ಝಳಕಿ(ಅ.18): ಸಮೀಪದ ಹೊರ್ತಿ ಗ್ರಾಮದಲ್ಲಿ ಗುರುವಾರ ಸೇರಿದ ಸುತ್ತ ಮುತ್ತಲಿನ ಗ್ರಾಮಸ್ಥರು, ಮುಖಂಡರು, ವ್ಯಾಪರಸ್ಥರು ಇಂಡಿಯನ್ನು ನೂತನ ಜಿಲ್ಲೆ ಮಾಡಲು ಬೆಂಬಲ ವ್ಯಕ್ತಪಡಿಸಿದರು. 

ಇಂಡಿ ಶಾಸಕರು ಈಗಾ​ಗಲೇ ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿದ್ದು ಅದಕ್ಕೆ ನಮ್ಮ ಬೆಂಬ​ಲ​ವಿದೆ ಎಂದರು. ಸರ್ಕಾರ ಇದನ್ನು ಗಂಭೀರವಾಗಿ ಪರಿಣಮಿಸಬೇಕು ಇಲ್ಲವಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಇಂಡಿ ಸುತ್ತ-ಮುತ್ತಲಿನ 80ಕ್ಕೂ ಅಧಿಕ ಗ್ರಾಮಗಳಿಗೆ ಇದ​ರಿಂದ ಅನುಕೂಲವಾಗುತ್ತದೆ. ದೂರದ ವಿಜಯಪುರಕ್ಕೆ ಹೋಗಬೇಕಾದರೆ 100 ಕಿಮೀ ಅಲೆ​ದಾ​ಟ​ವಿದೆ. ಬಡವರು ಯಾವುದೇ ಕೆಲಸಕ್ಕೆ ಹೋಗಬೇಕು ಅಂದರೆ ಕಷ್ಟವಾಗುತ್ತಿದೆ. ಒಂದು ಜಿಲ್ಲೆಗೆ ಬೇಕಾದ ಎಲ್ಲ ಅರ್ಹತೆ ಇಂಡಿ ಹೊಂದಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಇಂಡಿ ಜಿಲ್ಲೆಯನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಜಿಪಂ ಸದಸ್ಯ ಮಹಾದೇವ ಪೂಜಾರಿ, ಹೊರ್ತಿ ಗ್ರಾಪಂ ಅಧ್ಯಕ್ಷ ವಿ.ಬಿ. ಅಂಕಲಗಿ, ಅಥರ್ಗಾ ಗ್ರಾಪಂ ಅಧ್ಯಕ್ಷ ಗಿರೀಶ ಚಾಂದಕವಟೆ, ಜೆಡಿಎಸ್‌ ಮುಖಂಡ ಶರಣುಗೌಡ ಪಾಟೀಲ, ವಿಜಯಕುಮಾರ ದುರ್ಗದ, ಗಂಗಯ್ಯಾ ಹೀರೆಮಠ, ಗ್ರಾಪಂ ಸದಸ್ಯರಾದ ರೇವಣ್ಣಸಿದ್ದ ಗೋಡಕೆ, ಜೆಟ್ಟೆಪ್ಪ ಲೋಣಿ, ರಾಜಕುಮಾರ ರಾಠೋಡ, ಬಸವರಾಜ ಪತ್ತಾರ, ಅಪ್ಪುಗೌಡ ಬಸನಾಳ, ಕಾಂತು ದಳವಾಯಿ ಅನೇಕರು ಇದ್ದರು.