Ghost in lift : ಮುಂಬೈ ಅಪಾರ್ಟ್ಮೆಂಟ್ ಸಿಸಿಟಿವಿಯೊಂದು ಎಲ್ಲರ ಗಮನ ಸೆಳೆದಿದೆ. ಲಿಫ್ಟ್ ಈಗ ಭಯಕ್ಕೆ ಕಾರಣವಾಗಿದೆ. ಲಿಫ್ಟ್ ನಲ್ಲಿ ಗೋಸ್ಟ್ ನೋಡಿ ಜನ ಆತಂಕಕ್ಕೊಳಗಾಗಿದ್ದಾರೆ. ವಿಡಿಯೋದಲ್ಲಿರೋದು ನಿಜವಾದ ದೆವ್ವವಾ? ನೀವೇ ಚೆಕ್ ಮಾಡಿ.
ಜಗತ್ತಿಗೆ ರೋಬೋಟ್, ಎಐ ಅಂತ ಏನೇನೋ ಬಂದಾಗಿದೆ. ಆದ್ರೂ ಜನರು ಭೂತ (Ghost) – ದೆವ್ವಗಳ ಮೇಲೆ ನಂಬಿಕೆ ಕಳೆದುಕೊಂಡಿಲ್ಲ. ಈಗ್ಲೂ ಅನೇಕರು ದೆವ್ವ – ಭೂತ ಅಂತ ಭಯಗೊಳ್ತಾರೆ. ನಮ್ಮ ಸುತ್ತಮುತ್ತ ಎಲ್ಲೋ ದೆವ್ವದ ಓಡಾಟವಿದೆ ಎಂಬುದನ್ನು ನಂಬ್ತಾರೆ. ಇದು ಇದ್ಯಾ ಇಲ್ವಾ ಎನ್ನುವ ಪ್ರಶ್ನೆಗೆ ಯಾರಿಂದಲೂ ಸರಿಯಾದ ಉತ್ತರವಿಲ್ಲ. ಅದೇನೇ ಇರಲಿ ಈಗ ಮುಂಬೈ ಅಪಾರ್ಟ್ ಮೆಂಟ್ ಒಂದು ಎಲ್ಲರ ಚರ್ಚೆಗೆ ಕಾರಣವಾಗಿದೆ. ಅಪಾರ್ಟ್ ಮೆಂಟ್ ನಲ್ಲಿರೋರು ರಾತ್ರಿ ನಿದ್ರೆ ಮಾಡದಂತಾಗಿದೆ. ಲಿಫ್ಟ್ ಅಂದ್ರೆ ಭಯಪಡ್ತಿದ್ದಾರೆ. ಇದಕ್ಕೆ ಕಾರಣ ವೈರಲ್ ಆಗಿರುವ ಒಂದು ಸಿಸಿಟಿವಿ ವಿಡಿಯೋ.
ಲಿಫ್ಟ್ (lift) ನಲ್ಲಿ ಕಾಣಿಸಿಕೊಂಡ ದೆವ್ವ? :
ಸೋಶಿಯಲ್ ಮೀಡಿಯಾ (social media)ದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಅದು ಲಿಫ್ಟ್ ವಿಡಿಯೋ. ಆರಂಭದಲ್ಲಿ ಲಿಫ್ಟ್ ಬಾಗಿಲು ಮುಚ್ಚೋದನ್ನು ನೀವು ನೋಡ್ಬಹುದು. ನಂತ್ರ ಲಿಫ್ಟ್ ಬಾಗಿಲು ಓಪನ್ ಆಗ್ತಿದ್ದಂತೆ ಮುಖ ಮುಚ್ಚಿಕೊಂಡಿರುವ ಮಹಿಳೆಯೊಬ್ಬರು ಲಿಫ್ಟ್ ಗೆ ಎಂಟ್ರಿಯಾಗ್ತಾಳೆ. ಇದ್ರಲ್ಲಿ ಮಹಿಳೆಯ ಮುಖ ಸರಿಯಾಗಿ ಕಾಣಿಸೋದಿಲ್ಲ. ಅರ್ಥ ಮುಖ ಮಾತ್ರ ಕಾಣಿಸಿದ್ದು, ಆಕೆ ಮನುಷ್ಯಳಲ್ಲ, ದೆವ್ವ ಅಂತ ಹೇಳಲಾಗ್ತಿದೆ. ವಧುವಿನಂತೆ ಸಿಂಗಾರಗೊಂಡಿರುವ ಮಹಿಳೆ, ನಿಧಾನವಾಗಿ ಲಿಫ್ಟ್ ಒಳಗೆ ಬಂದು ನಂತ್ರ ಸಿಸಿಟಿವಿ ಕ್ಯಾಮರಾ ನೋಡ್ತಾಳೆ. ಇದು ದೆವ್ವದ ಆಕೃತಿ ಅಂತ ಸುದ್ದಿ ಹಬ್ಬಿಸಲಾಗಿದೆ. ಲಿಪ್ಟ್ ವಿಡಿಯೋ ನೋಡಿದ ಮುಂಬೈ ಅಪಾರ್ಟ್ಮೆಂಟ್ ನಿವಾಸಿಗಳು ಸ್ವಲ್ಪ ಭಯಗೊಂಡಿದ್ದಾರೆ.
