Asianet Suvarna News Asianet Suvarna News

'ದೆಹಲಿ ಪ್ರಧಾನಿ ಮೋದಿ, ಕರ್ನಾಟಕದಲ್ಲಿ ಸಿಎಂ ಯಡಿಯೂರಪ್ಪ ರೈತರಿಗೆ ಅಪಾಯ'

ದೆಹಲಿ ಪ್ರಧಾನಿ ಮೋದಿ, ಕರ್ನಾಟಕದಲ್ಲಿ ಸಿಎಂ ಯಡಿಯೂರಪ್ಪ ರೈತರಿಗೆ ಅಪಾಯವಾಗಿದ್ದಾರೆ. ಸರ್ಕಾರ ತರಲು ಹೊರಟಿರುವ ಕಾಯ್ದೆಯಿಂದ ರೈತರಿಗೆ ಬಹಳ ಸಮಸ್ಯೆಯಾಗುತ್ತದೆ. ಉಳ್ಳವರ ಜೋಳಿಗೆಯಲ್ಲಿ ರೈತರ ಜಮೀನನ್ನು ಗಿರವಿ ಇಟ್ಟಂತಾಗುತ್ತದೆ. ಎಂದು ಸುರ್ಜೆವಾಲಾ ಹೇಳಿದ್ಧಾರೆ. 
 

ಬೆಂಗಳೂರು (ಸೆ. 28): ದೆಹಲಿ ಪ್ರಧಾನಿ ಮೋದಿ, ಕರ್ನಾಟಕದಲ್ಲಿ ಸಿಎಂ ಯಡಿಯೂರಪ್ಪ ರೈತರಿಗೆ ಬಿಸಿತುಪ್ಪವಾಗಿದ್ದಾರೆ. ಸರ್ಕಾರ ತರಲು ಹೊರಟಿರುವ ಕಾಯ್ದೆಯಿಂದ ರೈತರಿಗೆ ಬಹಳ ಸಮಸ್ಯೆಯಾಗುತ್ತದೆ. ಉಳ್ಳವರ ಜೋಳಿಗೆಯಲ್ಲಿ ರೈತರ ಜಮೀನನ್ನು ಗಿರವಿ ಇಟ್ಟಂತಾಗುತ್ತದೆ. ಕರ್ನಾಟಕದ ರೈತರು ಈ ಮಟ್ಟದಲ್ಲಿ ಪ್ರತಿಭಟನೆ ಮಾಡುತ್ತಿದ್ದರೂ ಯಡಿಯೂರಪ್ಪನವರು ಯಾಕೆ ಮಾತನಾಡುತ್ತಿಲ್ಲ? ಯಾಕೆ ಈ ಕಾಯ್ದೆಯನ್ನು ಜಾರಿಗೆ ತರಲು ಹೊರಟಿದ್ದಾರೆ? ಎಂದು ಸುರ್ಜೆವಾಲಾ ಪ್ರಶ್ನಿಸಿದ್ದಾರೆ. 

'ಹೀಗಾದ್ರೆ ಜನ ದಂಗೆ ಏಳ್ತಾರೆ, ಸಿವಿಲ್ ವಾರ್ ಶುರುವಾಗುತ್ತೆ: ಅದಕ್ಕೆ ಮೋದಿಯೇ ಕಾರಣ'

ಮೋದಿ- ಯಡಿಯೂರಪ್ಪನವರು ಸೇರಿ ರೈತರ ಬೆಳೆ ಜೊತೆ, ಜೀವನದ ಜೊತೆ ಆಟವಾಡಲು ಮುಂದಾಗಿದ್ದಾರೆ. ನೀವಿದನ್ನು ಯಾರ ಅನುಕೂಲಕ್ಕಾಗಿ ತರಲು ಹೊರಟಿದ್ದೀರಿ? ರೈತರಿಗೆ ಯಾವ ರೀತಿ ಉಪಯೋಗವಾಗುತ್ತದೆ? ದಲ್ಲಾಳಿಗಳಿಗೆ ಅನುಕೂಲ ಮಾಡಿಕೊಡಲು ಹೊರಟಿದ್ದೀರಿ' ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಪ್ರತಿಭಟನೆಯನ್ನುದ್ದೇಶಿ ಮಾತನಾಡಿದ್ದಾರೆ.