Asianet Suvarna News Asianet Suvarna News

Weekly Horoscope: ಕುಂಭ ರಾಶಿಗೆ ಈ ವಾರ ಅನಿರೀಕ್ಷಿತ ಧನ ಲಾಭ

ದಿನಾಂಕ 9ರಿಂದ 15 ಜನವರಿ 2022ರವರೆಗಿನ ವಾರ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ? ಯಾವ ರಾಶಿಗೆ ಎಚ್ಚರ ಅಗತ್ಯ? ಯಾವ ರಾಶಿ ಬದಲಾವಣೆ ಕಾಣುತ್ತದೆ?
ಕಟಕಕ್ಕೆ ಖರ್ಚು ಹೆಚ್ಚು, ಮಕರಕ್ಕೆ ಅಭಿವೃದ್ಧಿ ಹೆಚ್ಚು

Weekly horoscope of January 9th to 15th 2022 in Kannada SKR
Author
Bangalore, First Published Jan 9, 2022, 9:18 AM IST
  • Facebook
  • Twitter
  • Whatsapp

ಮೇಷ(Aries)
ಅದೃಷ್ಟದಿಂದ ಧನಲಾಭ. ಕೆಲಸ ಕಾರ್ಯದಲ್ಲಿ ಶುಭ ಫಲ. ಸ್ವಂತ ಕೆಲಸದಲ್ಲಿ ಸಾಕಷ್ಟು ಅಭಿವೃದ್ಧಿ ಆಗುತ್ತದೆ. ಗುರುವಿನಿಂದ ಸಾಕಷ್ಟು ಒಳ್ಳೆಯ ಫಲಗಳಿವೆ. ಧನ ಲಾಭ(monetary gain) ಆಗಬೇಕು. ಸ್ವಲ್ಪ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು. ಕೊಂಚ ಆರೋಗ್ಯ ಸಮಸ್ಯೆ ಬರಬಹುದು. ಮಕ್ಕಳ ವಿದ್ಯಾಭ್ಯಾಸ(education)ದಲ್ಲಿ ಉತ್ತಮ ಪ್ರಗತಿಯಾಗುತ್ತದೆ. ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆ, ಉದ್ಯೋಗದಲ್ಲಿ ಉತ್ತಮ ಫಲಿತಾಂಶ ಪಡೆಯುತ್ತಾರೆ.

ವೃಷಭ(Taurus)
ಇಷ್ಟು ದಿನಗಳ ಸಮಸ್ಯೆ ಇದ್ದದ್ದನ್ನು ತಕ್ಕ ಮಟ್ಟಿಗೆ ಸರಿದೂಗಿಸಿಕೊಂಡು ಹೋಗುತ್ತೀರಿ. ಆದರೂ ಕಷ್ಟ ಹೆಚ್ಚುತ್ತಲೇ ಇದೆ ಅನಿಸಬಹುದು. ಇದು ತಾತ್ಕಾಲಿಕ. ಸಂಗಾತಿಯ ಆರೋಗ್ಯ(health)ದಲ್ಲಿ ಸಮಸ್ಯೆ ಉಂಟಾಗಬಹುದು. ಈ ವಾರದ ನಂತರ ಕುಜ ಮುಂದಿನ ರಾಶಿಯತ್ತ ಪಯಣ ಬೆಳೆಸುತ್ತಾನೆ. ಮನೆಯಲ್ಲಿ ಕಲಹ ಉಂಟಾಗಬಹುದು. ಧಾರ್ಮಿಕ ಕಾರ್ಯಗಳನ್ನು ಈ ವಾರ ಮಾಡುತ್ತೀರಿ.

ಮಿಥುನ(Gemini)
ಮಕ್ಕಳ ಬಗ್ಗೆ ತುಂಬ ಯೋಚನೆ ಮಾಡುತ್ತೀರಿ. ಮಕ್ಕಳ ಉದ್ಯೋಗ, ಓದಿನ ಬಗ್ಗೆ ಚಿಂತಿತರಾಗುವಿರಿ. ಮಿತ್ರ, ನೆರೆಹೊರೆಯವರಿಂದ ಸಾಕಷ್ಟು ಸಮಸ್ಯೆ ಆಗುತ್ತಿರಬಹುದು, ಆ ಬಗ್ಗೆ ಹುಷಾರಾಗಿರಿ. ದೀರ್ಘ ಕಾಲದ ಸಮಸ್ಯೆ ಸೃಷ್ಟಿ ಆಗಬಹುದು. ಕೆಲಸದಲ್ಲಿ ಸಮಸ್ಯೆ ಆಗಬಹುದು. ಮನಃಶಾಂತಿ ದೂರವಾಗಬಹುದು. ಮನಸ್ಸಿಗೆ ಬೇಸರ. ಈ ವಾರದಲ್ಲಿ ಮಾತನ್ನು ಕಡಿಮೆ ಆಡಿ. ಧರ್ಮ ಕಾರ್ಯಗಳನ್ನು ಮಾಡಿ.

