ಸಂಪೂರ್ಣ ಮಾಹಿತಿ ಲಭ್ಯ.
ಆನ್‌ಲೈನ್ ರೀಚಾರ್ಜ್
ಲಾಕ್‌ಡೌನ್ ಭಾರತದಲ್ಲಿ ಮಾತ್ರವಲ್ಲ ವಿಶ್ವದ ಹಲವು ರಾಷ್ಟ್ರಗಳಲ್ಲಿ ಘೋಷಣೆಯಾದಾಗಿನಿಂದಲೂ ವಾಯ್ಸ್ ಹಾಗೂ ವೀಡಿಯೋ ಕಾಲ್ಸ್ ಮಾಡುವವರ ಸಂಖ್ಯೆ ವಿಪರೀತ ಹೆಚ್ಚುತ್ತಿವೆ. ಅಲ್ಲದೇ ಟಿವಿ ನೋಡುವವರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗಿದೆ. ಒಟಿಟಿ ಫ್ಲ್ಯಾಟ್‌ಫಾರ್ಮ್‌ಗಳಿಗಂತೂ ಹಿಂದೆಂದೂ ಕಾಣದಂತ ಅತ್ಯದ್ಭುತ ಪ್ರತಿಕ್ರಿಯೆ ಸಿಗುತ್ತಿದ್ದು, ಸಬ್‌ಸ್ಕ್ರೈಬ್ ಮಾಡುವವರು ಸಂಖ್ಯೆ ಏರುತ್ತಲೇ ಇದೆ. ಇಂಥ ಸೇವೆಗಳಿಗೆ ಅಗತ್ಯವಾದ ಆನ್‌ಲೈನ್ ರೀಚಾರ್ಚ ಮಾಡಲು ಏರ್‌ಟೆಲ್ ಅನುವು ಮಾಡಿಕೊಡುತ್ತಿದ್ದು, ಈ Airtel Thanks Appಗೊಂದು ಥ್ಯಾಂಕ್ಸ್. ಆನ್‌ಲೈನ್ ಪೇಮೆಂಟ್ ಮಾಡುವುದರಿಂದ ಯಾರ ಸಂಪರ್ಕಕ್ಕೂ ನೀವು ಬರುವ ಅಗತ್ಯವಿಲ್ಲ. ಸಾಮಾಜಿಕ ಅಂತರ ಕಾಯ್ದುಗೊಳ್ಳುವ ನಿಮಯಕ್ಕೆ ಬದ್ಧರಾಗಿರಬಹುದು.
ಮೊಬೈಲ್ ರೀ ಚಾರ್ಜ್, ಪೋಸ್ಟ್ ಪೇಯ್ಡ್ ಮೊಬೈಲ್ ಬಿಲ್ ಪೇಮೆಂಟ್, ಇಂಟರ್‌ನೆಟ್ ಬಿಲ್ ಪೇಮೆಂಟ್, ಡಿಟಿಎಚ್ ಪೇಮೆಂಟ್ ಅಲ್ಲದೇ ಇತರೆ ಸೇವೆಗಳ ಸಬ್‌ಸ್ಕ್ರೈಬ್ ಮಾಡಲು ಯಾವುದೇ ಅಡೆ ತಡೆ ಇಲ್ಲದೇ ಏರ್‌ಟೆಲ್ ಆ್ಯಪ್ ಅನ್ನು ಬಳಸಬಹುದು. ಅಷ್ಟೇ ಅಲ್ಲದೇ ನೀರು, ವಿದ್ಯುತ್‌ನಂಥ ಅಗತ್ಯ ಸೇವೆಗಳ ಬಿಲ್ ಅನ್ನೂ ಆನ್‌ಲೈನ್ ಮೂಲಕ ಪಾವತಿಸಬಹುದಾಗಿದ್ದು, ಅಗತ್ಯವಿರುವ ಸ್ನೇಹಿತರು ಹಾಗೂ ಬಂಧುಗಳಿಗೆ ಇದೇ Airtel Thanks App ಮೂಲಕ ಹಣವನ್ನೂ ಕಳುಹಿಸಬಹುದು.
ನೀವು ಇದುವರೆಗೂ ಆನ್‌ಲೈನ್ ವ್ಯವಹಾರ ಮಾಡದೇ ಹೋದರೆ, ಮಾಡಲು ಉತ್ಸುಕರಾಗಿದ್ದರೆ ನೆರವಾಗಲು ಈ ವೀಡಿಯೋ ವೀಕ್ಷಿಸಬಹುದು.
