ಎಲಾನ್ ಮಸ್ಕ್ ಹಾರುವ ಕಾರು ಭಾರಿ ಕೋಲಾಹಲ ಎಬ್ಬಿಸಿದೆ. ಸ್ಪೇಸ್ ಎಕ್ಸ್ ತಂತ್ರಜ್ಞಾನ ಬಳಸಿ ಟೆಸ್ಲಾ ಕಂಪನಿ ಹಾರುವ ಕಾರು ಬಿಡುಗಡೆ ಮಾಡಿದೆ. ಆದರೆ ಇದು ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿಯಿಂದ ಕಾಪಿ ಮಾಡಾಲಾಗಿದೆ ಎಂದು ಹಲವರು ಮೀಮ್ಸ್ ಹರಿಬಿಟ್ಟಿದ್ದಾರೆ.

ನವದೆಹಲಿ (ಅ.18) ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಾರು ಕಂಪನಿ ಹಾರುವ ಕಾರು ಬಿಡುಗಡೆ ಮಾಡಿದೆ. ಹಲವು ವಿಶೇಷತೆ, ಅತ್ಯಾಧುನಿಕ ತಂತ್ರಜ್ಞಾನಗಳ ಈ ಕಾರು ಹಾರುವ ಸಾಮರ್ಥ್ಯ ಹೊಂದಿದೆ. ಭವಿಷ್ಯದ ಕಾರನ್ನು ಪರಿಚಯಿಸುವ ವೇಳೆ ಕಾರು ಭೂಮಿಯ ಗುರತ್ವಾಕರ್ಷಕಣಾ ಶಕ್ತಿ ವಿರುದ್ಧವೇ ಸಾಗಿ ಯಶಸ್ವಿಯಾಗಿ ಲ್ಯಾಂಡ್ ಆದ ವಿಡಿಯೋ ಭಾರಿ ವೈರಲ್ ಆಗಿದೆ. ಟೆಸ್ಲಾ ತಂತ್ರಜ್ಞಾನಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ಎಲಾನ್ ಮಸ್ಕ್ ಹಾರುವ ಕಾರು ಭಾರತದಲ್ಲಿ ಫುಲ್ ಮೀಮ್ಸ್ ಮೂಲಕ ಸದ್ದು ಮಾಡುತ್ತಿದೆ. ಭಾರತದಲ್ಲಿ ಎಲಾನ್ ಮಸ್ಕ್ ತಂತ್ರಜ್ಞಾನ ವರ್ಕ್ ಆಗಲ್ಲ. ಇಲ್ಲಿ ಕಾರು ಹಾರಿದರೆ ಲ್ಯಾಂಡ್ ಆಗಲ್ಲ, ವೈರ್‌ಗಳಲ್ಲಿ ಸಿಲುಕಿ ಅಲ್ಲೇ ಇರಲಿದೆ ಎಂದು ಹಲವರು ಟ್ರೋಲ್ ಮಾಡಿದ್ದಾರೆ. ಮತ್ತೆ ಕೆಲವರು ಇದು ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಸಿನಿಮಾದಿಂದ ಕಾಪಿ ಮಾಡಿದ ಕಾನ್ಸೆಪ್ಟ್ ಎಂದಿದ್ದಾರೆ.

ಟೆಸ್ಲಾ ವಿಡಿಯೋ ಬೆನ್ನಲ್ಲೇ ಭಾರತದಲ್ಲಿ ಮೀಮ್ಸ್

ಟೆಸ್ಲಾ ಹಾರುವ ಕಾರಿನ ಕುರಿತ ವಿಡಿಯೋ ಒಂದನ್ನು ಟೆಸ್ಲಾ ಬಿಡುಗಡೆ ಮಾಡಿದೆ. ಇದರಲ್ಲಿ ಸಿ ಕರ್ವ್ ರೀತಿಯ ಕಮಾನಿನ ಮೂಲಕ ಕಾರು ಚಲಾಯಿಸಲಾಗುತ್ತದೆ. ಭೂಮಿಯಿಂದ ಸಿ ಕರ್ವ್ ಕಮಾನು ಮೂಲಕ ಟೆಸ್ಲಾ ಹಾರುವ ಕಾರು ಗುರುತ್ವಾಕರ್ಷಣ ಶಕ್ತಿಗೆ ಸೆಡ್ಡಿ ಹೊಡೆದು ಚಲಿಸಿದೆ. ಬಳಿಕ ನೇರವಾಗಿ ಆಕಾಶದಲ್ಲಿ ಪಲ್ಟಿಯಾಗಿ ಭೂಮಿಯಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಗಿದೆ.

