Asianet Suvarna News Asianet Suvarna News

ಬಿಜೆಪಿ ಶಾಸನ ರೈತರ ಪಾಲಿಗೆ ಮರಣ ಶಾಸನ: ಗುಡುಗಿದ ಸಿದ್ದರಾಮಯ್ಯ

ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ ಏನು ತರುವುದಕ್ಕೆ ಹೊರಟಿದ್ದಾರೋ ಅದು ರೈತರಿಗೆ, ಕೃಷಿಕರಿಗೆ ಮರಣ ಶಾಸನ ಇದ್ದಂಗೆ.- ಸಿದ್ದರಾಮಯ್ಯ ಗುಡುಗು

ಬೆಂಗಳೂರು (ಸೆ. 28): ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ ಏನು ತರುವುದಕ್ಕೆ ಹೊರಟಿದ್ದಾರೋ ಅದು ರೈತರಿಗೆ, ಕೃಷಿಕರಿಗೆ ಮರಣ ಶಾಸನ ಇದ್ದಂಗೆ. ಇದು ರೈತ ವಿರೋಧಿ ಕಾಯ್ದೆಯಾಗಿದೆ. ವಿಧಾನಮಂಡಲ ಕಲಾಪದಲ್ಲಿ ಇದು ಚರ್ಚೆಗೆ ಬಂದಾಗ ನಾವು ತೀವ್ರವಾಗಿ ಖಂಡಿಸಿದ್ದೇವೆ. ರಾಜ್ಯಪಾಲರಿಗೂ ಮನವಿ ಮಾಡಿದ್ದೇವೆ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ.

'ದೆಹಲಿ ಪ್ರಧಾನಿ ಮೋದಿ, ಕರ್ನಾಟಕದಲ್ಲಿ ಸಿಎಂ ಯಡಿಯೂರಪ್ಪ ರೈತರಿಗೆ ಅಪಾಯ'

ಇಂದು ರೈತ ಪ್ರತಿಭಟನೆಗೆ ಕಾಂಗ್ರೆಸ್ ಸಾಥ್ ನೀಡಿದೆ. ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಯು ಟಿ ಖಾದರ್ ಸೇರಿದಂತೆ ಸಾಕಷ್ಟು ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿ ರೈತರಿಗೆ ಬೆಂಬಲ ನೀಡಿದರು. 

Video Top Stories