Asianet Suvarna News Asianet Suvarna News

Love Horoscope: ಈ ರಾಶಿಯವರು ಪ್ರಪೋಸ್ ಮಾಡಬೇಡಿ; ಲವ್ ಫೇಲ್ ಆಗುವ ಸಾಧ್ಯತೆ ಇದೆ..!

ಈ ವಾರ ನಿಮ್ಮ ರಾಶಿಗೆ ಅನುಗುಣವಾಗಿ ಪ್ರೀತಿ ಹಾಗೂ ದಾಂಪತ್ಯ ಜೀವನದ ಹೇಗಿರಲಿದೆ? ಪ್ರೀಯಿಯಲ್ಲಿ ಯಾವ ಪ್ರಮುಖ ನಿರ್ಧಾರಗಳನ್ನು ನೀವು ಮಾಡಬಹುದು? 24ನೇ ಜುಲೈ‌ನಿಂದ 30ನೇ ಜುಲೈ 2023ರವರೆಗೆ ನಿಮ್ ಪ್ರೀತಿ ಭವಿಷ್ಯ ಹೀಗಿರಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

Weekly Love Horoscope from 24th July to 30th July 2023 suh
Author
First Published Jul 23, 2023, 10:00 AM IST

ಮೇಷ ರಾಶಿ  (Aries) :   ಈ ವಾರ ನೀವು ಯಾರನ್ನಾದರೂ ಪ್ರೀತಿಸುತ್ತೀರಿ, ಆದರೆ ನಿಮ್ಮ ಭಾವನೆಗಳನ್ನು ಅವರಿಗೆ ತಿಳಿಸಲು ಸಾಧ್ಯವಾಗಲ್ಲ. ಇದರಿಂದ ನಿಮ್ಮ ಸಂತೋಷ ಹಾಳಾಗಲಿದೆ.
ನಿಮ್ಮ ವೈವಾಹಿಕ ಜೀವನದಲ್ಲಿ ನಕರಾತ್ಮಕ ಚಿಂತನೆ ನಿಮ್ಮಿಬ್ಬರ ನಡುವಿನ ಸಂಬಂಧವನ್ನು ಹಾಳು ಮಾಡುತ್ತದೆ.

ವೃಷಭ ರಾಶಿ  (Taurus):  ಈ ವಾರ ಅದೃಷ್ಟದ ಮನೆಯಲ್ಲಿ ಶುಕ್ರನ ಉಪಸ್ಥಿತಿಯಿಂದಾಗಿ, ಈ ರಾಶಿಯವರು ಪ್ರೀತಿಯಲ್ಲಿ ಬೀಳುತ್ತಾರೆ. ಪ್ರೇಮಿಯೊಂದಿಗೆ ಮುಕ್ತವಾಗಿ ಸಂವಹನ ನಡೆಸಲು ಸಾಧ್ಯವಾಗುತ್ತದೆ. ವಿವಾಹಿತರು ಈ ವಾರ ತಮ್ಮ ಸಂಗಾತಿಯೊಂದಿಗೆ ಉತ್ತಮವಾಗಿ ಇರಲಿದ್ದಾರೆ. ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವಿನ ಸಂಬಂಧವು ಸುಧಾರಿಸುತ್ತದೆ, ಜನರು ಸಹ ನಿಮ್ಮನ್ನು ಗೌರವಿಸುತ್ತಾರೆ.

ಮಿಥುನ ರಾಶಿ (Gemini) :   ಪ್ರೀತಿಯ ಜಾತಕದ ಪ್ರಕಾರ ನಿಮ್ಮ ನಡುವೆ ಪರಸ್ಪರ ತಿಳುವಳಿಕೆ ಇರುತ್ತದೆ. ಈ ವಾರ ನೀವು ಒಬ್ಬರಿಗೊಬ್ಬರು ಉತ್ತಮ ಉಡುಗೊರೆಗಳನ್ನು ನೀಡುತ್ತೀರಿ. ಒಟ್ಟಿಗೆ ನೀವು ಲಾಂಗ್ ಡ್ರೈವ್ ಸಹ ಹೋಗಬಹುದು. ಒಟ್ಟಾರೆಯಾಗಿ, ಈ ವಾರ ನಿಮಗೆ ಪ್ರೀತಿಯ ಜೀವನಕ್ಕೆ ಉತ್ತಮವಾಗಿರುತ್ತದೆ.

