Gemini Nano Banana AI: ಓರ್ವ ಯುವತಿ ಈ Banana AI ತಂತ್ರಜ್ಞಾನದ ಬಗ್ಗೆ ಶಾಕಿಂಗ್ ಮಾಹಿತಿ ರಿವೀಲ್ ಮಾಡಿದ್ದು, ತನ್ನ ಫೋಟೋದ ಮೂಲಕ ಉದಾಹರಣೆಗಳನ್ನು ನೀಡುವ ಮೂಲಕ ಅದನ್ನು ವಿವರಿಸಿದ್ದಾಳೆ. ಬಹುಶಃ ಅವಳು ಹೇಳುವುದನ್ನು ಕೇಳಿದ ಮೇಲೆ ನೀವು…
ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನ ಹೊಸ ಟ್ರೆಂಡ್ ಬರುತ್ತಲೇ ಇರುತ್ತದೆ. ನೀವು ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿಯೂ ಸಕ್ರಿಯರಾಗಿದ್ದರೆ, AI 3D ಫೋಟೋದ ಹೊಸ ಟ್ರೆಂಡ್ ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ಹರಡುತ್ತಿರುವುದನ್ನು ಗಮನಿಸಿರಬಹುದು. ಆದರೆ ಈ ಪ್ರವೃತ್ತಿಯಲ್ಲಿ ಎಲ್ಲವೂ ಒಳ್ಳೆಯದಿದೆಯೇ ಅಥವಾ ಅದರಿಂದ ಏನಾದರೂ ಅಪಾಯಗಳಿವೆಯೇ? ಇದಕ್ಕೆ ಉತ್ತರಿಸುವ ಮೊದಲು Google Gemini AI ನ 'Nano Banana' ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದುಕೊಳ್ಳೋಣ.
ಇದರಲ್ಲಿ ಜನರು Google Gemini ನ Nano Banana AI ಅಪ್ಲಿಕೇಶನ್ ಮೂಲಕ ವಿವಿಧ ಪ್ರಾಂಪ್ಟ್‌ಗಳೊಂದಿಗೆ ತಮ್ಮ ಫೋಟೋ ಕ್ರಿಯೆಟ್ ಮಾಡ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ, Banana AI ನಲ್ಲಿ ಮಹಿಳೆಯರಿಗಾಗಿ ಸೀರೆ ಟ್ರೆಂಡ್ ನಡೆಯುತ್ತಿದೆ. ಮಹಿಳೆಯರು ಈ ಅಪ್ಲಿಕೇಶನ್‌ನ ಸಹಾಯದಿಂದ ಒಂದರ ನಂತರ ಒಂದರಂತೆ ತಮ್ಮ ಸೀರೆ ಫೋಟೋಗಳನ್ನು ಕ್ರಿಯೇಟ್ ಮಾಡುತ್ತಿದ್ದು, ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದಕ್ಕೆ ಬಹಳಷ್ಟು ಲೈಕ್ಸ್ ಕೂಡ ಸಿಗುತ್ತಿರುವುದರಲ್ಲಿ ಅತಿಶಯೋಕ್ತಿ ಏನಿಲ್ಲ. ಆದರೆ ಇದೀಗ ಓರ್ವ ಯುವತಿ ಈ Banana AI ತಂತ್ರಜ್ಞಾನದ ಬಗ್ಗೆ ಶಾಕಿಂಗ್ ಮಾಹಿತಿ ರಿವೀಲ್ ಮಾಡಿದ್ದು, ತನ್ನ ಫೋಟೋದ ಮೂಲಕ ಉದಾಹರಣೆಗಳನ್ನು ನೀಡುವ ಮೂಲಕ ಅದನ್ನು ವಿವರಿಸಿದ್ದಾಳೆ. ಬಹುಶಃ ಅವಳು ಹೇಳುವುದನ್ನು ಕೇಳಿದ ಮೇಲೆ ನೀವು ಅಂತಹ ಅಪ್ಲಿಕೇಶನ್‌ನಲ್ಲಿ ನಿಮ್ಮ ಫೋಟೋಗಳನ್ನು ಕ್ರಿಯೇಟ್ ಮಾಡೊಲ್ಲ ಬಿಡಿ.
