Weekly Horoscope: ನಿಮ್ಮ ವೀಕ್‌ನೆಸ್ ಬಹಿರಂಗವಾಗಲಿದೆ; ಈ ರಾಶಿಯವರು ಎಚ್ಚರದಿಂದ ಇರಿ..!

ನಿಮ್ಮ ರಾಶಿಗೆ ಈ ವಾರ ಹೇಗಿರಲಿದೆ? ಯಾವ ಪ್ರಮುಖ ನಿರ್ಧಾರಗಳನ್ನು ನೀವು ಮಾಡಬಹುದು? ತಾರೀಖು 17 ಜುಲೈ‌ನಿಂದ 23 ಜುಲೈ 2023ರವರೆಗೆ ನಿಮ್ಮ ಭವಿಷ್ಯ ಹೀಗಿರಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

Weekly Horoscope from 17th July to 23rd July 2023 suh

ಮೇಷ ರಾಶಿ (Aries) :  ಈ ವಾರ ನಿಮ್ಮ ಪ್ರಣಯ ಜೀವನದಲ್ಲಿ ಬಹಳ ಸಂತೋಷ ಸಿಗಲಿದೆ. ನಿಮ್ಮ ಸಂಗಾತಿಯೊಂದಿಗೆ ಬಹಳಷ್ಟು ಪ್ರೀತಿ ಮತ್ತು ಕಾಳಜಿಯಿಂದ ಇರುವಿರಿ. ನಿಮ್ಮ ಸುತ್ತಲೂ ಅನುಕೂಲಕರ ವಾತಾವರಣ ಇರಲಿದೆ. ನೀವು ಹೆಚ್ಚು ಹೊಟ್ಟೆ ನೋವನ್ನು ಅನುಭವಿಸಬಹುದು.

ವೃಷಭ ರಾಶಿ (taurus) : ಸಾರ್ವಜನಿಕ ಸಂಪರ್ಕಗಳು ಮತ್ತು ಜಾಹೀರಾತು ಸಂಸ್ಥೆಗಳು ನಿಮಗೆ ಪ್ರಯೋಜನಕಾರಿಯಾಗಬಹುದು. ಈ ವಾರ ನಿಮಗೆ ಬಹಳಷ್ಟು
ಆರ್ಥಿಕ ಲಾಭ ಬರಬಹುದು. ವ್ಯಾಪಾರಸ್ಥರು ತಮ್ಮ ಗೆಳೆಯರ ಮಾತನ್ನು ಕೇಳಬೇಕು. ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯಗಳು ಹಗೆತನಕ್ಕೆ ಕಾರಣವಾಗಬಹುದು. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ.

ಮಿಥುನ ರಾಶಿ (Gemini) : ನಿಮ್ಮ ಕೆಲವು ಸಂಬಂಧದಲ್ಲಿ ಅನಗತ್ಯ ಅಡೆತಡೆಗಳು ಉಂಟುಮಾಡಬಹುದು. ಸಮಸ್ಯೆಗಳನ್ನು ನಿಭಾಯಿಸಲು ಚಾತುರ್ಯವನ್ನು ಬಳಸಬೇಕು. ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ, ಈ ವಾರ ನೀವು ತ್ವರಿತವಾಗಿ ಚೇತರಿಸಿಕೊಳ್ಳುವಿರಿ.

ಕಟಕ (Cancer):  ನಕಾರಾತ್ಮಕ ಆಲೋಚನೆಗಳಿಂದ ನಿಮ್ಮ ಗಮನ ಸರಿ ಇರಲ್ಲ. ನಿಮ್ಮ ಸುತ್ತಲ ವಾತಾವರಣವನ್ನು ಲವಲವಿಕೆಯಿಂದ ಇರಿಸಿಕೊಳ್ಳಿ. ಯೋಗ ಮತ್ತು
ವೈದ್ಯಕೀಯ ವಿದ್ಯಾರ್ಥಿಗಳಿಗೆ ಈ ವಾರ ಉತ್ತಮ. ನಿಮ್ಮ ಮಾನಸಿಕ ಆರೋಗ್ಯವನ್ನು ನೀವು ಕಾಳಜಿ ವಹಿಸಬೇಕು. ಈ ವಾರ ಉದ್ಯೋಗ, ಪೋಷಕರ ಅಥವಾ ಪ್ರಣಯ ಸಂಬಂಧಗಳ ಒತ್ತಡ ಇರಲಿದೆ. ಈ ವಾರ ಹೂಡಿಕೆ ಮಾಡಲು ಸೂಕ್ತ ಅಲ್ಲ.