ರೋಹಿತ್ ಶೆಟ್ಟಿ ಕಾಪಿ ಮಾಡಬೇಡಿ

ಎಲಾನ್ ಮಸ್ಕ್ ಹಾರುವ ಕಾರಿನ ವಿಡಿಯೋ ಸದ್ದು ಮಾಡುತ್ತಿದ್ದಂತೆ ಭಾರತದಲ್ಲಿ ಟ್ರೋಲ್ ಆಗುತ್ತಿದೆ. ಬಾಲಿವುಡ್ ಸಿನಿಮಾದಲ್ಲಿ ರೋಹಿತ್ ಶೆಟ್ಟಿ ಹಲವು ವರ್ಷಗಳ ಹಿಂದೆ ಹಾರುವ ಕಾರನ್ನು ಪರಿಚಯಿಸಿದ್ದಾರೆ. ಹೀಗಾಗಿ ಡಿಯರ್ ಎಲಾನ್ ಮಸ್ಕ್ ರೋಹಿತ್ ಶೆಟ್ಟಿ ಕಾಪಿ ಮಾಡುವುದು ನಿಲ್ಲಿಸಿ ಎಂದು ಸಲಹೆ ನೀಡಿದ್ದಾರೆ.

ರೋಹಿತ್ ಶೆಟ್ಟಿಯ ಸಿನಿಮಾಗಳಲ್ಲಿ ಆ್ಯಕ್ಷನ್ ಸೀಕ್ವೆನ್ಸ್ ಹೆಚ್ಚಿರುತ್ತದೆ. ಅದರಲ್ಲೂ ವಾಹನದಲ್ಲಿ ಚೇಸಿಂಗ್ , ಫೈಟಿಂಗ್ ಅಥವಾ ರೊಮ್ಯಾಂಟಿಕ್ ಸೀನ್‌ನಲ್ಲೂ ಆ್ಯಕ್ಷನ್ ಸೀಕ್ವೆನ್ಸ್ ಬಳಸುತ್ತಾರೆ. ಸಿಂಘಮ್ ಹಾಗೂ ಸೂರ್ಯವಂಶಿ ಸಿನಿಮಾದಲ್ಲಿ ಈ ರೀತಿಯ ಹೈಡ್ರಾಮ ಸೀನ್ ಬಳಸಲಾಗಿದೆ. ಎಲಾನ್ ಮಸ್ಕ್ ಹಾರುವ ಕಾರಿಗೂ ರೋಹಿತ್ ಶೆಟ್ಟಿಯ ಸಿನಿಮಾ ಸೀನ್‌ಗೂ ಸಾಮ್ಯತೆ ಇದೆ.

ಭಾರತದಲ್ಲಿ ಆಗಲ್ಲ ಎಂದ ನೆಟ್ಟಿಗರು

ಎಲಾನ್ ಮಸ್ಕ್ ಅತ್ಯಾಧುನಿಕ ತಂತ್ರಜ್ಞಾನದ ಹಾರುವ ಕಾರು ಭಾರತದಲ್ಲಿ ಬಿಡುಗಡೆ ಮಾಡಲು ಸಾಧ್ಯವಿಲ್ಲ. ಇಲ್ಲಿ ಟ್ರಾಫಿಕ್ ನಡುವೆ ಕಾರು ಮೇಲಕ್ಕೆ ಹಾರಿದರೆ, ಮತ್ತೆ ಲ್ಯಾಂಡ್ ಮಾಡಲು ಜಾಗವೇ ಇರಲ್ಲ. ಅಷ್ಟರೊಳಗೆ ವಾಹನಗಳು ರಸ್ತೆಯಲ್ಲಿ ತುಂಬಿರುತ್ತದೆ. ಒಂದು ವೇಳೆ ಲ್ಯಾಂಡ್ ಮಾಡಿದರೂ ವಾಹನಗಳ ಮೇಲೆ ಲ್ಯಾಂಡ್ ಆಗಿ ನಜ್ಜು ಗುಜ್ಜಾಗಲಿದೆ ಎಂದು ಟ್ರೋಲ್ ಮಾಡಿದ್ದಾರೆ. ಇನ್ನು ಭಾರಿ ಟ್ರಾಫಿಕ್ ಎಂದು ಮೇಲಕ್ಕೆ ಹಾರಿದರೆ, ಎಳೆದಿರುವ ವೈರ್‌ಗೆ ಸಿಲುಕಲಿದೆ ಎಂದು ಟ್ರೋಲ್ ಮಾಡಿದ್ದಾರೆ.

Scroll to load tweet…