ಜಾಗತೀಕ ಮಟ್ಟದಲ್ಲಿ ಹಿಂದೂ ಧರ್ಮದ ಮೇಲೆ ಆಸಕ್ತಿ ಹೆಚ್ಚಾಗ್ತಿದೆ. ವಿದೇಶಿಗರು ನಮ್ಮ ಸಂಪ್ರದಾಯ ಪಾಲಿಸಲು ಆಸಕ್ತಿ ತೋರ್ತಿದ್ದಾರೆ. ದಕ್ಷಿಣ ಭಾರತದ ದೇವಸ್ಥಾನವೊಂದರಲ್ಲಿ ವಿದೇಶಿ ಮಹಿಳೆಯರು ಎಲ್ಲರ ಗಮನ ಸೆಳೆದಿದ್ದಾರೆ. 

ಭಾರತೀಯರು ನಮ್ಮ ಸಂಸ್ಕೃತಿ (Culture) ಮರೆಯುತ್ತಿದ್ದಾರೆ. ಸಾಂಪ್ರದಾಯಿಕ ಉಡುಗೆಗೆ ಪ್ರಸಿದ್ಧಿಯಾಗಿರುವ ಭಾರತದಲ್ಲಿ, ದೇವಸ್ಥಾನದ ಗೇಟ್ ಮೇಲೆ ಡ್ರೆಸ್ ಕೋಡ್ ಹಾಕುವ ಅನಿವಾರ್ಯತೆ ಎದುರಾಗಿದೆ. ಸೀರೆ, ಸಲ್ವಾರ್, ಪಂಜೆಯಂತ ಬಟ್ಟೆ ಧರಿಸಿ ದೇವಸ್ಥಾನಕ್ಕೆ ಬರುವವರ ಸಂಖ್ಯೆ ಅತೀ ಕಡಿಮೆ. ಮಿಡಿ, ಮಿನಿ, ಬರ್ಮೋಡಾದಲ್ಲಿ ದೇವರ ಪೂಜೆ ಮಾಡ್ತಿರುವ ಭಾರತೀಯರು ನಮ್ಮ ಉಡುಗೆ ನಮ್ಮಿಷ್ಟ ಎನ್ನುತ್ತಿದ್ದಾರೆ. ಉಡುಗೆ ಅವರಿಷ್ಟವಾಗಿರ್ಬಹುದು ಆದ್ರೆ ಯಾವ ಜಾಗದಲ್ಲಿ ಯಾವ ಬಟ್ಟೆ ಧರಿಸ್ಬೇಕು ಎನ್ನುವ ಕಾಮನ್ಸೆನ್ಸ್ ಇರ್ಬೇಕು. ನಾವೇ ನಮ್ಮ ಸಂಸ್ಕೃತಿ, ಸಂಪ್ರದಾಯ ಮರೆತ್ರೆ ಅದು ಹೆಮ್ಮೆಯ ವಿಷ್ಯವಲ್ಲ. ಅವನತಿಯ ಸಂಕೇತ. ಭಾರತೀಯರು ಮಾಡರ್ನ್ ಹೆಸರಿನಲ್ಲಿ ಸಂಪ್ರದಾಯ ಬಿಟ್ರೆ ವಿದೇಶಿಗರು, ಭಾರತದ ಸಂಸ್ಕೃತಿಗೆ ಮಾರು ಹೋಗಿ ನಮ್ಮ ಉಡುಗೆ, ಸಂಪ್ರದಾಯ, ಸಂಸ್ಕೃತಿಯನ್ನು ಪಾಲಿಸಲು ಶುರು ಮಾಡಿದ್ದಾರೆ.

ಹೋಮದಲ್ಲಿ ವಿದೇಶಿ ಮಹಿಳೆಯರು

ಸೋಶಿಯಲ್ ಮೀಡಿಯಾದಲ್ಲಿ ವಿದೇಶಿ ಮಹಿಳೆಯರು ಗಮನ ಸೆಳೆದಿದ್ದಾರೆ. ಆಸ್ಟ್ರೇಲಿಯಾ ಮತ್ತು ಯುಕೆಯ 9 ಮಹಿಳೆಯರು ದಕ್ಷಿಣ ಭಾರತದ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಹೋಮದಲ್ಲಿ ಪಾಲ್ಗೊಂಡಿದ್ದರು. ದಕ್ಷಿಣ ಭಾರತದ ಪ್ರಸಿದ್ಧ ದೇವಸ್ಥಾನವೊಂದರಲ್ಲಿ ಆಸ್ಟ್ರೇಲಿಯಾ ಮತ್ತು ಯುನೈಟೆಡ್ ಕಿಂಗ್ಡಮ್ ದೇಶಗಳಿಂದ ಆಗಮಿಸಿದ್ದ ಒಂಬತ್ತು ಮಹಿಳೆಯರು ಸಾಂಪ್ರದಾಯಿಕ ಹಿಂದೂ ಹೋಮದಲ್ಲಿ ಭಾಗವಹಿಸಿರುವ ಘಟನೆ ಗಮನ ಸೆಳೆದಿದೆ.

