ಕೊರೋನಾ ಮಹಾಮಾರಿ ಓಡಿಸಲು ಶೃಂಗೇರಿ ಶ್ರೀಗಳಿಂದ ದೇವಿ ಸ್ತೋತ್ರ

ಶಂಕರಾಚಾರ್ಯರು ಸನಾತನ ಧರ್ಮದ ಸಾರವನ್ನು ತಮ್ಮ ಸಿದ್ಧಾಂತಗಳಲ್ಲಿ ಬೋಧಿಸಿ, ಸೌಂದರ್ಯ ಲಹರಿ ಮುಂತಾದ ಸ್ತೋತ್ರಗಳನ್ನು ರಚಿಸಿ ಭಕ್ತರಿಗೆ ನೀಡಿ, ಮೂರ್ತಿಪೂಜೆಯ ಸ್ವರೂಪವನ್ನು ನಿರ್ಧರಿಸಿ ಭಕ್ತರಿಗೆ ನೀಡಿ- ಧರ್ಮದ ಉಳಿವಿಗೆ ಕಾರಣಕರ್ತರಾದರು. ಈಗ ಅದೇ ಪೀಠದ ಶ್ರೀಗಳು ಈ ಮಹಾಮಾರಿಯ ನಿವಾರಣೆಯ ಸಂಕಲ್ಪಕ್ಕಾಗಿ ಈ ಸ್ತೋತ್ರವನ್ನು ನೀಡಿದ್ದಾರೆ.

Sringeri seer creates Sri Durgaparameshwari stotram to  fight corona

ಕೊರೋನಾ ವೈರಸ್‌ ಹಾವಳಿ ಹೆಚ್ಚಾಗುತ್ತಿದೆ. ವೈದ್ಯರು ಅದನ್ನು ಗುಣಪಡಿಸಲು, ವಿಜ್ಞಾನಿಗಳು ಇದನ್ನು ತಡೆಗಟ್ಟಲು ಸಾಕಷ್ಟು ಪ್ರಯತ್ನ ಮಾಡುತ್ತಾ ಇದ್ದಾರೆ. ಈ ಮಧ್ಯೆ, ದೇವಾಲಯಗಳು ಮುಚ್ಚಿವೆ. ಆದರೆ ಧಾರ್ಮಿಕ ಸ್ಥಳಗಳು, ಮಠಗಳು, ಕೊರೋನಾ ಓಡಿಸಲು ತಾವೇನು ಮಾಡಬಹುದು ಎಂಬ ನಿಟ್ಟಿನಲ್ಲಿ ಸಕ್ರಿಯವಾಗಿವೆ. ಇದರಲ್ಲಿ ಶೃಂಗೇರಿಯ ಶಂಕರಮಠವೂ ಒಂದು. ಶೃಂಗೇರಿಯ ಶ್ರೀ ಭಾರತೀ ತೀರ್ಥ ಸ್ವಾಮಿಗಳು ವಯೋವೃದ್ಧರು ಹಾಗೂ ಜ್ಞಾನವೃದ್ಧರು. ಆಧ್ಯಾತ್ಮಿಕ ಸಾಧನೆಯಲ್ಲಿ ಇವರಿಗೆ ದೊಡ್ಡ ಖ್ಯಾತಿ ಇದೆ. ಎಲ್ಲ ಗಣ್ಯರು, ರಾಜಕೀಯ ಭೇದ ಮೀರಿ ಇವರನ್ನು ಭೇಟಿಯಾಗಿ ಆಶೀರ್ವಾದ ಪಡೆಯುವುದೇ ಇವರ ಉನ್ನತ ವ್ಯಕ್ತಿತ್ವಕ್ಕೆ ನಿದರ್ಶನ. ಇಂಥ ಶ್ರೀಗಳು ಈಗ ಕೊರೋನಾ ಕಾಯಿಲೆಯ ನಿವಾರಣೆಯನ್ನು ಮಾಡುವಂತೆ ಶ್ರೀ ದುರ್ಗಾಪರಮೇಶ್ವರಿ ದೇವಿ ಸ್ತೋತ್ರವನ್ನು ರಚಿಸಿ, ಅದನ್ನು ತಾವೂ ಪಾರಾಯಣ ಮಾಡುವುದಲ್ಲದೆ, ನಿತ್ಯ ಪಾರಾಯಣ ಮಾಡುವಂತೆ ಭಕ್ತರಿಗೆ ಸೂಚಿಸಿದ್ದಾರೆ.

