ಖ್ಯಾತ ಯೂಟ್ಯೂಬರ್ ಸ್ವೀಟಿ ರಂಜನ್ ನಾಲ್ಕು ವರ್ಷಗಳ ನಂತರ ಅಮೆರಿಕ ತೊರೆದು ಕುಟುಂಬ ಸಮೇತ ಭಾರತಕ್ಕೆ ಮರಳಿದ್ದಾರೆ. ಅಮೆರಿಕ ತೊರೆಯುವಾಗ ಅದೊಂದು ವಿಚಾರಕ್ಕೆ ಬೇಜಾರು ಆಗ್ತಿದೆ ಎಂದಿದ್ದಾರೆ. ಏನದು? ಸ್ಟೋರಿ ಓದಿ..

ನವದೆಹಲಿ: ಉದ್ಯೋಗ ಮತ್ತು ಬದುಕಿನ ಹೊಸ ಕನಸು ಕಂಡು ಅಮೆರಿಕಗೆ ಹೋಗಿ ನೆಲೆಸಿದವರು ಅನೇಕರು ಇದ್ದಾರೆ. ಹೇಗಿದೆ ನೋಡೋಣ ಫಾರಿನ್ ಲೈಫ್, ಅಡ್ಜೆಸ್ಟ್ ಆದರೆ ಇರೋಣ. ಆಗದಿದ್ದರೆ ಬಂದು ಬಿಡೋಣ ಅನ್ಕೊಂಡು ಹೋದವರು ಅಲ್ಲೇ ಶಾಶ್ವತವಾಗಿ ನೆಲೆಸಿದವರೂ ಇದ್ದಾರೆ. ಅಂತೆಯೇ ಕಳೆದ ನಾಲ್ಕು ವರ್ಷಗಳ ಹಿಂದೆ ಖ್ಯಾತ ಯೂಟ್ಯೂಬರ್ ಒಬ್ಬರು ಅಮೆರಿಕಗೆ ಹೋಗಿ ನೆಲೆಸಿದ್ದರು. ಇದೀಗ ಅವರು ತಾಯ್ನಾಡಿಗೆ ದಿಢೀರ್ ವಾಪಸ್ ಆಗಿದ್ದಾರೆ. ಭಾರತಕ್ಕೆ ಬಂದಿರುವ ಅವರು ಇಲ್ಲಿನ ಮೊದಲ ವಿಡಿಯೋ ಶೇರ್ ಮಾಡಿದ್ದಾರೆ.

ಅಮೆರಿಕದಿಂದ ಭಾರತಕ್ಕೆ ವಾಪಸ್ ಆಗುತ್ತಿರುವ ಕಂಟೆಂಟ್ ಕ್ರಿಯೇಟರ್ ಬೇರೆ ಯಾರೂ ಅಲ್ಲ. ಸ್ವೀಟಿ ರಂಜನ್. ಇವರು ಕುಟುಂಬ ಸಮೇತ ಅಮೆರಿಕದಿಂದ ವಾಪಸ್ ಆಗಿದ್ದಾರೆ. ಈ ಬಗ್ಗೆ ವಿಡಿಯೋದಲ್ಲಿ ತಿಳಿಸಿದ್ದಾರೆ. ಅಮೆರಿಕದಿಂದ ಹೊರಡುವ ಮೊದಲು ಮಾಡಿದ್ದ ವಿಡಿಯೋದಲ್ಲಿ ಅವರು, ಅಮೆರಿಕದಿಂದ ಬರುತ್ತಿರೋದಕ್ಕೆ ನೋವಿನಲ್ಲಿ ಮಾತನ್ನಾಡಿದ್ದರು. ನಾವೆಲ್ಲರೂ ಕುಟುಂಬ ಸಮೇತ ಭಾರತಕ್ಕೆ ಬರುತ್ತಿದ್ದೇವೆ. ನಮ್ಮ ಈ ನಿರ್ಧಾರಕ್ಕೆ ನಿಮ್ಮ ಪ್ರೀತಿ ಹಾಗೂ ಬೆಂಬಲ ಇದ್ದೇ ಇರುತ್ತದೆ ಎಂದು ನಂಬುತ್ತೇನೆ. ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದರು.

