ಮೇಷ:

ಲಾಭ ನಷ್ಟದ ಲೆಕ್ಕಾಚಾರ ಬೇಡ. ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡಿ. ಮಕ್ಕಳ ಬಗ್ಗೆ ಎಚ್ಚರ ಇರಲಿ. ಸದುದ್ದೇಶಕ್ಕಾಗಿ ನಿಮ್ಮದೂ ಒಂದು ಸೇವೆ ಸಲ್ಲಿಕೆಯಾಗಲಿದೆ. ಗೊಂದಲಗಳಿಂದ ದೂರ ಉಳಿಯಿರಿ. ಹಿರಿಯರ ಕುರಿತು ಗೌರವ ಇರಲಿ. ನಿಮ್ಮ ಅಹಂಕಾರಕ್ಕೆ ಪೆಟ್ಟು ಬೀಳಲಿದೆ. ವಾರಾಂತ್ಯಕ್ಕೆ ಶುಭ ಸುದ್ದಿ ತಿಳಿಯಲಿದೆ.

ವೃಷಭ;

ವದಂತಿಗಳಿಗೆ ಕಿವಿ ನೀಡಬೇಡಿ. ಸೂಕ್ತ ವ್ಯಕ್ತಿಗಳಿಂದ ಬಂದ ಸಲಹೆಯನ್ನು ಪಾಲಿಸಿ. ಭವಿಷ್ಯದ ಬಗ್ಗೆ ಆತಂಕ ಬೇಡ. ನಿಮ್ಮ ದೃಢ ಮನಸ್ಸಿನಿಂದ ಎಲ್ಲವನ್ನೂ ಗೆಲ್ಲಬಹುದು. ನಿಮ್ಮ ಧೈರ್ಯದಿಂದ ಇಡೀ ಕುಟುಂಬ ನೆಮ್ಮದಿಯಿಂದ ಇರಲಿದೆ. ಓದುವ ಹವ್ಯಾಸ ಹೆಚ್ಚಿಸಿಕೊಳ್ಳಿ.

ಮಿಥುನ;

ನಿಮ್ಮ ಶಕ್ತಿಯ ಬಗ್ಗೆ ನೀವು ತಿಳಿದುಕೊಳ್ಳಲು ಇದು ಸಕಾಲ. ಧ್ಯಾನಸ್ಥ ಸ್ಥಿತಿಯನ್ನು ಸಿದ್ಧಿಸಿಕೊಳ್ಳಲಿದ್ದೀರಿ. ಸಕಾರಾತ್ಮಕ ಚಿಂತನೆಗಳು ಹೆಚ್ಚಾಗಲಿವೆ. ದೊಡ್ಡ ಸವಾಲುಗಳಿಗೆ ಈ ವಾರ ತೆರೆದುಕೊಳ್ಳಲಿದ್ದೀರಿ. ಹಾಸಿಗೆ ಇದ್ದಷ್ಟಕ್ಕೆ ಮಾತ್ರ ಕಾಲು ಚಾಚಿರಿ. ತಾಳ್ಮೆ ಇರಲಿ.

ಕಟಕ;

ಮನಸ್ಸು ಮರ್ಕಟನಂತೆ. ಅದನ್ನು ಹಿಡಿತಕ್ಕೆ ತೆಗೆದುಕೊಂಡರೆ ನೆಮ್ಮದಿ ದೊರೆಯುತ್ತದೆ. ಮಡದಿ, ಮಕ್ಕಳೊಂದಿಗೆ ಮೃದುವಾಗಿ ವರ್ತಿಸಿ, ಗೃಹಿಣಿಯರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಮಕ್ಕಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಿರಿ. ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರ ಇರಲಿ.

ಕೊರೋನಾ ಮಹಾಮಾರಿ ಓಡಿಸಲು ಶೃಂಗೇರಿ ಶ್ರೀಗಳಿಂದ ದೇವಿ ಸ್ತೋತ್ರ

ಸಿಂಹ;

ನಿಮ್ಮಿಂದ ಸಮಾಜಕ್ಕೆ ಅನುಕೂಲವಾದರೆ ಮಾಡಿ, ಇಲ್ಲದೇ ಇದ್ದರೆ ಸುಮ್ಮನೆ ಇದ್ದುಬಿಡಿ. ಅನಾವಶ್ಯಕವಾಗಿ ಗೊಂದಲ ಉಂಟು ಮಾಡುವುದು ಬೇಡ. ಮಹಿಳೆಯರು ಮನೆಯ ಸ್ವಚ್ಛತೆಗೆ ಆಧ್ಯತೆ ನೀಡಲಿದ್ದಾರೆ. ನಿಮ್ಮ ನಿಮ್ಮ ಕೆಲಸ ಕಾರ್ಯಗಳನ್ನು ನೀವೇ ಮಾಡಿಕೊಳ್ಳಿರಿ.

ಕನ್ಯಾ;

ಪುಸ್ತಕ ಓದುವ, ಸಿನಿಮಾ ನೋಡುವ ಹವ್ಯಾಸ ಇಂದು ಉಪಯೋಗಕ್ಕೆ ಬರಲಿದೆ. ಸಮಯ ಸಿಕ್ಕಿದೆ ಎಂದು ಅದನ್ನು ಪೋಲು ಮಾಡಿಕೊಳ್ಳುವುದು ಬೇಡ. ಸೂಕ್ತ ರೀತಿಯಲ್ಲಿ ಸಮಯವನ್ನು ಬಳಕೆ ಮಾಡಿಕೊಳ್ಳಿ. ಮನಸ್ಸಿನ ಶಾಂತಿ ತುಸು ಕೆಟ್ಟರು, ಶೀಘ್ರವಾಗಿ ಎಲ್ಲವೂ ಸರಿಯಾಗಲಿದೆ.