Sabarimala temple: ಅಯ್ಯಪ್ಪ ದೀಕ್ಷೆ ಪಡೆದವರು ಹೊರುವ ಇರುಮುಡಿಯಲ್ಲಿ ಏನೆಲ್ಲ ಇರುತ್ತದೆ?

ಕಟಕ(Cancer)
ಓಡಾಟದಿಂದ ಖರ್ಚು ಜಾಸ್ತಿ ಆಗಬಹುದು. ಕೆಲಸ ಕಾರ್ಯಗಳಲ್ಲಿ ಚೆನ್ನಾದ ಅಭಿವೃದ್ಧಿ(Development) ಇದೆ. ಜೊತೆಗೆ ಉದ್ಯೋಗದ ಕಾರಣಕ್ಕೂ ಪ್ರಯಾಣ ಮಾಡುತ್ತೀರಿ. ದೇಹಕ್ಕೆ ಆಯಾಸ ಆಗಬಹುದು. ಹಣಕಾಸಿನ ವಿಚಾರದಲ್ಲಿ ಅಡೆತಡೆಗಳಾಗಬಹುದು. ಹಣದ ವಾಪಾಸಾತಿ ಆಗದೇ ಇರಬಹುದು. ಲೋನ್‌ನಲ್ಲೂ ತಡೆ ಉಂಟಾಗಬಹುದು. ಸ್ವಂತ ಉದ್ಯೋಗ(job) ಮಾಡುವವರಿಗೆ ನಿರೀಕ್ಷೆಗಳು ಸುಳ್ಳಾಗಬಹುದು.

Vastu Tips: ದಕ್ಷಿಣ ದಿಕ್ಕಿನ ಗುಡ್ ಲಕ್, ನೀವೂ ಟ್ರೈ ಮಾಡಿ

ಸಿಂಹ(Leo)
ಬಹಳಷ್ಟು ಸಮಸ್ಯೆ ಉಂಟಾಗಬಹುದು. ಒಪ್ಪಿಕೊಂಡ ಕೆಲಸ ಪೂರ್ಣಗೊಳಿಸಲು ಸಾಧ್ಯವಾಗದೇ ಹೋಗಬಹುದು. ಹೊಸ ಜವಾಬ್ದಾರಿಗಳ ನಿರ್ವಹಣೆ ಕಷ್ಟವಾಗಬಹುದು. ಶತ್ರುಗಳು(enemies) ಪಲಾಯನ ಮಾಡುತ್ತಾರೆ. ಬೆನ್ನು ನೋವು ಸಮಸ್ಯೆ ಜಾಸ್ತಿ ಆಗಬಹುದು. ಆರೋಗ್ಯದ ಬಗ್ಗೆ ಗಮನ ಹರಿಸಿ. ಧನ ಜಾಸ್ತಿ ಬರಲ್ಲ. ಹಣಕ್ಕಾಗಿ ಒದ್ದಾಟ ಉಂಟಾಗಬಹುದು. ಈ ವಾರ ನಿಮಗೆ ಸಾಧಾರಣ ವಾರ.

ಕನ್ಯಾ(Virgo)
ದುಡ್ಡನ್ನು ಯಾವುದಾದರೂ ಆಸ್ತಿಗೆ, ವಾಹನಕ್ಕೆ ಹೂಡಿಕೆ ಮಾಡುತ್ತೀರ. ಶುಕ್ರ ನಾಲ್ಕನೇ ಮನೆಯಲ್ಲಿರುವ ಕಾರಣ ಇದು ಸಾಧ್ಯವಾಗಬಹುದು. ಕೂಡಿಟ್ಟ ಹಣವನ್ನು ಆಸ್ತಿ ಖರೀದಿಗೆ ಬಳಸಬಹುದು. ವೈಭವಯುತ ಬದುಕನ್ನು ನಡೆಸುವುದು ಸಾಧ್ಯವಾಗುತ್ತದೆ. ಬರಬೇಕಾದ ಹಣ ಬರುತ್ತಾ ಹೋಗುತ್ತದೆ. ಆದರೆ ಹಣದ ಬಗ್ಗೆ ನಿರೀಕ್ಷೆ ಹೆಚ್ಚುತ್ತಾ ಹೋಗಬಹುದು. ಆರೋಗ್ಯದಲ್ಲಿ ಬಾಧೆಗಳು ಉಂಟಾಗಬಹುದು.

