ನೀಟ್ ಪರೀಕ್ಷೆ ಪ್ರತಿಭಟನೆ ಬಳಿಕ ಜೆನ್-ಜಿ ಪೀಳಿಗೆಯ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ನಡುವೆ, ಭಾರತದ ಪ್ರಧಾನಿ ಯಾರೆಂಬ ಪ್ರಶ್ನೆಗೆ ಯುವಕ-ಯುವತಿಯರು 'ಪಡ್ನಾವಿಸ್', 'ದ್ರೌಪದಿ ಮುರ್ಮು' ಎಂದು ಉತ್ತರಿಸುವ ವಿಡಿಯೋ ವೈರಲ್ ಆಗಿದ್ದು, ಅವರ ಸಾಮಾನ್ಯ ಜ್ಞಾನದ ಬಗ್ಗೆ ಆತಂಕ ವ್ಯಕ್ತವಾಗಿದೆ.
ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ದೆಹಲಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆಸಿ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆ ಪಡೆಯುವಲ್ಲಿ ಯಶಸ್ವಿಯಾದ ಬಳಿಕ ದೇಶದ್ಯಾಂತ Gen-Z ಗಳ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಜೆನ್-ಜಿ ಮನಸು ಮಾಡಿದ್ರೆ ಏನು ಬೇಕಾದ್ರೂ ಮಾಡಬಲ್ಲವರು, ಬಹಳ ಬುದ್ಧಿವಂತರು, ದೇಶದ ನಿಜವಾದ ರಕ್ಷಕರು ಎಂದೆಲ್ಲ ಹೊಗಳಿಕೆ, ಪ್ರಶಂಸೆಗಳ ಸುರಿಮಳೆಯಾಗುತ್ತಿದ್ದಾರೆ, ಇನ್ನೊಂದೆಡೆ ಇಂದಿನ ಯುವಕರಿಗೆ ವಿದೇಶಾಂಗ ನೀತಿ, ರಕ್ಷಣೆ, ರಾಜಕೀಯ ಕುರಿತಾಗಿ ಯಾವುದೇ ಅರಿವು ಇಲ್ಲ. ಇಂಥ ಮಂದ ಬುದ್ಧಿ ವಿದ್ಯಾರ್ಥಿಗಳು ವಾಸ್ತವದಲ್ಲಿ ಭಾವುಕಜೀವಿಗಳು ಎಂಬಂತಹ ಅಭಿಪ್ರಾಯಗಳು ವ್ಯಕ್ತವಾಗಿವೆ. ಪರ-ವಿರೋಧ ಚರ್ಚೆಗಳ ನಡುವೆ ಭಾರತದ ಪ್ರಧಾನಿ ಯಾರೆಂಬ ಪ್ರಶ್ನೆಗೆ ಯುವಕರು ತಡಕಾಡಿದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಭಾರತದ ಪ್ರಧಾನಿ ಯಾರೆಂದೇ ಗೊತ್ತಿಲ್ಲ!
ವೈರಲ್ ಆಗಿರುವ ವಿಡಿಯೋದಲ್ಲಿ ಯುಟ್ಯೂಬರ್ ಒಬ್ಬ 'ಭಾರತದ ಪ್ರಧಾನಮಂತ್ರಿ ಯಾರೆಂದು ಪ್ರಶ್ನಿಸಿದಾಗ Gen Z ಯುವಕರು ನೀಡಿದ ಉತ್ತರಗಳು ಕೇಳಿ ದಂಗುಬಡಿಯುವುದೊಂದೇ ಬಾಕಿ. ಒಂದು ರಸ್ತೆಯಲ್ಲಿ ನಡೆದುಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ಯುಟ್ಯೂಬರ್‌ನೊಬ್ಬ ಪ್ರಶ್ನೆ ಕೇಳುತ್ತಾರೆ, 'ಭಾರತದ ಪ್ರಸ್ತುತ ಪ್ರಧಾನ ಮಂತ್ರಿ ಯಾರು?' ತಕ್ಷಣ ಉತ್ತರ ಬರುತ್ತೆ 'ಪಡ್ನಾವಿಸ್!
ಇನ್ನೊಬ್ಬ ಜೆನ್‌ಜಿ ಯುವತಿಗೆ ಇದೇ ಪ್ರಶ್ನೆ ಕೇಳಿದಾಗ ದ್ರೌಪದಿ ಮುರ್ಮು ಅಂತಾ ಹೇಳ್ತಾಳೆ. ಇನ್ನೊಬ್ಬನಂತೂ 'I have no clue..' ಎಂಬ ಪ್ರತಿಕ್ರಿಯೆ. ಅಂದರೆ ಇವರಿಗೆ ಭಾರತದ ಪ್ರಧಾನಿಗಳು, ರಾಷ್ಟ್ರಪತಿಗಳು, ಮುಖ್ಯಮಂತ್ರಿಗಳೇ ಯಾರೆಂದು ಗೊತ್ತಿಲ್ಲ.
ಇದು ಈಗಿನ ಜೆನ್-ಝಡ್‌ಗಳ ಬುದ್ಧಿ ಮಟ್ಟ!
ವಿಡಿಯೋ ಬಗ್ಗೆ ನೂರಾರು ನೆಟಿಜೆನ್ಸ್ ಪ್ರತಿಕ್ರಿಯಿಸಿದ್ದಾರೆ. 'ಜೆನ್-ಜಿಗಳ ಅವಸ್ಥೆ ಇದು. ಇವರಿಗೆಲ್ಲ ದೇಶದ ಬಗ್ಗೆಯಾಗಲಿ, ರಾಜಕೀಯ, ವಿದೇಶಾಂಗ ನೀತಿ, ಭಾರತದ ಆಡಳಿತ ಹೂಂ ಯಾವುದರ ಬಗ್ಗೆಯೂ ಅಷ್ಟಾಗಿ ಜ್ಞಾನವಿಲ್ಲ ಆಸಕ್ತಿಯಿಲ್ಲ ಎಂದು ಬೇಸರ ವ್ಯಕ್ತಪಡಿಸಿದರೆ, ಮತ್ತೊಬ್ಬ, 'ಇವರೇ ನೋಡಿ ಭಾರತದ ಭವಿಷ್ಯದ ನಾಗರಿಕರು!' ಎಂದು ಆಘಾತ ವ್ಯಕ್ತಪಡಿಸಿದ್ದಾರೆ. ಮಗದೊಬ್ಬ ಶಾಲೆಗಳಲ್ಲಿ ಪಠ್ಯಪುಸ್ತಕಗಳು ಬದಲಾಗಬೇಕು ಎಂದು ಆಗ್ರಹಿಸಿದ್ದಾರೆ.


