ಮೇಷ: ನಿಮ್ಮ ಕೆಲಸಕ್ಕೆ ಹಿರಿಯರಿಂದ ಮೆಚ್ಚುಗೆ ದೊರೆಯಲಿದೆ. ಅಲ್ಲದೇ ನಿಮ್ಮ ಆಲೋಚನೆಗಳಿಗೆ ಹೆಚ್ಚು ಬೆಂಬಲ ಲಭ್ಯವಾಗಲಿದೆ. ಹಣಕಾಸಿನ ವಿಚಾರದಲ್ಲಿ ಹೆಚ್ಚು ಹಿಡಿತವಿರಲಿ. ಅತಿಯಾದ ಆತ್ಮವಿಶ್ವಾಸ ಬೇಡ. ವಾರ ಪೂರ್ತಿ ಉತ್ಸಾಹದಿಂದ ಇರುವಿರಿ.

ವೃಷಭ: ಕೆಲಸಗಳು ಹೆಚ್ಚಾಗಲಿವೆ. ಆದರೆ ಅದರಿಂದ ಸದ್ಯಕ್ಕೆ ಯಾವುದೇ ಆದಾಯ ದೊರೆಯುವುದಿಲ್ಲ. ದೀರ್ಘಾವಧಿ ಯೋಜನೆಗಳಿಗೆ ವೇದಿಕೆ ಸಿದ್ಧವಾಗಲಿದೆ. ಮದುವೆ ಮೊದಲಾದ ಶುಭ ಕಾರ್ಯಗಳನ್ನು ಕೈಗೊಳ್ಳಲು ಇದು ಸಕಾಲ. ಮೃತ ಪಿತೃಗಳಿಗಳಿ ಸೂಕ್ತ ರೀತಿಯಲ್ಲಿ ಪಿಂಡ ಪ್ರಧಾನ ಮಾಡಿ. ಮಾತಿನಲ್ಲಿ ಹಿಡಿತವಿರಲಿ. 

ಮಿಥುನ: ಆರೋಗ್ಯದಲ್ಲಿ ಸ್ಥಿರತೆ ಏರ್ಪಡಲಿದೆ. ದೇವರ ಮೇಲಿನ ನಂಬಿಕೆ ಹೆಚ್ಚಾಗಲಿದೆ. ಮಾಡುವ ಪ್ರತಿ ಕೆಲಸವನ್ನೂ ತಾಳ್ಮೆಯಿಂದ ಮಾಡಿ. ಮಾತಿನಲ್ಲಿ ಸ್ಪಷ್ಟತೆ ಇರಲಿ. ಅಡ್ಡ ಗೋಡೆಯ ಮೇಲೆ ದೀಪವಿಟ್ಟ ಹಾಗೆ ಮಾತನಾಡುವುದು ಬೇಡ. ಶುಚಿತ್ವಕ್ಕೆ ಹೆಚ್ಚು ಆದ್ಯತೆ ನೀಡುವಿರಿ. ಬಂಧುಗಳಿಂದ ಆರ್ಥಿಕ ಸಹಕಾರ.

ಜುಲೈ ತಿಂಗಳಲ್ಲಿ ಜನಿಸಿದವರ ಸ್ವಭಾವ ಹೀಗಿರುತ್ತೆ

ಕಟಕ:  ಇರುವ ವ್ಯವಸ್ಥೆಯನ್ನೇ ಬಳಕೆ ಮಾಡಿಕೊಂಡು ದಿನ ದೂಡಿ. ಮನಸ್ಸಲ್ಲಿ ಇರುವ ಆಸೆಗಳನ್ನು ಒಂದಷ್ಟು ದಿನ ಕಟ್ಟಿ ಇಡುವುದು ಸೂಕ್ತ. ಹಿಂದೆ ಆಸಕ್ತಿ ಕಳೆದುಕೊಂಡ ವಿಷಯದಲ್ಲಿ ಇದೀಗ ಮತ್ತೆ ಆಸಕ್ತಿ ಹೆಚ್ಚಾಗಲಿದೆ. ಹೆಚ್ಚು ಸಕ್ರಿಯವಾಗಿ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದೀರಿ. ಧನಾಗಮನ.