Chakras And Strength: ರಾಶಿ ಪ್ರಕಾರ, ಯಾವ ಚಕ್ರ ನಿಮಗೆ ಬಲ ತಂದು ಕೊಡಲಿದೆ?

ತುಲಾ(Libra)
ಸ್ವಲ್ಪ ಮಟ್ಟಿಗೆ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ. ಹಣಕಾಸಿನ ಮುಗ್ಗಟ್ಟು ಇರುತ್ತೆ. ಕೆಲಸಕ್ಕೆ ತಕ್ಕಂಥಾ ಪ್ರತಿಫಲ(reward) ಸಿಗದೇ ಇರುವ ಚಿಂತೆ ಇರುತ್ತದೆ. ಆದರೆ ಇನ್ನು ಸ್ವಲ್ಪ ದಿನದಲ್ಲಿ ಈ ಸಮಸ್ಯೆ ನಿವಾರಣೆ ಆಗಬಹುದು. ಬೆನ್ನುನೋವಿನಿಂದ ಬಳಲುವವರಿಗೆ ಅದು ಹೆಚ್ಚಾಗಬಹುದು. ಆಸ್ತಿಗೆ ಸಂಬಂಧಿಸಿದಂತೆ ಹೊಸ ಯೋಚನೆ ಮಾಡುತ್ತಾರೆ. ಅನೇಕ ಸಮಸ್ಯೆಗಳು ನಿವಾರಣೆ ಆಗಬಹುದು.

ವೃಶ್ಚಿಕ(Scorpio)
ನಿಮ್ಮ ಕೆಲಸಗಳಲ್ಲಿ ಅಡೆತಡೆಗಳು ಉಂಟಾಗಬಹುದು. ಕಷ್ಟಪಟ್ಟು ಕೆಲಸ ಮಾಡುತ್ತೀರಿ. ಆದರೆ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ. ಕೆಲವೊಮ್ಮೆ ಕೊನೆಯ ಕ್ಷಣದಲ್ಲಿ ತಡೆ ಉಂಟಾಗಬಹುದು. ಕುಟುಂಬದವರ ಸಹಕಾರ ಸಿಗುತ್ತದೆ. ಸ್ತ್ರೀಯರಿಂದ ಹೆಚ್ಚೆಚ್ಚು ಸಹಾಯ, ಧನ ಸಹಾಯ ಸಿಗಬಹುದು. ಕೆಲಸದಲ್ಲಿ ಇರುವ ಆತ್ಮವಿಶ್ವಾಸ(self confidence) ಹೆಚ್ಚಾಗಬಹುದು. ಮುಂಬರುವ ದಿನಗಳಲ್ಲಿ ಕೆಲಸದಲ್ಲಿ ಬಹಳ ಅಭಿವೃದ್ಧಿ ಆಗುತ್ತದೆ.

ಧನು(Sagitarius)
ನಿಮ್ಮ ಯೋಜನೆಗಳಿಗೆ ಹಣದ ಜರೂರತ್ತು ಹೆಚ್ಚಾಗುತ್ತದೆ. ಹಣಕ್ಕಾಗಿ ಈ ವಾರ ಓಡಾಟ ಹೆಚ್ಚಿರುತ್ತದೆ. ಆದರೆ ಇದರಿಂದ ಶುಭವಿದೆ. ಹಳೇ ಸಾಲ(debt) ವಾಪಾಸ್ ಬರಬಹುದು. ಸ್ವಂತ ಉದ್ಯೋಗ ಮಾಡುವವರಿಗೆ ಶುಭ ಫಲವಿದೆ. ವೇಗವಾಗಿ ಕೆಲಸಗಳು ಸಾಗುತ್ತವೆ. ಧನಲಾಭಗಳು ಉಂಟಾಗಬಹುದು. ಕುಟುಂಬದಲ್ಲಿ ವ್ಯಾಜ್ಯಗಳಿಗೆ ಸಂಬಂಧಿಸಿ ಮಾತುಕತೆ ಆಗಬಹುದು. ಆಸ್ತಿ ವಿಚಾರದಲ್ಲಿ ಲಾಭವಿದೆ.

