Asianet Suvarna News Asianet Suvarna News

ವಾರ ಭವಿಷ್ಯ: ಅನಿರೀಕ್ಷಿತ ಘಟನೆಯಿಂದ ತಳಮಳ, ಹತ್ತಿರದ ಬಂಧುಗಳಿಂದ ದೂರವಿರಿ!

ಈ ವಾರದ ಭವಿಷ್ಯ, ಯಾರಿಗೆ ಶುಭ? ಯಾರಿಗೆ ಒಳಿತು? ಇಲ್ಲಿದೆ ನೋಡಿ ರಾಶಿ ಫಲ

Weekly Horoscope Of March 22nd In Kannada
Author
Bangalore, First Published Mar 22, 2020, 6:54 AM IST

ಮೇಷ: ರೈತಾಪಿ ವರ್ಗಕ್ಕೆ ತುಸು ಸಂಕಷ್ಟ. ನಿಮ್ಮ ಕಾರ್ಯವನ್ನು ಹೆಚ್ಚಿನ ಸಂಖ್ಯೆಯ ಜನರು ಮೆಚ್ಚಿಕೊಳ್ಳಲಿದ್ದಾರೆ. ಉಳಿತಾಯದ ಹಣ ಬಳಕೆಯಾಗಲಿದೆ. ಆಲೋಚಿಸಿ ನಿರ್ಧಾರಗಳನ್ನು ತೆಗೆದು ಕೊಳ್ಳಿ. ಅತಿಯಾದ ಆಸೆ ಒಳ್ಳೆಯದಲ್ಲ. ಮದುವೆಯ ವಿಚಾರದಲ್ಲಿ ನಿಧಾನಿಸುವುದು ಒಳ್ಳೆಯದು.

ವೃಷಭ: ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿ. ಬಹು ದಿನಗಳ ಕನಸು ನನಸಾಗಲಿದೆ. ಸಂಬಂಧಗಳ ಬಗ್ಗೆ ಎಚ್ಚರಿಕೆ ಇರಲಿ. ರಾಜಕಾರಣಿಗಳ ಜೀವನದಲ್ಲಿ ದೊಡ್ಡ ತಿರುವು ಏರ್ಪಡಲಿದೆ. ಹಿಂದಿನ ನಿರಂತರವಾದ ಪರಿ ಶ್ರಮಕ್ಕೆ ಒಳ್ಳೆಯ ಪ್ರತಿಫಲ ಸಿಗಲಿದೆ. ಸೇವಾ ಮನೋಭಾವ ಹೆಚ್ಚಾಗಲಿದೆ. ಸೂಕ್ತವಾದ ನಿರ್ಧಾರದಿಂದ ಶುಭವಾಗಲಿದೆ.

ಮಿಥುನ: ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಗೊಂದಲ ಉಂಟಾಗಲಿದೆ. ಆದರೆ ಇದು ಕ್ಷಣಿಕ ಮಾತ್ರ. ಹಿಂದಿನ ಕೆಲಸ ಕಾರ್ಯಗಳು ಕೈಗೂಡಲಿವೆ. ವಿನಾಕಾರಣ ಕೋಪಬೇಡ. ಅಪರಿಚಿತರ ಭೇಟಿಯಿಂದ ಒಳ್ಳೆಯ ಲಾಭ ದೊರೆಯಲಿದೆ. ಗ್ರಹ ದೋಷಗಳ ನಿವಾರಣೆಯಾಗಲಿದೆ. ಆರೋಗ್ಯದಲ್ಲಿ ತುಸು ಏರುಪೇರು.

