ಚೀನಾದ ಮಹಿಳೆಯೊಬ್ಬರು ತನ್ನ ಅಳುವ ಮಗುವನ್ನು ಶಾಂತಗೊಳಿಸಲು ಹನುಮಾನ್ ಚಾಲೀಸಾ ಪಠಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೇವಲ ಎರಡು ನಿಮಿಷಗಳಲ್ಲಿ ಮಗು ನಿದ್ದೆಗೆ ಜಾರುವ ಈ ಪವಾಡವನ್ನು ಕಂಡು ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ.

ಚೀನಾದ ಮಹಿಳೆಯೊಬ್ಬರು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್‌ನಲ್ಲಿದ್ದಾರೆ. ಅದಕ್ಕೆ ಕಾರಣ.. ತನ್ನ ಮಗು ಅತ್ತಾಗಲೆಲ್ಲ ಹನುಮಾನ್ ಚಾಲೀಸಾ ಪಠಣ ಮಾಡುವ ವಿಚಾರಕ್ಕೆ.. ಹೌದು, ಚೀನಾದ ಮಹಿಳೆಗೂ ಹನುಮಾನ್ ಚಾಲೀಸಾಗೂ ಏನು ಸಂಬಂಧ ಎಂದು ನೀವು ಕೇಳಬಹುದು. ಆದರೆ, ಆಕೆಗೆ 'ಹನುಮಾನ್ ಚಾಲೀಸಾ'ದ ಶಕ್ತಿ ಏನು ಅನ್ನೋದು ಗೊತ್ತಾಗಿದೆ.

ಸಾರಾ ಜೇನ್ (sara janeho) ಎಂಬ ಮಹಿಳೆ ತನ್ನ ದಿನಚರಿಯನ್ನು ಇನ್‌ಸ್ಟಾಗ್ರಾಮನ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನನ್ನ ಮಗು ಅಳುವಾಗಲೆಲ್ಲಾ ನಾನು ಹನುಮಾನ್ ಚಾಲೀಸಾ ಪಠಿಸುತ್ತೇನೆ. ನಂತರ ಮಗು ಆಳವಾದ ನಿದ್ರೆಗೆ ಜಾರುತ್ತದೆ. ಇದೇ ವೇಳೆ ಹನುಮಾನ್ ಚಾಲೀಸಾ ತನಗೆ ಹೇಗೆ ತಿಳಿದಿತ್ತು ಎಂಬುದನ್ನು ಅವರು ವಿವರಿಸಿದ್ದಾರೆ. ವೀಡಿಯೊವನ್ನು ನೋಡುವುದರಿಂದ ನೀವು ಆಶ್ಚರ್ಯಚಕಿತರಾಗುವಿರಿ. ಬಳಕೆದಾರರು ಇದಕ್ಕೆ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ..

ವಾಸ್ತವವಾಗಿ.. 40 ವರ್ಷದ ಅಮೇರಿಕನ್ ಮಹಿಳೆ ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. ಅವರು ತಮ್ಮ ತಾಯ್ತನದ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ತಮ್ಮ ಮಗುವಿನೊಂದಿಗೆ ತಮ್ಮ ದಿನಗಳನ್ನು ಹೇಗೆ ಕಳೆಯುತ್ತಿದ್ದಾರೆ ಎಂಬುದನ್ನ ವಿವರಿಸಿದ್ದಾರೆ. ಅದೇ ವಿಡಿಯೋದಲ್ಲಿ ಸಾರಾ ತಮ್ಮ ಮಗುವಿನ ದಿನಚರಿಗೆ ಸಂಬಂಧಿಸಿದ ಹಲವಾರು ವಿಷಯಗಳನ್ನು ಉಲ್ಲೇಖಿಸಿದ್ದಾರೆ. ಅವುಗಳಲ್ಲಿ ಒಂದು ಹನುಮಾನ್ ಚಾಲೀಸಾ ಕೂಡ ಒಂದಾಗಿದೆ.

ಮಹಿಳೆ ಹೇಳಿದ್ದೇನು?

