ಯಾವ ಪಕ್ಷಕ್ಕೂ ಬಲಿಷ್ಠ ಲೋಕಾಯುಕ್ತ ಬೇಡವಾಗಿದೆ: ನ್ಯಾ. ಸಂತೋಷ್ ಹೆಗ್ಡೆ ಕಿಡಿ

ಯಾವ ಪಕ್ಷಕ್ಕೂ ಬಲಿಷ್ಠ ಲೋಕಾಯುಕ್ತ ಬೇಡವಾಗಿದೆ. 2011 ರಲ್ಲಿ ಬಂದಂತ ಗಣಿ ವರದಿಯನ್ನ ಬಿಜೆಪಿ ಜಾರಿಗೆ ತಂದಿರಲಿಲ್ಲ, ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಕೂಡ ಜಾರಿಗೆ ಮಾಡಿರಲಿಲ್ಲ: ನ್ಯಾ. ಸಂತೋಷ್ ಹೆಗ್ಡೆ  

First Published Mar 4, 2023, 2:09 PM IST | Last Updated Mar 4, 2023, 2:09 PM IST

ಬೆಂಗಳೂರು(ಮಾ.04):  ಬಿಜೆಪಿ ಶಾಸಕರ ಮೇಲೆ ಲೋಕಾಯುಕ್ತ ಕಾರ್ಯಾಚರಣೆಯನ್ನ ಮಾಡಿದ ಲೋಕಾಯುಕ್ತ ಪೊಲೀಸರು ಒಳ್ಳೆಯ ಕೆಲಸವನ್ನ ಮಾಡಿದ್ದಾರೆ ಅಂತ ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ತಿಳಿಸಿದ್ದಾರೆ. ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜತೆ ಮಾತನಾಡಿದ ಅವರು, ಯಾವ ಪಕ್ಷಕ್ಕೂ ಬಲಿಷ್ಠ ಲೋಕಾಯುಕ್ತ ಬೇಡವಾಗಿದೆ. 2011 ರಲ್ಲಿ ಬಂದಂತ ಗಣಿ ವರದಿಯನ್ನ ಬಿಜೆಪಿ ಜಾರಿಗೆ ತಂದಿರಲಿಲ್ಲ, ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಕೂಡ ಜಾರಿಗೆ ಮಾಡಿರಲಿಲ್ಲ. ಲೋಕಾಯುಕ್ತ ಪರ ಹೋರಾಡಿದ ಕಾಂಗ್ರೆಸ್ಸೇ ಕೊನೆಗೆ ಎಸಿಬಿಯನ್ನ ತಂದಿತ್ತು. ಎಸಿಬಿ ದಾಳಿ ಮಾಡಲ್ಲ ಅಂತ ಗೊತ್ತಿತ್ತು. ಪಕ್ಷಗಳ ನಾಟಕ ಎಂತದ್ದು ಅಂತ ಗೊತ್ತಾಗುತ್ತೆ ಅಂತ ರಾಜಕಾರಣಿಗಳ ವಿರುದ್ಧ ನ್ಯಾ. ಸಂತೋಷ್ ಹೆಗ್ಡೆ ಗುಡುಗಿದ್ದಾರೆ. 

ಅಡ್ವಾಣಿಗೆ ಅವಮಾನ ಮಾಡಿದವರಿಂದ ನಾವು ಪಾಠ ಕಲಿಯಬೇಕಿಲ್ಲ!