Viral video : ದೇವಸ್ಥಾನಗಳಲ್ಲಿ ನಡೆಯುವ ಹವನ, ಜಾತ್ರೆಗಳಿಗೆ ದೊಡ್ಡ ಪ್ರಮಾಣದಲ್ಲಿ ಪ್ರಸಾದ ತಯಾರಿ ಅಗತ್ಯವಿರುತ್ತದೆ. ರಾಜಸ್ಥಾನದ ದೇವಸ್ಥಾನವೊಂದು ಈ ವಿಷ್ಯದಲ್ಲಿಗಮನ ಸೆಳೆದಿದೆ.
ದೇವಸ್ಥಾನಗಳಲ್ಲಿ ನೀಡುವ ಪ್ರಸಾದ ವಿಶೇಷ ರುಚಿಯನ್ನು ಹೊಂದಿರುತ್ತದೆ. ಭಕ್ತಿ ಜೊತೆ ರುಚಿ ಕಾರಣಕ್ಕೆ ಭಕ್ತರು ಕ್ಯೂನಲ್ಲಿ ನಿಂತು ಪ್ರಸಾದ ಸ್ವೀಕರಿಸುತ್ತಾರೆ. ಹಬ್ಬ ಹಾಗೂ ಜಾತ್ರೆ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ದೇವಸ್ಥಾನಗಳಲ್ಲಿ ಪ್ರಸಾದಗಳನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಲಾಗುತ್ತದೆ. ಈಗ ರಾಜಸ್ಥಾನದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಜೆಸಿಬಿ (JCB) ಬಳಸಿ ಪ್ರಸಾದ ತಯಾರಿ
ದೊಡ್ಡಮಟ್ಟದಲ್ಲಿ ಪ್ರಸಾದ ತಯಾರಿಸುವಾಗ ದೊಡ್ಡ ದೊಡ್ಡ ಪಾತ್ರೆಗಳ ಅಗತ್ಯವಿರುತ್ತದೆ. ಜನರ ಸಹಾಯ ಕೂಡ ಅಗತ್ಯ. ಲಕ್ಷಾಂತರ ಲಡ್ಡು ತಯಾರಿಸಲು ದೇವಸ್ಥಾನಗಳು ಭಕ್ತರ ಸಹಾಯ ಪಡೆಯುತ್ತವೆ. ಆದ್ರೆ ರಾಜಸ್ಥಾನದ ದೇವಸ್ಥಾನ ಭಕ್ತರ ಜೊತೆ ಜೆಸಿಬಿ ಸಹಾಯ ಪಡೆದಿದೆ. ಜೆಸಿಬಿ ಯಂತ್ರಗಳನ್ನು ಬಳಸಿ ಪ್ರಸಾದ ತಯಾರಿಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾ ಬಳಕೆದಾರರಲ್ಲಿ ಅಚ್ಚರಿ ಮೂಡಿಸಿದ್ದು, ವಿಡಿಯೋ ನೋಡಿ ಅನೇಕರು ನಗ್ತಿದ್ದಾರೆ.
ಶಬರಿಮಲೆ ಚಿನ್ನಕ್ಕೆ ಕನ್ನ ಕೇಸು : ‘ಕಾಂತಾರ’ ನಟನ ವಿಚಾರಣೆ
ಈ ಘಟನೆ ರಾಜಸ್ಥಾನದ ಜೈಪುರ ಸಮೀಪದ ಕೋಟ್ಪುಟ್ಲಿ ಪ್ರದೇಶದ ಕುಹಾಡಾ ಗ್ರಾಮದಲ್ಲಿರುವ ಛಪಲಾ ಭೈರುಜಿ ದೇವಸ್ಥಾನದಲ್ಲಿ ನಡೆದಿದೆ. ಇಲ್ಲಿ ಪ್ರತಿವರ್ಷ ನಡೆಯುವ ಲಾಖಿ ಮೇಳದ ಪ್ರಯುಕ್ತ ಈ ಬಾರಿ ಭಕ್ತರಿಗೆ ವಿತರಿಸಲು ಭಾರೀ ಪ್ರಮಾಣದ ಪ್ರಸಾದ ತಯಾರಿಸಬೇಕಾಗಿತ್ತು. ದೇವಸ್ಥಾನದಲ್ಲಿ 651 ಕ್ವಿಂಟಾಲ್ ಚೂರ್ಮಾ ಪ್ರಸಾದ ತಯಾರಿಸಲಾಗಿದೆ. ಸಾಮಾನ್ಯವಾಗಿ ಕೈನಲ್ಲಿ ಚೂರ್ಮಾ ತಯಾರಿಸಲಾಗುತ್ತಿತ್ತು. ಆದ್ರೆ ಈ ಬಾರಿ ದೇವಸ್ಥಾನದ ಆಡಳಿತ ಮಂಡಳಿ ಜೆಸಿಬಿ ಯಂತ್ರಗಳು ಮತ್ತು ಕೃಷಿ ಯಂತ್ರಗಳನ್ನು ಬಳಸುವ ನಿರ್ಧಾರ ತೆಗೆದುಕೊಂಡಿತ್ತು. ಗೋಧಿ ಹಿಟ್ಟು, ತುಪ್ಪ, ಸಕ್ಕರೆ ಮತ್ತು ಇತರ ಪದಾರ್ಥಗಳನ್ನು ದೊಡ್ಡ ಮಟ್ಟದಲ್ಲಿ ಮಿಶ್ರಣ ಮಾಡಲು ಜೆಸಿಬಿ ಯಂತ್ರಗಳು ನೆರವಾಗಿವೆ. 150 ಕ್ವಿಂಟಾಲ್ ಹಿಟ್ಟು, 100 ಕ್ವಿಂಟಾಲ್ ರವೆ, 35 ಕ್ವಿಂಟಾಲ್ ಶುದ್ಧ ತುಪ್ಪ, 130 ಕ್ವಿಂಟಾಲ್ ಸಕ್ಕರೆ, ಮಾವಾ, ಒಣ ಹಣ್ಣುಗಳು, ಹಾಲು, ಮೊಸರು, ಬೇಳೆ ಮತ್ತು ಮಸಾಲೆಗಳನ್ನು ಇದಕ್ಕೆ ಬಳಸಲಾಗಿದೆ.