ಫಿಟ್‌ನೆಸ್ ಆ್ಯಂಡ್ ವರ್ಕ್‌ಔಟ್ಸ್
ಮನೆಯಲ್ಲಿಯೇ ಕೂತು ಆಫೀಸ್ ಕೆಲಸ ಮಾಡುವುದನ್ನು ಹೊರತು ಪಡಿಸಿ ಜನರು ಮನೆಯೊಳಗಿದ್ದು, ಯಾವುದೇ ರೀತಿಯ ದೈಹಿಕ ಹಾಗೂ ಮಾನಸಿಕ ಕಾರ್ಯಗಳಲ್ಲಿ ತೊಡಗಿಸಲು ಸಾಧ್ಯವಾಗುತ್ತಿಲ್ಲ. ಸಂತೋಷದ ವಿಷಯವೆಂದರೆ ಇಂಥವರಿಗಾಗಿಯೇ ಅನೇಕ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಯಾವುದೇ ಸಾಧನಗಳಿಲ್ಲದೇ, ಅಗತ್ಯವಿರುವ ದೈಹಿಕ ವ್ಯಾಯಾಮಗಳನ್ನು ಮನೆಯಲ್ಲಿಯೇ ಕುಳಿತು ಮಾಡಲು ಈ ಆ್ಯಪ್‌ಗಳಲ್ಲಿ ಕಲಿಸಲಾಗುತ್ತದೆ. ಹೃದಯಕ್ಕೆ ಸಂಬಂಧಿಸಿದ ವ್ಯಾಯಾಮಗಳು, ಯೋಗ, ಧ್ಯಾನ, ಕಡಿಮೆ ಸಮಯದಲ್ಲಿ ಹೆಚ್ಚು ಪರಿಣಾಮ ಬೀರುವಂಥ ಕಸರತ್ತುಗಳು ಮತ್ತು ಹತ್ತು ಹಲವುಗಳನ್ನು ಯೋಗಾಭ್ಯಾಸಗಳನ್ನು ಈ ಆ್ಯಪ್ ಹೇಳಿ ಕೊಡುತ್ತವೆ. ಮಕ್ಕಳು ತಮ್ಮ ಸ್ನೇಹಿತರೊಂದಿಗೆ ಹೊರ ಹೋಗಿ ಆಡುವಂಥ ಪರಿಸ್ಥಿತಿ ಇಲ್ಲದ ಕಾರಣ, ಅವರಿಗೂ ಟೈಮ್ ಪಾಸ್ ಮಾಡುವಂಥ ಹಲವು ವ್ಯಾಯಾಮಗಳನ್ನು ಆ್ಯಪ್ ಮೂಲಕ ಕಲಿಯಬಹುದಾಗಿದೆ. ಅಂಥವುಗಳಲ್ಲಿ ಕ್ಯೂರ್.ಫಿಟ್, 30 ಡೇ ಫಿಟ್‌ನೆಸ್ ಚಾಲೆಂಜ್ ಮತ್ತು ಸ್ಟೆಪ್ ಸೆಟ್ ಗೋ ಪ್ರಮುಖವಾದವು.
ಔಷಧಿಗಳು
ಲಾಕ್‌ಡೌನ್ ಸಮಯದಲ್ಲಿ ಜನರಿಗೆ ಸಿಗಬೇಕಾದ ಅಗತ್ಯ ವಸ್ತುಗಳಲ್ಲಿ ಸರಕಾರ ಔಷಧಿಗಳನ್ನು ಪ್ರಮುಖವಾಗಿ ಸೇರಿಸಿದೆ. ಮೆಡ್‌ಪ್ಲಸ್, ಮೆಡ್‌ಲೈಫ್ ಮತ್ತು ಫಾರ್ಮಸಿಯಂಥ ಆನ್‌ಲೈನ್ ಸೇವೆ ನೀಡುವ ಕಂಪನಿಗಳು ನಿಮ್ಮ ಮನೆ ಬಾಗಿಲಿಗೇ ಅಗತ್ಯ ಔಷಧಿಗಳನ್ನು ಹಾಗೂ ಇತರೆ ಅಗತ್ಯ ವಸ್ತುಗಳಾದ ಸ್ಯಾನಿಟೈಸರ್ ಹಾಗೂ ಮಾಸ್ಕ್‌ಗಳನ್ನು ತಲುಪಿಸಲು ಕಂಕಣಬದ್ಧವಾಗಿವೆ. ಅಲ್ಲದೇ ಯಾರ ಸಂಪರ್ಕವೂ ಇಲ್ಲದೇ, ಸಾಮಾಜಿಕ ಅಂತರ ಕಾಯ್ದಕೊಂಡು ಮಾಡಬಹುದಾದ ವ್ಯವಹಾರಗಳಿವು.