ನಮಗೆ ಅಮೆರಿಕ ತೊರೆಯುವ ಬಗ್ಗೆ ತನಗೆ ಹೆಚ್ಚಿನ ಬೇಸರವಿಲ್ಲ. ಆದರೆ ನಾಲ್ಕು ವರ್ಷಗಳ ಕಾಲ ಪ್ರೀತಿಯಿಂದ ಬೆಳೆಸಿದ ತಮ್ಮ ಗಾರ್ಡನ್ ಬಿಟ್ಟುಬರಲು ತುಂಬಾ ಬೇಸರವಾಗುತ್ತಿದೆ. ನಾವು ಅಮೆರಿಕದಲ್ಲಿರುವ ಕಾರನ್ನು ಮಾತ್ರ ಮಾರಾಟ ಮಾಡುತ್ತೇವೆ. ಉಳಿದ ವಸ್ತುಗಳನ್ನು ಹಡಗಿನ ಮೂಲಕ ಭಾರತಕ್ಕೆ ತರಲಾಗುವುದು ಎಂದಿದ್ದಾರೆ.

ಅಮೆರಿಕ ತೊರೆದಿದ್ದು ಯಾಕೆ?

ಇನ್ನು ತಾವು ದಿಢೀರ್ ಅಮೆರಿಕ ತೊರೆಯುತ್ತಿರುವ ಬಗ್ಗೆ ಅವರು ಕಾರಣ ನೀಡಿದ್ದಾರೆ. ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ನನ್ನ ಪತಿಗೆ ಭಾರತಕ್ಕೆ ವರ್ಗಾವಣೆ ಆಗಿದೆ. ಹಾಗಾಗಿ ನಾವು ಭಾರತಕ್ಕೆ ದಿಢೀರ್ ಮರಳುತ್ತಿರೋದು ಅನಿವಾರ್ಯವಾಗಿದೆ. ತಮ್ಮ ಪತಿ ರವೀಶ್‌ ಅವರಿಗೆ ಉದ್ಯೋಗದ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಭಾರತಕ್ಕೆ ವಾಪಸ್ ಬರುತ್ತಿರೋದಾಗಿ ಹೇಳಿದ್ದಾರೆ. ಇದೇ ವೇಳೆ ಅವರು ತಮ್ಮ ಪುತ್ರನ ಬಗ್ಗೆ ವಿವರಿಸಿದ್ದಾರೆ. ನನ್ನ ಮಗ ಭಾರತಕ್ಕೆ ಸದ್ಯ ಬರೋದಿಒಲ್ಲ. ಅಮೆರಿಕದಲ್ಲೇ ಇದ್ದೂ ವಿದ್ಯಾಭ್ಯಾಸ ಮಾಡಲಿದ್ದಾನೆ ಎಂದು ತಿಳಿಸಿದ್ದಾರೆ.

ಇನ್ನು ಅಮೆರಿಕದಿಂದ ವಾಪಸ್ ಆಗಿರುವ ಸ್ವೀಟ್ ರಂಜನ್ ಭಾರತದಲ್ಲಿನ ವಿಡಿಯೋವನ್ನೂ ಶೇರ್ ಮಾಡಿದ್ದಾರ ವಿತೆ. ಭಾರತಕ್ಕೆ ಬರುವ ಮೊದಲೇ ಅವರು ವಿಡಿಯೋದಲ್ಲಿ ಹೇಳೊದ್ದರು. ನಾವು ಭಾರತದಲ್ಲಿ ವಿಡಿಯೋ ಮೂಲಕ ಮತ್ತೆ ನಾನು ನಿಮಗೆ ಸಿಗುತ್ತೇನೆ. ವಿಡಿಯೋ ಭಾರತದ್ದಾಗಿರುತ್ತದೆ. ಇನ್ನು, ಅಮೆರಿಕದಿಂದ ವಿಡಿಯೋ ಮಾಡಲು ಅವಕಾಶ ಸಿಗೋದಿಲ್ಲ ಎಂದಿದ್ದರು.

ಸ್ವೀಟಿ ರಂಜನ್ ಅವರ ವಿಡಿಯೋಗೆ ಸಾಕಷ್ಟು ವೀಕ್ಷಣೆಗಳು ಲಭಿಸಿವೆ. ಹಲವರು ಅವರ ನಿರ್ಧಾರಕ್ಕೆ ಶುಭ ಹಾರೈಸಿದ್ದರೆ, ಇನ್ನು ಕೆಲವರು ಅವರ ಗಾರ್ಡನ್ ಅನ್ನು ಮಿಸ್ ಮಾಡಿಕೊಳ್ಳುವುದಾಗಿ ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ನಾಲ್ಕು ವರ್ಷಗಳ ಅಮೆರಿಕ ಜೀವನಕ್ಕೆ ವಿದಾಯ ಹೇಳಿ ಭಾರತಕ್ಕೆ ಮರಳುತ್ತಿರುವ ಕುಟುಂಬದ ನಿರ್ಧಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

View post on Instagram
 

View post on Instagram