ಮದುವೆ ಸಂಬಂಧ ಸಮಯದಲ್ಲಿ ನಡೆದ ಚರ್ಚೆಯೊಂದರ ಸಂದರ್ಭದಲ್ಲಿ ವರನ ಆಸ್ತಿ, ಆದಾಯ, ಉದ್ಯೋಗದಂತಹ ಅಂಶಗಳ ಬಗ್ಗೆ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದ್ದು, ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
ಮದುವೆ ಸಂಬಂಧ ಅಂದರೆ ಇಂದಿನ ದಿನಗಳಲ್ಲಿ ಸಾಮಾನ್ಯ ಸಂಗತಿಯಾಗಿ ಉಳಿದಿಲ್ಲ. ಉದ್ಯೋಗ, ಸಂಬಳ, ಕುಟುಂಬದೊಂದಿಗೆ ಈಗ ಆಸ್ತಿಗಳ ವಿವರ ಕೂಡ ಪ್ರಮುಖ ಸಂಗತಿಯಾಗಿದೆ. ಉತ್ತಮ ಸಂಬಳ ಬರುವ ಕೆಲಸವಿದ್ದರೂ, ಹುಡುಗ ಉತ್ತನ ನಡವಳಿಕೆ ಹೊಂದಿದ್ದರು, ಕೂಡ ಆತನ ಕುಟುಂಬಕ್ಕೆ ಭಾರೀ ಪ್ರಮಾಣದಲ್ಲಿ ಆಸ್ತಿ ಇರ್ಬೇಕು. ಇಂತಹ ಯುವಕರನ್ನು ಮದುವೆಯಾಗಲು ಈಗ ಹಲವರು ಮುಂದಾಗುತ್ತಿದ್ದಾರೆ. ಈ ವಿಚಾರದ ಕುರಿತಂತೆ ರೆಡಿಟ್ ನಲ್ಲಿ ಮಹಿಳೆಯೊಬ್ಬರು ಮಾಡಿರುವ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಈ ಪೋಸ್ಟ್‌ನಲ್ಲಿದ್ದ ಕೆಲವು ಅಂಶಗಳು ನೆಟ್ಟಿಗರಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಯುವಕನಿಗೆ 2-3 ಕೋಟಿ ಆಸ್ತಿ ಇರ್ಬೇಕು!
ಸಾಮಾಜಿಕ ಜಾಲತಾಣದಲ್ಲಿ ಮದುವೆ ಸಂಬಂಧದ ಸಮಯಲ್ಲಿ ಆಸ್ತಿ, ಆದಾಯ, ಉದ್ಯೋಗದಂತಹ ಅಂಶಗಳಿಗೆ ನೀಡುತ್ತಿರುವ ಪ್ರಾಮುಖ್ಯತೆ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಕೆಲವು ಯುವತಿಯರು ಯುವಕನಿಗೆ 2-3 ಕೋಟಿ ಆಸ್ತಿ ಇರ್ಬೇಕು ಎಂದು ಡಿಮ್ಯಾಂಡ್ ಮಾಡುತ್ತಿದ್ದಾರಂತೆ.
ಇಂತಹ ಕೆಲವು ಮದುವೆ ಸಂಬಂಧಗಳನ್ನು ನೋಡಿದ ಬಳಿಕ ಮಹಿಳೆಯೊಬ್ಬರು ಈ ಕುರಿತಂತೆ ಪೋಸ್ಟ್ ಮಾಡಿದ್ದು, ವರನ ಕುಟುಂಬದ ಆಸ್ತಿಗಳ ಮೌಲ್ಯ, ಉದ್ಯೋಗ, ಆರ್ಥಿಕ ಸ್ಥಿತಿ, ಆದಾಯದಂತಹ ಅಂಶಗಳನ್ನು ವಿಶೇಷವಾಗಿ ಪರಿಶೀಲನೆ ನಡೆಸುತ್ತಿದ್ದಾರಂತೆ. ಅದರಲ್ಲೂ ವರನಿಗೆ ಒಟ್ಟು ಎಷ್ಟು ಆಸ್ತಿ ಬರುತ್ತದೆ ಅಂತ ನೋಡುತ್ತಿದ್ದಾರಂತೆ. ಅದರಲ್ಲೂ ಭಾರೀ ಆಸ್ತಿ ಹೊಂದಿರುವ ವರನ ವಿವರಗಳನ್ನೇ ಹೆಚ್ಚು ಮಂದಿ ಕೇಳುತ್ತಿದ್ದಾರಂತೆ.