ಕಟಕ: ಮಾಡುವ ಕೆಲಸಗಳಲ್ಲಿ ನಿರೀಕ್ಷಿತ ಫಲ ದೊರೆ ಯಲಿದೆ. ಆರೋಗ್ಯದಲ್ಲಿ ತುಸು ಏರುಪೇರು. ಆತಂಕಪಡುವ ಅಗತ್ಯವಿಲ್ಲ. ಉಳಿತಾಯಕ್ಕೆ ಹೆಚ್ಚಿನ ಆದ್ಯತೆ ನೀಡಿ. ದೊಡ್ಡ ಕಾರ್ಯಗಳನ್ನು ಮಾಡುವ ಮುನ್ನ ಯೋಚಿಸಿ. ಮಹಿಳೆಯರಿಗೆ ಆರ್ಥಿಕವಾಗಿ ಮುನ್ನಡೆ ಸಾಧ್ಯವಾಗಲಿದೆ. ವಿದ್ಯಾರ್ಥಿಗಳಿಗೆ ಶುಭ.

ಈ ರಾಶಿಯವರಿಗೆ ಕೊರೋನಾ ಭಾರಿ ಡೇಂಜರು!

ಸಿಂಹ: ಚಿನ್ನಾಭರಣಕೊಳ್ಳುವ ಸಾಧ್ಯತೆ ಇದೆ. ಉಳಿತಾಯದ ಕಡೆಗೆ ಆಸಕ್ತಿ ವಹಿಸುವಿರಿ. ಮಕ್ಕಳ ಆರೋಗ್ಯದ ಕಡೆ ಗಮನವಿರಲಿ. ಹೊಸ ವಾಹನ ಕೊಳ್ಳುವ ಯೋಗ. ಮನೆಯಲ್ಲಿ ಶುಭ ಕಾರ್ಯಗಳು ಮುಂದೂಡಲ್ಪಡಲಿವೆ. ಅಧಿಕಾರದ ಸ್ಥಾನದಲ್ಲಿರುವವರು ಸಮಾಜಮುಖಿ ಕಾರ್ಯಗಳನ್ನು ಮಾಡುವಿರಿ.

ಕನ್ಯಾ: ಅನಾವಶ್ಯಕ ಗೊಂದಲಗಳಿಗೆ ಮಣೆ ಹಾಕುವುದು ಬೇಡ. ಆದಾಯದಲ್ಲಿ ಇಳಿಕೆ ಕಂಡುಬರಲಿದೆ. ಹೊಸ ವಿಚಾರಗಳತ್ತ ಮನಸ್ಸು ಹರಿಯಲಿದೆ. ಉದ್ಯೋಗದಲ್ಲಿ ಹಿನ್ನಡೆ. ಸಂಗಾತಿಯೊಂದಿಗೆ ಪ್ರೀತಿಯಿಂದ ವರ್ತಿಸಿ. ದೀರ್ಘ ಕಾಲದ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಆರೋಗ್ಯದ ಕಡೆ ನಿಗಾ ಇರಲಿ.

ತುಲಾ: ಬಂಧುಗಳಿಂದ ಸಹಾಯ. ಉದ್ಯೋಗದಲ್ಲಿ ಪ್ರಗತಿ. ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿ. ಕೆಟ್ಟ ಆಲೋಚನೆಗಳಿಂದ ಹೊರಬರುವಿರಿ. ಆರ್ಥಿಕ ವಾಗಿ ತುಸು ನಷ್ಟವಾಗಲಿದೆ. ಲೆಕ್ಕಾಚಾರದ ಕಡೆಗೆ ಹೆಚ್ಚು ಗಮನ ನೀಡಿ. ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ. ಹೆತ್ತವರ ಸಹಾಯದಿಂದ ಮಾನಸಿಕ ನೆಮ್ಮದಿ.

ವೃಶ್ಚಿಕ: ಕೆಲಸದಲ್ಲಿ ಆಸಕ್ತಿ ಇರಲಿ. ಹತ್ತಿರದ ಬಂಧು ಗಳೊಂದಿಗೆ ವ್ಯವಹಾರ ಬೇಡ. ಉದ್ಯೋಗದಲ್ಲಿ ಒಳ್ಳೆಯ ಬೆಳವಣಿಗೆಯಾಗಲಿದೆ. ಹೊಸ ಮನೆ ಕೊಳ್ಳುವವರಿಗೆ ಇದು ಸಕಾಲವಲ್ಲ. ಉಳಿತಾಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿ. ಗಂಡ ಹೆಂಡತಿಯರ ಕಲಹ ದೂರವಾಗಲಿದೆ. ದೂರದ ಪ್ರಯಾಣ ಬೇಡ.

