Amazing Wedding : ಬೆಂಗಳೂರಿನ ಮದುವೆಯೊಂದು ಎಲ್ಲರ ಗಮನ ಸೆಳೆದಿದೆ. ಮದುವೆ ಮನೆಗೆ ಬರೀ ಸಂಬಂಧಿಕರು ಮಾತ್ರವಲ್ಲ ದೇವರು ಬಂದಿದ್ದಾನೆ. ವಧು – ವರರಿಗೆ ಆಶೀರ್ವಾದ ಮಾಡಿದ ವಿಡಿಯೋ ವೈರಲ್ ಆಗಿದೆ.

ಸಾಲ ಮಾಡಿಯಾದ್ರೂ ಮದುವೆ (marriage) ಮಾಡು ಅನ್ನೋ ರೂಲ್ಸ್ ನ ಭಾರತೀಯರು ಕಟ್ಟುನಿಟ್ಟಾಗಿ ಪಾಲಿಸ್ತಿದ್ದಾರೆ. ದಿನ ದಿನಕ್ಕೂ ಮದುವೆ ವೈಭವ ಹೆಚ್ಚಾಗ್ತಾನೇ ಇದೆ. ನಾನೇನು ಕಮ್ಮಿ ಎನ್ನುವಂತೆ ಹೊಸ ಹೊಸ ಕಾನ್ಸೆಪ್ಟ್, ಭಿನ್ನ ಪದ್ಧತಿಗಳನ್ನು ಮದುವೆಯಲ್ಲಿ ನೋಡ್ಬಹುದು. ಹಿಂದೆ ಚಿಕ್ಕ ಮಂಟಪದಲ್ಲಿ ನಡೆಯುತ್ತಿದ್ದ ಮದುವೆಗಳು ಈಗಿಲ್ಲ. ಸಂಪ್ರದಾಯ ಏನೇ ಆಗ್ಲಿ ಅದ್ಧೂರಿತನಕ್ಕೆ ಇಲ್ಲಿ ಡಿಮ್ಯಾಂಡ್ ಹೆಚ್ಚು. ಲೈಟಿಂಗ್, ಬಣ್ಣದ ಹೂ, ಅಲಂಕಾರಿಕ ವಸ್ತುಗಳಿಂದ ಹೊಳೆಯುವ ವೇದಿಕೆ, ಡಿಜೆ ಸೌಂಡ್, ತಿಂದು ತೇಗಲಾರದಷ್ಟು ವೆರೈಟಿ ಅಡುಗೆ ಹೀಗೆ ಆಡಂಬರಕ್ಕೆ ಜನ ಆಕರ್ಷಿತರಾಗ್ತಿದ್ದಾರೆ. ಡೆಸ್ಟಿನೇಷನ್ ವೆಡ್ಡಿಂಗ್ ಹೆಸರಿನಲ್ಲಿ ಜನ ಕೈ ಖಾಲಿ ಮಾಡ್ಕೊಳ್ತಿದ್ದಾರೆ. ಸೆಲೆಬ್ರಿಟಿಗಳು ಮಾತ್ರವಲ್ಲ ಜನಸಾಮಾನ್ಯರು ಕೂಡ ಸಿನಿಮಾ ಸೆಟ್ ಹಾಕಿ, ಹಣವನ್ನು ನೀರಿನಂತೆ ಚೆಲ್ಲಿ ಮದುವೆ ಆಗ್ತಿದ್ದಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ಮದುವೆ ವಿಡಿಯೋ ವೈರಲ್ ಆಗಿದೆ. ಇಲ್ಲಿ ಮದುವೆ ಸೆಟ್ ಗಿಂತ ಮದುವೆ ಮನೆಗೆ ಬಂದ ಗೆಸ್ಟ್ ಎಲ್ಲರ ಗಮನ ಸೆಳೆದಿದ್ದಾರೆ.

ಮದುವೆ ಮನೆಗೆ ಬಂದ ʻʻದೇವರುʼʼ :