ಇಬ್ಭಾಗವಾದ ನೆಟ್ಟಿಗರು, ಹೇಳಿದ್ದೇನು?
ಈ ಪೋಸ್ಟ್ ನೆಟ್ಟಿಗರನ್ನು ಎರಡು ವರ್ಗಗಳಾಗಿ ವಿಭಜನೆ ಮಾಡಿದ್ದು, ಮದುವೆ ಅನ್ನೋದು ಇಬ್ಬರು ವ್ಯಕ್ತಿಗಳ ಜೀವನಕ್ಕೆ ಸಂಬಂಧಿಸಿದ ನಿರ್ಧಾರ, ಇಲ್ಲಿ ಆರ್ಥಿಕ ಸ್ಥಿತಿಯನ್ನು ಮಾತ್ರ ನೋಡುವುದು ಸರಿ ಅಲ್ಲ ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಮತ್ತೆ ಕೆಲವರು, ವಿವಾಹದ ವಿಚಾರದಲ್ಲಿ ಆರ್ಥಿಕ ಸ್ಥಿತಿ ಬಗ್ಗೆ ತಿಳಿದುಕೊಳ್ಳುವುದು ಒಂದು ಸಹಜ ಪ್ರಕ್ರಿಯೆ ಎಂದು ಕೆಲವರು ಹೇಳಿದ್ದಾರೆ. ಇಂತಹ ವಿಚಾರಗಳ ಬಗ್ಗೆ ಸ್ಪಂಧಿಸಿರುವ ಕೆಲವರು, ವಧುವಿನ ಕುಟುಂಬಸ್ಥರು ಇಂತಹ ಡಿಮ್ಯಾಂಡ್ ಮಾಡಿದ್ದಾರೆ ಅನ್ನೋದಕ್ಕೆ ಯಾವುದೇ ಪೂರವೆಗಳು ಇಲ್ಲ. ಆದ್ದರಿಂದ ಈ ಪೋಸ್ಟ್ ಎಲ್ಲರಿಗೂ ಅನ್ವಯ ಆಗೋದಿಲ್ಲ ಎಂದಿದ್ದಾರೆ.
ಪೋಷಕರು ಜೊತೆಗೆ ಇರುವಂತೆ ಇಲ್ಲ!
ಅದರಲ್ಲೂ ಇಂತಹ ಡಿಮ್ಯಾಂಡ್‌ಗಳು ಕುಟುಂಬ ನೋಡಿ ಮಾಡುವ ಅರೇಂಜ್ ಮ್ಯಾರೇಜ್‌ಗಳಲ್ಲಿ ಹೆಚ್ಚು. ರೆಡಿಟ್‌ನಲ್ಲಿ ಮಹಿಳೆ ಹಂಚಿಕೊಂಡಿರುವ ಮಾಹಿತಿಯಂತೆ, ಇಬ್ಬರು ಸಹೋದರರಿಗೆ ಅಂದರೆ 31 ಮತ್ತು 32 ವರ್ಷದ ಇಬ್ಬರು ಯುವಕರಿಗೆ ಕುಟುಂಬಸ್ಥರು ಅರೇಂಜ್ ಮ್ಯಾರೇಜ್ ಮಾಡಲು ವಧುವಿನ ಹುಡುಕಾಟದಲ್ಲಿದ್ದು, ಇಬ್ಬರು ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ, ವರ್ಷಕ್ಕೆ 21 ಲಕ್ಷ ರೂಪಾಯಿ ಪ್ಯಾಕೇಜ್ ಹೊಂದಿದ್ದಾರಂತೆ. ಅಲ್ಲದೇ ಇಬ್ಬರಿಗೂ ನರಗದಲ್ಲಿ ಮನೆ ಇದ್ದು, ಯಾವುದೇ ಸಾಲ ಕೂಡ ಇಲ್ಲವಂತೆ.
