ಇಸ್ಕಾನ್‌ನಿಂದ ಅಮೋಘ್ ಲೀಲಾ ದಾಸ್ ನಿಷೇಧ? ಯಾರು ಈ 'ಹರೇ ಕೃಷ್ಣ ಬ್ರಹ್ಮಚಾರಿ'?

ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸ ಅವರ ಕುರಿತು ಅಮೋಘ್ ಲೀಲಾ ದಾಸ್, ಅವಹೇಳನಾಕಾರಿ ಹೇಳಿಕೆ ನೀಡಿದ್ದಾರೆ. ಇದು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

amogh lila das monk iskcon banned remark on swami vivekananda suh

ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸ ಅವರ ಕುರಿತು ಅಮೋಘ್ ಲೀಲಾ ದಾಸ್, ಅವಹೇಳನಾಕಾರಿ ಹೇಳಿಕೆ ನೀಡಿದ್ದಾರೆ. ಇದು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಹೀಗಾಗಿ ತನ್ನ ಸನ್ಯಾಸಿಗಳಲ್ಲಿ ಒಬ್ಬರಾದ ಅಮೋಘ ಲೀಲಾ ದಾಸ್ ಅವರ ಮೇಲೆ ಇಸ್ಕಾನ್  ( iskcon) ಒಂದು ತಿಂಗಳ ನಿಷೇಧ ಹೇರಿದೆ.

ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ, ಲಕ್ಷಾಂತರ ಜನರ ಕೆಂಗಣ್ಣಿಗೆ ಅಮೋಘ್ ದಾಸ್  (amogh lila das ) ಗುರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಇಸ್ಕಾನ್ ನಿಷೇಧಿಸಿದೆ. ಅಷ್ಟಕ್ಕೂ  ಈ ಅಮೋಘ್ ದಾಸ್ ಯಾರು ? ಹಾಗೂ ಅವರ ಹಿನ್ನೆಲೆಯೇನು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಅಮೋಘ್ ಲೀಲಾ ದಾಸ್ ಯಾರು?

ಅಮೋಘ್ ಲೀಲಾ ದಾಸ್ ಅವರು ಕಳೆದ 12 ವರ್ಷಗಳಿಂದ ಇಸ್ಕಾನ್ ಜತೆ ನಂಟನ್ನು ಹೊಂದಿದ್ದು, ಇಸ್ಕಾನ್ ಹೆಸರಿನಲ್ಲಿ ಅನೇಕ ಪ್ರವಚನಗಳನ್ನು ನೀಡುತ್ತಿದ್ದಾರೆ. ಇವರಿಗೆ ತುಂಬಾ ಫಾಲೋವರ್ಸ್ ಕೂಡ ಇದ್ದು, ಇವರ ಪ್ರವಚನ (Discourse) ದ ವಿಡಿಯೋಗಳನ್ನು ಮಿಲಿಯನ್'ಗಟ್ಟಲೇ ಜನರು ನೋಡಿದ್ದಾರೆ. ಪ್ರಸ್ತುತ ಇವರು ದ್ವಾರಕಾದಲ್ಲಿನ ಇಸ್ಕಾನ್ ಘಟಕದ ಉಪಾಧ್ಯಕ್ಷರಾಗಿ ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇಂದು ಶುಕ್ರವಾರ; ನೀವು 'ಹೀಗೆ' ಮಾಡಿದರೆ ಲಕ್ಷ್ಮಿಯೇ ನಿಮ್ಮ ಮನೆಗೆ ಬರುತ್ತಾಳೆ..!

 

ಇಂಜಿನಿಯರ್ ಟು ಸನ್ಯಾಸಿ ಆಗಿದ್ದು ಹೇಗೆ?