ಕಟಕ ರಾಶಿ  (Cancer) :   ಈ ವಾರ ಪ್ರೀತಿಯಲ್ಲಿರುವ ಜನರು ಮುಕ್ತತೆಯನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಪ್ರೇಮಿಯೊಂದಿಗೆ ಉತ್ತಮ ಸಂಭಾಷಣೆ ಇರಲಿದೆ. ಈ ವಾರ ಸಂಗಾತಿಯೊಂದಿಗೆ ಸುತ್ತಾಡಲು ಅವಕಾಶವನ್ನು ಪಡೆಯುವಿರಿ. ನಿಮ್ಮ ಸಂಗಾತಿಯೊಂದಿಗೆ ನೀವು ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಬಹುದು.

ಶ್ರಾವಣದಲ್ಲಿ ಉಪವಾಸ; ಇದರ ಹಿಂದಿನ ವೈಜ್ಞಾನಿಕ ಸತ್ಯವೇನು ಗೊತ್ತಾ..?

 

ಸಿಂಹ ರಾಶಿ  (Leo) :  ಪ್ರಣಯಕ್ಕೆ ಈ ವಾರ ಸಾಮಾನ್ಯಕ್ಕಿಂತ ಉತ್ತಮವಾಗಿದೆ. ಏಕೆಂದರೆ ನಿಮ್ಮ ಪ್ರೇಮಿ ನಿಮ್ಮ ಮುಂದೆ ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಿದ್ದಾನೆ, ಹಿಂದಿನ ಪ್ರತಿ ವಿವಾದವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿದ್ದಾನೆ. ಈ ವಾರ ನಿಮ್ಮ ಜೀವನದಲ್ಲಿ ಇಂತಹ ಹಲವು ಸನ್ನಿವೇಶಗಳು ಎದುರಾಗಬಹುದು. ನಿಮ್ಮ ವೈವಾಹಿಕ ಜೀವನದಲ್ಲಿ ಮಾಧುರ್ಯ ಇರಲಿದೆ.

ಕನ್ಯಾ ರಾಶಿ (Virgo) : ನೀವು ಯಾರನ್ನಾದರೂ ನಿಜವಾಗಿಯೂ ಪ್ರೀತಿಸುತ್ತಿದ್ದರೆ, ನಿಮಗೆ ನಿರಾಸೆ ಆಗಲಿದೆ. ಇದರಿಂದ ನೀವು ಏಕಾಂಗಿಯಾಗಿ ಸಮಯ ಕಳೆಯುವಿರಿ. ಇದರಿಂದ ನಿಮಗೆ ತುಮಭಾ ಸಮಸ್ಯೆ ಆಗಲಿದೆ. ನಿಮ್ಮ ವೈವಾಹಿಕ ಜೀವನವು ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಸಾಗಲಿದೆ. ಇದರಿಂದಾಗಿ ನಿಮ್ಮ ಮನಸ್ಸು ವಿಚಲಿತಗೊಳ್ಳುತ್ತದೆ.

ತುಲಾ ರಾಶಿ (Libra) :  ಕೆಲವು ವೈಯಕ್ತಿಕ ಕೆಲಸಗಳಿಂದಾಗಿ ನಿಮ್ಮ ಪ್ರೇಮಿ ನಿಮ್ಮಿಂದ ದೂರವಾಗಬೇಕಾಗಬಹುದು. ಈ ಸಮಯದಲ್ಲಿ ಅವರು ಫೋನ್‌ನಲ್ಲಿಯೂ ಸಹ ನಿಮ್ಮೊಂದಿಗೆ ಸರಿಯಾಗಿ ಸಂವಹನ ನಡೆಸಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಪ್ರೀತಿಯ ಅನುಪಸ್ಥಿತಿಯಲ್ಲಿ, ನೀವು ಸಂಪೂರ್ಣವಾಗಿ ಒಂಟಿತನವನ್ನು ಅನುಭವಿಸುವಿರಿ.

ವೃಶ್ಚಿಕ ರಾಶಿ (Scorpio) :   ಈ ಸಮಯದಲ್ಲಿ ನಿಮ್ಮ ಸಂಗಾತಿಯೊಂದಿಗೆ ನೀವು ಪ್ರಾಮಾಣಿಕರಾಗಿದ್ದರೆ ಅದು ಉತ್ತಮವಾಗಿರುತ್ತದೆ. ನಿಮ್ಮಿಬ್ಬರ ನಡುವೆ ಏನಾದರೂ ಸಮಸ್ಯೆ ಇದ್ದರೆ, ಪರಸ್ಪರ ಮಾತನಾಡುವ ಮೂಲಕ ಅದನ್ನು ಪರಿಹರಿಸಿ. ಈ ವಾರ ನಿಮ್ಮ ವೈವಾಹಿಕ ಜೀವನವು ನಿಮಗೆ ಬಹಳಷ್ಟು ಸಂತೋಷವನ್ನು ತರಲಿದೆ.