ಶಾಕಿಂಗ್ ಮಾಹಿತಿ ರಿವೀಲ್ ಮಾಡಿದ ಯುವತಿ
ಝಲಕ್ ಭಾವ್ನಾನಿ ಎಂಬ ಯುವತಿ ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಈ ವಿಡಿಯೋ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅವರು ಈ ಸೀರೆ ಫೋಟೋ ಟ್ರೆಂಡ್ ಟ್ರೈ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ ತಾನು ಫುಲ್ ಸ್ಲೀವ್‌ನ ಹಸಿರು ಸೂಟ್‌ನಲ್ಲಿ ತನ್ನ ಫೋಟೋವನ್ನು ಅಪ್‌ಲೋಡ್ ಮಾಡಿದ್ದೆ. ಈ ಫೋಟೋಗೆ ಪ್ರತಿಕ್ರಿಯೆಯಾಗಿ ಕಪ್ಪು ಸೀರೆ ಮತ್ತು ಬ್ಲೌಸ್‌ನಲ್ಲಿ Banana AI ನಿಂದ ಫೋಟೋವನ್ನು ಪಡೆದುಕೊಂಡೆ. ಆದರೆ ಇದು ಶಾಕಿಂಗ್ ವಿಷಯವಲ್ಲ. ನಿಮಗೆ ಈಗಾಗಲೇ ವಿಡಿಯೋದಲ್ಲಿ ತೋರಿಸಿರುವ ಹಾಗೆ ಫುಲ್ ಸ್ಲೀವ್‌ನ ಸೂಟ್‌ನಲ್ಲಿ ಫೋಟೋವನ್ನು ಹಂಚಿಕೊಂಡಿದ್ದೇನೆ. ಸೂಟ್‌ನ ಸ್ಲೀವ್ಸ್ ಕ್ಲೋಸ್ ಆಗಿದೆ. ಆದರೆ ಕೈಯ ಮೇಲ್ಭಾಗದಲ್ಲಿ ಮಚ್ಚೆ ಇದೆ ಎಂದು Banana AI ಹೇಗೆ ಗೊತ್ತಾಯ್ತು?. ಆದ್ದರಿಂದ ಹುಡುಗಿಯರ ಸುರಕ್ಷತೆ ದೃಷ್ಟಿಯಿಂದ ಈ ಅಪ್ಲಿಕೇಶನ್ ಅಪಾಯಕಾರಿ ಎಂದು ಯುವತಿ ಹೇಳಿಕೊಂಡಿದ್ದಾಳೆ. ಇಂತಹ ಯಾವುದೇ ಟ್ರೆಂಡ್ ಫಾಲೋ ಮಾಡುವ ಮೊದಲು ಹುಡುಗಿಯರು ಮತ್ತು ಮಹಿಳೆಯರು ನೂರು ಬಾರಿ ಯೋಚಿಸಬೇಕು ಎಂದು ತಿಳಿಸಿದ್ದಾರೆ.
ಬೆಚ್ಚಿ ಬಿದ್ದ ನೆಟ್ಟಿಗರು
ಈಗ ಜನರು ಝಲಕ್‌ನ ಈ ಮಾಹಿತಿ ಹಂಚಿಕೊಂಡ ಮೇಲೆ ಶಾಕ್ ಆಗಿದ್ದು, ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. 'ಹಾಯ್ ಝಲಕ್, ಜನರಿಗೆ ಅರಿವು ಮೂಡಿಸಲು ನಾನು ನಿಮ್ಮ ಪ್ರಕರಣವನ್ನು ತೋರಿಸಬಹುದೇ?', 'ಹೌದು, ನಾನು ಸಹ ಇದನ್ನು ಗಮನಿಸಿದ್ದೇನೆ', 'ಎಚ್ಚರಿಕೆಯಿಂದಿರಿ ಮತ್ತು ಜಾಗರೂಕರಾಗಿರಿ, ಓ ಮೈ ಗಾಡ್, ನಾನು ರಕ್ಷಿಸಲ್ಪಟ್ಟೆ', 'ಇಂದು ಇಂತಹ ಫೋಟೋ ಅಪ್ಲಿಕೇಶನ್‌ಗಳನ್ನು ಯಾರು ಬಳಸುತ್ತಿದ್ದರೂ, ಮುಂಬರುವ ವರ್ಷಗಳಲ್ಲಿ ಇವುಗಳಿಂದ ದೊಡ್ಡ ಅಪಾಯ ಉಂಟಾಗಲಿದೆ, ಜನರು ಕಾರ್ಪೊರೇಟ್‌ಗಳ ತಂತ್ರಗಳನ್ನು ಅರ್ಥಮಾಡಿಕೊಳ್ಳಬೇಕು' 'ಜನರು ಇಂತಹ ಅನುಪಯುಕ್ತ ಪ್ರವೃತ್ತಿಗಳಿಂದ ದೂರವಿರಬೇಕು' ಎಂದೆಲ್ಲಾ ಕಾಮೆಂಟ್ ಮಾಡಿರುವುದನ್ನು ನೀವಿಲ್ಲಿ ಗಮನಿಸಬಹುದು.
ಜೆಮಿನಿ ಕೆಲವೊಮ್ಮೆ ತನ್ನದೇ ಆದ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ವಿಷಯವನ್ನು ರಚಿಸಬಹುದು ಎಂದು ಗೂಗಲ್ ಸ್ವತಃ ಹೇಳುವುದನ್ನು ನೀವಿಲ್ಲಿ ಗಮನಿಸಬಹುದು.