Asianet Suvarna News Asianet Suvarna News

ಬೆಂಗಳೂರಲ್ಲಿ 50 ಸಾವಿರದ ಹೊಸ್ತಿಲಲ್ಲಿ ಕೊರೋನಾ ಕೇಸ್..!

ಇಂದೇ 50 ಸಾವಿರದ ಗಡಿ ದಾಟುತ್ತಾ ಎನ್ನುವ ಭೀತಿ ಎದುರಾಗಿದೆ. ಸದ್ಯ ಬೆಂಗಳೂರಿನಲ್ಲಿ 48,821 ಸೋಂಕಿತರಿದ್ದು, ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅರ್ಧ ಲಕ್ಷದತ್ತ ದಾಪುಗಾಲು ಇಡುತ್ತಿದೆ.
 

ಬೆಂಗಳೂರು(ಜು.29): ರಾಜ್ಯರಾಜಧಾನಿ, ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರಿನಲ್ಲಿ ಕೊರೋನಾ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇಡೀ ಕರ್ನಾಟಕದ್ದೇ ಒಂದು ಲೆಕ್ಕವಾದರೆ, ಬೆಂಗಳೂರಿನದ್ದು ಮತ್ತೊಂದು ಲೆಕ್ಕ ಎನ್ನುವಂತಾಗಿದ್ದು, ಸದ್ಯ ನಗರದಲ್ಲಿ ಕೊವೀಡ್ 19 ಸೋಂಕಿತರ ಸಂಖ್ಯೆ ಅರ್ಧ ಲಕ್ಷದ ಹೊಸ್ತಿಲಲ್ಲಿದೆ.

ಹೌದು, ಇಂದೇ 50 ಸಾವಿರದ ಗಡಿ ದಾಟುತ್ತಾ ಎನ್ನುವ ಭೀತಿ ಎದುರಾಗಿದೆ. ಸದ್ಯ ಬೆಂಗಳೂರಿನಲ್ಲಿ 48,821 ಸೋಂಕಿತರಿದ್ದು, ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅರ್ಧ ಲಕ್ಷದತ್ತ ದಾಪುಗಾಲು ಇಡುತ್ತಿದೆ.

'ಸರ್ಕಾರದ ವೈಫಲ್ಯದಿಂದ ಕರ್ನಾಟಕ ಕೊರೋನಾ ಹಾಟ್‌ಸ್ಪಾಟ್‌ ಆಗುತ್ತಿದೆ

ಸಿಲಿಕಾನ್ ಸಿಟಿಯಲ್ಲಿ 50 ಸಾವಿರಕ್ಕೆ ಇನ್ನು 1,179 ಕೇಸ್‌ಗಳು ಮಾತ್ರ ಬಾಕಿ ಇವೆ. ಕಳೆದ 10 ದಿನಗಳಲ್ಲಿ ಬೆಂಗಳೂರಿನಲ್ಲಿ 19200 ಕೇಸ್‌ಗಳು ಪತ್ತೆಯಾಗಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Video Top Stories