ಇವರ ಮೂಲ ಹೆಸರು ಆಶಿಶ್ ಅರೋರಾ. ಲಖನೌದಲ್ಲಿ ಪಂಜಾಬಿ ಕುಟುಂಬದಲ್ಲಿ ಜನಿಸಿದ ದಾಸ್, ಸನ್ಯಾಸತ್ವ ಸ್ವೀಕರಿಸುವುದಕ್ಕೂ ಮುನ್ನ ಇಂಜಿನಿಯರ್  (Engineer) ಕೂಡ ಆಗಿದ್ದರು. 2004ರಲ್ಲಿ ಸಾಫ್ಟ್‌ವೇರ್ ಇಂಜಿನಿಯರಿಂಗ್‌ನಲ್ಲಿ ಪದವಿ ಪೂರ್ಣಗೊಳಿಸಿದ್ದ ಬಳಿಕ ಯುಎಸ್ ಮೂಲದ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲ ಸಮಯ ಕೆಲಸ ಮಾಡಿ, 29 ನೇ ವಯಸ್ಸಿನಲ್ಲಿ ಬ್ರಹ್ಮಚಾರಿಯಾಗಿ ಇಸ್ಕಾನ್‌ಗೆ ಸೇರಿದ್ದರು. ಅಂದಿನಿಂದ ಅವರು ಆಧ್ಯಾತ್ಮಿಕತೆ (Spirituality)  ಹಾಗೂ ಜೀವನಕ್ಕೆ ಸಂಬಂಧಿಸಿದಂತೆ ಪ್ರವಚನಗಳನ್ನು ನೀಡುವ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಈ ಮೂಲಕ ಅಮೋಘ್ ಲೀಲಾ ದಾಸ್ ಆಗಿ ಜನಪ್ರಿಯ ಆಗಿದ್ದಾರೆ.

ಇಸ್ಕಾನ್'ನಿಂದ ಏಕೆ ಬ್ಯಾನ್ ಮಾಡಲಾಗಿದೆ?

ಅಮೋಘ್ ಲೀಲಾ ದಾಸ್ ಅವರನ್ನು ಇಸ್ಕಾನ್'ನಿಂದ ಸ್ವಲ್ಪ ದಿನಗಳವರೆಗೆ ಬ್ಯಾನ್ ಮಾಡಲಾಗಿದ್ದು, ಇದು ದೇಶದಾದ್ಯಂತ ಸುದ್ದಿ ಆಗುತ್ತಿದೆ. ಇತ್ತೀಚೆಗೆ ಅವರು ಪ್ರವಚನ ಹೇಳುವಾಗ ಸ್ವಾಮಿ ವಿವೇಕಾನಂದ (Swami Vivekananda)  ಮತ್ತು ರಾಮಕೃಷ್ಣ ಪರಮಹಂಸ ಅವರ ಕುರಿತು ಅವಹೇಳನಾಕಾರಿ ಹೇಳಿಕೆ ನೀಡಿದ್ದರು. 'ಯಾರಾದರೂ ದಿವ್ಯ ಪುರುಷ ಎಂದಾದರೂ ಪ್ರಾಣಿಗೆ ಹಾನಿ ಉಂಟು ಮಾಡುತ್ತಾರಾ ಎಂಬ ಪ್ರಶ್ನೆ ಎತ್ತಿದ್ದರು. ಮಹಾಪುರುಷರು ಮೀನು ತಿನ್ನುತ್ತಾರೆಯೇ ಎಂದು ಕೇಳಿದ್ದರು. ಸ್ವಾಮಿ ವಿವೇಕಾನಂದರು ಮೀನು ತಿಂದಿದ್ದರೆ ದೈವಿಕ ವ್ಯಕ್ತಿಯಾಗಲು ಸಾಧ್ಯವೇ? ಎಂದು ಹೇಳಿದ್ದರು. ಇದು ಸ್ವಾಮಿ ವಿವೇಕಾನಂದ ಹಾಗೂ ರಾಮಕೃಷ್ಣ ಪರಮಹಂಸರ ಅನೇಕ ಅನುಯಾಯಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಹಾಗಾಗಿ ಇದೀಗ ಇಸ್ಕಾನ್, ಅಮೋಘ ಲೀಲಾ ದಾಸ್ ಅವರಿಗೆ  ಒಂದು ತಿಂಗಳ ಮಟ್ಟಿಗೆ ಅವರ ಮೇಲೆ ನಿಷೇಧ ಹೇರಿದೆ.

Daily Horoscope: ಇಂದು ಈ ರಾಶಿಯವರಿಗೆ ಆಫೀಸ್‌ನಲ್ಲಿ ಜಗಳ ಆಗಲಿದೆ..!

 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios