ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ವ್ಯಕ್ತಿಯೊಬ್ಬ ನೀರು ತುಂಬಿದ ರಸ್ತೆ ಗುಂಡಿಯೊಳಗೆ ಸೊಳ್ಳೆ ಪರದೆ ಕಟ್ಟಿ ಆರಾಮವಾಗಿ ಮಲಗಿದ್ದಾನೆ. ಈ ವಿಶಿಷ್ಟ ದೃಶ್ಯವು ಜನರ ಗಮನ ಸೆಳೆದಿದ್ದು, ಕೆಲವರು ಇದನ್ನು 'ದೇಸಿ ಜುಗಾಡ್' ಎಂದು ಕರೆದರೆ, ಇತರರು ರಸ್ತೆಗಳ ದುಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅದಕ್ಕೇನು ಕಾರಣ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

ಮಳೆಗಾಲದಲ್ಲಿ, ನೀರು ತುಂಬಿದ ರಸ್ತೆಗಳು ಮತ್ತು ಗುಂಡಿಗಳು ಸಾಮಾನ್ಯ ಸಮಸ್ಯೆಗಳಾಗುತ್ತವೆ. ಇದು ಚಾಲಕರು ಮತ್ತು ಪಾದಚಾರಿಗಳಿಗೆ ಅನಾನುಕೂಲತೆ ಉಂಟು ಮಾಡುವುದು ಸಗಜ. ಆದರೆ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊವೊಂದರಲ್ಲಿ, ಒಬ್ಬ ವ್ಯಕ್ತಿ ನೀರು ತುಂಬಿದ ಗುಂಡಿಯನ್ನು ವಿಶ್ರಾಂತಿ ಸ್ಥಳವನ್ನಾಗಿ ಪರಿವರ್ತಿಸಿದ್ದು, ಜನರನ್ನು ಅಚ್ಚರಿಗೊಳಪಡಿಸಿದೆ. ಹಾಗಾದರೆ ಯಾಕೆ ಎಂದು ನೋಡೋಣ ಬನ್ನಿ.

ವಿಡಿಯೋದಲ್ಲಿ ಏನಿದೆ?

ವಿಡಿಯೋದಲ್ಲಿ ರಸ್ತೆಯ ಮಧ್ಯದಲ್ಲಿ ಮಳೆ ನೀರಿನಿಂದ ತುಂಬಿರುವ ದೊಡ್ಡ ಗುಂಡಿ ತೋರಿಸಲಾಗಿದೆ. ಸಾಮಾನ್ಯ ಜನರು ಅಂತಹ ಗುಂಡಿ ತಪ್ಪಿಸಲು ಪ್ರಯತ್ನಿಸಿದರೆ, ವೀಡಿಯೊದಲ್ಲಿರುವ ವ್ಯಕ್ತಿ ಬೇರೆಯದೇ ತಂತ್ರ ಅನುಸರಿಸುತ್ತಾನೆ. ಅವನು ನೀರು ತುಂಬಿದ ಗುಂಡಿಯೊಳಗೆ ಸೊಳ್ಳೆ ಪರದೆ ಕಟ್ಟಿ ಅದರೊಳಗೆ ಆರಾಮವಾಗಿ ಮಲಗಿರುವುದು ಕಂಡುಬರುತ್ತದೆ. ಆ ವ್ಯಕ್ತಿಯ ನೋಟವು ಅವನು ಒಂದು ಗುಂಡಿಯನ್ನು ತನ್ನ ಮಲಗುವ ಕೋಣೆಯನ್ನಾಗಿ ಮಾಡಿಕೊಂಡಿದ್ದಾನೆಂದು ಸೂಚಿಸುತ್ತದೆ. ಅವನು ಸೊಳ್ಳೆ ಪರದೆಯೊಳಗೆ ಆರಾಮದಾಯಿಕವಾಗಿ ಮಲಗಿದ್ದಾನೆ. ಅಷ್ಟೇ ಅಲ್ಲ, ಸುತ್ತಮುತ್ತಲಿನ ಪ್ರದೇಶಗಳು ಅವನಿಗೆ ತೊಂದರೆ ಕೊಡುತ್ತಿಲ್ಲ ಎಂದು ತೋರುತ್ತದೆ. ವೀಡಿಯೊವನ್ನು ರೆಕಾರ್ಡ್ ಮಾಡುವ ವ್ಯಕ್ತಿಯು ಈ ವಿಶಿಷ್ಟ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿರುವಂತೆ ತೋರುತ್ತದೆ.

ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್!

ಈ ವಿಡಿಯೋ ವೈರಲ್ ಆದ ನಂತರ, ಸಾಮಾಜಿಕ ಮಾಧ್ಯಮ ಬಳಕೆದಾರರು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವರು ಇದನ್ನು ದೇಸಿ ಜುಗಾಡ್ ಎಂದು ಕರೆಯುತ್ತಿದ್ದರೆ, ಇನ್ನು ಕೆಲವರು ಆ ವ್ಯಕ್ತಿಯ ಶೈಲಿಯ ಬಗ್ಗೆ ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಬೀದಿಯಲ್ಲಿಯೇ ನೀರು ಮತ್ತು ಶುದ್ಧ ಗಾಳಿ ಲಭ್ಯವಿರುವಾಗ, ಮನೆಗೆ ಏಕೆ ಹೋಗಬೇಕು ಎಂದು ಹಲವರು ತಮಾಷೆ ಮಾಡಿದ್ದಾರೆ.

ಕಾರಣ ಬೇರೆ ಇದೆಯಾ?

ಈ ವಿಡಿಯೋ ನೋಡಲು ನಿಜಕ್ಕೂ ಖುಷಿ ಕೊಟ್ಟರೂ, ರಸ್ತೆಯ ದುಸ್ಥಿತಿಯನ್ನು ಇದು ಎತ್ತಿ ತೋರಿಸುತ್ತದೆ. ಮಳೆಗಾಲದಲ್ಲಿ, ರಸ್ತೆಯಲ್ಲಿ ನೀರು ನಿಲ್ಲುವುದರಿಂದ ಗುಂಡಿಗಳು ಹೆಚ್ಚಾಗಿ ಅಗೋಚರವಾಗಿರುತ್ತವೆ. ಇದು ದ್ವಿಚಕ್ರ ವಾಹನ ಸವಾರರಿಗೆ ಅಪಘಾತಗಳ ಅಪಾಯವನ್ನು ಹೆಚ್ಚಿಸುತ್ತದೆ. ದೀರ್ಘಕಾಲದವರೆಗೆ ನೀರು ನಿಲ್ಲುವುದರಿಂದ ರಸ್ತೆಯ ಸ್ಥಿತಿ ಹದಗೆಡುತ್ತದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಘಟನೆಯನ್ನು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ತೆಗೆದುಕೊಂಡು ವೀಡಿಯೊಗೆ ಪ್ರತಿಕ್ರಿಯಿಸಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್‌!

ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ @Thebihar_in ಹೆಸರಿನ ಖಾತೆಯು ಹಂಚಿಕೊಂಡಿದೆ. ಸಾವಿರಾರು ಜನರು ಈ ಪೋಸ್ಟ್ ವೀಕ್ಷಿಸಿದ್ದಾರೆ ಮತ್ತು ಇಷ್ಟಪಟ್ಟಿದ್ದಾರೆ. ಈ ವೀಡಿಯೊವನ್ನು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿಯೂ ವೇಗವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಸ್ಟೋರಿ ವೈರಲ್ ವೀಡಿಯೊ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ.