ವಿಜಯಪುರ[ಅ.14]: ಇನ್ನು 15 ದಿನಗಳಲ್ಲಿ ತನಗೆ ಸಚಿವ ಸ್ಥಾನದ ಪ್ರಮೋಶನ್ ಸಿಕ್ಕರೂ ಅಚ್ಚರಿಯಿಲ್ಲ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.

ಅನರ್ಹ ಶಾಸಕರ ತೀರ್ಪಿನಿಂದ ಬಿಜೆಪಿಗೇನು ಲಾಭ?

ಬುಧವಾರ ಕಗ್ಗೋಡದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಮ್ಮ ಜಾತಿ ಕೋಟಾ ದಲ್ಲಿ ಈಗಾಗಲೇ ಸಿ.ಸಿ.ಪಾಟೀಲರಿಗೆ ಸಚಿವ ಸ್ಥಾನ ದೊರಕಿದೆ. ನನಗೆ ಯಾವುದೇ ಜಾತಿಯಿಲ್ಲ. ನನ್ನದು ಹಿಂದು ಜಾತಿ. ಹಿಂದು ಜಾತಿಗೆ ಇನ್ನೂ ಕೋಟಾ ಬಂದಿಲ್ಲ. ಅದು ಬಂದೇ ಬರುತ್ತದೆ. ಅದು ಎಲ್ಲಿಯೂ ಹೋಗಲ್ಲ. ಹದಿನೈದು ದಿನಗಳಲ್ಲಿ ನಾನು ಸಚಿವನಾದರೂ ಯಾರೂ ಅಚ್ಚರಿ ಪಡಬೇಕಿಲ್ಲ ಎಂದರು.

ಬೇಗ್ ಬಿಟ್ಟು ಉಳಿದೆಲ್ಲ ಅನರ್ಹರು ಬಿಜೆಪಿ ಸೇರ್ಪಡೆ

ಪಾಟೀಲ್ ಯತ್ನಾಳ್‌ಗೆ ಪ್ರಮೋಶನ್ ಸಿಗುತ್ತಾ? ಸಚಿವರಾಗ್ತಾರಾ? ಕಾದು ನೋಡಬೇಕಷ್ಟೇ