ಸಿಂಹ: ಕೆಲಸದಲ್ಲಿ ಏಕಾಗ್ರತೆ ಹೆಚ್ಚಾಗಲಿದೆ. ದೈಹಿಕವಾಗಿ ಗಟ್ಟಿಯಾಗಲಿದ್ದೀರಿ. ಮನೆಯಲ್ಲಿ  ನೆಮ್ಮದಿ ನೆಲೆಸಲಿದೆ. ಮಹಿಳೆಯರ ಪಾಲಿಗೆ ಒಂದಷ್ಟು ಕೆಲಸಗಳು ಹೆಚ್ಚಾಗಲಿದೆ. ಅನಾವಶ್ಯಕವಾಗಿ ಪ್ರಯಾಣ ಮಾಡುವುದು ಬೇಡ, ಒಳಿತಾಗಲಿದೆ.

ಕನ್ಯಾ: ಮನೆಯಿಂದ ವಿನಾ ಕಾರಣ ಹೊರಗೆ ಬರುವ ಪ್ರವೃತ್ತಿ ಬೇಡ. ನಿಮ್ಮ ಒಳಿತಿಗಾಗಿ ತೆಗೆದುಕೊಂಡಿರುವ ಕ್ರಮಗಳನ್ನು ಸರಿಯಾಗಿ ಪಳಾನೆ ಮಾಡಿ. ದೊಡ್ಡ ಅಧಿಕಾರಿಗಳಿಂದ ನಿಮ್ಮ ಕಾರ್ಯಕ್ಕೆ ಪ್ರಶಂಸೆ ದೊರೆಯಲಿದೆ. ನಗುಮುಖದಿಂದಲೇ ಎಲ್ಲವನ್ನೂ ಗೆಲ್ಲಲಿದ್ದೀರಿ, ಆತಂಕಗಳು ದೂರವಾಗಲಿವೆ.

ತುಲಾ: ಶಕ್ತಿಯಿಂದ ಇದ್ದರೆ ಏನು ಬೇಕಾದರೂ ಗೆಲ್ಲಬಹುದು. ದೌರ್ಬಲ್ಯಕ್ಕೆ ತುತ್ತಾಗಿ ಹಾನಿ ಮಾಡಿಕೊಳ್ಳಬೇಡಿ. ಮನಸ್ಸಿನ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿ. ನಾಳೆಗಳು ಸುಂದರವಾಗಿರಲಿವೆ. ಅನಾವಶ್ಯಕವಾಗಿ ಅವಸರಕ್ಕೆ ಬೀಳುವುದು ಬೇಡ. ನಿಮ್ಮ ಆತಂಕವನ್ನು ಮತ್ತೊಬ್ಬರ ಮೇಲೆ ಹೇರಬೇಡಿ.

ವೃಶ್ಚಿಕ: ಅನಿರೀಕ್ಷಿತ ಘಟನೆಗಳಿಂದ ತಳಮಳ. ಮಾಡಿದ ಕೆಲಸಕ್ಕೆ ಪ್ರಶಂಸೆ ದೊರೆಯಲಿದೆ. ಕೆಲಸದಲ್ಲಿ ಪ್ರಗತಿ ಕಂಡು ಬರಲಿದೆ. ಹಿತೈಷಿಗಳಿಂದ ಸಹಾಯ. ಆರೋಗ್ಯದ ಬಗ್ಗೆ ಸೂಕ್ತ ಎಚ್ಚರಿಕೆ ವಹಿಸಿ. ಹಳೆಯ ಸಾಲಗಳು ವಾಪಸ್ಸಾಗುವ ಸಾಧ್ಯತೆ ಕಡಿಮೆ.

