ಉಗ್ರಸಂಹಾರಕ್ಕೆ ಏನು ಮಾಡುತ್ತಿದೆ ಇಸ್ರೇಲ್..? ಏನು ಮಾಡಿತ್ತು ಭಾರತ..? ಏನು ಮಾಡಲಿದೆ ಇಸ್ರೇಲ್..?

ಹಮಾಸ್ ನಾಶಕ್ಕೆ ಇಸ್ರೇಲ್ ಮಹಾಸ್ತ್ರ ಪ್ರಯೋಗ!
ಇಸ್ರೇಲ್ ಬತ್ತಳಿಕೆ ಸೇರಿದೆ ಅಮೆರಿಕಾದ ಪ್ರಬಲಾಸ್ತ್ರ!
ಇಸ್ರೇಲಿಗೆ ಸ್ಪೂರ್ತಿ ನೀಡಿತ್ತಾ ಭಾರತದ ಏರ್ ಸ್ಟ್ರೈಕ್.?
ಉಗ್ರಸಂಹಾರಕ್ಕೆ ಏನು ಮಾಡುತ್ತಿದೆ ಇಸ್ರೇಲ್..?

First Published Nov 9, 2023, 3:12 PM IST | Last Updated Nov 9, 2023, 3:12 PM IST

ಅಕ್ಟೋಬರ್ 7ನೇ ತಾರೀಖು, ಶನಿವಾರ, ಹಮಾಸ್(Hamas)  ಉಗ್ರರು ಇಸ್ರೇಲಿನ ಮೇಲೆ ದಾಳಿ ನಡೆಸಿದ್ರು.. ಅಮಾಯಕರನ್ನ ಕೊಂದುಹಾಕಿದ್ರು.. ಸಿಕ್ಕಸಿಕ್ಕವರನ್ನ ಕಿಡ್ನಾಪ್ ಮಾಡಿದ್ರು. ಒತ್ತೆಯಾಳಾಗಿಸಿಕೊಂಡ್ರು. ಇಸ್ರೇಲಿನ(Israel) ಮೇಲೆ ತಮಗಿರೋ ದ್ವೇಷವನ್ನೆಲ್ಲಾ ಉಗ್ರಸರ್ಪಗಳು vಇಷದ ಹಾಗೆ ಕಾರಿದ್ವು. ಈಗ ಆ ದಾಳಿಗೆ ಇಸ್ರೇಲ್ ಪ್ರತಿದಾಳಿ ಶುರುಮಾಡಿಕೊಂಡಿದೆ.ಬರೋಬ್ಬರಿ ಒಂದು ತಿಂಗಳೇ ಕಳೆದರೂ ಇನ್ನೂ ಈ ಯುದ್ಧ ಮಧ್ಯಂತರದವರೆಗೂ ಕೂಡ ಬಂದಿಲ್ಲ.. ಅಸಲಿಗೆ ಇಸ್ರೇಲಿನ ಲೆಕ್ಕಾಚಾರದ ಪ್ರಕಾರ, ಯುದ್ಧವಿನ್ನೂ ಆರಂಭವೇ ಆಗಿಲ್ಲ. ಈ  ಬಗ್ಗೆ ಇಸ್ರೇಲ್ ಹೇಳೋದೇನು ಅಂದ್ರೆ, ಗಾಜಾ(Gaza) ಮೇಲೆ ಇಸ್ರೇಲ್ ಯುದ್ಧ ಮಾಡ್ತಾ ಇಲ್ಲ.ಬದಲಾಗಿ, ದಾಳಿಗೆ ಪ್ರತಿದಾಳಿ ನಡೆಸಿ, ತನ್ನ ಪ್ರತೀಕಾರ ತೀರಿಸಿಕೊಳ್ತಾ ಇದೆ ಅಷ್ಟೆ. ಇಸ್ರೇಲಿನ ಬಳಿ ಇರೋ ಆಯುಧಗಳನ್ನ ಪೂರ್ಣ ಪ್ರಮಾಣದಲ್ಲಿ ಬಳಸಿದ್ದೇ ಆದ್ರೆ, ಗಾಜಾದ ಸರ್ವನಾಶಕ್ಕೆ ಬೇಕಾಗೋದು ಕೆಲವೇ ಕ್ಷಣಗಳು ಮಾತ್ರ.. ಆದ್ರೆ ಇಸ್ರೇಲಿಗೆ ಅಂಥಾ ದಾಳಿ ಮಾಡೋ ಅವಕಾಶವೇ ಇಲ್ಲ.. ಯಾಕಂದ್ರೆ, ಗಾಜಾದಲ್ಲಿ ಬರೀ ಹಮಾಸ್ ಉಗ್ರರು ಮಾತ್ರವೇ ಇಲ್ಲ.. ಸಾವಿರಾರು ಮಂದಿ ಪ್ಯಾಲೆಸ್ಟೇನಿ ಅಮಾಯಕರೂ ಕೂಡ ಅದೇ ಗಾಜಾದಲ್ಲಿ ಆಶ್ರಯ ಪಡೆದಿದ್ದಾರೆ. ಸಾಲದು ಅಂತ, ಹಮಾಸ್ ಉಗ್ರರು ಕಿಡ್ನಾಪ್ ಮಾಡಿರೋ ಇಸ್ರೇಲಿನ ಹಾಗೂ ವಿದೇಶಗಳ ಪ್ರಜೆಗಳೂ ಕೂಡ, ಗಾಜಾದ ನಿಗೂಢ ಪ್ರದೇಶಗಳಲ್ಲಿದ್ದಾರೆ.. ಅವರೆಲ್ಲರ ರಕ್ಷಣೆ ಈಗ ಇಸ್ರೇಲಿನ ಅತಿ ದೊಡ್ಡ ಜವಾಬ್ದಾರಿಯಾಗಿಬಿಟ್ಟಿದೆ.

ಇದನ್ನೂ ವೀಕ್ಷಿಸಿ:   58 ಬಾರಿ ಕೊಚ್ಚಿ ಕೊಂದ್ರು ಕಡು ಪಾಪಿಗಳು..! 2 ಸಾವಿರ ರೂ. ವಿಚಾರಕ್ಕೆ ಅಕ್ಷಯ್ ಕೊಲೆ..!

Video Top Stories