Asianet Suvarna News Asianet Suvarna News

ನಂಜನಗೂಡು ದೊಡ್ಡ ಜಾತ್ರೆಯಲ್ಲಿ ರಥದ ಗಾಲಿ ಪುಡಿ, ಸ್ವಲ್ಪದರಲ್ಲಿ ತಪ್ಪಿದ ಅನಾಹುತ

Mar 27, 2021, 12:10 PM IST
  • facebook-logo
  • twitter-logo
  • whatsapp-logo

ಮೈಸೂರು (ಮಾ. 27): ಕೊರೋನಾ ಹಿನ್ನೆಲೆಯಲ್ಲಿ ನಂಜಗೂಡಿನ ಶ್ರೀಕಂಠೇಶ್ವರ ಸ್ವಾಮಿಯ ದೊಡ್ಡ ಜಾತ್ರೆ ಸರಳವಾಗಿ ನೆರವೇರಿತು. ರಥೋತ್ಸವದ ವೇಳೆ ಗಾಲಿ ಪುಡಿ ಪುಡಿಯಾಗಿ ಪಾರ್ವತಿ ದೇವಿಯ ರಥ ಅರ್ಧಕ್ಕೆ ನಿಂತ ಘಟನೆಯೂ ನಡೆಯಿತು. ಬಳಿಕ ಮಂಟಪದ ಮಾದರಿಯ ಲಾಲ್‌ಬಾಗ್‌ನಲ್ಲಿ ಅಮ್ಮನವರ ಮೂರ್ತಿ ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸಿ ರಥೋತ್ಸವ ಪೂರ್ಣಗೊಳಿಸಲಾಯಿತು.  ರಥದ ಗಾಲಿ ಅರ್ಧಕ್ಕೆ ಪುಡಿಪುಡಿಯಾಗಿದ್ದು ಭಕ್ತರಲ್ಲಿ ಆತಂಕವನ್ನುಂಟು ಮಾಡಿತು. ಸಾಕಷ್ಟು ಪ್ರಶ್ನೆಗಳು ಮೂಡುವಂತೆ ಮಾಡಿತು. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ..!

ನಂಜನಗೂಡು ರಥೋತ್ಸವದಲ್ಲಿ ತೇರು ಎಳೆಯುವಾಗ ರಥದ ಚಕ್ರ ಪುಡಿಪುಡಿ..!