 

ಶಾರ್ವರಿ ಸಂವತ್ಸರದ ಮಹತ್ವ, ಯುಗಾದಿ ಆಚರಣೆ ಹೇಗಿರಬೇಕು?

 

ಶ್ರೀ ಶೃಂಗೇರಿ ಪೀಠಕ್ಕೆ ಈ ದೇಶವನ್ನೇ ಅನೇಕ ಸಂಕಟಗಳಿಂದ ಪಾರು ಮಾಡಿದ ಚರಿತ್ರೆ ಇದೆ ಎಂಬುದನ್ನು ನೆನಪಿಡಬೇಕು. ಶೃಂಗೇರಿಯ ಶಕ್ತಿಪೀಠ, ಮಹಿಮಾನ್ವಿತೆ ಶ್ರೀ ದುರ್ಗಾ ಲಲಿತಾಂಬಿಕೆಯು ಒಲಿದ ಶ್ರೀ ಆದಿ ಶಂಕರಾಚಾರ್ಯರು ರಚಿಸಿದ ಶಕ್ತಿಪೀಠಗಳಲ್ಲಿ ಒಂದು. ಶಂಕರಾಚಾರ್ಯರು ಹುಟ್ಟಿ ಬೆಳೆಯುತ್ತಿದ್ದ ಕಾಲದಲ್ಲಿ ಭಾರತದಲ್ಲಿ ಹಿಂದೂ ಧರ್ಮ ನಾಶವಾಗುತ್ತ, ಅನ್ಯ ಧರ್ಮಗಳು ಆಕ್ರಮಿಸಿಕೊಳ್ಳುತ್ತ ಇದ್ದವು. ಆಗ ಶಂಕರಾಚಾರ್ಯರು ಸನಾತನ ಧರ್ಮದ ಸಾರವನ್ನು ತಮ್ಮ ಸಿದ್ಧಾಂತಗಳಲ್ಲಿ ಬೋಧಿಸಿ, ಸೌಂದರ್ಯ ಲಹರಿ ಮುಂತಾದ ಸ್ತೋತ್ರಗಳನ್ನು ರಚಿಸಿ ಭಕ್ತರಿಗೆ ನೀಡಿ, ಮೂರ್ತಿಪೂಜೆಯ ಸ್ವರೂಪವನ್ನು ನಿರ್ಧರಿಸಿ ಭಕ್ತರಿಗೆ ನೀಡಿ- ಧರ್ಮದ ಉಳಿವಿಗೆ ಕಾರಣಕರ್ತರಾದರು. ಈಗ ಅದೇ ಪೀಠದ ಶ್ರೀಗಳು ಈ ಮಹಾಮಾರಿಯ ನಿವಾರಣೆಯ ಸಂಕಲ್ಪಕ್ಕಾಗಿ ಈ ಸ್ತೋತ್ರವನ್ನು ನೀಡಿದ್ದಾರೆ.

 

ಭಾರತ ದೇಶವನ್ನು ಅನೇಕ ಮುಸ್ಲಿಂ ದೊರೆಗಳು ಆಳಿದ್ದರು. ಅವರೆಲ್ಲರೂ ಶೃಂಗೇರಿ ಶ್ರೀಗಳ ಭಕ್ತರಾಗಿದ್ದುದನ್ನು ಇಲ್ಲಿ ಉಲ್ಲೇಖಿಸಬೇಕು. ಹೊರಗಿನಿಂದ ಘಜನಿ, ಘೋರಿ ಮುಂತಾದ ಮುಸ್ಲಿಂ ರಾಜರುಗಳು ದಾಳಿ ಮಾಡಿದರೂ ಶೃಂಗೇರಿ ಮಠ ಹಾಗೂ ಮಠದ ಭಕ್ತರಿಗೆ ಯಾವುದೇ ಹಾನಿ ಆಗಿರಲಿಲ್ಲ. ಮೈಸೂರಿನ ಆಳರಸನಾಗಿದ್ದ ಟಿಪ್ಪು ಸುಲ್ತಾನ್‌ ಕೂಡ ಶೃಂಗೇರಿ ಮಠಕ್ಕೆ ದತ್ತಿ ಕೊಟ್ಟದ್ದು, ಶ್ರೀಗಳಿಗೆ ನಮಿಸಿದ್ದುದನ್ನು ಇಲ್ಲಿ ನೆನಪಿಸಬಹುದು. ಶೃಂಗೇರಿಯ ಶ್ರೀಗಳು ಅಷ್ಟು ಪ್ರಭಾವಶಾಲಿ ಹಾಗೂ ಆಧ್ಯಾತ್ಮಿಕ ಸಾಧನಾಪಥದ ಸಾಧಕರು.

