Asianet Suvarna News Asianet Suvarna News

ಶೂಸ್‌ನಲ್ಲಿ ಅಡಗಿ ಕೂತಿತ್ತು ಬುಸ್ ಬುಸ್ ನಾಗ! ಶೂ ಧರಿಸಲು ಹೋದ ವ್ಯಕ್ತಿ ಜಸ್ಟ್ ಎಸ್ಕೇಪ್

  • ಶೂ ಧರಿಸಲು ಹೋದ ವ್ಯಕ್ತಿ ಜಸ್ಟ್ ಎಸ್ಕೇಪ್
  • ಸ್ವಲ್ಪ ಯಮಾರಿದ್ರೂ ಹೋಗೇ ಬಿಡ್ತಿತ್ತು ಪ್ರಾಣ ಪಕ್ಷಿ
  • ತುಮಕೂರು ನಗರ ಹೊರವಲಯದಲ್ಲಿ ಘಟನೆ

ತುಮಕೂರು: ರಂಗಾಪುರದ ರಂಗನಾಥ್  ಎಂಬುವರ ಮನೆಯಲ್ಲಿ ಹಾವೊಂದು ಶೂ ಒಳಗೆ ಸೇರಿಕೊಂಡು ಬೆಚ್ಚಿ ಬೀಳಿಸಿದ ಘಟನೆ ನಡೆದಿದೆ. ಮನೆ ಮುಂದೆ ಬಿಟ್ಟಿದ್ದ ಶೂ ಒಳಗೆ  ನಾಗರ ಹಾವು ಸೇರಿಕೊಂಡಿತ್ತು. ಬೆಳಗ್ಗೆ ಶೂ ಧರಿಸಲು ಹೋದಾಗ ಬುಸುಗಟ್ಟಿದ ಶಬ್ಧ ಕೇಳಿ ಅನುಮಾನಗೊಂಡ ರಂಗನಾಥ್ ಎಚ್ಚರಿಕೆಯಿಂದ ಪರಿಶೀಲಿಸಿದಾಗ  ಶೂ ಒಳಗೆ ಹಾವು ಇರುವುದು ಪತ್ತೆಯಾಗಿದೆ. ಕೂಡಲೇ ರಂಗನಾಥ್‌ ಹಾವು ರಕ್ಷಕ ದಿಲೀಪ್‌ಗೆ ಮಾಹಿತಿ ನೀಡಿದ್ದಾರೆ. ನಂತರ ದಿಲೀಪ್ ಅವರು ಹಾವು ಹಿಡಿದು ದೇವರಾಯನದುರ್ಗ ಕಾಡಿಗೆ ಬಿಟ್ಟಿದ್ದಾರೆ.