ಚಂದ್ರ-ಬುಧ ಸಂಯೋಗ: ಜುಲೈನಲ್ಲಿ ಈ ಮೂರು ರಾಶಿಯವರಿಗೆ ಸಂಕಷ್ಟ..!

 

ಸಿಂಹ ರಾಶಿ (Leo): ಈ ವಾರ ನಿಮ್ಮ ಕೆಲವು ಸಂಬಂಧದಲ್ಲಿ ತಪ್ಪುಗ್ರಹಿಕೆಗಳು ಉಂಟಾಗಬಹುದು. ನೀವು ಹಿಂದಿನ ಹೂಡಿಕೆಗಳು ಮತ್ತು ವ್ಯಾಪಾರ ಚಟುವಟಿಕೆಗಳಿಂದ ಲಾಭ ಪಡೆಯಬಹುದು. ಈ ವಾರದಲ್ಲಿ ಸಹೋದ್ಯೋಗಿಗಳೊಂದಿಗೆ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಮುಂದಿನ ವಾರ ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ನೀವು ಬ್ಯಾಂಕ್ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.

ಕನ್ಯಾರಾಶಿ (Virgo): ಈ ವಾರ ಎಲ್ಲಾ ಸಂಬಂಧಗಳಿಗೆ ಸಾಮಾನ್ಯ ವಾರವಾಗಿರಬಹುದು. ಸರಿಯಾದ ಆಹಾರ, ವಿಶ್ರಾಂತಿ, ವ್ಯಾಯಾಮ ಮತ್ತು ಧ್ಯಾನವನ್ನು ಮಾಡಿ. ಒತ್ತಡ, ಅತಿಯಾದ ಆಲೋಚನೆ ಮತ್ತು ಆರೋಗ್ಯ ಸಮಸ್ಯೆಗಳನ್ನು ನಿಭಾಯಿಸಿ. ಕಾನೂನು ಮತ್ತು ವೈದ್ಯಕೀಯ ವೃತ್ತಿಪರರು ವಿಳಂಬವನ್ನು ಎದುರಿಸಬಹುದು.

ತುಲಾ ರಾಶಿ (Libra):  ನಿಮ್ಮ ಆತ್ಮ ವಿಶ್ವಾಸಕ್ಕೆ ಇಂದು ಉತ್ತಮ ದಿನವಾಗಿದೆ. ಒಂದು ಕೆಲಸ ಪೂರ್ಣಗೊಂಡಾಗ ಅತೀವ ಸಂತೋಷ ಆಗಲಿದೆ. ಮದುವೆಯಾಗುವ ಮೊದಲು ಹಿರಿಯರ ಒಪ್ಪಿಗೆಗೆ ಬಹಳ ಸಮಯ ಹಿಡಿಯಬಹುದು. ಈ ವಾರದ ಮೊದಲ ಭಾಗದಲ್ಲಿ ನೀವು ನರಗಳ ಸಮಸ್ಯೆಯನ್ನು ಎದುರಿಸಬಹುದು.

ವೃಶ್ಚಿಕ ರಾಶಿ (Scorpio):  ಈ ವಾರ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ನೀವು ಹೆಚ್ಚು ವ್ಯಾಯಾಮ ಮಾಡಬೇಕು. ವಿಶ್ರಾಂತಿ ಪಡೆಯಲು ಯೋಗವನ್ನು ಅಭ್ಯಾಸ ಮಾಡಿ ನಂತರ ಪ್ರಯಾಣಿಸಿ ಅಥವಾ ಸಂಗೀತವನ್ನು ಆಲಿಸಿ. ಈ ವಾರ ತಲೆನೋವು ಅಥವಾ ತೋಳು ನೋವು ಅನುಭವ ಇರಲಿದೆ.