ಧನು ರಾಶಿ (Sagittarius):  ನಿಮ್ಮ ಮತ್ತು ನಿಮ್ಮ ಪ್ರೀತಿಪಾತ್ರರ ನಡುವೆ ಯಾವುದೇ ವಿವಾದಗಳಿದ್ದರೆ, ಅದು ಈ ವಾರ ಬಗೆಹರಿಯುತ್ತದೆ. ಇದರಿಂದ ನಿಮಗೆ ಅನೇಕ ಘಟನೆಗಳು ಸಂಭವಿಸುತ್ತವೆ. ಮದುವೆಯ ಸಮಯದಲ್ಲಿ ಮಾಡಿದ ಎಲ್ಲಾ ಭರವಸೆಗಳು ನಿಜವೆಂದು ನೀವು ಭಾವಿಸುವಿರಿ. ಅವರನ್ನು ನೀವು ಕುರುಡಾಗಿ ನಂಬಬಹುದು.

ಮಕರ ರಾಶಿ (Capricorn) :   ಈ ವಾರ ಪ್ರೀತಿಯಲ್ಲಿ ಬೀಳುವ ಈ ರಾಶಿಚಕ್ರದವರು ತಮ್ಮ ಪ್ರೀತಿಯನ್ನು ತಮ್ಮ ಪ್ರೇಮಿಗೆ ತೋರಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಾರೆ. ಇದರಿಂದ ನಿಮ್ಮ ಸಂಗಾತಿ ನಿಮ್ಮನ್ನು ಇಷ್ಟಪಡುತ್ತಾರೆ. ಈ ಸಮಯದಲ್ಲಿ ಇಬ್ಬರು ನಿಮ್ಮದೇ ಆದ ಜಗತ್ತಿನಲ್ಲಿ ಕಳೆದುಹೋಗುವಿರಿ.

ಹೆಂಗಸರ ಬೆನ್ನಿನ ಮೇಲೆ ಹಲ್ಲಿ ಬಿದ್ರೆ ಸಾವು; ಕೆಂಡಸಂಪಿಗೆ ಸೀರಿಯಲ್ ನೋಡಿಲ್ವಾ..?

 

ಕುಂಭ ರಾಶಿ (Aquarius):   ಈ ವಾರದ ಆರಂಭದಲ್ಲಿ ನಿಮ್ಮ ಪ್ರೇಮಿಯನ್ನು ಪ್ರವಾಸಕ್ಕೆ ಕರೆದೊಯ್ಯುವುದಾಗಿ ಹೇಳಿದ್ದರೆ, ಅದು ನಡೆಯಲ್ಲ. ಈ ಕಾರಣದಿಂದಾಗಿ ನಿಮ್ಮ ಪ್ರೇಮಿ ನಿಮ್ಮ ಮೇಲೆ ಕೋಪಗೊಳ್ಳಬಹುದು. ಹಾಗೆಯೇ ಇದರಿಂದ ನಿಮ್ಮಿಬ್ಬರ ನಡುವೆ ದೊಡ್ಡ ಜಗಳ ಆಗುವ ಸಾಧ್ಯತೆ ಇದೆ. ಈ ವಾರ ನೀವು ತುಂಬಾ ಏಕಾಂಗಿಯಾಗಿ ಕಾಣುತ್ತೀರಿ.

ಮೀನ ರಾಶಿ  (Pisces):   ನಿಮ್ಮ ಪ್ರೇಮಿಯನ್ನು ತುಂಬಾ ದಿನಗಳ ನಂತರ ಮೀಟ್ ಆಗುವಿರಿ. ನಿಮ್ಮ ಪ್ರೀತಿಯ ಸಂಗಾತಿಯೊಂದಿಗೆ ಆತ್ಮೀಯ ಕ್ಷಣಗಳನ್ನು ಕಳೆಯುವ ಅವಕಾಶ ಸಿಗಲಿದೆ. ನಿಮ್ಮ ಹೆಚ್ಚಿನ ಸಮಯವನ್ನು ಮನೆಯಲ್ಲಿ ಕಳೆಯಿರಿ.

Follow Us:
Download App:
  • android
  • ios