Asianet Suvarna News Asianet Suvarna News

News Hour ಪಿಎಸ್ಐ ನೇಮಕಾತಿ ಅಕ್ರಮದ ಆಡಿಯೋ ಸ್ಫೋಟ

ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆಯನ್ನು ಸಿಐಡಿ ಚುರುಕುಗೊಳಿಸಿದೆ. ಇದೀಗ ಕಾಂಗ್ರೆಸ್‌ ನಾಯಕರನ್ನು ಬಂಧಿಸಿ ವಿಚಾರಣೆ ನಡೆಸಿದೆ. ಇದಕ್ಕೆ ರಾಜಕೀಯ ಆರೋಪ-ಪ್ರತ್ಯಾರೋಪಗಳು ಶುರುವಾಗಿವೆ.
 

ಬೆಂಗಳೂರು (ಏ. 23): ಪಿಎಸ್ಐ (PSI) ನೇಮಕಾತಿ ಅಕ್ರಮದ ವಿಚಾರದಲ್ಲಿ ತನಿಖೆಯನ್ನು ಚುರುಕು ಮಾಡಿರುವ ಪೊಲೀಸ್ ಇಲಾಖೆ, ಕಾಂಗ್ರೆಸ್ (Congress) ಕಾರ್ಯಕರ್ತರಾದ ಸಹೋದರರನ್ನು ಬಂಧನ ಮಾಡಿದೆ. ಅದರೊಂದಿಗೆ ಪ್ರಕರಣದಲ್ಲಿ ಬಿಜೆಪಿ ನಾಯಕಿ ದಿವ್ಯಾ ಹಾಗರಿಗಿಯ ಜೊತೆ ಕಾಂಗ್ರೆಸ್ ಕಾರ್ಯಕರ್ತರಾದ ಪಾಟೀಲ್ ಸಹೋದರರು ಇರುವುದು ಖಚಿತವಾಗಿದೆ.

ಅಣ್ಣ ಮಹಾಂತೇಶ್ (Mahantesh) ಬಂಧನದ ಬೆನ್ನಲ್ಲಿಯೇ, ಶನಿವಾರ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ತಮ್ಮ ರುದ್ರೇಗೌಡನನ್ನು (Ruderegowda) ಸೊಲ್ಲಾಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ. 545 ಅಷ್ಟೇ ಅಲ್ಲ, 402 ಪಿಎಸ್ಐ ಹುದ್ದೆಗಳಿಗೂ ಸ್ಕೆಚ್ ಹಾಕಲಾಗಿತ್ತು. ಫೆಬ್ರವರಿಯಲ್ಲಿ ನಡೆಯಬೇಕಿದ್ದ ಪರೀಕ್ಷೆಗೂ ಮುನ್ನ ಮ್ಯಾಚ್ ಫಿಕ್ಸಿಂಗ್ ಆಗಿತ್ತು ಎನ್ನುವ ಮಾಹಿತಿ ಸಿಐಡಿ (CID) ತನಿಖೆ ವೇಳೆ ಸಿಕ್ಕಿದೆ. ಈ ಆಡಿಯೋ ಈಗ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದೆ.

ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ವಿಷಯ ಪ್ರಸ್ತಾಪಿಸಿದ ಸಿಎಂ

ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಬೆನ್ನಲ್ಲೇ ಇದೀಗ ಎಫ್ ಡಿಐ ನೇಮಕಾತಿಯಲ್ಲೂ ಅಕ್ರಮದ ವಾಸನೆ ಬರುತ್ತಿದೆ. ಸಾವಿರದ ಪೈಕಿ 200 ಅಭ್ಯರ್ಥಿಗಳನ್ನು ಅಫ್ಜಲ್ ಪುರದಿಂದ ಆಯ್ಕೆ ಮಾಡಲಾಗಿದ್ದು, ಇದರಲ್ಲೂ ಅಕ್ರಮವಾಗಿರಬಹುದು ಎನ್ನುವ ಅನುಮಾನ ಸೃಷ್ಟಿಸಿದೆ.

Video Top Stories