ನೀತಾ ಅಂಬಾನಿ ಡೋರ್ ಓಪನ್ ಮಾಡಿದಾಗ ಸರ್ ಪ್ರೈಸ್ ಸಿಕ್ಕಿದೆ; ಅವರ ಪಾದಗಳ ಕೆಳಗೆ..
ಬಳಕೆದಾರರ ಕಮೆಂಟ್ :
ವಿಡಿಯೋ ನೋಡಿದ ಬಳಕೆದಾರರು ಆಕೆ ದೆವ್ವ ಅನ್ನೋದನ್ನು ನಂಬಲು ಸಿದ್ಧವಿಲ್ಲ. ಸದ್ಯ ಹ್ಯಾಲೋವೀನ್ (Halloween) ನಡೆಯುತ್ತಿದ್ದು, ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಭೂತ – ದೆವ್ವದ ವೇಷ ಹಾಕಿಕೊಂಡು ಓಡಾಡ್ತಿದ್ದಾರೆ. ಈ ಮಹಿಳೆ ಕೂಡ ಅದೇ ರೀತಿ ಡ್ರೆಸ್ ಮಾಡ್ಕೊಂಡಿದ್ದಾಳೆ ಅಂತ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಅನೇಕರು ಇದನ್ನು ತಮಾಷೆಯಾಗಿ ತೆಗೆದುಕೊಂಡಿದ್ದಾರೆ. ದೆವ್ವಕ್ಕೆ ಸಿಸಿಟಿವಿ ಕ್ಯಾಮರಾ ಎಲ್ಲಿದೆ ಅನ್ನೋದು ಗೊತ್ತಾ? ಅಂತ ಕೆಲವರು ಕೇಳಿದ್ರೆ ಮತ್ತೆ ಕೆಲವರು ದೆವ್ವವೇ ಸಿಸಿಟಿವಿ ಕ್ಯಾಮರಾ ಅಳವಡಿಸಿತ್ತು, ಅದು ಎಜ್ಯುಕೇಟೆಡ್ ದೆವ್ವ, ಸ್ತ್ರೀ ಅದು, ಏನು ಬೇಕಾದ್ರೂ ಮಾಡುತ್ತೆ ಎಂಬೆಲ್ಲ ತಮಾಷೆ ಕಮೆಂಟ್ ಮಾಡಿದ್ದಾರೆ.
ರಿಯಲ್ ನಾನು ಅವಳ ಗಂಡ ! :
ಇನ್ಸ್ಟಾಗ್ರಾಮ್ ಈ ದೆವ್ವದ ಪೋಸ್ಟ್ ನಲ್ಲಿ ಸಾಕಷ್ಟು ಕಮೆಂಟ್ ಬಂದಿದೆ. ಅದ್ರಲ್ಲಿ ಒಂದು ಪೋಸ್ಟ್ ಎಲ್ಲರ ಗಮನ ಸೆಳೆದಿದೆ. ರಿಯಲ್, ನಾನು ಇವಳ ಗಂಡ ಅಂತ ಒಬ್ಬರು ಮೆಸ್ಸೇಜ್ ಮಾಡಿದ್ದಾರೆ. ಇದನ್ನು ನೋಡಿದ ಬಳಕೆದಾರರು, ಆಯ್ತು, ನಿಮ್ಮ ಕಥೆ ಮುಗೀತು ಎಂದಿದ್ದಾರೆ. ಅವರ ಜೊತೆ ಹೇಗೆ ವಾಸ ಮಾಡ್ತಿದ್ದೀರಿ ಅಂತ ಪ್ರಶ್ನೆ ಕೂಡ ಕೇಳಿದ್ದಾರೆ.
ಹಾವು ಕಚ್ಚುವಾಗ ಎಷ್ಟು ವಿಷ ಹೊರಬರಬಹುದು?, 19 ಸೆಕೆಂಡುಗಳ ಭಯಾನ
ಸೋಶಿಯಲ್ ಮೀಡಿಯಾದಲ್ಲಿ ಇಂಥ ವಿಡಿಯೋಗಳು ವೈರಲ್ ಆಗಿದ್ದು ಇದೇ ಮೊದಲಲ್ಲ. ಈ ಹಿಂದೆ ಕೂಡ ಸಾಕಷ್ಟು ಭೂತದ ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿದೆ. ಕೆಲವರು ವಿಡಿಯೋ ನೋಡಿ ಭಯಗೊಂಡ್ರೆ ಮತ್ತೊಂದಿಷ್ಟು ಮಂದಿ ಇದು ಸುಳ್ಳು ಅಂತ ವಾದ ಮಾಡ್ತಾರೆ. ಅಕ್ಟೋಬರ್ 31 ರಂದು ಹ್ಯಾಲೋವೀನ್ ದಿನ ಆಚರಣೆ ಮಾಡಲಾಗಿದೆ. ಅನೇಕರು ದೆವ್ವದ ವೇಷ ಹಾಕಿಕೊಂಡು ಸುತ್ತಾಡಿದ್ದಾರೆ. ಹಾಗಾಗಿ ಯಾವುದು ನಿಜವಾದ ದೆವ್ವ ಯಾವುದು ಅಲ್ಲ ಎಂಬುದನ್ನು ಪತ್ತೆ ಮಾಡೋದು ಕಷ್ಟವಾಗಿದೆ.