ತುಲಾ;

ಪ್ರಭುತ್ವದ ಮಾತಿಗೆ ಬೆಲೆ ನೀಡಿ. ಸಣ್ಣ ಪುಟ್ಟ ಸಮಸ್ಯೆಗಳನ್ನು ದೊಡ್ಡದು ಮಾಡಿಕೊಳ್ಳುವುದು ಬೇಡ. ಮಕ್ಕಳ ವಿಚಾರದಲ್ಲಿ ಚಿಂತೆ ಮಾಡಬೇಡಿ, ಅವರ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡಿ. ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಿರಿ. ಇಡೀ ಕುಟುಂಬದೊಂದಿಗೆ ಸಮಯ ಕಳೆಯಿರಿ.

ವೃಶ್ಚಿಕ;

ಯಾವುದೇ ಸುದ್ದಿ ತಿಳಿದ ತಕ್ಷಣ ಅದರ ಬಗ್ಗೆ ಪರಾಮರ್ಶೆ ಮಾಡದೇ ಮತ್ತೊಬ್ಬರೊಂದಿಗೆ ಹಂಚಿಕೆ ಮಾಡಿಕೊಳ್ಳಬೇಡಿ. ಕಷ್ಟದ ಕಾಲದಲ್ಲಿ ನಿಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿ. ಆರೋಗ್ಯ ಕೆಟ್ಟಿದೆ ಎನ್ನುವ ಅನಾವಶ್ಯಕ ಗೊಂದಲ ಬೇಡವೇ ಬೇಡ.

ಇಂಥಾ ಕಷ್ಟದ ಟೈಮ್‌ನಲ್ಲೂ ಅದೃಷ್ಟವಿರುವ ಐದು ರಾಶಿಗಳು

ಧನುಸ್ಸು;

ಸಾಮಾಜಿಕ ಜಾಲತಾಣಗಳಿಂದ ಅಂತರ ಕಾಯ್ದುಕೊಂಡರೆ ಒಳಿತು. ನಿಮ್ಮ ಮನಸ್ಸನ್ನು ಶಾಂತವಾಗಿ ಇಡುವ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ. ದೈಹಿಕ ಶ್ರಮ ಬೇಡುವ ಒಂದಷ್ಟು ಕೆಲಸ ಕಾರ್ಯ ಮಾಡಿರಿ. ದಿನಗೂಲಿ ನೌಕರರು ಆರೋಗ್ಯದ ಕಡೆಗೆ ಗಮನ ನೀಡಿ.

ಮಕರ;

ಸಮುದಾಯದ ಆರೋಗ್ಯಕ್ಕಾಗಿ ನಿಮ್ಮ ಸೇವೆ ಅತ್ಯಗತ್ಯ. ಮತ್ತೊಬ್ಬರಿಂದ ಹೇಳಿಸಿಕೊಳ್ಳದೇ ನಿಮ್ಮ ಕರ್ತವ್ಯಗಳನ್ನು ನೀವು ಮಾಡಿ. ಕೆಲಸದ ಹೊರೆ ಕಡಿಮೆಯಾದರೂ ಮಾನಸಿಕ ಒತ್ತಡ ಅಧಿಕವಾಗಲಿದೆ. ಮನಸ್ಸನ್ನು ಶುದ್ಧವಾಗಿ ಇಟ್ಟುಕೊಂಡು ಮುಂದೆ ಸಾಗಿ.

ಕುಂಭ;

ನಿಮ್ಮಿಂದ ಸಾಧ್ಯವಾದಷ್ಟು ಮಂದಿಗೆ ಸಹಾಯ ಮಾಡಿ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಮಾನವೀಯತೆಯೊಂದೇ ಎಲ್ಲರನ್ನೂ ಕಾಪಾಡುವ ಸಂಜೀವಿನಿ. ದೂರದಲ್ಲಿ ಉಳಿದಿರುವ ಮಕ್ಕಳ ಬಗ್ಗೆ ಚಿಂತೆ ಬೇಡ. ಭಯ ಬಿಟ್ಟು, ಎಚ್ಚರಿಕೆಯಿಂದ ನಡೆದುಕೊಳ್ಳುವುದು ಒಳಿತು.

ಮೀನ;

ನಾಳೆಗಳು ಹೇಗೋ ಎನ್ನುವ ಆತಂಕ ಬೇಡ. ಇಂದಿನ ದಿನವನ್ನು ಆರೋಗ್ಯಕರವಾಗಿ ಇರಿಸಿಕೊಂಡರೆ ನಾಳೆಯೂ ಸುಂದರವಾಗಿ ಇರುತ್ತದೆ. ಸಾಧಾರಣವಾದ ಆರೋಗ್ಯ ಸಮಸ್ಯೆಗಳಿಗೆ ಮನೆ ಮದ್ದನ್ನು ಉಪಯೋಗಿಸಿ. ಗೊಂದಲಗಳಿಗೆ ಎಡೆ ಮಾಡಿಕೊಡಬೇಡಿ.