ಮಕರ(Capricorn)
ಕೆಲಸ ಕಾರ್ಯಗಳಲ್ಲಿ ಉತ್ತಮ ಅಭಿವೃದ್ಧಿ ಇರುತ್ತದೆ. ಸ್ವಂತ ಉದ್ಯೋಗದಲ್ಲಿರುವವರಿಗೆ ಹಾಗೂ ಸರ್ಕಾರಿ ನೌಕರರಿಗೆ ಸಮಸ್ಯೆಗಳು ಕರಗಿ ಅಭಿವೃದ್ಧಿ ಹೆಚ್ಚಾಗುತ್ತದೆ. ಒಳ್ಳೆಯ ದಿನಗಳಿಂದ ಖುಷಿ ಹೆಚ್ಚಾಗಬಹುದು. ಶುಭ ಫಲ ಹೆಚ್ಚಿವೆ. ಹಣಕಾಸಿನ ಮುಗ್ಗಟ್ಟು ಕಡಿಮೆ ಆಗುತ್ತವೆ. ಅದೃಷ್ಟ, ದೈವಬಲ ನಿಮ್ಮ ಜೊತೆಗಿರುತ್ತದೆ. ಬಹಳ ದಿನದಿಂದ ಕಷ್ಟಪಟ್ಟ ಕೆಲಸಗಳು ಯಶಸ್ವಿಯಾಗುತ್ತವೆ. ಕೌಟುಂಬಿಕವಾಗಿಯೂ ಸಂತಸವಿದೆ.

ಕುಂಭ(Aquarius)
ಲಾಭಸ್ಥಾನದಲ್ಲಿ ಶುಕ್ರನಿದ್ದಾನೆ. ಹೀಗಾಗಿ ವ್ಯಾಪಾರ, ವ್ಯವಹಾರದಲ್ಲಿ ದೊಡ್ಡ ಮಟ್ಟದ ಲಾಭ(profit)ವನ್ನು ಪಡೆಯುತ್ತೀರಿ. ನಿರೀಕ್ಷೆ ಮಾಡಿಲ್ಲದಷ್ಟೂ ದೊಡ್ಡ ಆಕಸ್ಮಿಕವಾದ ಲಾಭ ಪಡೆಯುತ್ತೀರಿ. ಶುಭಫಲವಿದೆ. ಅಂದುಕೊಂಡ ಅನೇಕ ಕೆಲಸ ಕಾರ್ಯಗಳು ಬಹಳ ಅಭಿವೃದ್ಧಿಯಾಗುತ್ತವೆ. ಕೆಲಸದಲ್ಲಿ ಪ್ರಯಾಣ ಮಾಡಬೇಕಾಗಬಹುದು. ಸಂಗಾತಿಯಿಂದ ಬಹಳಷ್ಟು ಸಹಕಾರ ಸಿಗುತ್ತದೆ. ಕಾಲುನೋವಿನ ಬಾಧೆ ಬರಬಹುದು.

ಮೀನ(pieces)
ಈ ವಾರದಲ್ಲಿ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ. ಮನೆ, ಭೂಮಿ, ವಾಹನಗಳಿಗೆ ಸಂಬಂಧಿಸಿದ ಯೋಜನೆಗಳಲ್ಲಿ ಯಶಸ್ಸು(success) ಸಿಗುತ್ತದೆ. ವೃತ್ತಿಪರ ಕೆಲಸಗಳೂ ಅಂದುಕೊಂಡದ್ದಕ್ಕಿಂತ ಬೇಗ ಮುಗಿಯುತ್ತದೆ. ಆದರೆ ಕೋಪ, ತಾಪ ಕೊಂಚ ಕಾಡಬಹುದು. ತಾಳ್ಮೆಯ ಕೊರತೆಯಿಂದ ಸಮಸ್ಯೆ ಉಂಟಾಗಬಹುದು. ಸ್ವಂತ ಉದ್ಯೋಗ, ವ್ಯಾಪಾರ, ವ್ಯವಹಾರದಲ್ಲಿ ಲಾಭದಾಯಕ ಫಲಿತಾಂಶ ಕಾಣುವಿರಿ. 

Follow Us:
Download App:
  • android
  • ios