ಶಾಲೆಗೆ ಐಫೋನ್ ಬಾಕ್ಸ್‌ನಲ್ಲಿ ಊಟ ತಂದ ಹುಡುಗನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಾಕ್ಸ್ ತೆರೆದು ಪರಾಠಾ ತೋರಿಸುವುದು, ಇದನ್ನು ನೋಡಿ ನಗುತ್ತಿರುವ ಟೀಚರ್ ಕೂಡ ವಿಡಿಯೋದಲ್ಲಿದ್ದಾರೆ. ಈ ತಮಾಷೆಯ ಘಟನೆಗೆ ಅನೇಕ ಟ್ರೋಲ್‌ಗಳು ಮತ್ತು ಕಮೆಂಟ್‌ಗಳು ಬರುತ್ತಿವೆ.

ಓರ್ವ ವಿದ್ಯಾರ್ಥಿ ಶಾಲೆಗೆ ತಂದ ಲಂಚ್ ಬಾಕ್ಸ್‌ನ ದೃಶ್ಯವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾಮಾನ್ಯವಾಗಿ ಮಕ್ಕಳು ಶಾಲೆಗೆ ತರುವ ಪ್ಲಾಸ್ಟಿಕ್ ಅಥವಾ ಸ್ಟೀಲ್ ಲಂಚ್ ಬಾಕ್ಸ್ ಅದಾಗಿರಲಿಲ್ಲ. ಅವನು ಊಟವನ್ನು ಪ್ಯಾಕ್ ಮಾಡಿದ್ದು ಆ್ಯಪಲ್‌ನ ಐಫೋನ್ ಬಾಕ್ಸ್‌ನಲ್ಲಿ!

ಐಫೋನ್ ಬಾಕ್ಸ್ ನಲ್ಲಿ ಏನಿದೆ?

ಮಗು ಆಪಲ್ ಐಫೋನ್ ಬಾಕ್ಸ್‌ನೊಂದಿಗೆ ತರಗತಿಗೆ ಪ್ರವೇಶಿಸುತ್ತದೆ. ನೋಡುತ್ತಿರುವ ಶಿಕ್ಷಕರು ಮಗುವನ್ನು ಪೆಟ್ಟಿಗೆಯಲ್ಲಿ ಏನಿದೆ ಎಂದು ಕೇಳುತ್ತಾರೆ. ಮುಗ್ದ ನಗುವಿನೊಂದಿಗೆ, ಅವನು ಶಾಂತವಾಗಿ 'ಮೇಡಂ, ಊಟ' ಎನ್ನುತ್ತಾನೆ. ಅದಕ್ಕೆ ಓಪನ್ ಮಾಡು ಎನ್ನುತ್ತಾರೆ. ನಂತರ ವೀಡಿಯೊದಲ್ಲಿ ಮಗು ಶಿಕ್ಷಕರ ಮುಂದೆ ತನ್ನ ಐಫೋನ್ ಲಂಚ್ ಬಾಕ್ಸ್ ತೆರೆಯುವುದನ್ನು ತೋರಿಸುತ್ತದೆ. ಐಫೋನ್ ಬದಲಿಗೆ, ಒಳಗೆ ಕಾಗದದಲ್ಲಿ ಚೆಂದವಾಗಿ ಸುತ್ತಿದ ಪರಾಠಾಗಳು ಇದ್ದವು. ಇದು ತರಗತಿಯಲ್ಲಿ ನಗು ಮತ್ತು ಆಶ್ಚರ್ಯವನ್ನು ಉಂಟುಮಾಡಿತು.

Scroll to load tweet…

ನಾನೇ ಪ್ಯಾಕ್ ಮಾಡಿದ್ದು ಮೇಡಂ:

ಮೊದಲಿಗೆ ಇದು ಆ್ಯಪಲ್ ಫೋನ್‌ನ ಅನ್‌ಬಾಕ್ಸಿಂಗ್‌ನಂತೆ ಕಂಡರೂ, ಅನಿರೀಕ್ಷಿತವಾಗಿ ಊಟದ ಪ್ರದರ್ಶನದೊಂದಿಗೆ ಈ ಘಟನೆ ತಮಾಷೆಯ ಟಿಫಿನ್ ಅನ್‌ಬಾಕ್ಸಿಂಗ್ ವಿಡಿಯೋವಾಗಿ ಬದಲಾಯಿತು. ಈ ರೀತಿ ಊಟವನ್ನು ಯಾರು ಪ್ಯಾಕ್ ಮಾಡಿದ್ದು ಎಂದು ಟೀಚರ್ ವಿದ್ಯಾರ್ಥಿಗೆ ಕೇಳಿದರು. 'ನಾನೇ ಪ್ಯಾಕ್ ಮಾಡಿದ್ದು ಮೇಡಂ' ಎಂದು ಅವನು ಹೇಳುತ್ತಾನೆ. ಒಟ್ಟಿನಲ್ಲಿ, ಈ ಪುಟ್ಟ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ತಮಾಷೆಯ ಪ್ರತಿಕ್ರಿಯೆಗಳಿಗೆ ಕಾರಣವಾಯಿತು.

ಕೆಲವರು ಇದನ್ನು ಹುಡುಗನ ಪರಿಸರ ಸ್ನೇಹಿ ಲಂಚ್‌ಬಾಕ್ಸ್ ಐಡಿಯಾ ಎಂದು ತಮಾಷೆಯಾಗಿ ಬಣ್ಣಿಸಿದರು. ಅವನ ಮನೆಯಲ್ಲಿ ಐಫೋನ್ ಇರುವುದು ಎಲ್ಲರಿಗೂ ತಿಳಿಯಿತಲ್ಲ ಎಂದು ಕೆಲವರು ಕಾಲೆಳೆದರು. 1.5 ಲಕ್ಷ ರೂಪಾಯಿಯ ಪರಾಠಾ ಲಂಚ್ ಬಾಕ್ಸ್ ಎಂಬ ಕಮೆಂಟ್‌ಗಳೂ ಬಂದವು. ಒಟ್ಟಿನಲ್ಲಿ, ತಮಾಷೆಯ ಟ್ರೋಲ್‌ಗಳು ಮತ್ತು ಕಮೆಂಟ್‌ಗಳೊಂದಿಗೆ ಅನೇಕರು ಈ ವಿಡಿಯೋವನ್ನು ನೋಡಿ ಶೇರ್ ಮಾಡುತ್ತಿದ್ದಾರೆ, ಈ ವಿಡಿಯೋ ನೋಡಿದ್ಮೇಲೆ ನಿಮಗೆ ಏನು ಅನಿಸಿತು ಕಾಮೆಂಟ್ ಮಾಡಿ