ಹಣ ಕೂಡಿಡುವುದರಲ್ಲಿ ಈ ರಾಶಿಯವರು ನಿಪುಣರು

ಧನುಸ್ಸು: ಬಂಧುಗಳಿಂದ ಸಹಾಯ. ಉದ್ಯೋಗದಲ್ಲಿ ಪ್ರಗತಿ. ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿ. ಕೆಟ್ಟ ಆಲೋಚನೆಗಳಿಂದ ಹೊರಬರುವಿರಿ. ಆರ್ಥಿಕ ವಾಗಿ ತುಸು ನಷ್ಟವಾಗಲಿದೆ. ಲೆಕ್ಕಾಚಾರದ ಕಡೆಗೆ ಹೆಚ್ಚು ಗಮನ ನೀಡಿ. ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ. ಹೆತ್ತವರ ಸಹಾಯದಿಂದ ಮಾನಸಿಕ ನೆಮ್ಮದಿ.

ಮಕರ: ಸಹನೆ, ವಿನಯ ನಿಮ್ಮ ಜೀವನದ ಗುರಿ ಮುಟ್ಟಿಸಲು ಸಹಕಾರಿಯಾಗಲಿದೆ. ಹಿರಿಯರಲ್ಲಿ ಗೌರವ ಹೆಚ್ಚಲಿದೆ. ಮಕ್ಕಳಿಗೆ ಓದಿನಲ್ಲಿ ಉತ್ತಮ ಬೆಳವಣಿಗೆ ಕಾಣಬಹುದು. ಮಹಿಳೆಯರಿಗೆ ಆರೋಗ್ಯದಲ್ಲಿ ಏರುಪೇರಾಗಬಹುದು. ಸೇವಿಸುವ ಆಹಾರದಲ್ಲಿ ಸ್ವಲ್ಪ ಹಿಡಿತ ಹಾಗೂ ಎಚ್ಚರವಹಿಸಿ.

ಕುಂಭ: ಮಾಡುವ ಕೆಲಸಗಳಲ್ಲಿ ನಿರೀಕ್ಷಿತ ಫಲ ದೊರೆ ಯಲಿದೆ. ಆರೋಗ್ಯದಲ್ಲಿ ತುಸು ಏರುಪೇರು. ಆತಂಕಪಡುವ ಅಗತ್ಯವಿಲ್ಲ. ಉಳಿತಾಯಕ್ಕೆ ಹೆಚ್ಚಿನ ಆದ್ಯತೆ ನೀಡಿ. ದೊಡ್ಡ ಕಾರ್ಯಗಳನ್ನು ಮಾಡುವ ಮುನ್ನ ಯೋಚಿಸಿ. ಮಹಿಳೆಯರಿಗೆ ಆರ್ಥಿಕವಾಗಿ ಮುನ್ನಡೆ ಸಾಧ್ಯವಾಗಲಿದೆ. ವಿದ್ಯಾರ್ಥಿಗಳಿಗೆ ಶುಭ.

ಮೀನ: ರೈತಾಪಿ ವರ್ಗಕ್ಕೆ ತುಸು ಸಂಕಷ್ಟ. ನಿಮ್ಮ ಕಾರ್ಯವನ್ನು ಹೆಚ್ಚಿನ ಸಂಖ್ಯೆಯ ಜನರು ಮೆಚ್ಚಿಕೊಳ್ಳಲಿದ್ದಾರೆ. ಉಳಿತಾಯದ ಹಣ ಬಳಕೆಯಾಗಲಿದೆ. ಆಲೋಚಿಸಿ ನಿರ್ಧಾರಗಳನ್ನು ತೆಗೆದು ಕೊಳ್ಳಿ. ಅತಿಯಾದ ಆಸೆ ಒಳ್ಳೆಯದಲ್ಲ. ಮದುವೆಯ ವಿಚಾರದಲ್ಲಿ ನಿಧಾನಿಸುವುದು ಒಳ್ಳೆಯದು.