 

ಹೊಸ ವರ್ಷದಾರಂಭ: ಹೇಗಿದೆ ನಿಮ್ಮ ಭವಿಷ್ಯ? ಯಾರಿಗೆ ಸಿಹಿ, ಯಾರಿಗೆ ಕಹಿ?

 

ಶ್ರೀಗಳು ರಚಿಸಿಕೊಟ್ಟಿರುವ ಈ ಸ್ತೋತ್ರದ ಸಂಕಲ್ಪ ಹೀಗಿದೆ: ''ಅಧುನಾ ಸರ್ವತ್ರ ಜಗತಿ ಪ್ರಸರತಃ ಜನಾನಾಂ ಪ್ರಾಣಾಪಾಯಕರಸ್ಯ ಕೊರೊನಾ ನಾಮಕಸ್ಯ ರೋಗವಿಶೇಷಸ್ಯ ನಿವಾರಣಾರ್ಥಂ, ಶೃಂಗೇರಿ ಜಗದ್ಗುರು ವಿರಚಿತ ಶ್ರೀ ದುರ್ಗಾ ಪರಮೇಶ್ವರೀ ಸ್ತೋತ್ರ ಪಾರಾಯಣಂ ಕರಿಷ್ಯೇ.'' ಪ್ರತಿದಿನ ಸಂಜೆ ಅಥವಾ ಮುಂಜಾನೆ, ಮಿಂದು ಶುಚಿರ್ಭೂತರಾಗಿ, ದೇವರ ಸನ್ನಿಧಿಯಲ್ಲಿ ಕುಳಿತು ಈ ಸ್ತೋತ್ರವನ್ನು ಎಷ್ಟು ಸಾಧ್ಯವೋ ಅಷ್ಟು ಬಾರಿ ಪಠನ ಮಾಡಬೇಕು. ಬರೆಯಲು ಸಾಧ್ಯವಾದರೆ ಬರೆಯಬಹುದು. ನೂರೆಂಟು ಬಾರಿ ಮಾಡಿದರೆ ಉತ್ತಮ. ಇದರ ಜೊತೆಗೆ, ಮೃತ್ಯುಂಜಯ ಜಪ, ಧನ್ವಂತರಿ ಜಪ, ವಿಷ್ಣು ಸಹಸ್ರನಾಮ ಹಾಗೂ ಲಲಿತಾ ಸಹಸ್ರನಾಮಗಳನ್ನು ಪಾರಾಯಣ ಮಾಡುವುದು ಉತ್ತಮ ಎಂದು ಶ್ರೀಗಳು ಹಾಗೂ ಮಠದ ಹಿರಿಯ ವಿದ್ವಾಂಸರು ಸೂಚಿಸಿದ್ದಾರೆ.

Sringeri seer creates Sri Durgaparameshwari stotram to  fight corona

 