ಸೆಲೆಬ್ರಿಟಿಗಳೇಕೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಶ್ಲೇಷ ಬಲಿ ಮಾಡಿಸ್ತಾರೆ?

ಧನುಸ್ಸು: ಹಣಕಾಸಿನ ವ್ಯವಹಾರದಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಿ. ಪ್ರೀತಿ ಪಾತ್ರರಿಂದ ಸಿಹಿ ಸುದ್ದಿ ಕೇಳುವಿರಿ. ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸುವಿರಿ. ಸಿನಿಮಾರಂಗದವರಿಗೆ ಅವಕಾಶಗಳು ಕಡಿಮೆ. ಮಿತವ್ಯಯಕ್ಕೆ ಒತ್ತು ನೀಡಿ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಇರಲಿ.

ಮಕರ:ಅನಿರೀಕ್ಷಿತ ಘಟನೆಗಳಿಂದ ತಳಮಳ. ಮಾಡಿದ ಕೆಲಸಕ್ಕೆ ಪ್ರಶಂಸೆ ದೊರೆಯಲಿದೆ. ಕೆಲಸದಲ್ಲಿ ಪ್ರಗತಿ ಕಂಡು ಬರಲಿದೆ. ಹಿತೈಷಿಗಳಿಂದ ಸಹಾಯ. ಆರೋಗ್ಯದ ಬಗ್ಗೆ ಸೂಕ್ತ ಎಚ್ಚರಿಕೆ ವಹಿಸಿ. ಹಳೆಯ ಸಾಲಗಳು ವಾಪಸ್ಸಾಗುವ ಸಾಧ್ಯತೆ ಕಡಿಮೆ.

ಕುಂಭ: ಹಣಕಾಸಿನ ತೊಂದರೆಗೆ ಸಿಲುಕಿಕೊಳ್ಳಲಿದ್ದೀರಿ.ಉದ್ಯೋಗ ಬದಲಾವಣೆ ಸಾಧ್ಯತೆ. ದೂರದ ಪ್ರಯಾಣ ಮಾಡುವ ಅನಿವಾರ್ಯತೆ ಬಂದರೂ ಅದನ್ನು ತಿರಸ್ಕರಿಸಿ. ಬಂಧುಗಳೊಂದಿಗೆ ಉತ್ತಮ ಸಂಬಂಧ. ಮಕ್ಕಳ ಶೈಕ್ಷಣಿಕ ಪ್ರಗತಿಯಿಂದ ನೆಮ್ಮದಿ. ಪೂರ್ವ ನಿರ್ಧಾರಿತ ಕಾರ್ಯಕ್ರಮಗಳಲ್ಲಿ ವ್ಯತ್ಯಯ.

ಮೀನ: ಹಣಕಾಸಿನ ವಿಚಾರದಲ್ಲಿ ಒಳ್ಳೆಯದಾಗಲಿದೆ. ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗುವಿರಿ. ಹೆಚ್ಚು ಹೆಚ್ಚು ವಿಚಾರಗಳನ್ನು ತಿಳಿದುಕೊಳ್ಳುವಿರಿ.
ತಂದೆಯಿಂದ ಆರ್ಥಿಕ ಸಹಕಾರ. ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನವಿರಲಿ. ಶುಭ ಫಲ ದೊರೆ ಯಲಿದೆ. ಹೊಸ ಆಲೋಚನೆಗಳು ಮೂಡಲಿವೆ.

Follow Us:
Download App:
  • android
  • ios