ಮಗು ಹಠ ಮಾಡುವಾಗ ಅಥವಾ ಜೋರಾಗಿ ಅಳುತ್ತಿರುವಾಗ.. ಭಾರತೀಯ ಭಕ್ತಿಗೀತೆ ‘ಹನುಮಾನ್ ಚಾಲೀಸಾ’ ಹಾಕಿದರೆ ಅದು ಕೇವಲ 5 ಸೆಕೆಂಡುಗಳಲ್ಲಿ ಸುಮ್ಮನಾಗಿ ಬಿಡುತ್ತದೆ. 2 ನಿಮಿಷಗಳಲ್ಲಿ ನಿದ್ದೆಗೆ ಜಾರುತ್ತದೆ! ನಾನು 'ಬರ್ನಿಂಗ್ ಮ್ಯಾನ್' ಕಾರ್ಯಕ್ರಮಕ್ಕೆ ಹೋದಾಗ ಭಾರತೀಯ ಸ್ನೇಹಿತರಿಂದ ಈ ಹಾಡನ್ನು ಕೇಳಿ ತಿಳಿದುಕೊಂಡೆ. ಈಗ ಪ್ರತಿದಿನ ಬೆಳಗ್ಗೆ ಇದನ್ನು ಹಾಕುತ್ತೇನೆ ಎಂದಿದ್ದಾರೆ.

ಇನ್ನೂ ಮುಂದುವರಿದು.. ಮಗುವಿಗೆ ಎದೆಹಾಲು ಪಂಪ್ ಮಾಡಿ ಕೊಡುತ್ತಿರುವ ಬಾಡಿಗೆ ತಾಯಿಗೆ ನಾನು ಕಡಲೆಕಾಯಿ ಮತ್ತು ಸೋಯಾ ಹಾಲನ್ನು ಕಳುಹಿಸುತ್ತಿದ್ದೇನೆ. ಇದರಿಂದ ಮಗುವಿಗೆ ಮುಂದೆ ಯಾವುದೇ ಅಲರ್ಜಿ ಬರುವುದಿಲ್ಲ. ಮಗುವಿನ ಬರಿಗಾಲುಗಳು ಕಲ್ಲು, ಹುಲ್ಲು ಅಥವಾ ಮಣ್ಣಿನಂತಹ ನೈಸರ್ಗಿಕ ಮೇಲ್ಮೈಗಳನ್ನು ಸ್ಪರ್ಶಿಸುವುದರಿಂದ ಅವರ ನರಮಂಡಲ ಮತ್ತು ದೈಹಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಆದ್ದರಿಂದ ನಾನು ಪ್ರತಿದಿನ ಮಗುವನ್ನು ತೋಟಕ್ಕೆ ಕರೆದೊಯ್ದು 'ಗ್ರೌಂಡಿಂಗ್' (ನೆಲಕ್ಕೆ ಸ್ಪರ್ಶಿಸುವಂತೆ) ಮಾಡುತ್ತೇನೆ. ಪುಟ್ಟ ಮಕ್ಕಳ ಪಾದಗಳಲ್ಲಿ 2 ಲಕ್ಷಕ್ಕೂ ಹೆಚ್ಚು ನರಗಳ ತುದಿಗಳಿರುತ್ತವೆ! ನನ್ನ ಮಗು ಜೆ ಜೊತೆ ಪ್ರಯತ್ನಿಸಲು ನೀವು ನೀಡುವ ಇನ್ಯಾವುದಾದರೂ ಸಲಹೆಗಳಿವೆಯೇ? ❤️ ಎಂದು ಬರೆದುಕೊಂಡಿದ್ದಾರೆ.

ಈ ವೀಡಿಯೊವನ್ನು ಈಗಾಗಲೇ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಅನೇಕರು ಇದನ್ನು ಇಷ್ಟಪಟ್ಟಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೊಗೆ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಒಬ್ಬ ಬಳಕೆದಾರರು ನಿಮ್ಮ ಮಗು ತುಂಬಾ ಮುದ್ದಾಗಿದೆ ಎಂದು ಬರೆದಿದ್ದಾರೆ. ಮತ್ತೊಬ್ಬರು ಸಂಗೀತ ಕೇಳುವುದರಿಂದ ಶಿಶುಗಳು ಶಾಂತವಾಗುತ್ತವೆ ಎಂದು ಬರೆದಿದ್ದಾರೆ. ಮತ್ತೊಬ್ಬರು ಎಂತಹ ಮುದ್ದಾದ ಮಗು! ಅವನು ಮಲಗಿರುವಾಗ ಇನ್ನೂ ಮುದ್ದಾಗಿರಬೇಕು ಎಂದು ಬರೆದಿದ್ದಾರೆ.

View post on Instagram