Asianet Suvarna News Asianet Suvarna News

ನೈಟ್ ಕರ್ಫ್ಯೂ: 'ಹೊಟೇಲ್ ಮಾಲಿಕರು, ಕಾರ್ಮಿಕರು ಏನ್ ಮಾಡ್ಬೇಕು ಸ್ವಾಮಿ..'?

ಮೋದಿ ಸೂಚನೆ ಬೆನ್ನಲ್ಲೇ ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಕಠಿಣ ನಿರ್ಬಂಧ ಘೋಷಿಸಿದ್ದಾರೆ. ನಾಳೆಯಿಂದ ಏ. 20 ರವರೆಗೆ 8 ನಗರಗಳಲ್ಲಿ ನೈಟ್ ಕರ್ಫ್ಯೂ ಜಾರಿಯಾಗಲಿದೆ. ನೈಟ್‌ ಕರ್ಫ್ಯೂ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತದೆ. 

ಬೆಂಗಳೂರು (ಏ. 09): ಮೋದಿ ಸೂಚನೆ ಬೆನ್ನಲ್ಲೇ ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಕಠಿಣ ನಿರ್ಬಂಧ ಘೋಷಿಸಿದ್ದಾರೆ. ನಾಳೆಯಿಂದ ಏ. 20 ರವರೆಗೆ 8 ನಗರಗಳಲ್ಲಿ ನೈಟ್ ಕರ್ಫ್ಯೂ ಜಾರಿಯಾಗಲಿದೆ. ನೈಟ್‌ ಕರ್ಫ್ಯೂ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತದೆ. 

'ಹೆಚ್ಚಾದ್ರೆ ಬೆಡ್ ಇಲ್ಲ, ನಿಮ್ಮ ಜವಾಬ್ದಾರಿ ಮರೆತ್ರೆ ಅಷ್ಟೆ'

'ಕೋವಿಡ್‌ನಿಂದ ಹೊಟೇಲ್ ಉದ್ಯಮ ಹೆಚ್ಚು ನಷ್ಟಕ್ಕೆ ಸಿಲುಕಿದೆ. ನಾವು ಸರ್ಕಾರದ ಗೈಡ್‌ಲೈನ್ಸ್ ಜೊತೆ ಉದ್ಯಮ ನಡೆಸುತ್ತಿದ್ದೇವೆ. ಆರ್ಥಿಕ ಚೇತರಿಕೆ ನೋಡುತ್ತಿದ್ದೇವೆ. ಈಗ ಮತ್ತೆ ಕಠಿಣ ನಿರ್ಬಂಧ ವಿಧಿಸುವುದರಿಂದ ನಾವು ಮತ್ತೆ ನಷ್ಟ ಅನುಭವಿಸುತ್ತೇವೆ. ಉದ್ಯಮದವರನ್ನು ಸರ್ಕಾರ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಏಕಾಏಕಿ ಈ ರೀತಿ ನಿಯಮ ತರಲು ಮುಂದಾಗಿದೆ' ಎಂದು ಹೊಟೇಲ್ ಸಂಘಟನೆ ಕಾರ್ಯದರ್ಶಿ ಮಧುಕರ್ ಶೆಟ್ಟಿ ಹೆಳಿದ್ಧಾರೆ.