ಮದುವೆಯಲ್ಲಿ ಸಪ್ತಪದಿ, ತಾಳಿ ಶಾಸ್ತ್ರದ ನಂತ್ರ ವಧು – ವರರು ಹಿರಿಯರ ಆಶೀರ್ವಾದ ಪಡೆಯುತ್ತಾರೆ. ಮನಸ್ಸಿನಲ್ಲಿ ದೇವರನ್ನು ನೆನೆದು ತಂದೆ – ತಾಯಿಯ ಪಾದಕ್ಕೆರಗುತ್ತಾರೆ. ಆದ್ರೆ ಬೆಂಗಳೂರಿನಲ್ಲಿ ನಡೆದ ಮದುವೆ ಒಂದರಲ್ಲಿ ಮದುವೆ ಮಂಟಪಕ್ಕೆ ದೇವರೇ ಬಂದಿದ್ದಾನೆ. ವಧು- ವರರಿಗೆ ಆಶೀರ್ವಾದ ಮಾಡಿದ್ದಾನೆ. ಮದುವೆಗೆ ಬಂದಿದ್ದು ವೆಂಕಟೇಶ್ವರ ಸ್ವಾಮಿ.ಹೌದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ ಪ್ರಕಾರ, ವಧು – ವರರು ವೇದಿಕೆ ಮೇಲಿದ್ದಾರೆ. ಅವರ ಹಿಂದೆ ಸಂಬಂಧಿಕರು ನಿಂತಿದ್ದಾರೆ. ಸುಂದರವಾಗಿ ಅಲಂಕಾರಗೊಂಡ ವೇದಿಕೆ ಮೇಲೆ ಹೊಗೆ ಬರೋದನ್ನು ಕಾಣ್ಬಹುದು. ಆ ನಂತ್ರ ನಿಧಾನವಾಗಿ ವೆಂಕಟೇಶ್ವರ ಸ್ವಾಮಿ ನಡೆದು ಬರ್ತಾನೆ. ಇದನ್ನು ನೋಡಿದ ವಧು – ವರರು ಮಂಡಿಯೂರಿ ಕುಳಿತು ನಮಸ್ಕಾರ ಮಾಡ್ತಾರೆ. ಅವರ ಬಳಿ ಬರುವ ವೆಂಕಟೇಶ್ವರ ಸ್ವಾಮಿ, ಹೂವನ್ನು ವಧು ವರರ ತಲೆಯ ಮೇಲೆ ಹಾಕಿ ಆಶೀರ್ವಾದ ನೀಡುತ್ತಾರೆ. ತಲೆಯ ಮೇಲೆ ಕಿರೀಟ, ಬಂಗಾರದ ಆಭರಣ, ಉಡುಪನ್ನು ನೋಡಿದ್ರೆ ನಿಜವಾಗಿಯೂ ವೆಂಕಟೇಶ್ವರ ಸ್ವಾಮಿಯೇ ಇಳಿದು ಬಂದಂತಿದೆ. ಹೂವಿನ ಆಶೀರ್ವಾದ ಆಗ್ತಿದ್ದಂತೆ ಪಟಾಕಿ ಸದ್ದನ್ನು ನೀವು ಕೇಳ್ಬಹುದು. ಒಟ್ಟಿನಲ್ಲಿ ಮದುವೆ ಮನೆಗೆ ಸ್ವತಃ ದೇವರೇ ಬಂದು ಆಶೀರ್ವಾದ ನೀಡಿದ್ದಾನೆ ಎನ್ನವು ಕಲ್ಪನೆಯನ್ನು ಅಲ್ಲಿ ಮೂಡಿಸಲಾಗಿದೆ.

Trending ಆದ ನೀಲಿ ಸೀರೆ ಸುಂದರಿ ಮರಾಠಿ ನಟಿ ಗಿರಿಜಾ ಓಕ್‌: ಸಿಡ್ನಿ ಸ್ವೀನಿ, ಮೋನಿಕಾ ಬೆಲ್ಲೂಚಿ ಜೊತೆ ಹೋಲಿಕೆ!

ವಿಡಿಯೋಕ್ಕೆ ಸಿಕ್ತು ಸಿಕ್ಕಾಪಟ್ಟೆ ಕಮೆಂಟ್ :

ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಹಾಸ್ಯದ ಡೈಲಾಗ್ ಜೊತೆ ಪೋಸ್ಟ್ ಮಾಡಲಾಗಿದೆ. ನಾವು : ನಾವು ಸರಳ ಮದುವೆ ಬಯಸುತ್ತೇವೆ. ಪಾಲಕರು : ದೇವರ ಆಶೀರ್ವಾದದ ಜೊತೆ ಸರಳ ವಿವಾಹ. ಈ ಮಧ್ಯೆ ದೇವರ ಆಶೀರ್ವಾದ ಅಂತ ಶೀರ್ಷಿಕೆ ಹಾಕಿ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. 

Paridhi Mangalampalli Child Prodigy: 9ರ ಪೋರಿಯ ಮಾತು ಕೇಳಿದರೆ ನಿಬ್ಬೆರಗು..!

ವಿಡಿಯೋ ನೋಡಿದ ಕೆಲವರು ಇದನ್ನು ವಿರೋಧಿಸಿದ್ದಾರೆ. ಸಂಪ್ರದಾಯದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ದೇವರ ಬಟ್ಟೆ ಧರಿಸಿದ್ರೆ, ವೇಷ ಹಾಕಿದ್ರೆ ಅವರು ದೇವರಾಗಲು ಸಾಧ್ಯವಿಲ್ಲ. ಹಿರಿಯರಿಗೆ ಕಿರಿಯ ವ್ಯಕ್ತಿ ಆಶೀರ್ವಾದ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ. ದೇವರಿಗೆ ಆಹ್ವಾನ ನೀಡಿದ್ದು ಯಾರು? ದೇವರು ಯಾರ ಕಡೆಯಿಂದ ಬಂದಿದ್ದು, ಲಕ್ಷ್ಮಿ ಬೇರೆ ಮದುವೆಗೆ ಹೋಗಿರಬೇಕು ಎನ್ನುವ ತಮಾಷೆ ಕಮೆಂಟ್ ಗಳೂ ಬಂದಿವೆ. ಹೋಗ್ತಾ ಹೋಗ್ತಾ ಮದುವೆಗಳು ಕ್ರೇಜಿಯಾಗ್ತಿದೆ ಅಂತ ಜನರು ತಮ್ಮ ವಾದ ಮುಂದಿಟ್ಟಿದ್ದಾರೆ.

View post on Instagram

Amazing Wedding