Asianet Suvarna News Asianet Suvarna News

ಇಂಡಿಯಲ್ಲಿ ಭಾರೀ ಮಳೆ: ರಸ್ತೆ ಮೇಲೆ ನೀರು, ಸಂಚಾರ ಸ್ಥಗಿತ

ಭಾರೀ ಮಳೆಯಿಂದ ಇಂಡಿ ತಾಲೂಕಿನಲ್ಲಿ ಮರಿಹಳ್ಳದ ನೀರು ನುಗ್ಗಿದ ಪರಿಣಾಮ ತಾಂಬಾ-ಕೆಂಗನಾಳ‌ ರಸ್ತೆ ಸಂಪೂರ್ಣ ಜಲಾವೃತ| ತಾಂಬಾ-ಕೆಂಗನಾಳ‌ ಮದ್ಯೆ ರಸ್ತೆ ಸಂಪರ್ಕ ಸಂಪೂರ್ಣ ಬಂದ್| ತಾಂಬಾದಿಂದ ಕೆಂಗನಾಳ, ಶಿರಕನಳ್ಳಿ, ಹೊನ್ನಳ್ಳಿ ಮಾರ್ಗವಾಗಿ ಹೋಗುತ್ತಿದ್ದ ಸರ್ಕಾರಿ ಬಸ್‌ಗಳೂ ಸಹ ಸ್ಥಗಿತವಾಗಿವೆ| ಇದರಿಂದ ಪ್ರಯಾಣಿಕರ ಪರದಾಟ| ಹಳ್ಳಕ್ಕೆ ಸೇತುವೆ ನಿರ್ಮಿಸಬೇಕೆಂದು ಸರ್ಕಾರಕ್ಕೆ ಸ್ಥಳಿಯರ ಆಗ್ರಹ|  

Heavy Rain at Indi in Vijayapura District
Author
Bengaluru, First Published Oct 19, 2019, 12:10 PM IST

ವಿಜಯಪುರ(ಅ.19): ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದ ಇಂಡಿ ತಾಲೂಕಿನಲ್ಲಿ ಮರಿಹಳ್ಳದ ನೀರು ನುಗ್ಗಿದ ಪರಿಣಾಮ ತಾಂಬಾ-ಕೆಂಗನಾಳ‌ ರಸ್ತೆ ಸಂಪೂರ್ಣ ಜಲಾವೃತವಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇದರಿಂದ  ತಾಂಬಾ-ಕೆಂಗನಾಳ‌ ಮದ್ಯೆ ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಗಿದೆ. ರಸ್ತೆ ಮೇಲೆ ಹಳ್ಳದ ನೀರು ಹರಿಯುತ್ತಿರುವುದರಿಂದ ತಾಂಬಾದಿಂದ ಕೆಂಗನಾಳ, ಶಿರಕನಳ್ಳಿ, ಹೊನ್ನಳ್ಳಿ ಮಾರ್ಗವಾಗಿ ಹೋಗುತ್ತಿದ್ದ ಸರ್ಕಾರಿ ಬಸ್‌ಗಳೂ ಸಹ ಸ್ಥಗಿತವಾಗಿವೆ. ಇದರಿಂದ ಈ ಭಾಗದ ಪ್ರಯಾಣಿಕರು ಪರದಾಡುವಂತಾಗಿದೆ. ಹಳ್ಳದ ನೀರು ಬಂದಾಗಲೊಮ್ಮೆ ತಗ್ಗು ಪ್ರದೇಶದಲ್ಲಿರುವ ರಸ್ತೆ ಮುಳುಗಡೆ ಆಗುತ್ತದೆ. ಹೀಗಾಗಿ ಈ ಹಳ್ಳಕ್ಕೆ ಸೇತುವೆ ನಿರ್ಮಿಸಬೇಕೆಂದು ಸ್ಥಳಿಯರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. 

'ಇಂಡಿ ನೂತನ ಜಿಲ್ಲೆ ಮಾಡದಿದ್ರೆ ಉಗ್ರ ಹೋರಾಟ'

ಬೆಳಿಗ್ಗೆಯಿಂದ ಮಳೆ ಕಡಿಮೆಯಾದ ಪರಿಣಾಮ ಇಂದು ಸಂಜೆ ವೇಳೆಗೆ ನೀರು ಕಡಿಮೆ ಆಗುವ ಸಾಧ್ಯತೆ.
 

Follow Us:
Download App:
  • android
  • ios