ವಿಡಿಯೋ ಪ್ರಕಾರ, ಜೆಸಿಬಿ ಸಹಾಯದಿಂದ ಚೂರ್ಮಾವನ್ನು ಮಿಕ್ಸ್ ಮಾಡಲಾಗ್ತಿದೆ. ಸ್ಥಳೀಯರು ಹಾಗೂ ಭಕ್ತರು ಇದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅರೆ ಕ್ಷಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಕೆಲವರು ಇದನ್ನು ಭಕ್ತಿಯೂ ತಂತ್ರಜ್ಞಾನವೂ ಒಂದಾದ ಅಪರೂಪದ ದೃಶ್ಯ ಎಂದಿದ್ದಾರೆ. ಮತ್ತೊಬ್ಬರು ಇದು ಇಂದಿನ ಕಾಲದ ಪ್ರಸಾದ ತಯಾರಿಕೆ ಎಂದು ಹಾಸ್ಯ ಮಾಡಿದ್ದಾರೆ.
ವಿಜಯನಗರ ಕಾಲದ ವಿಗ್ರಹ ಸೇರಿ 3 ಶಿಲ್ಪಗಳು ಸ್ವದೇಶಕ್ಕೆ
ದೇವಸ್ಥಾನದ ಆಡಳಿತ ಮಂಡಳಿಯ ಪ್ರಕಾರ, ಈ ಪ್ರಸಾದವನ್ನು 2.5 ರಿಂದ 3 ಲಕ್ಷಕ್ಕೂ ಹೆಚ್ಚು ಭಕ್ತರಿಗೆ ವಿತರಿಸುವ ಯೋಜನೆ ಇದೆ. ಅಷ್ಟೊಂದು ದೊಡ್ಡ ಪ್ರಮಾಣದ ಆಹಾರವನ್ನು ಕಡಿಮೆ ಸಮಯದಲ್ಲಿ ತಯಾರಿಸಲು ಯಂತ್ರಗಳ ಸಹಾಯ ಅನಿವಾರ್ಯವಾಗಿತ್ತು ಎಂದು ಅವರು ತಿಳಿಸಿದ್ದಾರೆ. ಭಕ್ತಿ, ಸಂಪ್ರದಾಯ ಮತ್ತು ಆಧುನಿಕ ಯಂತ್ರೋಪಕರಣಗಳ ಸಂಯೋಜನೆಯಾಗಿ ಕಂಡ ಈ ದೃಶ್ಯ, ಇದೀಗ ದೇಶದಾದ್ಯಂತ ಜನರ ಗಮನ ಸೆಳೆದಿದೆ. ಕಲ್ಯಾಣಪುರ ಕುಹಾಡ ಗ್ರಾಮದ ಅರಾವಳಿ ಬೆಟ್ಟಗಳಲ್ಲಿರುವ ಭೈರುಜಿ ದೇವಾಲಯದಲ್ಲಿ ವಾರ್ಷಿಕ ಆಚರಣೆಗಳು ಜನವರಿ 30 ರಂದು ನಡೆದಿದೆ. ಈ ಸಂದರ್ಭವನ್ನು ಭವ್ಯವಾದ ಜಾತ್ರೆ ಏರ್ಪಡಿಸಲಾಗಿತ್ತು. ರಾತ್ರಿ ಭಕ್ತರು ಜಾಗರಣೆ ಮಾಡಿದ್ದಾರೆ.