ಈ ಪಾರಾಯಣದ ಸಂಕಲ್ಪ ಹೀಗೆ: "ಕೊರೋನಾ ರೂಪ ಮೃತ್ಯುಕಾರಕ ಮಹಾರೋಗಬಾಧಾ ಅಪುನಾರಾವರ್ತಿರೂಪೇಣ ನಿವಾರಣಾರ್ಥಂ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ದುರ್ಗಾಪರಮೇಶ್ವರಿ ಸ್ತೋತ್ರ, ವಿಷ್ಣು ಸಹಸ್ರನಾಮ ಪಾರಾಯಣಂ ಕರಿಷ್ಯೇ ಎಂದು ಪಾರಾಯಣ ಆರಂಭಿಸಬೇಕು. "ಅನೇನ ದುರ್ಗಾಪರಮೇಶ್ವರಿ ಸ್ತೋತ್ರ, ವಿಷ್ಣು ಸಹಸ್ರನಾಮ ಪಾರಾಯಣ ಕರ್ಮಣಾ ಶ್ರೀ ಪರಮೇಶ್ವರಃ ಪ್ರೀಯತಾಂ'' ಎಂದು ಭಗವಂತನಿಗೆ ಅರ್ಪಿಸಬೇಕು. ಪರಮೇಶ್ವರನು ಲಯಕರ್ತನಾಗಿರುವುದರಿಂದ ಅವನನ್ನು ಒಲಿಸುವುದು ಈ ಹಂತದಲ್ಲಿ ಅಗತ್ಯ. ಶ್ರೀ ದುರ್ಗಾಪರಮೇಶ್ವರಿಯ ಎಲ್ಲ ಬಾಧೆಗಳ ನಿಯಂತ್ರಕಳು ಆಗಿರುವುದರಿಂದ, ಮಹಾವಿಷ್ಣುವು ಸ್ಥಿತಿಪಾಲನೆಯ ಮೂರ್ತಿ ಆಗಿರುವುದರಿಂದ ಅವರ ಪಾರಾಯಣವು ಅಗತ್ಯವಾಗಿದೆ.

 

ತಿಳಿಯ ಬನ್ನಿ ಶೃಂಗೇರಿ ಮಹಾತ್ಮೆ

 

ಮಠದ ವೆಬ್‌ಸೈಟಿನಲ್ಲಿ ಅಪ್ಲೋಡ್ ಆಗಿರುವ ಶ್ರೀಗಳು ರಚಿಸಿಕೊಟ್ಟಿರುವ ಸ್ತೋತ್ರ ಹೀಗಿದೆ:

 

ಏತಾವಂತಂ ಸಮಯಂ

ಸರ್ವಾಪದ್ಬ್ಯೋಪಿ ರಕ್ಷಣಂ ಕೃತ್ವಾ

ದೇಶಸ್ಯ ಪರಮಿದಾನೀಂ

ತಾಟಸ್ಥ್ಯಂ ವಹಸಿ ದುರ್ಗಾಂಬ

 

ಅಪರಾಧಾ ಬಹುಶಃ ಖಲು

ಪುತ್ರಾಣಾಂ ಪ್ರತಿಪದಂ ಭವನ್ತ್ಯೇವ

ಕೋ ವಾ ಸಹತೇ ಲೋಕೇ

ಸರ್ವಾಂಸ್ತಾನ್ಮಾತರಂವಿಹಾಯೈಕಾಮ್‌

 

ಮಾ ಭಜ ಮಾ ಭಜ ದುರ್ಗೇ

ತಾಟಸ್ಥ್ಯಂ ಪುತ್ರಕೇಷು ದಿನೇಷು

ಕೇ ವಾ ಗೃಹ್ಣಂತಿ ಸುತಾನ್‌

ಮಾತ್ರಾ ತ್ಯಕ್ತಾನ್ವದಾಂಬಿಕೇ ಲೋಕೇ

 

ಇತಃ ಪರಂ ವಾ ಜಗದಂಬ ಜಾತು

ದೇಶಸ್ಯ ರೋಗಪ್ರಮುಖಾಪದೋಸ್ಯ

ನ ಸ್ಯುಸ್ತಥಾ ಕುರ್ವಚಲಾಂ ಕೃಪಾಮ್‌

ಇತ್ಯಭ್ಯರ್ಥನಾಂ ಮೇ ಸಫಲೀಕುರುಷ್ವ

 

ಪಾಪಹೀನಜನತಾವನದಕ್ಷಾಃ

ಸಂತಿ ನಿರ್ಜರವರಾ ನ ಕಿಯಂತಃ

ಪಾಪಪೂರ್ಣಜನರಕ್ಷಣದಕ್ಷಾಂ

ತ್ವಾಂ ವಿನಾ ಭುವಿ ಪರಾಂ ನ ಲೋಕೇ

Latest Videos
Follow Us:
Download App:
  • android
  • ios