ಆಸ್ಪತ್ರೆ ಎದುರೇ ಒದ್ದಾಡಿ, ಒದ್ದಾಡಿ ಪ್ರಾಣ ಬಿಟ್ಟ ಮಹಿಳೆ, ಯಾರೂ ಮಾಡಲಿಲ್ಲ ಕೇರ್
ಆಸ್ಪತ್ರೆ ಆವರಣದಲ್ಲಿ ಒದ್ದಾಡಿ ಸೋಂಕಿತ ಮಹಿಳೆಯೊಬ್ಬರು ಪ್ರಾಣ ಬಿಟ್ಟಿರುವ ಘಟನೆ ಯಾದಗಿರಿ ಕೋವಿಡ್ ಆಸ್ಪತ್ರೆ ಎದುರು ನಡೆದಿದೆ.
ಬೆಂಗಳೂರು (ಜು. 29): ಆಸ್ಪತ್ರೆ ಆವರಣದಲ್ಲಿ ಒದ್ದಾಡಿ ಸೋಂಕಿತ ಮಹಿಳೆಯೊಬ್ಬರು ಪ್ರಾಣ ಬಿಟ್ಟಿರುವ ಘಟನೆ ಯಾದಗಿರಿ ಕೋವಿಡ್ ಆಸ್ಪತ್ರೆ ಎದುರು ನಡೆದಿದೆ.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಶಹಾಪುರ ಆಸ್ಪತ್ರೆಗೆ ಹೋಗುತ್ತಾರೆ. ಅಲ್ಲಿ ವೈದ್ಯರಿಲ್ಲ ಅಂತ ದಾಖಲಿಸಿಕೊಳ್ಳುವುದಿಲ್ಲ. ಆಸ್ಪತ್ರೆ ಆವರಣದಲ್ಲೇ ಬಿದ್ದು ಒದ್ದಾಡುತ್ತಾರೆ. ಆದರೂ ಸಿಬ್ಬಂದಿ ಡೋಂಟ್ ಕೇರ್ ಎಂದಿದ್ದಾರೆ. ಕೊನೆಗೆ ಅಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.