ವರ್ಷಕ್ಕೆ ಒಂದು ವಿದೇಶಿ ಪ್ರವಾಸ!
ಇನ್ನು, ಆ ಇಬ್ಬರಿಗೂ ಯಾರು ಸಹೋದರರು ಇಲ್ಲ, ಪೋಷಕರಿಗೆ ಏಕೈಕ ಸಂತನವಾಗಿದ್ದಾರೆ. ಜೊತೆ ಹಳ್ಳಿಯಲ್ಲೂ ಕೃಷಿ ಭೂಮಿಯೊಂದಿಗೆ ಅಪಾರ ಆಸ್ತಿ ಇದೆ. ಆದರೆ 2020-21ರಿಂದಲೂ ಹಲವರು ವಧುವಿನ ಕುಟುಂಬಸ್ಥರು ಇವರ ಪ್ರಪೋಸಲ್ ರಿಜೆಕ್ಟ್ ಮಾಡಿದ್ದರಂತೆ. ಕೆಲವರಂತೂ ಒಬ್ಬನೇ ಮಗ ಇದ್ದರೂ ಆತನ ಪೋಷಕರು ಮದುವೆ ಬಳಿಕ ಅವರೊಂದಿಗೆ ಇರದೆ ಪ್ರತ್ಯೇಕವಾಗಿ ವಾಸಿಸಲು ಷರತ್ತು ಹಾಕಿದ್ದರಂತೆ. ಅಲ್ಲದೇ ಕೆಲವರು ವರನಿಗೆ ಕನಿಷ್ಠ 2-3 ಕೋಟಿ ರೂಪಾಯಿ ಆಸ್ತಿ ಇರ್ಬೇಕು, ಮದುವೆ ಸಂದರ್ಭದಲ್ಲಿ 20-25 ಗ್ರಾಂ ಗೋಲ್ಡ್ ಹುಡುಗಿಗೆ ನೀಡಬೇಕು ಅಂತ ಹೇಳಿದ್ದರಂತೆ.
ಸ್ವಲ್ಪ ಆಸ್ತಿ ಹುಡುಗಿ ಹೆಸರಿಗೆ ಬರೆಯಿರಿ!
ಇನ್ನು, ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಹಲವರು ಯುವಕರು ತಮಗೆ ಎದುರಾದ ಅನುಭವಗಳು ಅಂದರೆ ಕಂಡಿಷನ್ಸ್ ಗಳನ್ನು ಹಂಚಿಕೊಂಡಿದ್ದು, ಒಮ್ಮೆ ಹುಡುಗಿ ಪ್ರತಿ ವರ್ಷ ಒಂದು ಬಾರಿ ಆದರೂ ವಿದೇಶಿ ಪ್ರವಾಸಕ್ಕೆ ಕರೆದುಕೊಂಡು ಹೋಗಬೇಕು ಅಂತ ಹೇಳಿದ್ದಳಂತೆ. ಇನ್ನು ಕೆಲವರಂತು ಮದುವೆಯಾಗ ಬೇಕು ಎಂದರೆ ಯುವಕನ ಹೆಸರಿಗೆ ಇದ್ದ ಸ್ವಲ್ಪ ಆಸ್ತಿಯನ್ನು ಯುವತಿ ಹೆಸರಿಗೆ ರಿಜಿಸ್ಟರ್ ಮಾಡಿಸಬೇಕು ಅಂತಲೂ ಕೇಳಿದ್ದರಂತೆ.