ಏರ್ ಇಂಡಿಯಾ ಗಗನಸಖಿಯಾಗಿ 35 ವರ್ಷ ಸೇವೆ, ಕೊನೆ ಹಾರಾಟದ ಭಾವುಕ ಕ್ಷಣ ವೈರಲ್

ಸೀರೆಯುಟ್ಟಿದ್ದ ವಿದೇಶಿ ಮಹಿಳೆಯರು, ಹಣೆಗೆ ದೊಡ್ಡ ಬಿಂದಿಯಿಟ್ಟು, ಬಸ್ಮವನ್ನು ಹಚ್ಚಿಕೊಂಡು ಎಲ್ಲರ ಗಮನ ಸೆಳೆದರು. ಅಷ್ಟೇ ಅಲ್ಲ, ದೇವಸ್ಥಾನದ ಅರ್ಚಕರು ಹೇಳಿಕೊಟ್ಟ ಮಂತ್ರಗಳನ್ನು ಉಚ್ಛರಿಸಿದ ಮಹಿಳೆಯರು, ಹೋಮದಲ್ಲಿ ಶ್ರದ್ಧೆಯಿಂದ ಪಾಲ್ಗೊಂಡಿದ್ದರು. ಹೋಮದ ಸಂಕಲ್ಪದಲ್ಲಿ ಪಾಲ್ಗೊಂಡಿದ್ದ ಅವರು, ಅಗ್ನಿಯಲ್ಲಿ ತುಪ್ಪ, ಧಾನ್ಯಗಳನ್ನು ಅರ್ಪಿಸಿದ್ರು. ದೇವಸ್ಥಾನದ ಅರ್ಚಕರು ಮತ್ತು ಪುರೋಹಿತರು ಮಹಿಳೆಯರಿಗೆ ಹೋಮದ ವಿಧಿವಿಧಾನಗಳನ್ನು ವಿವರಿಸಿ, ಪ್ರತಿಯೊಂದು ಹಂತದಲ್ಲೂ ಮಾರ್ಗದರ್ಶನ ನೀಡಿದರು.

ಈ ಮಹಿಳೆಯರು ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧಾರ್ಮಿಕ ಆಚರಣೆಗಳ ಬಗ್ಗೆ ಆಸಕ್ತಿ ಹೊಂದಿದ್ದರು. ಶಾಂತಿ ಮತ್ತು ಆಧ್ಯಾತ್ಮಿಕ ಅನುಭವಕ್ಕಾಗಿ ಈ ಹೋಮದಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ. ಈ ಘಟನೆ ಹಿಂದೂ ಧರ್ಮ ಮತ್ತು ಭಾರತೀಯ ಸಂಪ್ರದಾಯಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಆಸಕ್ತಿಗೆ ಸ್ಪಷ್ಟ ಉದಾಹರಣೆಯಾಗಿದೆ. ಭಾರತೀಯರು ಮಾತ್ರವಲ್ಲದೆ, ವಿದೇಶಿಯರೂ ಕೂಡ ಭಾರತದಲ್ಲಿ ನಡೆಯುವ ಧಾರ್ಮಿಕ ಆಚರಣೆಗಳನ್ನು ಆತ್ಮೀಯವಾಗಿ ಸ್ವೀಕರಿಸುತ್ತಿರುವುದು ಗಮನಾರ್ಹವಾಗಿದೆ. ಸಾಂಪ್ರದಾಯಿಕ ಆಚರಣೆಗಳು ಜಾತಿ, ದೇಶ, ಭಾಷೆ ಮೀರಿದವು ಎಂಬುದಕ್ಕೆ ಈ ಹೋಮದಲ್ಲಿ ಭಾಗವಹಿಸಿದ ವಿದೇಶಿ ಮಹಿಳೆಯರ ಹಾಜರಾತಿ ಮತ್ತೊಂದು ಸಾಕ್ಷಿಯಾಗಿದೆ.

ಹುಡುಗಿ ಸ್ಯಾಂಡ್‌ವಿಚ್ ಮಾರ್ತಿದ್ದಾಳೆ ಅಂತ ಮಗನ ಪ್ರೀತಿ ನಿರಾಕರಿಸಿದ ತಾಯಿ: ಕಾರಿನೊಳಗೆ ನಡೆಯಿತು ಅಮ್ಮ ಮಗನ ಗಲಾಟೆ

ಅಮೆರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ಸೇರಿದಂತೆ ಅನೇಕ ದೇಶಗಳಿಂದ ಭಾರತಕ್ಕೆ ಬರುವ ವಿದೇಶಿಗರು ಭಾರತೀಯ ಸಂಪ್ರದಾಯ, ಇಲ್ಲಿನ ಸಂಸ್ಕೃತಿ, ಇಲ್ಲಿನ ಪರಿಸರವನ್ನು ಮೆಚ್ಚಿಕೊಳ್ತಿದ್ದಾರೆ. ಕೆಲವರು ವೇದ – ಮಂತ್ರಗಳನ್ನು ಕಲಿಯಲು ಆಸಕ್ತಿ ತೋರಿದ್ರೆ ಮತ್ತೆ ಕೆಲವರು ಇಲ್ಲಿನ ಬಡವರಿಗೆ ಸಹಾಯ ಮಾಡ್ತಿದ್ದಾರೆ. ಆದ್ರೆ ಭಾರತೀಯರು ಮಾತ್ರ ಇದಕ್ಕೆ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿರೋದು ವಿಪರ್ಯಾಸ. ಭಾರತೀಯರ ಕಣ್ಣು ವಿದೇಶದ ಮೇಲಿದ್ದು, ದೊಡ್ಡ ಇತಿಹಾಸವನ್ನೇ ಹೊಂದಿರುವ, ಸಾಕಷ್ಟು ಶಕ್ತಿ ಇರುವ ಭಾರತದ ಪದ್ಧತಿ, ಸಂಸ್ಕೃತಿ, ವೇದ ಉಪನಿಷತ್ತುಗಳನ್ನು ಕ್ಷುಲ್ಲಕವಾಗಿ ಕಾಣ್ತಿದ್ದಾರೆ. ಗೊಡ್ಡು ಪದ್ಧತಿ ಎನ್ನುವ ಹಣೆಪಟ್ಟಿ ಕಟ್ತಿದ್ದಾರೆ.

View post on Instagram