ಧನು ರಾಶಿ (Sagittarius): ಈ ವಾರ ನಿಮ್ಮ ವೈಯಕ್ತಿಕ ಜೀವನ ಮತ್ತು ನಿಮ್ಮ ಆರೋಗ್ಯಕ್ಕೆ ಉತ್ತಮ. ತುಂಬಾ ನಿಧಾನವಾಗಿ ವಾಹನ ಚಾಲನೆ ಮಾಡಿ ಮತ್ತು ಅಪಘಾತಗಳನ್ನು ತಪ್ಪಿಸಲು ಎಚ್ಚರಿಕೆ ವಹಿಸಿ. ರಿಯಲ್ ಎಸ್ಟೇಟ್ ಅಥವಾ ಹಿಂದಿನ ಹೂಡಿಕೆಗಳು ಗಣನೀಯ ಆದಾಯವನ್ನು ನೀಡಬಹುದು. ವೃತ್ತಿ ಅಥವಾ ವ್ಯಾಪಾರದಲ್ಲಿ ನೀವು ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು.

ಮಕರ ರಾಶಿ (Capricorn): ಈ ವಾರ ನಿಮ್ಮ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ವಾರ ನಿಮ್ಮ ಭವಿಷ್ಯದ ಪ್ರಕಾರ ನಿಮಗೆ ಅದ್ಭುತ ವಾರ. ನಿಮಗೆ ಕೆಲವೊಮ್ಮೆ ಹಣಕಾಸು ನಿರ್ವಹಣೆ ಮಾಡಲು ಕಷ್ಟವಾಗಬಹುದು. ನಿಮ್ಮ ಖರ್ಚು ಹೆಚ್ಚುತ್ತಲೇ ಇರಲಿದೆ.

ಇಸ್ಕಾನ್‌ನಿಂದ ಅಮೋಘ್ ಲೀಲಾ ದಾಸ್ ನಿಷೇಧ? ಯಾರು ಈ 'ಹರೇ ಕೃಷ್ಣ ಬ್ರಹ್ಮಚಾರಿ'?

 

ಕುಂಭ ರಾಶಿ (Aquarius): ಈ ವಾರ ನೀವು ಸಾಧ್ಯವಾದಷ್ಟು ಜ್ಞಾನವನ್ನು ಪಡೆಯಲು ಪ್ರಯತ್ನಿಸುತ್ತಿರಬಹುದು. ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಾಧ್ಯವಾದಷ್ಟು ಜ್ಞಾನವನ್ನು ಪಡೆಯಲು ಪ್ರಯತ್ನಿಸುತ್ತಿರಿ. ನಿಮ್ಮ ಆರೋಗ್ಯವು ಸುಧಾರಿಸಲಿದೆ. ನೀವು ಏನು ತಿನ್ನುತ್ತೀರೋ ಅದರ ಮೇಲೆ ನಿಗಾ ಇರಿಸಿ. ಯಾಕೆಂದರೆ ನೀವು ಅಧಿಕ ತೂಕ ಹೊಂದಬಹುದು, ಇದು ಭವಿಷ್ಯದಲ್ಲಿ ಗಂಭೀರ ಸಮಸ್ಯೆಯನ್ನು ಉಂಟುಮಾಡಬಹುದು.

ಮೀನ ರಾಶಿ (Pisces):  ಈ ವಾರ ನಿಮ್ಮ ದೌರ್ಬಲ್ಯವು ಬಹಿರಂಗವಾಗದಂತೆ ಎಚ್ಚರವಹಿಸಿ. ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ಇಡಿ. ಒಡಹುಟ್ಟಿದವರ ಆರೋಗ್ಯದ ಬಗ್ಗೆ ಕಳವಳ ಉಂಟಾಗಬಹುದು. ವ್ಯಾಪಾರದಲ್ಲಿ ಪ್ರಗತಿಗೆ ಸರಿಯಾದ ಅವಕಾಶ ದೊರೆಯುತ್ತದೆ. ಒತ್ತಡ ಮತ್ತು ಖಿನ್ನತೆ ಇರಲಿದೆ.

Latest Videos
Follow Us:
Download App:
  • android
  • ios