ಮನೋರಂಜನೆ ಮತ್ತು ಕ್ರೀಡೆ
ಮನೆಯಲ್ಲಿಯೇ ಇರಬೇಕಾದ ಸಂದರ್ಭದಲ್ಲಿ ಮನೆಯವರನ್ನು ಹೆಚ್ಚು ಖುಷಿಯಾಗಿಡುವಂಥ ಮತ್ತೊಂದು ವ್ಯವಸ್ಥೆ ಎಂದರೆ ಮನೋರಂಜನೆ. ಈಗಾಗಲೇ ಒಟಿಟಿ ಸೇವೆ ಒದಗಿಸುವ ನೆಟ್‌ಫ್ಲಿಕ್ಸ್ ಮತ್ತು ಅಮೇಜಾನ್ ಪ್ರೈಮ್‌ನಂಥವು ತಮ್ಮ ಸಬ್‌ಸ್ಕ್ರೈಬರ್ಸ್ ಸಂಖ್ಯೆಯನ್ನು ಲಾಕ್‌ಡೌನ್ ಸಂದರ್ಭದಲ್ಲಿ ಹೆಚ್ಚಿಸಿಕೊಂಡಿವೆ. ಅಲ್ಲದೇ ಇದೀಗ ಗೇಮಿಂಗ್‌ನಲ್ಲಿಯೂ ಹಿಂದೆಂದಿಗಿಂತಲೂ ದುಪ್ಪಟ್ಟು ಸಮಯವನ್ನು ಕಳೆಯುತ್ತಿದ್ದಾರೆ. ಇದು ಕೇವಲ ಎಕ್ಸ್‌ಬಾಕ್ಸ್ ಮತ್ತು ಪ್ಲೇ ಸ್ಟೇಷನ್‌ನಂಥ ಸಾಧನಗಳನ್ನು ಬಳಸುವುದರಲ್ಲಿ ಮಾತ್ರವಲ್ಲ, ಬದಲಾಗಿ ಮೊಬೈಲ್ ಹಾಗೂ ಡೆಸ್ಕ್‌ಟಾಪ್ಸ್ ಮೂಲಕವೂ ಜನರು ಹೆಚ್ಚು ಸಮಯವನ್ನು ಗೇಮಿಂಗ್‌ನಲ್ಲಿ ವ್ಯಯಿಸುತ್ತಿದ್ದಾರೆ. ಡೆಸ್ಟಿನಿ, ಕೌಂಟರ್‌ಸ್ಟ್ರೈಕ್ ಮತ್ತು ಪಬ್‌ಜಿಯಂಥ ಆನ್‌ಲೈನ್ ಆಟಗಳು ಹೆಚ್ಚೆಚ್ಚು ಜನಪ್ರಿಯವಾಗುತ್ತಿವೆ. ಇವಗಳ ಬಳಕೆದಾರರು ವಿಪರೀತ ಹೆಚ್ಚಾಗಿದ್ದಾರೆ. ಇವುಗಳನ್ನು ಬಳಸುವುದು ಹೇಗೆ ಎಂಬ ಚಿಂತೆ ಇದ್ದರೆ ನಿಮ್ಮ ಸ್ನೇಹಿತರ ಆನ್‌ಲೈನ್‌ನಲ್ಲಿ ಶಿಫಾರಸು ಮಾಡಿರುವ ಚಿತ್ರಗಳು, ವೆಬ್ ಸೀರಿಸ್ ಮತ್ತು ಕೆಲವು ಆಟಗಳನ್ನು ಟ್ರೈ ಮಾಡಬಹುದು.
ನಮ್ಮ ಸುರಕ್ಷತೆ ದೃಷ್ಟಯಿಂದ ಈ ಕಷ್ಟದ ಕಾಲದಲ್ಲಿ ಲಾಕ್‌ಡೌನ್ ಘೋಷಿಸಿದ್ದು, ಅತ್ಯಗತ್ಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕಾಗಿದೆ. ಮನೆಯಲ್ಲಿಯೇ ಒಬ್ಬರಿದ್ದು ಹುಚ್ಚಾರಾಗೋದು ಗ್ಯಾರಂಟಿ ಎಂದು ನಿಮಗೆ ಎನಿಸಿರಬಹುದು. ಆದರೆ, ಇಂಥ ಆನ್‌ಲೈನ್ ಸೇವೆಗಳು ಜೀವನನ್ನು ಸರಳ ಹಾಗೂ ಸುಲಭ ಮಾಡುತ್ತಿರುವುದಕ್ಕೆ ಚಿರಋಣಿಯಾಗಿರಬೇಕು. ಅಲ್ಲದೇ ಈ ಸಂದರ್ಭವನ್ನು ನಮ್ಮವರೊಂದಿಗೆ ಫೋನಿನಲ್ಲಿ ಮಾತನಾಡಿ, ಆರೋಗ್ಯ ವಿಚಾರಿಸಿ ಎಲ್ಲರೂ ಸುರಕ್ಷಿತವಾಗಿ, ಆರೋಗ್ಯವಾಗಿದ್ದಾರೆಂದು ತಿಳಿದುಕೊಳ್ಳುವ ಅವಕಾಶವಿದು.